Subscribe to Updates
Get the latest creative news from FooBar about art, design and business.
Author: kannadanewsnow05
ಯಾದಗಿರಿ : ರಾಜ್ಯದಲ್ಲಿ ಒಂದು ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯೊಬ್ಬರ ತಲೆ ಕೂದಲು ಕತ್ತರಿಸಿ, ಸುಣ್ಣ ಹಚ್ಚಿ, ಖಾರದ ಪುಡಿ ಎರಚಿ ಅಮಾನುಷವಾಗಿ ವರ್ತಿಸಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದಲ್ಲಿ ನಡೆದಿದೆ. ಅ.16 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಂಗಾಬಾಯಿ ಶಂಕರ ಚಿನ್ನಾರಾಠೋಡ (35) ಸಂತ್ರಸ್ತೆ ಎಂದು ತಿಳಿದುಬಂದಿದೆ.ಸಂತ್ರಸ್ತೆ ಆರೋಗ್ಯ ಸಮಸ್ಯೆಯಿಂದಾಗಿ ಕಲಬುರಗಿ ಇರುವ ಚಿಕ್ಕಮ್ಮನ ಮನೆಗೆ ಆಗಾಗ ಹೋಗುತ್ತಿದ್ದಳು. ಆಕೆಯ ಅಳಿಯ ರಾಮು ರಾಠೋಡ ಎಂಬಾತ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ. ಆದ್ರೆ ಆರೋಪಿಗಳು ಅಳಿಯನ ಜೊತೆಗೆ ಸಂಬಂಧ ಇಟ್ಟುಕೊಂಡು ಓಡಿ ಹೋಗಿ ಮರ್ಯಾದೆ ತೆಗೆದಿದ್ದೀಯಾ ಅಂತ ನಿಂದಿಸಿ ಮನಸೋಇಚ್ಛೆ ಥಳಿಸಿದ್ದಾರೆ. ಸುಮಾರು 11 ಜನ ಗಂಗೂಭಾಯಿಯನ್ನ ಒದ್ದು ನೆಲಕ್ಕೆ ಕೆಡವಿದ್ದಾರೆ. ಆಕೆಯನ್ನ ಹಿಡಿದು ತಲೆಕೂದಲು ಕತ್ತರಿಸಿದ್ದಾರೆ. ನಂತರ ತಲೆಗೆ ಸುಣ್ಣ ಹಚ್ಚಿ, ಮೈಮೇಲೆ ಕಾರದಪುಡಿ ಹಾಕಿ ದುಷ್ಕೃತ್ಯ ಎಸಗಿದ್ದಾರೆ. ಜೊತೆಗೆ ಗಂಗಾಭಾಯಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.ಪ್ರಕರಣ ಸಂಬಂಧ…
ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ಎಲೆಕ್ಟ್ರಾನಿಕ್ ಅಂಗಡಿ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವಿಜಯಪುರ ಪಟ್ಟಣದಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟು ಭಸ್ಮವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಗಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆದರು.
ಆಂಧ್ರಪ್ರದೇಶ : ಆಂಧ್ರಪ್ರದೇಶ ಮತ್ತು ಬೆಂಗಳೂರು ನಡುವೆ ಕರ್ನೂಲ್ ನಲ್ಲಿ ಖಾಸಗಿ ಬಸ್ ದುರಂತದಲ್ಲಿ ಇದುವರೆಗೂ 20ಕ್ಕೂ ಹೆಚ್ಚು ಜನರು ಸಜೀವ ದಹನಗೊಂಡಿದ್ದು 23ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಸ್ ಚಾಲಕ ಮಿರಿಯಾಲ ಲಕ್ಷ್ಮಯ್ಯನನ್ನು ಅರೆಸ್ಟ್ ಮಾಡಲಾಗಿದೆ. ಚಾಲಕರನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕ ಅಂಶ ಬಯಲಾಗಿದ್ದು ಚಾಲಕ ಮಿರ್ಯಾಲ ಲಕ್ಷ್ಮಯ್ಯ ಪಲ್ನಾಡ್ ನಗರದ ನಿವಾಸಿಯಾಗಿದ್ದು, ಆತ ನಕಲಿ ಅಂಕಪಟ್ಟಿ ನೀಡಿ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದ ಎಂದು ತಿಳಿದುಬಂದಿದೆ. ಹತ್ತನೇ ಕ್ಲಾಸ್ ಪಾಸ್ ಆಗಿರೋ ನಕಲಿ ಅಂಕಪಟ್ಟಿ ಸಲ್ಲಿಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಆರೋಪಿ ಚಾಲಕನನ್ನು ಬಂಧಿಸಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಲಾಲ್ಬಾಗ್ನಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರವಾಗಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ಸಂಸದ ತೇಜಸ್ವಿ ವಿರುದ್ಧ ವಾಗ್ದಾಳಿ ನಡೆಸಿ ತೇಜಸ್ವಿ ಸೂರ್ಯ ಒಬ್ಬ ಕಾಲಿ ಟ್ರಂಕ್ ಎಂದು ಕಿಡಿಕಾರಿದ್ದಾರೆ. ಲಾಲ್ ಬಾಗ್ ಗೆ ಸುರಂಗ ಮಾರ್ಗ ನಿರ್ಮಾಣ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಆಗಲ್ಲ. ತೇಜಸ್ವಿ ಸೂರ್ಯ ಯಾರು? ಎಂಪಿ ಆಗಿ ಪ್ರಧಾನಿ ಹತ್ರ ರೂ.1 ಕೂಡ ಅನುದಾನ ತಂದಿಲ್ಲ. ಆತನೊಬ್ಬ ಖಾಲಿ ಟ್ರಂಕ್ ತೇಜಸ್ವಿ ಸೂರ್ಯ. ಟೀಕೆಗಳು ಸಾಯುತ್ತವೆ ಕೆಲಸಗಳು ಮಾತ್ರ ಉಳಿಯುತ್ತವೆ. ಬಿಜೆಪಿ ಅವಧಿಯಲ್ಲಿ ಯಾವುದೇ ಕೆಲಸ ಆಗಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಬೆಂಗಳೂರು : ಶಬರಿಮಲೈ ದೇಗುಲದಲ್ಲಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಪೊನ್ನಿ ಉನ್ನಿಕೃಷ್ಣನ್ ಮನೆಯ ಮೇಲೆ ಕೇರಳ ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಮೇಲೆ ದಾಳಿ ಮಾಡಿದ್ದಾರೆ. ನಾಲ್ವರು ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. ತಿರುವನಂತಪುರದಲ್ಲಿ ಉನ್ನಿಕೃಷ್ಣನ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ತನಿಖೆ ಭಾಗವಾಗಿ ಸಾಕ್ಷಿ ಆಧಾರಗಳನ್ನು ಸಂಗ್ರಹಿಸಲು ಪ್ರಮುಖ ಆರೋಪಿಯಾಗಿರುವ ಪೊನ್ನಿ ಉನ್ನಿಕೃಷ್ಣನ್ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಳ್ಳಾರಿಯಲ್ಲಿ ಕೂಡ ಕೇರಳದ ಅಧಿಕಾರಿಗಳು ತನಿಖೆ ಮಾಡಿದ್ದಾರೆ. ಬಳ್ಳಾರಿ ರೊದ್ದಂ ಜುವೆಲರಿ ಶಾಪ್ನಲ್ಲಿ ಮೇಲೆ ದಾಳಿ ಮಾಡಿದ್ದಾರೆ. ಕದ್ದ ಚಿನ್ನದಲ್ಲಿ 476 ಗ್ರಾಂ ಚಿನ್ನ ಖರೀದಿಸಲಾಗಿತ್ತು. ರೊದ್ದಂ ಗೋಲ್ಡ್ ಮಾಲಿಕ ಗೋವರ್ಧನ್ ಖರೀದಿಸಿದ್ದರು. 476 ಚಿನ್ನವನ್ನು ಕೇರಳ ಎಸ್ಐಟಿ ಅಧಿಕಾರಿಗಳು ರಿಕವರಿ ಮಾಡಿದ್ದಾರೆ. ಗೋವರ್ಧನ್ ವಿಚಾರಣೆ ಮಾಡಿ ಚಿನ್ನವಶಕ್ಕೆ ಪಡೆದಿದ್ದಾರೆ. ಇದೀಗ ರೊದ್ಧಂ ಜುವೆಲ್ಲರಿ ಶಾಪ್…
ಬೆಂಗಳೂರು : ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಬೆಂಗಳೂರಿನ ಕೆಆರ್ ಪುರಂ ತ್ರಿವೇಣಿ ನಗರದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಗ್ಯಾಸ್ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಪೋಟಗೊಂಡಿದೆ. ಸಿಲಿಂಡರ್ ಸ್ಫೋಟದ ರಭಸಕ್ಕೆ ಪಕ್ಕದ ಮನೆಗಳಿಗೂ ಹಾನಿ ಆಗಿದೆ. ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಸಿಲಿಂಡರ್ ಸ್ಫೋಟದ ರಭಸಕ್ಕೆ ಮನೆ ಸಂಪೂರ್ಣವಾಗಿ ಛಿದ್ರಗೊಂಡಿದ್ದು, ಓರ್ವ ಸಾವನಪ್ಪಿದ್ದಾನೆ. ಮೂವರಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯದಳ ಭೇಟಿ ಕೊಟ್ಟಿದ್ದು ವೈಟ್ ಫೀಲ್ಡ್ ವಿಭಾಗದ ಡೀಸಿಪಿ ಪರಶುರಾಮ್ ಸಹ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು : ಬೆಂಗಳೂರಲ್ಲಿ ರಸ್ತೆ ಗುಂಡಿಗೆ ಟೆಕ್ಕಿ ಬಲಿಯಾಗಿದ್ದು, ಗುಂಡಿ ತಪ್ಪಿಸಲು ಹೋಗಿ ಬೈಕ್ ನಿಂದ ಬಿದ್ದು ಟೆಕ್ಕಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ ಎಪಿಎಂಸಿ ಬಳಿ ಈ ಒಂದು ಘಟನೆ ಸಂಭವಿಸಿದೆ. ಬೈಕ್ ನಿಂದ ಬಿದ್ದು ಪ್ರಿಯಾಂಕ (26) ಸಾವನಪ್ಪಿದ್ದಾರೆ. ಸಹೋದರನ ಜೊತೆಗೆ ಬೈಕ್ ನಲ್ಲಿ ತೆರಳುವಾಗ ಈ ಒಂದು ದುರ್ಘಟನೆ ಸಂಭವಿಸಿದೆ. ಹುಸ್ಕೂರು ರಸ್ತೆಯಿಂದ ಮಾದಪುರಕ್ಕೆ ತೆರಳುತ್ತಿದ್ದರು. ಕಾಮಗಾರಿಯಿಂದ ಎಪಿಎಂಸಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿತ್ತು. ಈ ವೇಳೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದಿದ್ದಾರೆ. ಕೆಳಗಡೆ ಬಿದ್ದ ಯುವತಿಯ ಮೇಲೆ ಹಿಂದಿನಿಂದ ಬಂದ ಲಾರಿ ಹರಿದಿದೆ. ಕೂಡಲೇ ಪ್ರಿಯಾಂಕಾ ಸ್ಥಳದಲ್ಲಿ ಸಾಬನಪ್ಪಿದ್ದು ಅಪಘಾತದ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವುದು ಈ ಹಿಂದೆ ಕಂಡುಬಂದಿತ್ತು.ಆದರೆ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿಯ ಕಳ್ಳಾಟ ಮತ್ತೊಮ್ಮೆ ಬಯಲಾಗಿದೆ. ಜೈಲಿನೊಳಗೆ ಫೋನ್ ತೆಗೆದುಕೊಂಡು ಹೋಗುತ್ತಿದ್ದ ಸಿಬ್ಬಂದಿ ಸಿಗಿ ಬಿದ್ದಿದ್ದಾನೆ. ತಪಾಸಣೆಯ ವೇಳೆ ಸಿಬ್ಬಂದಿ ಅಮರ್ ಪ್ರಾಂಜೆ ಸಿಗಿ ಬಿದ್ದಿದ್ದಾನೆ. ಒಂದು ಸ್ಮಾರ್ಟ್ ಫೋನ್ ಮತ್ತು ಒಂದು ಬ್ಯಾಕ್ ಕವರ್ ಇಟ್ಟುಕೊಂಡಿದ್ದ. ಅಲ್ಲದೆ ಎರಡು ಇಯರ್ ಫೋನ್ ಗಳನ್ನು ಸಹ ತೆಗೆದುಕೊಂಡು ಹೋಗುತ್ತಿದ್ದ. ಖಾಸಗಿ ಸ್ಥಳದಲ್ಲಿ ಜೈಲು ಸಿಬ್ಬಂದಿ ಅಮರ್ ಇಟ್ಟುಕೊಂಡು ಒಳಗಡೆ ತೆರಳುವ ವೇಳೆ ತಪಾಸನೆ ನಡೆಸಿದ್ದಾರೆ. ಜೈಲಾಧಿಕಾರಿಗಳು ಸಿಬ್ಬಂದಿಯನ್ನು ತಪಾಸನೆ ನಡೆಸಿ ವಸ್ತುಗಳು ಪತ್ತೆಯಾದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಲವ್ ಜಿಹಾದ ಪ್ರಕರಣದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಮೃತಹಳ್ಳಿ ಠಾಣೆ ಪೋಲೀಸರು ಆರೋಪಿ ಮೊಹಮ್ಮದ್ ಇಶಾಕ್ ನನ್ನ ಅರೆಸ್ಟ್ ಮಾಡಿದ್ದಾರೆ. ಮತಾಂತರಕ್ಕೆ ಒಪ್ಪದಿದ್ದಕ್ಕೆ ಪ್ರೀತಿಸಿದ ಯುವತಿಗೆ ಮಹಮ್ಮದ್ ಇಶಾಕ್ ಕೈಕೊಟ್ಟಿದ್ದಾನೆ. ಪ್ರಕರಣ ಅಮೃತ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾರಣ ಹಿನ್ನೆಲೆಯಲ್ಲಿ ಪ್ರಕರಣ ಅಮೃತಹಳ್ಳಿ ಠಾಣೆಗೆ ವರ್ಗಾವಣೆ ಆಗಿತ್ತು. ಪ್ರಕರಣ ಹಿನ್ನೆಲೆ 2024ರ ಅಕ್ಟೋಬರ್ 17ರಂದು ಯುವತಿಗೆ ಮೊಹಮ್ಮದ್ ಇಶಾಕ್‌ನ ಪರಿಚಯವಾಗಿತ್ತು. ಈ ಪರಿಚಯ ಸ್ನೇಹ ಮತ್ತು ಸ್ನೇಹ ಪ್ರೀತಿಯಾಗಿ ಬದಲಾಗಲು ಹೆಚ್ಚು ಸಮಯ ಬೇಕಿರಲಿಲ್ಲ. 2024ರ ಅಕ್ಟೋಬರ್ 30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರು ಭೇಟಿಯಾಗಿದ್ದರು. ನಂತರ ಯುವತಿ ಜೊತೆ ಇಶಾಕ್ ಸಲುಗೆ ಬೆಳೆಸಿಕೊಂಡಿದ್ದನು. ಮದುವೆ ಸಂಬಂಧ ಮನೆಯವರೊಂದಿಗೆ ಮಾತನಾಡೋದಾಗಿ ಇಶಾಕ್ ನಂಬಿಸಿದ್ದನು. ಒಂದು ದಿನ ದಾಸರಹಳ್ಳಿ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದ ಇಶಾಕ್, ಯುವತಿಯನ್ನು ಕರೆಸಿಕೊಂಡಿದ್ದನು. ಈ ವೇಳೆ ಮದುವೆಯ ಭರವಸೆ ನೀಡಿ ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದಾನೆ. ನಂತರ ಹಲವು ಬಾರಿ ಸಂಪರ್ಕ…
ಬೆಂಗಳೂರು : ಕಿರುತೆರೆ ನಟಿ ದಿವ್ಯ ಸುರೇಶ್ ಅವರಿಂದ ಹಿಟ್ ಅಂಡ್ ರನ್ ಆರೋಪ ಕೇಳಿ ಬಂದಿದೆ.ಅತಿ ವೇಗ ಮತ್ತು ನಿರ್ಲಕ್ಷದ ಚಾಲನೆ ಮಾಡಿದ ಆರೋಪ ಕೇಳಿ ಬಂದಿದ್ದು, ಅಪಘಾತದಲ್ಲಿ ಮಹಿಳೆ ಒಬ್ಬರ ಕಾಲು ಮುರಿತವಾಗಿದೆ ಎಂದು ತಿಳಿದುಬಂದಿದೆ.ಈ ಹಿನ್ನೆಲೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 4 ರಂದು ರಾತ್ರಿ 1:30ರ ವೇಳೆಗೆ ಈ ಒಂದು ಅಪಘಾತ ಸಂಭವಿಸಿದ್ದು ಬೆಂಗಳೂರಿನ ಬ್ಯಾಟರಾಯನಪುರ ಎಂಎಂ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಹಿಳೆಯ ಕಾಲು ಮುರಿತವಾಗಿದ್ದು ಅದಾದ ಬಳಿಕ ಸೌಜನ್ಯಕಾದರೂ ನಮ್ಮನ್ನು ಬಂದು ಭೇಟಿಯಾಗಿಲ್ಲ ಎಂದು ಅಪಘಾತಕ್ಕೆ ಈಡಾದ ಮಹಿಳೆಯ ಕುಟುಂಬಸ್ಥರು ದಿವ್ಯಾ ಸುರೇಶ್ ವಿರುದ್ಧ ಆಕ್ರೋಶ ಹೋರ ಹಾಕಿದ್ದಾರೆ. ಇದೀಗ ಪೊಲೀಸರು ನಟಿ ದಿವ್ಯಾ ಸುರೇಶ್ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿದರು. ನಟಿ ದಿವ್ಯ ಸುರೇಶ್ ಕಾರು ಅನ್ನೋದು ಖಚಿತವಾಗಿತ್ತು . ದಿವ್ಯ ಸುರೇಶ್ ಗೆ ಪೊಲೀಸರು ನೋಟಿಸ್…














