Author: kannadanewsnow05

ಮೈಸೂರು : ಈಗಾಗಲೇ ಮುಂಗಾರು ಪೂರ್ವದಲ್ಲಿ ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿದ್ದು, ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಇದೀಗ ಮೈಸೂರು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ನಾಳೆಯೂ ಕೂಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ನಾಳೆಯೂ ರಜೆ ನೀಡಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಾಳೆಯೂ ಮೈಸೂರಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲಾಗುತ್ತಿದೆ ಎಂದು ಲಕ್ಷ್ಮಿಕಾಂತ್ ರೆಡ್ಡಿ ಅವರು ತಿಳಿಸಿದ್ದಾರೆ.

Read More

ಕಲಬುರ್ಗಿ : ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆ ಕಲ್ಬುರ್ಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ವಿರುದ್ಧ FIR ದಾಖಲಾಗಿದೆ. ಶರಣ ಸಿರಸಗಿ ನಿವಾಸಿ ದತ್ತಾತ್ರೇಯ ಇಲ್ಕಳಕಿ ಅವರ ದೂರಿನ ಮೇರೆಗೆ ಸ್ಟೇಶನ್ ಬಜಾರ್ ಪೊಲೀಸರು ಎನ್.ರವಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಸರ್ಕಾರಿ ಅಧಿಕಾರಿಗಳ ನಿಂದನೆ, ಎಸ್ ಸಿ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದು, ಮೇ 24ರಂದು ಬಿಜೆಪಿ ಪ್ರತಿಭಟನೆಯಲ್ಲಿ ರವಿಕುಮಾರ್ ಈ ಒಂದು ಹೇಳಿಕೆ ನೀಡಿದ್ದರು. ಡಿಸಿ ಫೌಜಿಯಾ ತರುನ್ನಮ್ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಸಿಪಿಐ ಚಂದ್ರಶೇಖರ್, ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್ ವಿರುದ್ಧ ನಿಂದನೆ ಆರೋಪದ ಅಡಿ ದೂರು ನೀಡಿದ್ದಾರೆ. ಎಸ್ ಸಿ ಸಮುದಾಯಕ್ಕೆ ಅವಹೇಳನ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ . ಹಾಗಾಗಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ವಿರುದ್ಧ ಶರಣ ಸಿರಸಗಿ ನಿವಾಸಿ ದತ್ತಾತ್ರೇಯ ಇಲ್ಕಳಕಿ ಅವರ ದೂರಿನ ಮೇರೆಗೆ  ಸ್ಟೇಷನ್ ಬಜಾರ್…

Read More

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರೂಪಾಂತರ ತಳಿ ಎಂಟ್ರಿ ಆಗಿದ್ದು ಈಗಾಗಲೇ ಬೆಂಗಳೂರಲ್ಲಿ ಒಂದೇ ಕಡೆಗೆ ಸುಮಾರು 71 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಇದೀಗ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಕೊರೋನಾ ತಡೆಗಟ್ಟುವ ಕುರಿತಂತೆ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೊರೋನಾ ನಿಯಂತ್ರಣಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಿ. ಕೋವಿಡ್ ಹೆಲ್ಪ್ಲೈನ್ ತೆರೆಯಿರಿ. ಕಳೆದ ಬಾರಿ ಆದಂತೆ ಈ ಬಾರಿ ಯಾವುದೇ ಸಮಸ್ಯೆ ಆಗಬಾರದು. ಜ್ವರ, ನೆಗಡಿ ಇರುವ ಮಕ್ಕಳಿಗೆ ರಜೆ ನೀಡಲು ಸೂಚನೆ ನೀಡಿ ಎಂದು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Read More

ಜಮಖಂಡಿ : ಮೇವು ತರಲು ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ಒಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಕಂಕನವಾಡಿ ಗ್ರಾಮದ ಕಲ್ಲಪ್ಪ ದೊರೆಪ್ಪ ಅಂಬಿ (65 ) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಗುಹೇಶ್ವರ ನಡುಗೆ ಮೇವು ತರಲು ತೆರಳುತ್ತಿದ್ದಾಗ ಈ ಒಂದು ದುರ್ಘಟನೆ ಸಂಭವಿಸಿದೆ. ಮೃತರು ಈಜುತ್ತಾ ಕೃಷ್ಣಾ ನದಿ ದಾಟಲು ಕಲ್ಲಪ್ಪ ದೊರೆಪ್ಪ ಅಂಬಿ ಮುಂದಾಗಿದ್ದಾರೆ. ನದಿ ಮಧ್ಯದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕೈ ಸೋತು ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಜಮಖಂಡಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು ಮನೆಯಲ್ಲಿದ್ದ 40 ವರ್ಷದ ಒಂಟಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ ಅಂದಾಜು ಒಂದು ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆ ದರ್ಗಾ ರಸ್ತೆಯಲ್ಲಿನ ಮನೆಯೊಂದರಲ್ಲಿ ಈ ಒಂದು ಭೀಕರ ಹತ್ಯೆ ನಡೆದಿದೆ. ಮನೆಯಲ್ಲಿ ಇದ್ದಂತಹ ಮಹಿಳೆ ಲತಾ ಎನ್ನುವವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಲತಾ ಅವರನ್ನು ಹತ್ಯೆಗೈದಿ ದರೋಡೆ ನಡೆಸಲಾಗಿದೆ. ಅಂದಾಜು ಒಂದು ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ದುಷ್ಕರ್ಮಿಗಳು, ಪರಾರಿಯಾಗಿದ್ದಾರೆ. ಹೋಲ್ಸೇಲ್ ಬಟ್ಟೆ ವ್ಯಾಪಾರಿ ಪ್ರಕಾಶ್ ಎನ್ನುವವರ ಪತ್ನಿ ಲತಾ ಅವರ ಕೊಲೆಯಾಗಿದೆ. ಲತಾ ಅವರನ್ನು ಕೊಲೆಗೈದು ದುಷ್ಕರ್ಮಿಗಳು 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ನವದೆಹಲಿ : ವೈರಿ ಪಾಕಿಸ್ತಾನದ ಪರ ಗೂಢಚಾರಿಕೆ ಮಾಡುತ್ತಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವ್ಲಾಗರ್ ಜ್ಯೋತಿ ಮಲ್ಹೋತ್ರಾಗೆ ಇದೀಗ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಹರಿಯಾಣದ ಹಿಸಾರ್ ಕೋರ್ಟ್ ಆದೇಶ ಹೊರಡಿಸಿದೆ. 9 ದಿನಗಳ ಪೊಲೀಸ್ ಕಸ್ಟಡಿ ಬಳಿಕ ಜ್ಯೋತಿ ಮಲ್ಹೋತ್ರಾಳನ್ನು ಇಂದು ಹರಿಯಾಣದ ಹಿಸಾರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈಗಾಗಲೇ ಎರಡು ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ಜ್ಯೋತಿಯನ್ನು ವಿಚಾರಣೆಯನ್ನು ನಡೆಸಲಾಗಿದೆ. ಇಂದು ಜ್ಯೋತಿಗೆ 14 ದಿನಗಳ ಕಾಲ ನ್ಯಾಯಾಂಗ ಬಂದನಕೆ ನೀಡಿ ಕೋರ್ಟ್ ಆದೇಶಿಸಿದೆ. ಗೂಢಚರ್ಯೆಯ ಶಂಕೆಯ ಮೇಲೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಬಂಧಿಸಲ್ಪಟ್ಟ 12 ಜನರಲ್ಲಿ ಮಲ್ಹೋತ್ರಾ ಕೂಡ ಒಬ್ಬಳಾಗಿದ್ದಾಳೆ. ಈ 12 ಜನರು ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಮೇ 16 ರಂದು ಅಧಿಕೃತ ರಹಸ್ಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿ ಬಂಧಿಸಲಾಯಿತು. ನವೆಂಬರ್ 2023 ರಿಂದ ಪಾಕಿಸ್ತಾನಿ ಹೈಕಮಿಷನ್‌ನ ಉದ್ಯೋಗಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್…

Read More

ಮೈಸೂರು : ಮೈಸೂರಿನಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಮೇಕೆ ಮೇಯಿಸುತ್ತಿದ್ದಾಗ ಹುಲಿ ದಾಳಿ ಮಾಡಿದ್ದು ಯುವಕ ಸಾವನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗುರುಪುರ ಎಂಬ ಗ್ರಾಮದಲ್ಲಿ ನಡೆದಿದೆ. ಹುಲಿ ದಾಳಿಯಿಂದ ಹರೀಶ್ (28) ಎನ್ನುವ ಯುವಕ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಹರೀಶ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯೆ ಹರೀಶ್ ಸಾವನಪ್ಪಿದ್ದಾನೆ. ಮೈಸೂರು ಜಿಲ್ಲೆಯ ನಾಗಪುರದ 5ನೇ ಬ್ಲಾಕ್ ನಲ್ಲಿ ಈ ಒಂದು ಘಟನೆ ನಡೆದಿದೆ.

Read More

ರಾಯಚೂರು : ರಾಯಚೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಮತ್ತೋರ್ವ ಬಾಣಂತಿಯ ಸಾವಾಗಿದ್ದು, ಇದರಿಂದ ಆಕ್ರೋಶಗೊಂಡ ಬಾಣಂತಿಯ ಸಂಬಂಧಿಕರು ಆಸ್ಪತ್ರೆಯ ಬಳಿಯಿದ್ದ ಆಂಬುಲೆನ್ಸ್ ಅನ್ನು ಇದೀಗ ಧ್ವಂಸ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ಮಸ್ಕಿಯ ಖಾಸಗಿ ನರ್ಸಿಂಗ್ ಹೋಮ್ ಬಳಿ ಬಾಣಂತಿ ಸಾವಿಗೆ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಮೃತ ಬಾಣಂತಿ ಸಿದ್ದಮ್ಮ ಅವರ ಸಂಬಂಧಿಕರು ಅಂಬುಲೆನ್ಸ್ ದ್ವಂಸ ಮಾಡಿದ್ದಾರೆ. ಸ್ತ್ರೀರೋಗ ತಜ್ಞೆ ಸೌಮ್ಯ ಗುಂಡಳ್ಳಿ ವಿರುದ್ಧ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಖಾಸಗಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಬಳಿ ಆಂಬುಲೆನ್ಸ್ ಗಳನ್ನು ಸಾಮಾಜಿಕರು ದ್ವಂಸ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದಿದ್ದು ಮಸ್ಕಿಯ ಖಾಸಗಿ ನರ್ಸಿಂಗ್ ಈ ಒಂದು ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Read More

ಬೆಂಗಳೂರು : ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿಗಳಿಗೆ ಸೇರಿದ ಸುಮಾರು 26.27 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ದಾರಿ ನಿರ್ದೇಶನಲಯ ಮುಟ್ಟುಗಳು ಹಾಕಿಕೊಂಡಿದೆ. ಹೌದು ಆರೋಪಿಗಳಿಗೆ ಸೇರಿದ 26.27 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೊಲು ಹಾಕಿಕೊಂಡಿದೆ. ಜಾರಿ ನಿರ್ದೇಶನಲಯ ಇದೀಗ ಆರೋಪಿಗಳ ಸ್ಥಿರಾಸ್ತಿಯನ್ನು ಮುಟ್ಟುಗೊಲು ಹಾಕಿಕೊಂಡಿದೆ. ಪ್ರಸ್ತುತ ಮಾರುಕಟ್ಟೆಯ ದರದಲ್ಲಿ ಈ ಆಸ್ತಿಯ ಮೌಲ್ಯ 40 ಕೋಟಿಗೆ ಏರಿಕೆಯಾಗಿದೆ. ಪ್ರಕರಣದ ಆರೋಪಿಗಳಾದ ಬಿಕೆ ನಾಗರಾಜಪ್ಪ, ಆರ್ ಲೀಲಾವತಿ ಮತ್ತು ಇತರೆ ಆರೋಪಿಗಳಿಗೆ ಸೇರಿದ ಆಸ್ತಿಯನ್ನು ಇಡಿ ಮುಟ್ಟುಗೊಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ಕಾಯಿದೆಯ ಅಡಿ ಆರೋಪಿಗಳ ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಂಡಿದೆ. ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಇಡಿ ನಡಿಸುತ್ತಿದೆ. ಗಂಗಾ ಕಲ್ಯಾಣ ಯೋಜನೆಯ ಅಡಿ 150 ಕೋಟಿ ರೂಪಾಯಿ ಹಗರಣ ಆರೋಪದ ಹಿನ್ನೆಲೆಯಲ್ಲಿ ಇದೀಗ ಇಡಿ ಅಧಿಕಾರಿಗಳು ಆರೋಪಿಗಳ ಸ್ಥಿರಾಸ್ತಿಯನ್ನು ಮುಟ್ಟುಗೊಲು ಹಾಕಿಕೊಂಡಿದೆ. https://twitter.com/dir_ed/status/1926935019798352374?t=Z0zewT3VXOjBCq7v4YZ12A&s=19

Read More

ಬೆಂಗಳೂರು : ತನ್ನ ಸಹ ಕಲಾವಿದಯ ಮೇಲೆ ಅತ್ಯಾಚಾರ ಎಸೆಗಿರುವ ಆರೋಪದ ಮೇಲೆ ಇದೀಗ ಕಿರುತೆರೆ ನಟ ಮಡೇನೂರು ಮನುವಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ 3ನೇ ACMM ಕೋರ್ಟ್‌ ಆದೇಶ ಹೊರಡಿಸಿದೆ. 5 ದಿನಗಳ ಪೊಲಿಸ್‌ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಲತ್ತಹಳ್ಳಿಯಲ್ಲಿ ಮನುಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಯಿತು. ಮೆಡಿಕಲ್‌ ಟೆಸ್ಟ್‌ ನಡೆದ ಬಳಿಕ ಪೊಲೀಸರು ಮಧ್ಯಾಹ್ನ 3ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದರು. ಈ ವೇಳೆ ನ್ಯಾಯಾಧೀಶರು ಮನು ಪರ ವಕೀಲರಿಗೆ ಕೆಲ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ, ನನ್ನ ಕಕ್ಷಿದಾರರು ರಿಯಾಲಿಟಿ ಶೋನಲ್ಲಿ ಅಭಿನಯಿಸಿದ್ದಾರೆ. ಮದುವೆಯಾಗಿದೆ, ಆದರೆ ದೂರುದಾರೆ ಬೇರೆಯವರು ಎಂದು ಉತ್ತರ ನೀಡಿದರು. ದೂರುದಾರೆಗೆ ಮದುವೆ ಆಗಿದ್ಯಾ ಎಂದು ಕೇಳಿದ್ದಕ್ಕೆ ಸಂತ್ರಸ್ತೆಯ ಪರ ವಕೀಲೆ ಮೊಬೈಲ್‌ನಲ್ಲಿರುವ ಕೆಲ ವಿಡಿಯೋವನ್ನು ನ್ಯಾಯಾಲಯಕ್ಕೆ ನೀಡಿದರು. ಅಂತಿಮವಾಗಿ ಕೋರ್ಟ್‌ 14 ದಿನಗಳ ಕಾಲ ಮನುವನ್ನು…

Read More