Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ದರ್ಶನ್ ಅಭಿಮಾನಿಗಳಿಂದ ನಟಿ ರಮ್ಯಾ ಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಸಿಬಿ ಪೊಲೀಸರು 11 ಆರೋಪಿಗಳ ವಿರುದ್ಧ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸುಮಾರು 380 ಪುಟಗಳ ಚಾರ್ಜ್ ಶೀಟ್ ಅನ್ನು ಬೆಂಗಳೂರಿನ 45ನೇ ACJM ಕೋರ್ಟಿಗೆ ಸಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕಿದ್ದ ಸ್ಕ್ರೀನ್ ಶಾಟ್, ಆರೋಪಿಗಳ ಮೊಬೈಲ್, ದೂರುದಾರೆ ರಮ್ಯಾ ಸ್ಟೇಟ್ಮೆಂಟ್, ಹಾಗೂ ಎಫ್ ಎಸ್ ಎಲ್ ವರದಿ ಆರೋಪಿಗಳ ಸ್ವ ಇಚ್ಚ ಹೇಳಿಕೆ ಆಧಾರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು ಸಾಕ್ಷಿ ಆಧಾರಗಳು ಲಭಿಸಿದ ಹಿನ್ನೆಲೆಯಲ್ಲಿ ಆರೋಪಿಗಳ ಮೇಲೆ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅಶ್ಲೀಲ ಕಮೆಂಟ್ ಹಾಕಿದ್ದ ಇನ್ನೂ ಆರು ಆರೋಪಿಗಳು ಪೊಲೀಸರಿಗೆ ಸಿಕ್ಕಿಲ್ಲ. ಇನ್ನುಳಿದವರು ಸಿಕ್ಕ ಬಳಿಕ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗುತ್ತಿದೆ. ಅಶ್ಲೀಲ ಕಮೆಂಟ್ ಹಾಕಿದ್ದ ಇನ್ನೂ ನಾಲ್ವರಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ ಸಿಸಿಬಿ ಪೊಲೀಸರು ಶೀಘ್ರದಲ್ಲಿಯೇ ಟ್ರಯಲ್ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ತುಮಕೂರು : ರಾಜ್ಯದಲ್ಲಿ ಪೈಶಾಚಿಕ ಕೃತ್ಯ ಒಂದು ನಡೆದಿದ್ದು, 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಕೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಲು ಕಾರಣನಾದ ಆರೋಪದ ಮೇಲೆ ವಿನಯ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಮತ್ತು ಯುವಕ ಅಕ್ಕಪಕ್ಕದ ಮನೆಯ ನಿವಾಸಿಗಳು. ‘ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ವಿನಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ’ ಕೋರಿ ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಕುಣಿಗಲ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಸುಪ್ರೀಂ ಕೋರ್ಟ್ ಸಿಜೆಐ ಆಗಿರುವಂತಹ ಬಿ.ಆರ್ ಗವಾಯಿ ಅವರ ಮೇಲೆ ಹಿರಿಯ ವಕೀಲರೊಬ್ಬರು ಶೂ ಎಸೆದಿರುವ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ವಕೀಲ ರಾಕೇಶ್ ಕಿಶೋರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹಿರಿಯ ವಕೀಲ ಭಕ್ತವತ್ಸಲ ಎಂಬುವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಸುಪ್ರೀಂ ಕೋರ್ಟ್ ಹಿರಿಯ ವಕೀಲ ರಾಕೇಶ್ ಕಿಶೋರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅ.6ರಂದು ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ವಕೀಲ ರಾಕೇಶ್ ಕಿಶೋರ್ ಏಕಾಏಕಿ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಕಡೆ ವಸ್ತು ಎಸೆದಿದ್ದರು. ಇದು ಕಾನೂನುಬಾಹಿರ. ಕೂಡಲೇ ರಾಕೇಶ್ ಕಿಶೋರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಕ್ತವತ್ಸಲ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.
ಮೈಸೂರು : ಮೈಸೂರಿನ ವಸ್ತು ಪ್ರದರ್ಶನದ ಬಳಿ ಅಪರಿಚಿತ ಬಾಲಕಿಯ ಶವ ಪತ್ತೆಯಾಗಿದೆ. ಅಂದಾಜು 10 ರಿಂದ 13 ವರ್ಷದ ಅಪರಿಚಿತ ಬಾಲಕಿಯ ಶವ ಪತ್ತೆಯಾಗಿದೆ. ಇದೇ ಸ್ಥಳದಲ್ಲಿ ಮೊನ್ನೆ ವೆಂಕಟೇಶ್ ಎಂಬವರ ಭೀಕರ ಕೊಲೆಯಾಗಿತ್ತು. ಮೈಸೂರು ದಸರಾಗೆ ಬಾಲಕಿ ಗೊಂಬೆ ಹಾಗು ಬಲೂನ್ ಮಾರಲು ಬಂದಿದ್ದಳು. ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು : ನಿಯಮ ಉಲ್ಲಂಘನೆ ಮಾಡಿದ್ದು ಅಲ್ಲದೆ, ಪೋಲಿಸ್ ಇಲಾಖೆಯ ಅನುಮತಿ ಪಡೆಯದೆ ಕನ್ನಡ ಬಿಗ್ ಬಾಸ್ ಸೀಸನ್ 12 ಶೋ ಆರಂಭಿಸಿದ್ದಕ್ಕಾಗಿ ನಿನ್ನೆ ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿತ್ತು. ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದನ್ನು ಪ್ರಶ್ನಿಸಿ ಇಂದು ಹೈಕೋರ್ಟಿಗೆ ಕಾರ್ಯಕ್ರಮದ ಆಯೋಜಕರು ಅರ್ಜಿ ಸಲ್ಲಿಸಲಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಯನ್ನು ನಾಳೆ ಮುಂದೂಡಿದೆ. ಜಾಲಿವುಡ್ ಸ್ಟುಡಿಯೋದಿಂದ ರಿಟ್ ಅರ್ಜಿ ಸಲ್ಲಿಸಲಾಗಿದೆ. ನಿನ್ನೆ ಸಂಜೆ ಕಂದಾಯ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಬಿಗ್ ಬಾಸ್ ಮನೆಗೆ ಬೀಗ ಹಾಕಲಾಯಿತು. ಬಳಿಕ ಒಂದು ಗಂಟೆಗಳ ಕಾಲ ಸ್ಪರ್ಧಿಗಳಿಗೆ ಮನೆಯಿಂದ ಹೊರಗಡೆ ಹೋಗಲು ಅವಕಾಶ ನೀಡಲಾಗಿತ್ತು. ಇದೀಗ ಅರ್ಜಿದಾರರಿಂದ ರಿಟ್ ಅರ್ಜಿಯ 2ನೇ ಪ್ರತಿ ಸಲ್ಲಿಸಿದ್ದಾರೆ. ಕಚೇರಿ ಆಕ್ಷೇಪಣೆಗಳನ್ನ ಸರಿಪಡಿಸಿದ ಹಿನ್ನೆಲೆ ರಿಟ್ ಅರ್ಜಿ ವಿಚಾರಣೆ ನಾಳೆಗೆ ಹೈಕೋರ್ಟ್ ನಿಗದಿಪಡಿಸಿತು.
ದಾವಣಗೆರೆ : ಬಹುತೇಕರು ಬಿಸಿನೀರಿಗಾಗಿ ಮನೆಯಲ್ಲಿ ಬಾಯ್ಲರ್ ಬಳಕೆ ಮಾಡುತ್ತಾರೆ. ಹೀಗೆ ಮನೆಯಲ್ಲಿ ಬಾಯ್ಲರ್ ಸ್ಪೋಟಗೊಂಡ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆಯ ದುರ್ಗಿಗುಡಿ ಉತ್ತರ ಭಾಗದಲ್ಲಿ ಮನೆಯಲ್ಲಿದ್ದಂತ ಬಾಯ್ಲರ್ ಸ್ಪೋಟಗೊಂಡ ಪರಿಣಾಮ 11 ವರ್ಷದ ಸ್ವೀಕೃತಿ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಈ ದುರಂತದಲ್ಲಿ ತೀರ್ಥಿಬಾಯಿ, ಹೂವಾ ನಾಯ್ಕ್, ಸುನೀತಾ ಬಾಯಿ ಎಂಬ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ಮನೆಯಲ್ಲಿ ಬಾಯ್ಲರ್ ಆನ್ ಮಾಡಿದಾಗ ದಿಢೀರ್ ಸ್ಪೋಟಗೊಂಡಿದೆ. ಇದರಿಂದಾಗಿ ಬಾಯ್ಲರ್ ಪಕ್ಕದಲ್ಲೇ ಇದ್ದಂತ ಬಾಲಕಿ ಸ್ವೀಕೃತಿ ಸ್ಥಳದಲ್ಲೇ ಸಾವನ್ನಪ್ಪಿದ್ದರೇ, ಮೂವರು ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಬೆಂಗಳೂರು : ರಾಜ್ಯದ 15 ಜಿಲ್ಲೆ, 27 ತಾಲ್ಲೂಕುಗಳಲ್ಲಿನ ಅಂತರ್ಜಲ ಅತಿಬಳಕೆಯ ಪಟ್ಟಿಯಲ್ಲಿರುವ 252 ಗ್ರಾಮ ಪಂಚಾಯ್ತಿಗಳಲ್ಲಿ ʻನೀರಿದ್ದರೆ ನಾಳೆʼ ಯೋಜನೆಯನ್ನು ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಮಹತ್ವಕಾಂಕ್ಷಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು. ಮೊದಲ ಹಂತದಲ್ಲಿ ರಾಜ್ಯದ 16 ಜಿಲ್ಲೆಗಳ 27 ತಾಲ್ಲೂಕುಗಳ 525 ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಪೈಕಿ ಕಲ್ಯಾಣ ಕರ್ನಾಟಕ ಭಾಗದ 100ಕ್ಕೂ ಹೆಚ್ಚು ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯತಿಗಳಿವೆ. ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಸಿಷ್ಠ ಸಿಂಹ ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ. ನಾಳೆ ವಿಧಾನಸೌಧದ ಬ್ವಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ರಾಜ್ಯದಲ್ಲಿ ಅಂತರ್ಜಲ ಸಾಕ್ಷರತೆಗೆ ಒತ್ತು ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು. ಪ್ರಕೃತಿಯಿಂದ ವರದಾನವಾಗಿ ಬಂದಿರುವ ನೈಸರ್ಗಿಕ ಹಾಗೂ ನಮ್ಮ…
ಧಾರವಾಡ : ಧಾರವಾಡದಲ್ಲಿ ಸರಕು ಸಾಗಣೆ ರೈಲಿನಲ್ಲಿ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅನಾಹುತ ಒಂದು ತಪ್ಪಿದೆ. ಧಾರವಾಡ ಹೊರವಲಯದ ಗೇಟ್ ಬಳಿ ನಿಂತಾಗ ಬೆಂಕಿ ಕಾಣಿಸಿಕೊಂಡಿದೆ. ಗೋವಾ ಕಡೆಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಗೂಡ್ಸ್ ವಾಹನ ಮಾರ್ಗಮಧ್ಯೆ ಕೆಟ್ಟುನಿಂತಿದೆ.ಆಗ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಳಿಯಾಳ ರಸ್ತೆಯ ರೇಲ್ವೆ ಗೇಟ್ ಬಳಿ ರೈಲು ನಿಂತಿದೆ. ಸುಮಾರು 1 ಗಂಟೆ ಕಾಲ ಗೇಟ್ ಬಳಿಯೇ ರೈಲು ನಿಂತಿದೆ. ಈ ವೇಳೆ ಸಿಬ್ಬಂದಿ ಇಂಜಿನ್ ಆವಡಿಸಿ ರೈಲನ್ನು ತೆರವು ಮಾಡಿದರು. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ : ಬೀದಿ ನಾಯಿ ಕಡಿತಕ್ಕೊಳಗಾದ ಬಾಲಕ ರೇಬೀಸ್ನಿಂದ ಸಾವನ್ನಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಿಂದ ವರದಿಯಾಗಿದೆ.ಮೂರು ವರ್ಷದ ಬಾಲಕ ಅರ್ಮಾನ್ ಆಟವಾಡುತ್ತಿದ್ದಾಗ ಬೀದಿ ನಾಯಿ ಆತನ ಮೇಲೆ ದಾಳಿ ಮಾಡಿತ್ತು. ಘಟನೆ ನಡೆದ ಎಂಟು ದಿನಗಳ ನಂತರ ಮಗು ಅರ್ಮಾನ್ ತಲೆ ಕೆರೆದುಕೊಳ್ಳಲು ಪ್ರಾರಂಭಿಸಿದಾಗ, ಕುಟುಂಬದವರು ತಲೆಯ ಮೇಲೆ ಕೂದಲಿನ ಕೆಳಗೆ ನಾಯಿ ಕಚ್ಚಿದ ಗಾಯ ಅದರ ಹಲ್ಲಿನ ಗುರುತುಗಳು ಇರುವುದನ್ನು ಗಮನಿಸಿದರು. ಆದರೆ ನಾಯಿ ದಾಳಿಯ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ, ನಾಯಿ ದಾಳಿಯ ಬಗ್ಗೆ ಯಾರೂ ನಮಗೆ ಮಾಹಿತಿ ನೀಡಲಿಲ್ಲ. ಆಟವಾಡುವಾಗ ಬಿದ್ದೆ ಎಂದು ಮಗು ಅರ್ಮಾನ್ ಹೇಳಿದ್ದಾನೆ ಎಂದು ಅರ್ಮಾನ್ನ ಚಿಕ್ಕಪ್ಪ ಶೇಖ್ ರಹೀಸ್ ಹೇಳಿದ್ದಾರೆ. ಕುಟುಂಬದವರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ, ಕುಟುಂಬದವರಿಗೆ ಆತ ಬಿದ್ದಿದ್ದಾನೆ ಎಂದು ಯಾರೋ ಮಾಹಿತಿ ನೀಡಿದ್ದರು. ಹೀಗಾಗಿ ಮಗುವಿನ ದೇಹವನ್ನೆಲ್ಲಾ ಪರೀಕ್ಷೆ ಮಾಡಿದ ಪೋಷಕರಿಗೆ ಎಲ್ಲೂ ಗಾಯಗಳು ಕಾಣಿಸಿಕೊಂಡಿರಲಿಲ್ಲ, ಹೀಗಾಗಿ ಅವರೂ ಸುಮ್ಮನಾಗಿದ್ದರು. ಆದರೆ ನಾಯಿ ದಾಳಿ…
ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 23 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 6 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಲ್ಲಿ ಇದೀಗ ಪೊಲೀಸರು ಮಾದಕ ವಸ್ತುಗಳ ಭರ್ಜರಿ ಬೇಟೆಯಾಡಿದ್ದು, ಅಪಾರ ಪ್ರಮಾಣದ ಹೈಡ್ರೋ ಗಾಂಜಾ MDMA ಕ್ರಿಸ್ಟಲ್, ಆಫೀಮು ಜಪ್ತಿ ಮಾಡಿದ್ದಾರೆ. ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ 4 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಕೆಜಿ.ನಗರ ಠಾಣಾ ವ್ಯಾಪ್ತಿಯಲ್ಲಿ 3.81 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇನ್ನು ಕೊತ್ತನೂರು ವ್ಯಾಪ್ತಿಯಲ್ಲಿ 12.03 ಕೋಟಿ ಮೌಲ್ಯದ MDMA ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ. ನಕಲಿ ಕ್ರಿಪ್ಟೊ ಕರೆನ್ಸಿ ಮೂಲಕ ಡ್ರಗ್ಸ್ ಖರೀದಿಸುತ್ತಿದ್ದರು. ಥೈಲ್ಯಾಂಡ್, ಜರ್ಮನಿಯಿಂದ ಹೈಡ್ರೋ ಗಾಂಜಾ ಖರೀದಿಸುತ್ತಿದ್ದ ಆರೋಪಗಳು ಬೆಂಗಳೂರು ಕೆಜಿ ನಗರದ ಸರ್ಕಾರಿ ಅಂಚೆ ಕಚೇರಿಗೆ ಬರುತ್ತಿತ್ತು. ಪೋಸ್ಟ್ ಆಫೀಸ್ ನಲ್ಲಿ ಸಂಶಯಸ್ಪದ ಪಾರ್ಸೆಲ್ ಗಳನ್ನ ಪರಿಶೀಲನೆ…














