Author: kannadanewsnow05

ಬೆಂಗಳೂರು : ಮೈಸೂರು ಸ್ಯಾಂಡಲ್‌ ಸೋಪ್‌ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರ ಆಯ್ಕೆಯನ್ನ ಒಂದು ಕಡೆ ಕನ್ನಡ ಪರ ಸಂಘಟನೆಗಳು ಕನ್ನಡಪಟ ಹೋರಾಟಗಾರರು ವಿರೋಧಿಸುತ್ತಿದ್ದರೆ ಇನ್ನೊಂದು ಕಡೆ ಸಚಿವ ಪ್ರಿಯಾಂಕ್‌ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.ಹಾಕಿರೋ ಬಂಡವಾಳ ಬರ್ಬೇಕು, ಉದ್ಯೋ ಸೃಷ್ಟಿಯಾಗಬೇಕು ಅದಕ್ಕೆ ಯಾರಾದರೇನು? ಎಂದು ಸಮರ್ಥನೆ ಮಾಡಿದ್ದಾರೆ. ಇಂದು ಬೆಂಗಳೂರಲ್ಲಿ ಮಾತನಾಡಿದ ಸಚಿವರು ಮೈಸೂರು ಸ್ಯಾಂಡಲ್‌ ಸೋಪ್‌ ಕಾರ್ಖಾನೆಯಲ್ಲಿ ನಾವು 437 ಕೋಟಿ ಲಾಭ ಮಾಡಿದ್ದೇವೆ. ಅದನ್ನ ಸಾವಿರ ಕೋಟಿ ಮಾಡಬೇಕು. ಅದಕ್ಕೆ ಎಲ್ಲರ ಸಹಕಾರ ಮುಖ್ಯ. ನಮ್ಮ ಮಾರ್ಕೆಟಿಂಗ್‌ ಹೆಚ್ಚಾಗುತ್ತಲ್ಲ, ಹಾಕಿರುವ ಬಂಡವಾಳವೂ ಬರಬೇಕು, ಉದ್ಯೋಗ ಸೃಷ್ಟಿಯೂ ಆಗಬೇಕು. ಅಕ್ಕೆ ಯಾರಾದರೇನು? ಇನ್ವೆಸ್ಟ್ ಕರ್ನಾಟಕದಲ್ಲಿ 15.20 ಸಾವಿರ ಕೋಟಿ ರಾಜ್ಯಕ್ಕೆ ಬಂತಲ್ಲ, ಬಂಡವಾಳ ಹರಿದು ಬಂದಿದೆಯಲ್ಲ ಅಂತ ಸಮರ್ಥನೆ ನೀಡಿದರು. ಇನ್ನು ಇದೇ ವಿಚಾರವಾಗಿ ಸ್ಯಾಂಡಲ್ವುಡ್ ಕ್ವೀನ್ ಮೋಹಕ ತಾರೆ ನಟಿ ರಮ್ಯಾ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದು, ಬೇರೆಯವರಿಗೆ ದುಡ್ಡು ಹಾಕಿ ಟ್ಯಾಕ್ಸ್ ವ್ಯರ್ಥ ಮಾಡುತ್ತಿದ್ದೀರಿ ಎಂದು ಬೇಸರ…

Read More

ಕಲಬುರ್ಗಿ : ಕಲ್ಬುರ್ಗಿಯಲ್ಲಿ ಘೋರವಾದಂತಹ ದುರಂತ ಒಂದು ಸಂಭವಿಸಿದ್ದು, ಪರಸ್ಪರ ಎರಡು ಬೈಕುಗಳು ಡಿಕ್ಕಿಯಾಗಿ ಹೊತ್ತಿ ಉರಿದಿವೆ ಈ ವೇಳೆ ಮೈ ಮೇಲೆ ಪೆಟ್ರೋಲ್ ಬಿದ್ದು ಬೆಂಕಿ ತೆಗೆದುವಾಗಿ ದಹನಗೊಂಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಕಾಳಗಿ ಪಟ್ಟಣದ ಕೊಡದೂರಿನಲ್ಲಿ ನಡೆದಿದೆ. ಕಲ್ಬುರ್ಗಿ ಜಿಲ್ಲೆಯ ಕಾಳಗಿ ಪಟ್ಟಣದ ಕೊಡದೂರಿನಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಅವಘಡದಲ್ಲಿ ಬೈಕ್ ಸವಾರ ದಶರತ್ ಮಡಿವಾಳ (28) ಸಜೀವ ದಹನ ಹೊಂದಿದ್ದಾರೆ. ಪರಸ್ಪರ ಬೈಕ್ ಗಳು ಡಿಕ್ಕಿ ಆದ ಪರಿಣಾಮ ಮೈ ಮೇಲೆ ಪೆಟ್ರೋಲ್ ಬಿದ್ದು ದಶರಥ ಸಾವನ್ನಪ್ಪಿದ್ದಾರೆ.ಇನ್ನು ಘಟನೆಯಲ್ಲಿ ಓರ್ವನಿಗೆ ಗಂಭೀರವಾದ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ಬೆಂಗಳೂರು : ಇನ್ನು ಮುಂದೆ ಬೆಂಗಳೂರಿನಲ್ಲಿ ಫುಟ್ಪಾತ್ ನಲ್ಲಿ ಶಾಪಿಂಗ್ ಮಾಡುವಂತಿಲ್ಲ. ಅದಕ್ಕೆ ಆದಂತಹ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ತಳ್ಳುವ ಗಾಡಿಯ ಮೂಲಕ ವ್ಯಾಪಾರ ನಡೆಸಬೇಕು. ಹಾಗಾಗಿ ಫುಟ್ಪಾತ್ ನಲ್ಲಿ ಶಾಪಿಂಗ್ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಫುಟ್ಪಾತ್ ನಲ್ಲಿ ಶಾಪಿಂಗ್ ನಿಲ್ಲಿಸಬೇಕು ಎಂದು ತೀರ್ಮಾನಿಸಿದ್ದೇವೆ. ತಳ್ಳುವ ಗಾಡಿ ಕೊಡೋಕೆ ಸಿದ್ದರಿದ್ದೇವೆ. ನಿರ್ದಿಷ್ಟವಾದ ಜಾಗದಲ್ಲಿ ಮಾತ್ರ ಮಾರಾಟ ಮಾಡಬೇಕು. ನಾಲ್ಕು ರೀತಿಯ ಗಾಡಿ ಡಿಸೈನ್ ಮಾಡಿದ್ದೇವೆ. 3000ಕ್ಕೂ ಹೆಚ್ಚು ಜನ ಗಾಡಿ ಕೊಡುವಂತೆ ಮನವಿ ಮಾಡಿದ್ದಾರೆ. ಈಗಲೂ ಕೂಡ ಎಚ್ಚರಿಕೆ ನೀಡುತ್ತೇನೆ. ನಾಳೆ ಯಾರು ಒತ್ತಡ ತರದಂತೆ ಶಾಸಕರಿಗೆ ತಿಳಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.

Read More

ಬೆಂಗಳೂರು : ಬೆಂಗಳೂರಿನಲ್ಲಿ ಅಕ್ರಮವಾಗಿ ಪಿಸ್ತೂಲ್ ಮಾರಾಟಕ್ಕೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಕ್ರಮವಾಗಿ ನಾಡಪಿಸ್ತೂಲ್ ತಂದು ಮಾರಾಟ ಮಾಡುತ್ತಿದ್ದ ರೌಡಿ ಶೀಟರ್ ಸಮೀರ್ ನನ್ನು ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಸಮೀರ್ ಕೆ ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ಕಡಿಮೆ ಬೆಲೆಗೆ ಖರೀದಿಸುತ್ತಿದ್ದ. ಬೆಂಗಳೂರಿನಲ್ಲಿ ಹೆಚ್ಚು ಹಣಕ್ಕೆ ಗನ್ ಮಾರಾಟ ಮಾಡುತ್ತಿದ್ದ. ರೌಡಿಶೀಟರ್ ಗಳಿಗೆ ಗನ್ ಮಾರಾಟ ಮಾಡುತ್ತಿದ್ದ ಆರೋಪಿ ಸಮೇತ ಆರೋಪಿಯನ್ನು ಬಂಧಿಸಿ ಎರಡು ನಾಡಪಿಸ್ತುಲ್ ಸಿಸಿಬಿ ಪೊಲೀಸ್ ವಶಕ್ಕೆ ಪಡೆದುಕೊಂಡಿದೆ.

Read More

ಚಿಕ್ಕಬಳ್ಳಾಪುರ : ತಾನು ಪ್ರೀತಿಸುತ್ತಿದ್ದ ಸೋದರ ಮಾವನ ಮಗಳ ಜೊತೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಮಂಜುನಾಥ್(27) ಎಂದು ತಿಳಿದುಬಂದಿದೆ. ಮಾವನ ಮಗಳಿಗೆ ಇನ್ನೂ ಮದುವೆ ವಯಸ್ಸು ಆಗಿಲ್ಲ. ಮತ್ತೊಂದೆಡೆ ಮಂಜುನಾಥ್ ಗೆ ಮದುವೆ ಮಾಡುವ ವಯಸ್ಸು. ಹೀಗಾಗಿ ಬೇರೆ ಹುಡುಗಿಯನ್ನು ನೋಡಿ ಮದುವೆ ಮಾಡುತ್ತೇವೆಂದು ಮಾವನ ಮನೆ ಕಡೆಯವರು ಹೇಳಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಮೃತ ಮಂಜುನಾಥ್​, ಅಪ್ರಾಪ್ತೆಯಾಗಿದ್ದ ಸೋದರ ಮಾವನ ಮಗಳನ್ನು ಪ್ರೀತಿಸುತ್ತಿದ್ದ. ಅಷ್ಟೇ ಅಲ್ಲ ಆಕೆಯನ್ನು ಮದುವೆಯಾಗಬೇಕೆಂದು ಕನಸು ಕಂಡಿದ್ದ. ಆದ್ರೆ, ಇದಕ್ಕೆ ಹುಡುಗಿ ತಂದೆ (ಅಂದರೆ ಮಂಜುನಾಥ್ ಸೋದರಮಾವ) ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದು ಮಂಜುನಾಥ್​ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Read More

ಬೆಂಗಳೂರು : ಈಗಾಗಲೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಭಾರಿ ಮಳೆಯಿಂದಾಗಿ ಹಲವು ಕಡೆಗೆ ಅವಾಂತರ ಸೃಷ್ಟಿಯಾಗಿದ್ದು, ಇದುವರೆಗೂ, ವರುಣ ಆರ್ಭಟಕ್ಕೆ ಹಲವು ಜನರು ಸಾವನಪ್ಪಿದ್ದಾರೆ. ಇದೀಗ ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೌದು ರಾಜ್ಯದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮೇ 24 ರಿಂದ 27 ರ ವರೆಗೂ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆಯ ತಜ್ಞ ಸಿ.ಎಸ್ ಪಾಟೀಲ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಇದೀಗ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಆರು ಜಿಲ್ಲೆಗಳಲ್ಲಿ ಇದೀಗ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

Read More

ಮೈಸೂರು : ಹಿರಿಯ ಮಗಳು ಯುವಕನೊಬ್ಬನ ಪ್ರೀತಿಸಿ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ದಂಪತಿಗಳು ಹಾಗೂ ತಮ್ಮ ಇನ್ನೋರ್ವ ಪುತ್ರಿಯೊಂದಿಗೆ ಹಗ್ಗ ಕಟ್ಟಿಕೊಂಡು ಕೆರೆಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಬೂದನಕೆರೆಯಲ್ಲಿ ಇಂದು ನಡೆದಿತ್ತು. ಇದೀಗ ಆತ್ಮಹತ್ಯೆ ಮಾಡಿಕೊಂಡ ಮೂವರ ಮೃತದೇಹಗಳು ಪತ್ತೆಯಾಗಿವೆ. ಹೌದು ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಮೃತ ಮೂವರ ಮೃತದೇಹಗಳು ಬೂದನೂರು ಕೆರೆಯಲ್ಲಿ ಪತ್ತೆಯಾಗಿವೆ. ಮೈಸೂರು ಜಿಲ್ಲೆಯ ಹೆಚ್‍ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಈ ಒಂದು ದುರ್ಘಟನೆ ನಡೆದಿದೆ. ಮಹದೇವಸ್ವಾಮಿ ಪತ್ನಿ ಮಂಜುಳಾ ಮತ್ತು ಪುತ್ರಿ ಹರ್ಷಿತಾ ಮೃತದೇಹಗಳನ್ನು, ಇದೀಗ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Read More

ಹಾವೇರಿ : ಕಳೆದ 2024 ಜನವರಿ 8ರಂದು ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳು ಇತ್ತೀಚಿಗೆ ಜೈಲಿಂದ ಬಿಡುಗಡೆಯಾಗಿದ್ದರು. ಜೈಲಿನಿಂದ ರಿಲೀಸ್ ಆದ ಬೆನ್ನಲ್ಲೆ ಆರೋಪಿಗಳು ರೋಡ್ ಶೋ ಮಾಡಿದ್ದಾರೆ. ಇದೀಗ ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ, ಪೊಲೀಸರು ಮತ್ತೆ 7 ಆರೋಪಿಗಳನ್ನು ಜೈಲಿಗೆ ಹಾಕಿದ್ದು, ಅವರ ವಿರುದ್ಧ ಇದೀಗ ರೌಡಿ ಶೀಟ್ ಓಪನ್ ಮಾಡಿದ್ದಾರೆ. ಹೌದು ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಂದ ಮೆರವಣಿಗೆ ನಡೆಸಿದ ವಿಚಾರವಾಗಿ ಇದೀಗ ಪೊಲೀಸರು 7 ಆರೋಪಿಗಳ ವಿರುದ್ಧ ರೌಡಿ ಶೀಟ್ ಓಪನ್ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆಯಲ್ಲಿ 7 ಆರೋಪಿಗಳ ವಿರುದ್ಧ ರೌಡಿ ಶೀಟ್ ಓಪನ್ ಆಗಿದೆ. ಅತ್ಯಾಚಾರ ಆರೋಪಿಗಳು ಜಾಮೀನಿನ ಷರತ್ತು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಜಾಮೀನು ರದ್ದು ಪಡಿಸುವಂತೆ ಇದೀಗ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. BNS ಕಾಯ್ದೆ 189/2, 191/2, 281, 351/2, 351/3, 190ರಡಿ ಇದೀಗ ಪ್ರಕರಣ ದಾಖಲಾಗಿದೆ.…

Read More

ಬೆಂಗಳೂರು : ಇತ್ತೀಚಿಗೆ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ತೀವ್ರ ಜಟಾಪಟಿ ಏರ್ಪಟ್ಟಿದೆ. ಇದೀಗ ಪ್ರಿಯಾಂಕ ಖರ್ಗೆ ಅವರು ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಿಡಿಕಾರಿದ್ದು, ಪದೇ ಪದೇ ರಜಾಕರು ನಿಜಾಮರು ಎಂದು ಹೇಳುವ ಸಿಟಿ ರವಿ ಅವರೇ, ನಿಮ್ಮ RSS ನಾಯಕರನ್ನು ಪಾಕಿಸ್ತಾನಕ್ಕೆ ಕಳಿಸಿ ಅಖಂಡ ಭಾರತದ ಕನಸು ನನಸು ಮಾಡಿ ಎಂದು ತಿರುಗೇಟು ನೀಡಿದ್ದಾರೆ. ಸಚಿವ ಪ್ರಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ಟೀಕೆ ಮಾಡಿರುವ ವಿಚಾರವಾಗಿ ಸಿಟಿ ರವಿ ಪದೇ ಪದೇ ರಜಾಕರು ನಿಜಾಮರು ಅಂತ ಹೇಳುತ್ತಾರೆ. ನಿಮ್ಮ RSS ನಾಯಕರನ್ನು ಪಾಕಿಸ್ತಾನಕ್ಕೆ ಕಳುಹಿಸಿ. ಅಲ್ಲಿ ಸೆಟಲ್ ಆಗಿ ಅಖಂಡ ಭಾರತದ ಕನಸು ನನಸು ಮಾಡಿ. ರಜಾಕರು, ನಿಜಾಮರು ಅಂತ ಇಲ್ಲಿ ಕುಳಿತು ಮಾತನಾಡಬೇಡಿ ಎಂದರು. ವಿಧಾನ ಪರಿಷತ್ ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ಆಯಿತು. ಈ ಕೇಸ್ ನಲ್ಲಿ ಸಿಟಿ ರವಿ ವಾಯ್ಸ್ ಸ್ಯಾಂಪಲ್ ಏಕೆ ಕೊಡಲಿಲ್ಲಾ? ಸುಪ್ರೀಂ…

Read More

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇದೀಗ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಇದೀಗ ರಾಜ್ಯದಲ್ಲಿ ಒಟ್ಟು 35 ಪ್ರಕರಣಗಳು ಸಕ್ರಿಯವಾಗಿವೆ. ಹಾಗಾಗಿ ನಾಳೆಯಿಂದ ರಾಜ್ಯದ 8 ಮೆಡಿಕಲ್ ಕಾಲೇಜ್ ಗಳಲ್ಲಿ ಕೋವಿಡ್ ಟೆಸ್ಟ್ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದ್ದು, ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗಿತ್ತು. ಈ ಕುರಿತು ಸಭೆ ಮಾಡಿ ತಾಂತ್ರಿಕ ಸಲಹಾ ಸಮಿತಿ ಆರೋಗ್ಯ ಸಚಿವರಿಗೆ ಈ ಕುರಿತು ಸಲಹೆ ನೀಡಿದೆ. ಸಲಹಾ ಸಮಿತಿ ಸೂಚನೆ ಮೇರೆಗೆ ಕೋವಿಡ್ ಟೆಸ್ಟ್ ಗೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಅಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಕೋಮಾರ್ಬಿಟಿಸ್, ಸಾರಿ, ILI ರೋಗಲಕ್ಷಣ ಹೊಂದಿರುವವರಿಗೆ ಟೆಸ್ಟ್ ಮಾಡಲಾಗುತ್ತದೆ ಎಲ್ಲೆಲ್ಲಿ ಟೆಸ್ಟ್ ಅಂತ ಆರೋಗ್ಯ ಇಲಾಖೆ ಸಂಜೆ ಮಾಹಿತಿ ನೀಡಲಿದೆ. ಇದೀಗ ಉಸಿರಾಟ ಸಮಸ್ಯೆ, SARI ಕೇಸ್ ನಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಆರೋಗ್ಯ ಸಚಿವ ಗಣೇಶ ಗುಂಡುರಾವ್…

Read More