Author: kannadanewsnow05

ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಈ ಕೂಡಲೇ ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು ಇಲ್ಲದಿದ್ದರೆ ಭಾರತದ ಮೇಲೆ ನಾವು ಮತ್ತಷ್ಟು ಸುಂಕ ಹಾಕುತ್ತೇವೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಹೌದು ರಷ್ಯಾದ ತೈಲ ಸಮಸ್ಯೆಗೆ ಭಾರತ ಸಹಾಯ ಮಾಡದಿದ್ದರೆ ಭಾರತೀಯ ಆಮದಿನ ಮೇಲಿನ ಸುಂಕವನ್ನು ಹೆಚ್ಚಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಸಾರ್ವಜನಿಕ ಭಾಷಣದಲ್ಲಿ ರಿಪಬ್ಲಿಕನ್ ವರದಿ ಮಾಡಿದೆ. ಟ್ರಂಪ್ ರಷ್ಯಾದೊಂದಿಗಿನ ಭಾರತದ ತೈಲ ವ್ಯಾಪಾರವನ್ನು ಉಲ್ಲೇಖಿಸುತ್ತಿದ್ದರು, ಇದನ್ನು ಅವರ ಆಡಳಿತವು ಬಹಳ ಹಿಂದಿನಿಂದಲೂ ವಿರೋಧಿಸುತ್ತಿದೆ ಮತ್ತು ಇದು ಆಗಸ್ಟ್ 2025 ರಲ್ಲಿ ಭಾರತದ ಮೇಲಿನ ಸುಂಕವನ್ನು 50% ಕ್ಕೆ ದ್ವಿಗುಣಗೊಳಿಸಲು ಕಾರಣವೆಂದು ಉಲ್ಲೇಖಿಸಲಾಗಿದೆ.”ರಷ್ಯಾದ ತೈಲ ವಿಷಯಕ್ಕೆ ಸಹಾಯ ಮಾಡದಿದ್ದರೆ ನಾವು ಭಾರತದ ಮೇಲೆ ಸುಂಕವನ್ನು ಹೆಚ್ಚಿಸಬಹುದು” ಎಂದು ಅಧ್ಯಕ್ಷರು ಹೇಳಿದ್ದಾರೆ. ಭಾರತ ಮತ್ತು ಯುಎಸ್ ನಡುವೆ…

Read More

ಬೆಂಗಳೂರು : ರಾಜ್ಯದ ದೀರ್ಘಾವಧಿ ಸಿಎಂ ಹೆಗ್ಗಳಿಕೆಗೆ ಇದೀಗ ಒಂದೇ ದಿನ ಬಾಕಿ ಇದ್ದು, ನಾಳೆ ದೇವರಾಜ್ ಅರಸು ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಮುರಿಯಲ್ಲಿದ್ದಾರೆ. ಈ ಹಿಂದೆ 7 ವರ್ಷ 239 ದಿನಗಳ ಕಾಲ ಡಿ.ದೇವರಾಜ ಅರಸು ಸಿಎಂ ಆಗಿದ್ದರು. ಇಂದಿಗೆ 7 ವರ್ಷ 239 ದಿನ ಸಿಎಂ ಸಿದ್ದರಾಮಯ್ಯ ಪೂರೈಸಿದ್ದಾರೆ. ಇನ್ನು 3ನೇ ಸ್ಥಾನದಲ್ಲಿ ಎಸ್ ನಿಜಲಿಂಗಪ್ಪ 7 ವರ್ಷ 175 ದಿನ, 4 ನೇ ಸ್ಥಾನದಲ್ಲಿ ರಾಮಕೃಷ್ಣ ಹೆಗಡೆ 5 ವರ್ಷ 216 ದಿನ, 5ನೇ ಸ್ಥಾನದಲ್ಲಿ ಬಿಎಸ್ ಯಡಿಯೂರಪ್ಪ 5 ವರ್ಷ 82 ದಿನ ಸಿಎಂ ಆಗಿದ್ದಾರೆ. ರಾಜ್ಯ ಬಜೆಟ್ ಮಂಡನೆಯಲ್ಲಿ ಸಿಎಂ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ ಇದುವರೆಗೂ 16 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಇನ್ನು ಎರಡನೇ ಸ್ಥಾನದಲ್ಲಿ

Read More

ಬೆಂಗಳೂರು : ಮುಡಾದಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಖಾಸಗಿ ದೂರು ವಿಚಾರಣೆ ನಡೆಯಲಿದೆ. ಮೈಸೂರಿನ ಮುಡಾ ಹಗರಣದ ಸಂಬಂಧ ತನಿಖಾಧಿಕಾರಿ ಮೊದಲ ವರದಿ ಸಲ್ಲಿಸಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಗೆ ಸೈಟ್ ಹಂಚಿಕೆ ಹಿನ್ನೆಲೆ, ತನಿಖಾಧಿಕಾರಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದು, ಈ ಒಂದು ಬಿ ರಿಪೋರ್ಟ್ ಪ್ರಶ್ನಿಸಿ, ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ಕೂಡ ಇಂದು ವಿಚಾರಣೆ ನಡೆಯಲಿದೆ. ಅಲ್ಲದೆ ತನಿಖಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟಿಗೆ ಸ್ನೇಹಮಯಿ ಕೃಷ್ಣ ಅವರು ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಎರಡು ವಿಚಾರಣೆಗಳು ಇಂದು ನಡೆಯಲಿದೆ.

Read More

ತುಮಕೂರು : ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಮಂಗಗಳು ನಿಗೂಢವಾಗಿ ಸಾವನ್ನಪ್ಪಿವೆ. ತುಮಕೂರು ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಈ ಒಂದು ಘಟನೆ ಸಂಭವಿಸಿದೆ. 2 ದಿನಗಳ ಅಂತರದಲ್ಲಿ ಒಟ್ಟು 11 ಮಂಗಗಳ ಕಳೆಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮಂಗಗಳಿಗೆ ವಿಷ ಪ್ರಾಷಣ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮೊದಲ ದಿನ 7 ಮಂಗಗಳು ಹಾಗೂ ಎರಡನೇ ಗಿಡ 4 ಮಂಗಗಳ ಕಳೆಬರ ಪತ್ತೆಯಾಗಿದೆ. ಸ್ಥಳೀಯರ ಮಾಹಿತಿಯನ್ನು ಆದರಿಸಿ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಅನುಮಾನಗೊಂಡು ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಕಾಲ ಶೋಧ ನಡೆಸಿದ್ದಾರೆ. ಮಂಗಗಳು ಯಾವುದೇ ಕಾಯಿಲೆಯಿಂದ ಮೃತಪಟ್ಟಿಲ್ಲ ಎಂಬುದು ದಡಪಟ್ಟಿದ್ದು ಮಂಗಗಳ ಸಾವಿನ ಕಾರಣ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಇದೀಗ ಮುಂದಾಗಿದೆ. ಊರ್ಡಿಗಿರಿಯ ಪಶು ಆಸ್ಪತ್ರೆಯಲ್ಲಿ ಮಂಗಗಳ ಮರಣೋತ್ತರ ಪರೀಕ್ಷೆ ನಡೆಯಿತು ಪರೀಕ್ಷಾ ವೇಳೆ ಮೃತ ಮಂಗಗಳ ದೇಹ ಹಾಗೂ ಕರುಳಿನಲ್ಲಿ ಅನ್ನಪತ್ತೆಯಾಗಿದೆ.

Read More

ಮಂಡ್ಯ : ತಿಥಿ ಸಿನಿಮಾ ಖ್ಯಾತಿಯ ಸೆಂಚೂರಿ ಗೌಡ ನಿಧನರಾಗಿದ್ದಾರೆ. ಸಂಗ್ರೇಗೌಡ ಅಲಿಯಾಸ್ ಸೆಂಚೂರಿ ಗೌಡ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ನಿನ್ನೆ ರಾತ್ರಿ ಸಿಂಗರೇಗೌಡನ ಕೊಪ್ಪಲು ಗ್ರಾಮದಲ್ಲಿ ಸೆಂಚುರಿ ಗೌಡ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೇಗೌಡನ ಕೊಪ್ಪಲಿನಲ್ಲಿ ಸಿಂಗ್ರೇಗೌಡ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ನಿನ್ನೆ ರಾತ್ರಿ ಅವರು ನಿಧನರಾಗಿದ್ದಾರೆ. ತಿಥಿ ಸಿನಿಮಾ ಮೂಲಕ ಸೆಂಚುರಿ ಗೌಡ ಎಂದು ಸಂಗ್ರೇಗೌಡ ಖ್ಯಾತಿ ಪಡೆದಿದ್ದರು ಇಂದು ಸಂಗ್ರೇಗೌಡನ ಕೊಪ್ಪಲಿನಲ್ಲಿ ಸೆಂಚುರಿ ಗೌಡ ಅಂತ್ಯ ಸಂಸ್ಕಾರ ನೆರವೇರಲಿದೆ. ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ, ಇದೇ ತಿಥಿ ಸಿನಿಮಾ ಮೂಲಕ ಖ್ಯಾತಿಯಾಗಿದ್ದ ಗಡ್ಡಪ್ಪ ಅವರು ಸಹ ನಿಧನರಾಗಿದ್ದರು.

Read More

ಬಳ್ಳಾರಿ : ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದು ಫೈರಿಂಗ್ ವೇಳೆ ಓರ್ವ ಕಾಂಗ್ರೆಸ್ ಕಾರ್ಯಕರ್ತ ಬಲಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ನ ಒಟ್ಟು 26 ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಇದುವರೆಗೂ 6 ಎಫ್ಐಆರ್ ಗಳು ದಾಖಲಾಗಿವೆ. ಬಳ್ಳಾರಿ ನಗರದ ವಾಲ್ಮೀಕಿ ವೃತ್ತ ಹಾಗೂ ಮಹರ್ಷಿ ಪುತ್ಥಳಿ ಉದ್ಘಾಟನಾ ಸಮಾರಂಭದ ನಿಮಿತ್ತ ಕಟ್ಟಲಾದ ಬ್ಯಾನರ್ಸ್, ಬಂಟಿಂಗ್ಸ್ ವಿಚಾರವಾಗಿ ಗಲಭೆ ನಡೆದು ಕಲ್ಲು ತೂರಾಟವಾಗಿತ್ತು. ಖಾಸಗಿ ಅಂಗರಕ್ಷಕರು ಗುಂಡು ಹಾರಿಸಿದ್ದರು. ಈ ವೇಳೆ ರಾಜಶೇಖರ್ ರೆಡ್ಡಿ ಎಂಬವರು ಮೃತಪಟ್ಟಿದ್ದರು. ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರೂ ಗಾಯಗೊಂಡಿದ್ದರು. ಈ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು 6 ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.

Read More

ಮೈಸೂರು : ರೈಲಿಗೆ ಸಿಲುಕಿ ನಿವೃತ್ತ ಎಎಸ್‌ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಕುಕ್ಕರಹಳ್ಳಿ ಬಳಿಯ ರೈಲ್ವೆ ಗೇಟ್ ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಬೋಗಾದಿಯ ನಿವಾಸಿ ಲವಕುಶ (60) ಮೃತ ನಿವೃತ್ತ ಎಎಸ್‌ಐ. ಕೆ.ಆರ್. ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲವಕುಶ ಅವರು ಮೂರು ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಭಾನುವಾರ ಬೆಳಗ್ಗೆ ಮನೆಯಿಂದ ಹೊರ ಬಂದವರು ಕುಕ್ಕರಹಳ್ಳಿ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಮಂಡ್ಯ ಬಳಿಕ ಇದೀಗ ಬೆಂಗಳೂರಲ್ಲಿ ಕಿಡಿಗೇಡಿಗಳಿಂದ ಮತ್ತೆ ಕಲ್ಲು ತೂರಾಟ ನಡೆದಿದ್ದು, ದೇವಿಯ ತೇರು ಎಳೆಯುತ್ತಿರುವ ವೇಳೆ ಓಂ ಶಕ್ತಿ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿರುವ ಘಟನೆ ಚಾಮರಾಜಪೇಟೆ ಬಳಿಯ ಜೆ.ಜೆ.ನಗರ (ಜಗಜೀವನ್ ರಾಮ್ ನಗರ) ಠಾಣೆವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.ಇದೀಗ ಓಂ ಶಕ್ತಿ ಅಧ್ಯಕ್ಷ ಶಶಿಕುಮಾರ್ ಅವರು ನೀಡಿದ ದೂರಿನ ಮೇರೆಗೆ FIR ದಾಖಲಾಗಿದೆ.ಮೂರ್ನಾಲ್ಕು ಮುಸ್ಲಿಂ ಯುವಕರು ಕಲ್ಲು ತೂರಾಟ ಮಾಡಿದ್ದು, ಓರ್ವ ಹೆಣ್ಣು ಮಗಳ ತಲೆಗೆ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೆಖಿಸಿದ್ದಾರೆ. ಜೆ.ಜೆ.ನಗರದ ವಿ.ಎಸ್. ಗಾರ್ಡನ್‌ ಓಂ ಶಕ್ತಿ ದೇವಸ್ಥಾನದ ಬಳಿ ಭಾನುವಾರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ವರದರಾಜು ಎಂಬುವರ ಅಪ್ರಾಪ್ತ ಮಗಳ ತಲೆಗೆ ಗಂಭೀರವಾದ ಗಾಯವಾಗಿದೆ. ಜತೆಗೆ ಇಬ್ಬರು ಮಹಿಳೆಯ ಕಾಲಿಗೆ ಗಾಯವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಜೆ.ಜೆ ನಗರ ಠಾಣೆ ಪೊಲೀಸರು ಮತ್ತು ಎಸಿಪಿ ಭರತ್‌ರೆಡ್ಡಿ ಸೇರಿ ಹಿರಿಯ…

Read More

ಬೆಂಗಳೂರು : ಬೆಂಗಳೂರಿನ ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್‌ನ ಮಹಿಳಾ ಶೌಚಾಲಯದಲ್ಲಿ ವಿಕೃತಕಾಮಿಯೊಬ್ಬ ಗುಪ್ತ ಕ್ಯಾಮರಾ ಇಟ್ಟಿದ್ದ ಘಟನೆ ನಡೆದಿದೆ. ‘ನುವ್ವು ನಾಕು ನಚ್ಚಾವ್’ ಸಿನಿಮಾ ನೋಡಲು ಬಂದಿದ್ದ ಮಹಿಳೆಯರು ಇದನ್ನು ಪತ್ತೆಹಚ್ಚಿ, ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೌದು ಲೇಡೀಸ್ ಟಾಯ್ಲೆಟ್ ರೂಮ್ನಲ್ಲಿ ಕ್ಯಾಮೆರಾ ಇಟ್ಟು ಯುವಕನೊಬ್ಬ ವಿಕೃತಿ. ಮೇರೇದಿದ್ದಾನೆ. ವಾಶ್‌ರೂಮ್ ಗೆ ಹೋಗಿದ್ದ ಮಹಿಳೆ ಹಾಗೂ ಯುವತಿಯರು ಕ್ಯಾಮೆರಾ ಕಂಡು ಶಾಕ್ ಆಗಿದ್ದಾರೆ. ಬೆಂಗಳೂರಿನ ಮಡಿವಾಳದ ಸಂಧ್ಯಾ ಥಿಯೇಟರ್ ನಲ್ಲಿ ಈ ಒಂದು ಘಟನೆ ನಡೆದಿದೆ. ಆರೋಪಿಯನ್ನು ಹಿಡಿದು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ. ವಿಕೃತಕಾಮಿಯೊಬ್ಬ ಲೇಡಿಸ್ ಟಾಯ್ಲೆಟ್ ಒಳಗೆ ಗುಪ್ತವಾಗಿ ಕ್ಯಾಮರಾ ಅಳವಡಿಸಿದ್ದನು. ವಾಶ್ ರೂಮ್‌ಗೆ ಹೋದ ಮಹಿಳೆಯರು ಮತ್ತು ಯುವತಿಯರು ಇದನ್ನು ಗಮನಿಸಿ ತಕ್ಷಣವೇ ಹೊರಬಂದು ಕಿರುಚಾಡಿದ್ದಾರೆ. ಇದರಿಂದ ಥಿಯೇಟರ್ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Read More

ಅಸ್ಸಾಂ : ಇಂದು ನಸುಕಿನ ಜಾವ ತ್ರಿಪುರ ಹಾಗೂ ಅಸ್ಸಾಂನಲ್ಲಿ ಲಘು ಭೂಕಂಪನ ಸಂಭವಿಸಿದ್ದು, ತ್ರಿಪುರದ ಗೋಮತಿಯಲ್ಲಿ ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.9ರಷ್ಟು ದಾಖಲಾಗಿದೆ. ಅಲ್ಲದೆ ಅಸ್ಸಾಂನ ಮೋರಿಗಾವ್ನಲ್ಲೂ ಕೂಡ ಮುಂಜಾನೆ ಭೂಮಿ ಕಂಪಿಸಿದ ಅನುಭವ ಆಗಿದ್ದು ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 5.1 ರಷ್ಟು ದಾಖಲಾಗಿದೆ. ಇಲ್ಲಿಯವರೆಗೆ ಯಾವುದೇ ಹಾನಿ ಅಥವಾ ಗಾಯಗಳ ವರದಿಯಾಗಿಲ್ಲ. ಅಸ್ಸಾಂನಲ್ಲಿ ಭೂಕಂಪ ಸಂಭವಿಸುವ ಕೆಲವು ಗಂಟೆಗಳ ಮೊದಲು , ಸೋಮವಾರ ಬೆಳಗಿನ ಜಾವ 3:30 ರ ಸುಮಾರಿಗೆ ತ್ರಿಪುರದ ಗೋಮತಿಯಲ್ಲಿ ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಸ್ಸಾಂನಲ್ಲಿ ಭೂಕಂಪ ಸಂಭವಿಸುವ ಕೆಲವು ಗಂಟೆಗಳ ಮೊದಲು , ಸೋಮವಾರ ಬೆಳಗಿನ ಜಾವ 3:30 ರ ಸುಮಾರಿಗೆ ತ್ರಿಪುರದ ಗೋಮತಿಯಲ್ಲಿ ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದಿಂದಾಗಿ ಯಾವುದೇ ರೀತಿಯ ಜೀವಹಾನಿ ಅಥವಾ ಹಾನಿ ಸಂಭವಿಸಿದ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ.

Read More