Author: kannadanewsnow05

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕದ ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೊಲೆ ಪ್ರಕರಣದ ತನಿಖೆ ಬಹುತೇಕ ಕೊನೆಯ ಹಂತ ತಲುಪಿದ್ದು, ತನಿಖೆಯ ವೇಳೆ ಕೆಲವು ಸ್ಪೋಟಕವಾದ ವಿಚಾರಗಳು ಬಯಲಾಗಿದೆ. ಕೊಲೆಯಾದ ಓಂ ಪ್ರಕಾಶ್ ಅವರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಸಿಬಿಗೆ ವಹಿಸಿತ್ತು. ಕೊಲೆಗೆ ಪ್ರಮುಖ ಕಾರಣಗಳನ್ನು ಇದೀಗ ಸಿಸಿಬಿ ಪತ್ತೆ ಹಚ್ಚಿದೆ. ಕುಟುಂಬದ ಬಗ್ಗೆ ತೋರಿದ ನಿರ್ಲಕ್ಷವೇ ಓಂಪ್ರಕಾಶ್ ಅವರ ಕೊಲೆಗೆ ಕಾರಣವಾಗಿದೆ. ಆಸ್ತಿಯ ವಿಚಾರದಲ್ಲಿ ಕುಟುಂಬದಲ್ಲಿ ಭೋಗಿಲೆದ್ದಿದ್ದ ಮನಸ್ಥಾಪದಿಂದ ಓಂ ಪ್ರಕಾಶ್ ಅತ್ತೆಯಾಗಿದೆ. ಕೌಟುಂಬಿಕ ಕಾರಣಗಳಿಂದ ಪತಿಯನ್ನು ಕ್ರೂರವಾಗಿ ಪತ್ನಿ ಪಲ್ಲವಿ ಅತ್ತೆಗೈದಿದ್ದರೂ ಓಂ ಪ್ರಕಾಶ್ ಕೊಲೆಗೆ ಸಿಸಿಬಿ ತನಿಖೆಯ ವೇಳೆ ಕೆಲವು ಕಾರಣಗಳನ್ನು ಪತ್ತೆ ಹಚ್ಚಿದೆ. ತನ್ನ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಿಲ್ಲ ಎಂದು ಪತ್ನಿ ಪಲ್ಲವಿ ಆರೋಪಿಸಿದ್ದಾರೆ ಮಗಳಿಗೆ ಮದುವೆ ಮಾಡಿಲ್ಲ ಎಂದು ಪತಿಯ ಮೇಲೆ ಕೋಪಗೊಂಡಿದ್ದರು. ತನ್ನ ಭಾಗದ ಕುಟುಂಬದ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದ…

Read More

ಬೆಂಗಳೂರು : ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ರೇವ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೆಲುಗು ನಟಿ ಹೇಮಾ ಜೈಲುವಾಸ ಅನುಭವಿಸಿ ಇತ್ತೀಚಿಗೆ ಬಿಡುಗಡೆಯಾಗಿದ್ದರು. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ರೇವ್ ಪಾರ್ಟಿ ಪ್ರಕರಣ ಬೆಳಕಿಗೆ ಬಂದಿದ್ದು, ರೇವ್ ಪಾರ್ಟಿ ನಡೆಸುತ್ತಿದ್ದ ಫಾರ್ಮ್ ಹೌಸ್ ಮೇಲೆ ಬೆಂಗಳೂರಿನ ದೇವನಹಳ್ಳಿ ಠಾಣೆ ಪೋಲೀಸರು ದಾಳಿ ಮಾಡಿದ್ದಾರೆ. ಹೌದು ರೇವ್ ಪಾರ್ಟಿ ಮಾಡುತ್ತಿದ್ದ ಫಾರ್ಮೌಸ್ ಮೇಲೆ ಇದೀಗ ಪೊಲೀಸರು ದಾಳಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ರೇವ್ ಪಾರ್ಟಿ ನಡೆಸಲಾಗುತ್ತಿತ್ತು. ಇದೀಗ ರೇವ್ ಪಾರ್ಟಿ ನಡೆಸುತ್ತಿದ್ದ ಫಾರ್ಮ್ ಹೌಸ್ ಮೇಲೆ ದೇವನಹಳ್ಳಿ ಪೊಲೀಸರು ದಾಳಿ ಮಾಡಿದ್ದಾರೆ. ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ 10 ಯುವತಿಯರು ಹಾಗೂ 20 ಯುವಕರನ್ನು ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಪಾರ್ಟಿಯ ಸ್ಥಳದಲ್ಲಿ ಡ್ರಗ್ಸ್ ಮತ್ತು ಕಾಂಚಾಪತ್ತಿಯಾಗಿದೆ ದೇವನಹಳ್ಳಿ ಎಸಿಪಿ ನವೀನ ನೇತೃತ್ವದಲ್ಲಿ ಯುವಕ ಮತ್ತು ಯುವತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Read More

ನವದೆಹಲಿ : ದೆಹಲಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ಇ-ಚಾರ್ಜರ್ ಸ್ಟೇಷನ್ ನಲ್ಲಿ ಬೆಂಕಿ ಬಿದ್ದ ಪರಿಣಾಮ ಇಬ್ಬರು ವ್ಯಕ್ತಿಗಳು ಸಜೀವ ದಹನ ಹೊಂದಿರುವ ಘಟನೆ ಶಹದಾರ ಪ್ರದೇಶದ ಮೋತಿ ರಾಮ್ ರಸ್ತೆಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ದೆಹಲಿಯ ಶಹದಾರಾ ಪ್ರದೇಶದಲ್ಲಿ ಇಂದು ಇ-ಚಾರ್ಜಿಂಗ್ ಸ್ಟೇಷನ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಇಂದು ಬೆಳಿಗ್ಗೆ 6:40 ರ ಸುಮಾರಿಗೆ ಶಹದಾರಾದ ಮೋತಿ ರಾಮ್ ರಸ್ತೆಯ ಬಳಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ಇಲಾಖೆಗೆ ಕರೆ ಬಂದಿದ್ದು, ಸುಮಾರು ಐದು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಬೆಳಿಗ್ಗೆ 8:30 ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.ಅಗ್ನಿಶಾಮಕ ಇಲಾಖೆಯ ಪ್ರಕಾರ, ಸ್ಥಳದಿಂದ ಎರಡು ಸುಟ್ಟ ಶವಗಳನ್ನು ಹೊರತೆಗೆಯಲಾಗಿದೆ ಮತ್ತು ನಾಲ್ವರು ಗಾಯಗೊಂಡವರನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ವಿಷಪೂರಿತ ನೀರು ಕುಡಿದು 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. ರಾಜು ಹಾಗೂ ಸುನಿಲ್ ಎಂಬುವರಿಗೆ ಸೇರಿದ 30ಕ್ಕೂ ಹೆಚ್ಚು ಕುರಿಗಳು ಇದೀಗ ಸಾವನ್ನಪ್ಪಿವೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚನ್ನಾಪುರದ ನಿವಾಸಿಗಳಾದ ಇವರು, 500ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸಲು ಬಂದಿದ್ದರು. ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಕುರಿಗಳು ಚರಂಡಿ ನೀರು ಕುಡಿದಿವೆ. ನೀರು ಕುಡಿದ ಕೆಲವೇ ಹೊತ್ತಿನಲ್ಲಿ 15 ಕುರಿಗಳು ಸಾವನ್ನಪ್ಪಿವೆ. ಇಂದು ಮತ್ತೆ 20 ಗುರಿಗಳು ಸಾವನಪ್ಪಿದ್ದು ಇನ್ನೂ 20ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ಕಾರ್ಖಾನೆಗಳಿಂದ ವಿಷಪೂರಿತ ನೀರು ಚರಂಡಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಕುರಿತಂತೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿದ್ದು, ಇದೀಗ ಪೊಲೀಸ್ ಠಾಣೆಯ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಎಸ್ಐ ಒಬ್ಬರು ಬಲಿಯಾಗಿದ್ದಾರೆ. ಹೌದು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಎಸ್ಐ ವೀರೇಂದ್ರ (58) ಸಾವನಪ್ಪಿದ್ದಾರೆ. ರಾತ್ರಿ ಸುರಿದ ಭಾರಿ ಮಳೆಗೆ ಠಾಣೆಯ ಮೇಲ್ಚಾವಣಿ ಕುಸಿದು ದುರಂತ ಸಂಭವಿಸಿದೆ. ಅಲ್ಲದೇ ನಿನ್ನೆ ರಾತ್ರಿ ಸುರಿದ ಮಳೆಯಿಂದ ದೆಹಲಿ, ಎನ್ ಸಿ ಆರ್ ವ್ಯಾಪ್ತಿಯಲ್ಲಿ ಭಾರಿ ಅವಾಂತರಗಳು ಸೃಷ್ಟಿಯಾಗಿವೆ. ಮರಗಳು ಧರೆಗುಳಿದು ಬಿದಿದ್ದು, ತಗ್ಗು ಪ್ರದೇಶ ಮತ್ತು ರಸ್ತೆಗಳು ಜಲಾವೃತವಾಗಿವೆ.

Read More

ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ಬಳ್ಳಾರಿ ವಿಜಯನಗರ ಬೆಳಗಾವಿಯಲ್ಲಿ ಇದೀಗ ಕರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಹಿಂದೂ ಸಹ ಬೆಂಗಳೂರಿನಲ್ಲಿ ಎರಡು ಕರೋನಾ ಕೇಸ್ ಪತ್ತೆಯಾಗಿವೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ, ಆಸ್ಪತ್ರೆಯಲ್ಲಿರುವ ಗರ್ಭಿಣಿ ಹಾಗೂ ಬಾಣಂತಿಯರ ಮೇಲೆ ತೀವ್ರ ನಿಗಾ ಇಡಲಾಗಿದೆ. ಗರ್ಭಿಣಿಯರು ಹಾಗೂ ಬಾಣಂತಿಯರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಇದೀಗ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ವೈದ್ಯರು ಬಾಣಂತಿಯರಿಗೆ ಮತ್ತು ಗರ್ಭಿಣಿಯರಿಗೆ ಸೂಚನೆ ನೀಡಿದ್ದಾರೆ. ಗರ್ಭಿಣಿಯರು ಹಾಗೂ ಬಾಣಂತಿಯರು ಎಚ್ಚರ ವಹಿಸಬೇಕು. ಮಾಸ್ಕ ಧರಿಸಬೇಕು ಹಾಗೂ ಜನಸಂದಣಿ ಸ್ಥಳಗಳಲ್ಲಿ ಓಡಾಡಬೇಡಿ. ಮಗುವಿನ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮಗುವಿನ ಆರೋಗ್ಯದ ದೃಷ್ಟಿಯಿಂದ ಬಾಡಂತಿಯರು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸೂಚನೆ ನೀಡಿದ್ದಾರೆ.

Read More

ಹಾವೇರಿ : ಕಳೆದ 2024 ಜನವರಿ 8ರಂದು ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಜೈಲಿನಿಂದ ರಿಲೀಸ್ ಆದ ಬೆನ್ನಲ್ಲೇ ಮೆರವಣಿಗೆ ರೋಡ್ ಶೋ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ಇದೀಗ ಜುಲೈ 3ರವರೆಗೆ ಆರೋಪಿಗಳು ಮತ್ತೆ ಜೈ ಸೇರಿದ್ದಾರೆ. ರೋಡ್ ಶೋ ನಡೆಸಿದ್ದ 7 ಆರೋಪಿಗಳಿಗೆ ಜೂನ್ 2 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ಆರೋಪಿಗಳಿಗೆ ತಾಲೂಕು ಮ್ಯಾಜಿಸ್ಟ್ರೇಟ್​ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಈ ಹಿನ್ನೆಲೆ ಆರೋಪಿಗಳನ್ನ ಮತ್ತೆ ಹಾವೇರಿ ಸಬ್ ಜೈಲಿಗೆ ಹಾಕಲಾಗಿದೆ. ಈ ಆರೋಪಿಗಳು ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ 17 ತಿಂಗಳು ಜೈಲಿನಲ್ಲಿದ್ದರು. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಜಾಮೀನು ಪಡೆದು ಹೊರ ಬಂದಿದ್ದರು. ಜಾಮೀನು ಸಿಕ್ಕಿದ್ದೇ ತಡ ಆರೋಪಿಗಳು 30 ಕಿ.ಮೀ ರೋಡ್ ಶೋ ನಡೆಸಿದ್ದರು. ರೋಡ್ ಶೋ ವಿಡಿಯೋಗಳನ್ನು ಮಾಡಿ ಸಾಮಾಜಿಕ…

Read More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು, ಕೃಷಿ ಹೊಂಡದಲ್ಲಿ ಕೈಕಾಲು ತೊಳೆಯುವಾಗ ಕಾಲು ಜಾರಿ ಬಿದ್ದು ಉಪನ್ಯಾಸಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚೇಳೂರು ತಾಲೂಕಿನ ವಂಗಿಮಳ್ಳು ಗ್ರಾಮದಲ್ಲಿ ಶನಿವಾರ ಸಂಜೆ ಘಟನೆ ನಡೆದಿದೆ. ಮೃತರನ್ನು ಶಂಕರರೆಡ್ಡಿ (48) ಎಂದು ತಿಳಿದುಬಂದಿದೆ. ಮೃತ ಶಂಕರರೆಡ್ಡಿ ತಮ್ಮ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಜಮೀನು ಪಕ್ಕದ ಮಂಜುನಾಥ್ ರೆಡ್ಡಿಯವರ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಕೈಕಾಲು ತೊಳೆಯಲು ಹೋಗಿದ್ದಾರೆ.ಈ ವೇಳೆ ಅಲ್ಲಿನ ಪಾಚಿಯಿಂದಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಗ್ರಾಮದ ಉಪನ್ಯಾಸಕರಾಗಿದ್ದು, ಇದರ ಜೊತೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು.

Read More

ಬೆಂಗಳೂರು : ಮದ್ಯ ಸೇವಿಸಲು ಹಣ ಕೊಡದಿದ್ದಕ್ಕೆ ಪತ್ನಿಯ ಜೊತೆ ಜಗಳವಾಡಿದ ಪತಿ, ಬಾತ್ರೂಮ್ ಆಸಿಡ್ ಸುರಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಸೀಡೆದಹಳ್ಳಿಯಲ್ಲಿ ನಡೆದಿದೆ. ಬಾತ್ರೂಮ್ ತೊಳೆಯುವ ಆಸಿಡ್ ನಿಂದ ಪತಿ ಸುರೇಶ್ ಪತ್ನಿಯ ಮೇಲೆ ದಾಳಿ ನಡೆಸಿದ್ದಾನೆ. ಪತ್ನಿಯ ಮೇಲೆ ಆಸಿಡ್ ದಾಳಿ ನಡೆಸಿದ ಪತಿಯನ್ನು ಸುರೇಶ್ ಎಂದು ತಿಳಿದುಬಂದಿದೆ. 26 ವರ್ಷಗಳ ಹಿಂದೆ ಸಂತ್ರಸ್ತೆಯನ್ನು ಆರೋಪಿ ಸುರೇಶ್ ಮದುವೆಯಾಗಿದ್ದ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನ ಊರಿನಲ್ಲಿ ಈ ದಂಪತಿಗಳು ವಾಸವಿದ್ದರು. ಮೈತುಂಬ ಸಾಲ ಮಾಡಿಕೊಂಡು ಸುರೇಶ್ ಕೆಲಸಕ್ಕೆ ಹೋಗುವುದನ್ನೇ ಬಿಟ್ಟಿದ್ದ. ಸಾಲಗಾರರ ಕಾಟಕ್ಕೆ ಎರಡು ತಿಂಗಳ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದ. ಬಾಗಲಗುಂಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಕುಟುಂಬ ವಾಸವಿತ್ತು. ಜೀವನ ನಡೆಸಲು ಸುರೇಶ್ ಪತ್ನಿ ಬ್ಯೂಟಿಷಿಯನ್ ಕೆಲಸಕ್ಕೆ ಹೋಗುತ್ತಿದ್ದರು. ಮೇ 19 ರಂದು ಸುರೇಶ್ ಮದ್ಯ ಸೇವಿಸಲು ಪತ್ನಿಯ ಬಳಿ ಹಣ ಕೇಳಿದ್ದಾನೆ. ಹಣಕೊಡದಿದ್ದಾಗ ಜಗಳ ಮಾಡಿಕೊಂಡು ಸುರೇಶ್ ಮನೆ ಬಿಟ್ಟು ಹೊರಗೆ ಹೋಗಿದ್ದ.…

Read More

ಬೆಳಗಾವಿ : ಬೆಳಗಾವಿಯಲ್ಲಿ ಭೀಕರವಾದ ಕೊಲೆ ನಡೆದಿದ್ದು, ಮಲತಂದೆಯಿಂದಲೇ 3 ವರ್ಷದ ಬಾಲಕನ ಹತ್ಯೆ ನಡೆದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಹಾರ್ ಮೂಲದ ನಾಲ್ವರು ಹಂತಕರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಅರೆಸ್ಟ್ ಮಾಡಿದ್ದಾರೆ. ಬಂಧಿತರು ಬಿಹಾರ್ ಮೂಲದವರು ಎಂದು ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರೋಗೋಪ್ಪ ಹತ್ತಿ ಫ್ಯಾಕ್ಟರಿಯಲ್ಲಿ ಮಹಿಳೆ ಮತ್ತು ಆಕೆಯ ಪತಿ ಕೆಲಸಕ್ಕೆ ಇದ್ದರು. ತನ್ನೊಟ್ಟಿಗೆ ಪುತ್ರ ಕಾರ್ತಿಕ್ ನನ್ನು ಮಹಿಳೆ ಕರೆದುಕೊಂಡು ಬಂದಿದ್ದಳು. ಮದ್ಯ ಸೇವಿಸಿ ಬಂದು ಪತ್ನಿಯ ಜೊತೆಗೆ ಮಹೇಶ್ವರ ಮಾಂಜಿ ಜಗಳವಾಡಿದ್ದ.ಮಹೇಶ್ವರ್ ಜೊತೆಗೆ ಮಹಿಳೆ 2ನೇ ಮದುವೆ ಆಗಿದ್ದಳು. ಹಾಗಾಗಿ ಮಗನನ್ನು ಯಾಕೆ ಕರೆದುಕೊಂಡು ಬಂದಿದ್ಯ ಅಂತ ಜಗಳ ಮಾಡಿದ್ದ ಮಲತೊಂದೆ ಮಹೇಶ್ವರ ಮಾಂಜಿ ಸೇರಿದಂತೆ ನಾಲ್ವರಿಂದ ಹಲ್ಲೆಗೆ ಯತ್ನಿಸಲಾಗಿದೆ. ಈ ವೇಳೆ 3 ವರ್ಷದ ಮಗನನ್ನು ತಾಯಿ ಬಿಟ್ಟು ಓಡಿ ಹೋಗಿದ್ದಾಳೆ. ಅಲ್ಲೇ ಇದ್ದ ಕಾರ್ತಿಕ್ ಮೇಲೆ ಪಾಪಿಗಳು ರಾಕ್ಷಸಿಯ ವರ್ತನೆ ತೋರಿದ್ದು ಕಟ್ಟಿಗೆಯಿಂದ ಹೊಡೆದು ಎಲ್ಲೆಂದರಲ್ಲಿ ಸುಟ್ಟು…

Read More