Subscribe to Updates
Get the latest creative news from FooBar about art, design and business.
Author: kannadanewsnow05
ಬೆಳಗಾವಿ : ವಿಧಾನಸಭೆಯಲ್ಲಿ ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ತಡೆ, ನಿಷೇಧ ಮತ್ತು ಪರಿಹಾರ ಮಸೂದೆ-2025 ಮಂಡಿಸಲಾಗಿದ್ದು, ಈ ಮಸೂದೆ ಅನ್ವಯ ಇನ್ಮುಂದೆ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ, 1 ಲಕ್ಷ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಈ ಮಸೂದೆಯಂತೆ ಇನ್ನು ಮುಂದೆ ಸಾಮಾಜಿಕ ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡವರು, ಬಹಿಷ್ಕಾರ ಮಾಡಲು ನಡೆಸುವ ಸಭೆ ಹಾಗೂ ಪಂಚಾಯ್ತಿ ನಡೆಸಿದವರನ್ನು ಅಪರಾಧಿಗಳು ಎಂದು ಪರಿಗಣಿಸಲಾಗುವುದು. ಬಹಿಷ್ಕಾರಕ್ಕೆ ಒತ್ತಡ ಹೇರಿ ಪರೋಕ್ಷವಾಗಿ ಕಾರಣರಾದವರು, ಬಹಿಷ್ಕಾರದ ಪರವಾಗಿ ಮತ ಹಾಕಿದವರು ಅಥವಾ ಚರ್ಚೆಯಲ್ಲಿ ಪಾಲ್ಗೊಂಡವರನ್ನೂ ಅಪರಾಧಿಗಳೆಂದು ನಿರ್ಧರಿಸಲಾಗುತ್ತದೆ. ಬಹಿಷ್ಕಾರಕ್ಕೆ ಒತ್ತಡ ಹೇರುವ ಮೂಲಕ ನಿರ್ಧಾರಕ್ಕೆ ಕಾರಣರಾದವರು, ಬಹಿಷ್ಕಾರದ ಪರವಾಗಿ ಮತ ಹಾಕಿದವರು ಅಥವಾ ಚರ್ಚೆಯಲ್ಲಿ ಪಾಲ್ಗೊಂಡವರನ್ನೂ ಅಪರಾಧಿಗಳೆಂದು ನಿರ್ಧರಿಸಲಾಗುತ್ತದೆ. ಈ ಕುರಿತು ಸಭೆ, ಜಮಾವಣೆ, ಸಮಾವೇಶ ನಡೆಸುವುದು ಅಕ್ರಮ ಎಂದು ಮಸೂದೆಯಲ್ಲಿ ಉಲ್ಲೇಖಿಸಿದೆ. ಬಹಿಷ್ಕಾರಕ್ಕೆ ಒಳಗಾಗುವವರು ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು…
ನವದೆಹಲಿ : ರಾಜ್ಯದ ತೊಗರಿ ಬೆಳೆಗಾರರಿಗೆ ಇದೀಗ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ. ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕದಲ್ಲಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅಸ್ತು ಎಂದಿದೆ. ಕನಿಷ್ಠ ಬೆಂಬಲ ಬೆಲೆ ಯಲ್ಲಿ ನಫೆಡ್ ಮತ್ತು ಎನ್ಸಿಸಿಎಫ್ ಮೂಲಕ ಆದ್ಯತೆ ಮೇಲೆ, ತೊಗರಿ ಖರೀದಿಗೆ ತ್ವರಿತ ಅನುಮೋದನೆ ನೀಡಲಾಗಿದೆ. ಕರ್ನಾಟಕದಲ್ಲಿ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಈ ಕೂಡಲೇ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಮುಂದಾಗುವಂತೆ ಡಿಸೆಂಬರ್ 4ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆಯಲಾಗಿತ್ತು. ಇದಕ್ಕೆ ತ್ವರಿತ ಸ್ಪಂದನೆ ನೀಡಿರುವ ಕೃಷಿ ಸಚಿವರು, ಐದಾರು ದಿನದಲ್ಲೇ ತೊಗರಿ ಖರೀದಿಗೆ ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2025-26ಕ್ಕೆ ಅಂದಾಜು 12.60 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯೊಂದಿಗೆ ಕರ್ನಾಟಕ ಪ್ರಮುಖ ತೊಗರಿ ಬೆಳೆ ಉತ್ಪಾದಕ ರಾಜ್ಯವಾಗಿದೆ. ಮಾರುಕಟ್ಟೆಯಲ್ಲಿ ಮಾದರಿ ಬೆಲೆ ಕ್ವಿಂಟಾಲ್ಗೆ…
ಧಾರವಾಡ : ಧಾರವಾಡದಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು, ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಧಾರವಾಡದ ಕೊಪ್ಪದಕೇರಿ ಬಡಾವಣೆಯ ಪಾರ್ಕ್ ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಪಾರ್ಕ್ ನಲ್ಲಿ ಇರುವಂತಹ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಾವ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬುದು ತಿಳಿದು ಬಂದಿಲ್ಲ. ಸದ್ಯ ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು : ಕಳೆದ ತಿಂಗಳ ಹಿಂದೆ ಬೆಂಗಳೂರಿನಲ್ಲಿ ವೈದ್ಯೆ ಡಾಕ್ಟರ್ ಕೃತಿಕಾ ರೆಡ್ಡಿಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಒಂದು ಪ್ರಕರಣದಲ್ಲಿ ಪತಿ ಡಾಕ್ಟರ ಮಹೇಂದ್ರ ರೆಡ್ಡಿಯನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಪತಿ ಮಹೇಂದ್ರ ರೆಡ್ಡಿ ಜಾಮೀನು ಅರ್ಜಿ ವಜಾಗೋಳಿಸಲಾಗಿದೆ. ಹೌದು ಕೊಲೆ ಪ್ರಕರಣದಲ್ಲಿ ಸದ್ಯ ಡಾಕ್ಟರ್ ಮಹೇಂದ್ರ ರೆಡ್ಡಿ ಜೈಲಲ್ಲಿ ಇದ್ದಾರೆ ಜಾಮೀನು ನೀಡುವಂತೆ ಇತ್ತೀಚಿಗೆ ಅವರು ಅರ್ಜಿ ಸಲ್ಲಿಸಿದರು. ಇಂದು ವಿಚಾರಣೆ ನಡೆಸಿ ಬೆಂಗಳೂರಿನ ಸೇಷನ್ಸ್ ನ್ಯಾಯಾಲಯ ಮಹೇಂದ್ರ ರೆಡ್ಡಿ ಅರ್ಜಿ ವಜಾ ಗೊಳಿಸಿದೆ. ಜಾಮೀನು ಅರ್ಜಿ ವಜಾ ಗೊಳಿಸುವಂತೆ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು. ಅನಸ್ತೇಶಿಯಾ ಖರೀದಿಗೆ ಪತಿ ಫೋನ್ ಪೇ ಮೂಲಕ ಹಣ ಪಾವತಿಸಿದ್ದಾನೆ. ನಂತರ ಮನೆಗೆ ಬಂದು ಪತ್ನಿ ಕೃತಿಕಾ ರೆಡ್ಡಿಗೆ ಅನೆಸ್ಥೆಶಿಯ ನೀಡಿದ್ದಾನೆ. ಮೃತಪಟ್ಟ ಬಳಿಕ ಮರಣೋತ್ತರ ಪರೀಕ್ಷೆಗೆ ವಿರೋಧಿಸಿದ್ದಾನೆ. ಪತ್ನಿ ಕೊಂದಿದ್ದಾಗಿ ಸ್ನೇಹಿತರಿಗೆ ಫೋನ್ ಪೇ ಸಂದೇಶ ನೀಡಿದ್ದಾನೆ ಎಂದು ವಾದ ಮಂಡಿಸಿದರು. ಬಳಿಕ ಕೋರ್ಟ್ ವಾದ ಆಲಿಸಿದ ನಂತರ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಇಂದು ಭಾರಿ ಅನಾಹುತ ಒಂದು ತಪ್ಪಿದೆ. ಮೈಸೂರು ಅರಮನೆ ದ್ವಾರದ ಸೀಲಿಂಗ್ ಕುಸಿತವಾಗಿದೆ. ವರಾಹ ದ್ವಾರದ ಮೇಲ್ಚಾವಣಿ ಸೀಲಿಂಗ್ ಇದೀಗ ಕುಸಿತಕೊಂಡಿದೆ. ಹೌದು ಪ್ರವಾಸಿಕರು ಆಗಮಿಸುವ ಗೇಟ್ ಬಳಿಯೇ ಕುಸಿತತಗೊಂಡಿದೆ. ಜನರಿಲ್ಲದ ವೇಳೆ ಕುಸಿದಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದೆ ಸಿಬ್ಬಂದಿ ಬೈಕ್ ಮೇಲೆ ಸೀಲಿಂಗ್ ಸಿಮೆಂಟ್ ಬಿದ್ದಿದೆ ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ನವದೆಹಲಿ : ದೆಹಲಿ ಗಲಭೆ ಆರೋಪಿ ಉಮರ್ ಖಾಲಿದ್ ಗೆ ತನ್ನ ಸಹೋದರಿಯ ಮದುವೆಯಲ್ಲಿ ಭಾಗವಹಿಸಿದ್ದಕ್ಕಾಗಿ ದೆಹಲಿ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ನೀಡಿದೆ. ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯವು ಉಮರ್ ಖಾಲಿದ್ಗೆ ಡಿಸೆಂಬರ್ 16 ರಿಂದ ಡಿಸೆಂಬರ್ 29 ರವರೆಗೆ ಜಾಮೀನು ನೀಡಿದೆ. ಡಿಸೆಂಬರ್ 27 ರಂದು ನಡೆಯಲಿರುವ ತನ್ನ ಸಹೋದರಿಯ ಮದುವೆಯಲ್ಲಿ ಭಾಗವಹಿಸಲು ಖಾಲಿದ್ ಮಧ್ಯಂತರ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಡಿಸೆಂಬರ್ 27 ರಂದು ನಡೆಯಲಿರುವ ತನ್ನ ಸಹೋದರಿಯ ಮದುವೆಯಲ್ಲಿ ಭಾಗವಹಿಸಲು ಡಿಸೆಂಬರ್ 16 ರಿಂದ 29 ರವರೆಗೆ 14 ದಿನಗಳ ಕಾಲ ಜೆಎನ್ಯು ಮಾಜಿ ವಿದ್ಯಾರ್ಥಿ ಮತ್ತು ಕಾರ್ಯಕರ್ತ ಉಮರ್ ಖಾಲಿದ್ ಅವರಿಗೆ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ನ್ಯಾಯಾಲಯದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್ಪೈ ಅವರು ಅವರ ಅರ್ಜಿಯನ್ನು ಆಲಿಸಿದರು, ತಾತ್ಕಾಲಿಕ ಪರಿಹಾರಕ್ಕಾಗಿ ಅವರ ಮನವಿಯನ್ನು ಪರಿಗಣಿಸಿದ ನಂತರ ಆದೇಶ ಹೊರಡಿಸಲಾಯಿತು. ದೆಹಲಿ ಗಲಭೆಗೆ ಸಂಬಂಧಿಸಿದ ದೊಡ್ಡ ಪಿತೂರಿ ಪ್ರಕರಣದಲ್ಲಿ ಖಾಲಿದ್…
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆಯಾಗಿದ್ದು, ತಾಯಿಗೆ ಬೈಯ್ದಿದ್ದಕ್ಕೆ ಸ್ವಂತ ಅಣ್ಣನನ್ನೇ ತಮ್ಮನೊಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಾರಬ್ ನಗರದಲ್ಲಿ ನಡೆದಿದೆ. ಮಹಮ್ಮದ್ ಮುಜಾಹಿದ್ (35) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಮುಜಾಹೀದ್ ತಮ್ಮ ಮೊಹಮ್ಮದ್ ಮುಸೆದ್ ಸ್ವಂತ ಅಣ್ಣನನ್ನೇ ಕೊಲೆ ಮಾಡಿದ್ದಾನೆ. ತಾಯಿಗೆ ಬೈದ ಎನ್ನುವ ವಿಚಾರಕ್ಕೆ ಅಣ್ಣತಮ್ಮ ನಡುವೆ ಹೊಡೆದಾಟ ಆಗಿದೆ.ಮನೆಯಲ್ಲಿ ಇದ್ದಂತಹ ವಸ್ತುಗಳಿಂದ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಮುಜಾಹಿದ್ನನ್ನು ಮುಸೆದ್ ಹತ್ಯೆಗೈದಿದ್ದಾನೆ. ಗಾಯಗೊಂಡ ಮುಸೆದ್ ನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಕಲಬುರ್ಗಿ : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು ಸರ್ಕಾರಿ ಬಸ್ ಹಾಗೂ ಜೀಪ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದರೆ. ಇನ್ನು ಮೂವರಿಗೆ ಗಂಭೀರವಾದ ಗಾಯಗಳಾಗಿವೆ. ಕಲ್ಬುರ್ಗಿ ಸಂಚಾರಿ ಪೊಲೀಸ್ ಠಾಣೆ ಒಂದರ ವ್ಯಾಪ್ತಿಯಲ್ಲಿ ಈ ಒಂದು ಸರಣಿ ಅಪಘಾತ ಸಂಭವಿಸಿದೆ ಸಾರಿಗೆ ಬಸ್ಗೆ ಕಮಾಂಡರ್ ಜೀಪ್ ಡಿಕ್ಕಿ ಆಗಿದೆ ನಿಂತಿದ್ದ ಸಾರಿಗೆ ಬಸ್ಗೆ ಇನ್ನೊಂದು ಬಸ್ ಡಿಕ್ಕಿ ಹೊಡೆದಿದೆ ಘಟನೆಯಲ್ಲಿ ಜೀಪ್ನಲ್ಲಿ ಇದ್ದಂತಹ ಓರ್ವ ಸ್ಥಳದಲ್ಲಿ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಧ್ಯೆ ಇಬ್ಬರು ಸಾವನ್ನಪ್ಪಿದ್ದರೆ. ಗಾಯಗೊಂಡ ಉಳಿದ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು : ರಾಜ್ಯದ ಕ್ರೀಡಾಪಟುಗಳಿಗೆ ಇದೀಗ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ ನೀಡಲಾಗುತ್ತದೆ ಅಂತ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜ ಪ್ರಶ್ನೆ ಕೇಳಿದ್ರು. ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳು ಕೊಡಬೇಕು. ಈವರೆಗೂ 13 ಜನಕ್ಕೆ ಮಾತ್ರ ಹುದ್ದೆ ನೀಡಲಾಗಿದೆ. ನೇರ ನೇಮಕಾತಿಯಲ್ಲಿ 3% ಹುದ್ದೆ ಕ್ರೀಡಾಪಟುಗಳಿಗೆ ಮೀಸಲು ಇಡಬೇಕು. ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ಕೊಡಲು ಒಂದು ಪಾಲಿಸಿ ತರಬೇಕು. ಕಬಡ್ಡಿಗೂ ಪ್ರೋತ್ಸಾಹ ಕೊಡಬೇಕು ಮನವಿ ಮಾಡಿದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿ, ಈವರೆಗೂ 13 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಕೊಡಲಾಗಿದೆ. ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್ ಗೆದ್ದವರಿಗೆ ಹುದ್ದೆ ಕೊಡ್ತೀವಿ. ಪೊಲೀಸ್ ಇಲಾಖೆಯಲ್ಲಿ, ಅರಣ್ಯ ಇಲಾಖೆಯಲ್ಲಿ 3% ಮೀಸಲಾತಿ ಮಾಡಿದ್ದೇವೆ. ಉಳಿದ ಇಲಾಖೆಯಲ್ಲಿ 2% ಮೀಸಲಾತಿ ನೀಡಲು ನಿರ್ಧಾರ ಮಾಡಿದ್ದೇವೆ. ಆದಷ್ಟೂ ಬೇಗ ಆದೇಶ ಮಾಡ್ತಿವಿ.ಕಬಡ್ಡಿಗೂ ಪ್ರೋತ್ಸಾಹ ಕೊಡಲು…
ಬೆಂಗಳೂರು : ಕಳೆದ ಕೆಲವು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಸಿಜ್ ಮಾಡಿದ್ದು ಅಲ್ಲದೆ ಹಲವು ವಿದೇಶಿ ಡ್ರಗ್ಸ್ ಹೆಡ್ಲರ್ ಗಳು ಸೇರಿದಂತೆ ಹಲವರನ್ನು ಅರೆಸ್ಟ್ ಮಾಡಿದ್ದಾರೆ. ಇದೀಗ ಈ ವಿಚಾರವಾಗಿ ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಮಾದಕವಸ್ತು ಮಾರಾಟಕ್ಕೆ ಉತ್ತೇಜನ ನೀಡುವ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಸೇವೆಯಿಂದಲೇ ವಜಾ ಮಾಡುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಪಣ ತೊಡಲಾಗಿದ್ದು, ಈಗಾಗಲೇ ಪಿಡುಗಿನ ವಿರುದ್ಧ ಸಮರ ಸಾರಲಾಗಿದೆ. ಹಿಂದೆಂದಿಗಿಂತಲೂ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿ ಸಾವಿರಾರು ಕೆ.ಜಿ. ತರಹೇವಾರಿ ಡ್ರಗ್ಸ್ ಜಪ್ತಿ ಮಾಡಿ, ನಾಶಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿಯನ್ನು ಎದುರಿಸಲು ಹಾಗೂ ತಡೆಗಟ್ಟಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ನೇತೃತ್ವದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ಎಎನ್ ಟಿಎಫ್) ಪಡೆ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಈ…














