Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಕರ್ನಾಟಕದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಬೆಂಗಳೂರು ಬಳ್ಳಾರಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಅಲ್ಲಿ ಶ್ರೀಕಿಯನ್ನ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. 2017ರಲ್ಲಿ ತುಮಕೂರು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುನೋ ಕಾಯಿನ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 1.14 ಲಕ್ಷ ಮೌಲ್ಯದ 60.6 ಬಿಟ್ ಕಾಯಿನ ಕಳುವು ಆಗಿರುವ ಕುರಿತು ಆರೋಪ ಕೇಳಿಬಂದಿತ್ತು. ಪ್ರೀತಿ ಲ್ಯಾಪ್ಟಾಪ್ ಪರಿಶೀಲನೆ ವೇಳೆ ಬಿಟ್ ಕಾಯಿನ್ ಕಳುವಾಗಿರುವುದು ದೃಢವಾಗಿದೆ. ಯುನೋಕಾಯಿನ್ ಪ್ರೈ. ಲಿ. ಗ್ರಾಹಕರಿಗೆ ಈ ಬಿಟ್ ಕಾಯಿನ್ ಸೇರಿದ್ದು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಇದೀಗ ಪ್ರಮುಖ ಆರೋಪಿಯಾದ ಶ್ರೀಕಿಯನ್ನು ಸಿಐಡಿ ವಿಶೇಷ ತನಿಖಾ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣ ಎಸ್ಐಟಿಗೆ ವರ್ಗಾವಣೆ ಆಗಿತ್ತು. ಈ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದರು.ಬಳಿಕ ಜಾಮೀನಿನ ಮೇಲೆ ಹೊರಗಡೆ ಬಂದಿದ್ದನು. ಸಿಐಡಿ ಅಧಿಕಾರಿಗಳು ಆರೋಪಿ ಶ್ರೀಕಿ ಸಿಐಡಿ ತನಿಖೆಗೆ…
ಬೆಂಗಳೂರು : ಮಹಿಳೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಬಂಧನವಾಗಿದ್ದು ಇಂದು ಅವರನ್ನು SIT ಅಧಿಕಾರಿಗಳು ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಈ ವೇಳೆ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡರೆ ಹಿನ್ನಲೆಯಲ್ಲಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರನ್ನು ಬಂಧಿಸಿತ್ತು. ಈ ವೇಳೆ ರೇವಣ್ಣ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ನಾನು ಯಾರನ್ನು ಕಿಡ್ನ್ಯಾಪ್ ಮಾಡಿಲ್ಲ. ಕಿಡ್ನ್ಯಾಪಿಗೂ ನನಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ಒಂದೇ ಉತ್ತರ ನೀಡುತ್ತಿದ್ದರು. ಆದರೂ ಎಸ ಐ ಟಿ ಅಧಿಕಾರಿಗಳು ಬಿಡದೆ ಅವರಿಂದ ಹೇಳಿಕೆಗಳನ್ನು ಪಡೆಯಲು ನಿರಂತರವಾಗಿ ವಿಚಾರಣೆ ನಡೆಸಿದರು. ಇದರಿಂದ ಮಾನಸಿಕ ಹಾಗು ದೈಹಿಕವಾಗಿ ಎಚ್ ಡಿ ರೇವಣ್ಣ ಅವರು ಕುಗ್ಗಿದ್ದರು. ಆದ್ದರಿಂದ ಅವರ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿತ್ತು.…
ನಾನು ಆಸ್ಟ್ರೇಲಿಯಾದಿಂದ ಬಂದು ವೋಟ್ ಮಾಡಿದ್ದೇನೆ, ಮತ ಹಾಕದೆ ಇರುವವರಿಗೆ ಸರ್ಕಾರ ಶಿಕ್ಷೆ ಕೊಡಲಿ: ನಟಿ ಭಾವನಾ ಶಿವಾನಂದ
ಹಾವೇರಿ : ನಾನು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಆಸ್ಟ್ರೇಲಿಯಾದಿಂದ ಬಂದು ಮತ ಹಾಕುತ್ತಿದ್ದೇನೆ. ಸಮರ್ಥ ನಾಯಕನ ಆಯ್ಕೆಗಾಗಿ ಪ್ರತಿಯೊಬ್ಬರು ಮತದಾನ ಮಾಡಿ ಒಂದು ವೇಳೆ ಮತ ಹಾಕದೆ ಇರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು ಶಿಕ್ಷೆ ನೀಡಿ ಎಂದು ನಟಿ ಭಾವನಾ ಶಿವಾನಂದ ತಿಳಿಸಿದರು. ಇಂದು ಅವರು ಹಾವೇರಿ ಜಿಲ್ಲೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ನಾನು ಆಸ್ಟ್ರೇಲಿಯಾದಿಂದ ಅಷ್ಟು ದೂರದಿಂದ ಬಂದು ಮತ ಹಾಕುತ್ತಿದ್ದೇನೆ ಆದರೆ ಇಲ್ಲಿಯ ಜನರಿಗೆ ಏನಾಗಿದೆಯೋ ಗೊತ್ತಾಗುತ್ತಿಲ್ಲ. ಅದರಲ್ಲೂ ಬೆಂಗಳೂರಿನ ಜನತೆ ಮತದಾನ ಪ್ರಕ್ರಿಯೆಯಲ್ಲಿ ಆಸಕ್ತಿ ತೋರದೆ ಇರುವುದು ತುಂಬಾ ಬೇಸರದ ಸಂಗತಿ ಎಂದು ತಿಳಿಸಿದರು. ಸಮರ್ಥನ ನಾಯಕನನ್ನು ಆಯ್ಕೆ ಮಾಡಿದರೆ ದೇಶಕ್ಕೂ ಒಳ್ಳೆಯದು, ಜನರಿಗೆ ಒಳ್ಳೆಯದು, ಮುಂದಿನ ಭವಿಷ್ಯದ ಪೀಳಿಗೆಗೂ ಒಳ್ಳೆಯದು. ನಿಮ್ಮ ಒಂದು ಮತದಿಂದ ಭವಿಷ್ಯದಲ್ಲಿ ಒಳ್ಳೆಯ ನಾಯಕ ಊಟಿಕೊಳ್ಳುತ್ತಾನೆ ಇದರಿಂದ ದೇಶದ ಅಭಿವೃದ್ಧಿ ಆಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು. ನಾನು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಆಸ್ಟ್ರೇಲಿಯಾದಿಂದ ಬಂದು…
ಹರಿಯಾಣ : ಲೋಕಸಭಾ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಹರಿಯಾಣದಲ್ಲಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು, ಈ ಹಿಂದೆ ಬೆಂಬಲ ಸೂಚಿಸಿದ ಮೂವರು ಸ್ವತಂತ್ರ ಅಭ್ಯರ್ಥಿಗಳು ಇದೀಗ ಬೆಂಬಲವನ್ನು ಹಿಂಪಡೆದಿದ್ದಾರೆ ಈ ಮೂಲಕ ಹರಿಯಾಣದಲ್ಲಿ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಮನೋಹರ್ ಲಾಲ್ ಮತ್ತು ರಂಜಿತ್ ಚೌತಾಲಾ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಇದಾದ ಬಳಿಕ ಬಿಜೆಪಿಯ ಅಂಕಿ-ಅಂಶ 46ಕ್ಕೇರಿತ್ತು. ಮೂವರು ಸ್ವತಂತ್ರ ಶಾಸಕರು ಕೂಡ ಬೆಂಬಲ ಹಿಂಪಡೆದಿದ್ದಾರೆ. ಅವರಲ್ಲಿ ಚರ್ಖಿ ದಾದ್ರಿ ಶಾಸಕ ಸೋಮವೀರ್ ಸಾಂಗ್ವಾನ್, ನಿಲೋಖೇರಿ ಶಾಸಕ ಧರಂಪಾಲ್ ಗೊಂಡರ್ ಮತ್ತು ಪುಂಡ್ರಿ ಶಾಸಕ ರಣಧೀರ್ ಗೋಲನ್ ಸೇರಿದ್ದಾರೆ. ಸದ್ಯ ಸರ್ಕಾರಕ್ಕೆ 43 ಶಾಸಕರ ಬೆಂಬಲವಿದೆ. ಅಂದರೆ ಸರ್ಕಾರ ಅಲ್ಪಮತದಲ್ಲಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ 30 ಶಾಸಕರನ್ನು ಹೊಂದಿದ್ದರೆ, ಜನನಾಯಕ ಜನತಾ ಪಕ್ಷವು 10 ಶಾಸಕರನ್ನು ಹೊಂದಿದೆ. ಬಿಜೆಪಿ 40 ಶಾಸಕರನ್ನು ಹೊಂದಿದೆ. ಆದರೆ ರಂಜಿತ್ ಚೌತಾಲಾ ರಾಜೀನಾಮೆ ನೀಡಿದ ಕಾರಣ ಸ್ವತಂತ್ರರ ಸಂಖ್ಯೆ 7 ರಿಂದ 6 ಕ್ಕೆ…
ಬೆಂಗಳೂರು : ಮಹಿಳೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಬಂಧನವಾಗಿದ್ದು ಇದೀಗ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಎಂದು SIT ಅಧಿಕಾರಿಗಳು ಕರೆತಂದಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರನ್ನು ಬಂಧಿಸಿತ್ತು. ಈ ವೇಳೆ ರೇವಣ್ಣ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ನಾನು ಯಾರನ್ನು ಕಿಡ್ನ್ಯಾಪ್ ಮಾಡಿಲ್ಲ. ಕಿಡ್ನ್ಯಾಪಿಗೂ ನನಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ಒಂದೇ ಉತ್ತರ ನೀಡುತ್ತಿದ್ದರು. ಆದರೂ ಎಸ ಐ ಟಿ ಅಧಿಕಾರಿಗಳು ಬಿಡದೆ ಅವರಿಂದ ಹೇಳಿಕೆಗಳನ್ನು ಪಡೆಯಲು ನಿರಂತರವಾಗಿ ವಿಚಾರಣೆ ನಡೆಸಿದರು. ಇದರಿಂದ ಮಾನಸಿಕ ಹಾಗು ದೈಹಿಕವಾಗಿ ಎಚ್ ಡಿ ರೇವಣ್ಣ ಅವರು ಕುಗ್ಗಿದ್ದರು. ಆದ್ದರಿಂದ ಅವರ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿತ್ತು. ಹಾಗಾಗಿ ಇಂದು ಸೊಸೈಟಿ ಅಧಿಕಾರಿಗಳು ಅವರನ್ನು ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಎಂದು ಕರೆದುಕೊಂಡು…
ಮಹಾರಾಷ್ಟ್ರ : ಮತಗಟ್ಟೆಗೆ ಈವಿಎಂ ಮಷೀನ್ ಗಳು ತಡವಾಗಿ ಆಗಮಿಸಿದ್ದಕ್ಕೆ ಕಿಡಿಗೇಡಿ ಒಬ್ಬ ಮಷೀನ್ ಗೆ ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಂಗೋಳ ತಾಲೂಕಿನ ಬಾದಲಾವಡಿ ಗ್ರಾಮದಲ್ಲಿ ನಡೆದಿದೆ. ಹೌದು ತಡವಾಗಿ ಬಂದಿದ್ದಕ್ಕೆ ಕುಪಿತಗೊಂಡ ಕಿಡಿಗೇಡಿ ಈವಿಎಂ ಗೆ ಬೆಂಕಿ ಹಚ್ಚಿದ್ದಾನೆ. ಸೋಲಾಪುರ ಜಿಲ್ಲೆಯ ಸಂಗೋಳ ತಾಲೂಕಿನ ಬಾದಲವಾಡಿಯಲ್ಲಿ ಇವಿಎಂ ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಈವಿಎಂ ತಡವಾಗಿ ಬಂದಿದ್ದಕ್ಕೆ ಕಿಡಿಗೇಡಿ ಬೆಂಕಿ ಹಚ್ಚಿದ್ದಾನೆ.ಇದೀಗ ಕಿಡಿಗೇಡಿಯನ್ನು ಚುನಾವಣಾ ಸಿಬ್ಬಂದಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಸೊಲ್ಲಾಪುರ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉತ್ತರಕನ್ನಡ : ಮತಗಟ್ಟೆ ಕೇಂದ್ರದಲ್ಲಿ ‘ನಮ್ಮ ಮತ ನಮ್ಮ ಹಕ್ಕು’ ಬದಲು ‘ನಮ್ಮ ಹಕ್ಕು ನಮ್ಮ ಶಕ್ತಿ’ ಬರೆದಿದ್ದಕ್ಕೆ ಚುನಾವಣಾಧಿಕಾರಿಗೆ ಶಾಸಕ ದಿನಕರ ಶೆಟ್ಟಿ ತರಾಟೆಗೆ ತೆಗೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಗಿಬ್ ಅಂಗ್ಲಮಾಧ್ಯಮ ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ. ಲೋಕಸಭಾ ಚುನಾವಣೆಗೆ 2ನೇ ಹಂತದ ಮತದಾನ ಹಿನ್ನೆಲೆ ಇಂದು ಕುಮಟಾ ಪಟ್ಟಣ ಗಿಬ್ ಅಂಗ್ಲಮಾಧ್ಯಮ ಶಾಲೆ ಮತಗಟ್ಟೆಗೆ ಮತ ಚಲಾಯಿಸಲು ಬಂದಿದ್ದ ಶಾಸಕ. ಈ ವೇಳೆ ಗೋಡೆಯ ಮೇಲೆ “ನಮ್ಮ ಮತ ನಮ್ಮ ಶಕ್ತಿ’ ಬರೆಹ ಕಂಡು ಸಿಡಿಮಿಡಿಗೊಂಡಿದ್ದಾರೆ. ತಕ್ಷಣ ಚುನಾವಣಾ ಸಿಬ್ಬಂದಿಗಳಿಗೆ ಕರೆದು ಬರಹದ ಮೇಲೆ ಪೋಸ್ಟರ್ ಅಂಟಿಸಿ ಮರೆಮಾಚಿಸಿದ್ದಾರೆ. ಮತಗಟ್ಟೆಯ ಗೋಡೆಯ ಮೇಲೆ ಈ ರೀತಿ ಬರೆಯುವಂತೆ ಹೇಳಿದವರು ಯಾರು? ಶಕ್ತಿ ಎಂಬ ಪದ ಯಾಕೆ ಬಳಕೆ ಮಾಡಿದ್ದೀರಿ? ಶಕ್ತಿ ಎನ್ನುವುದು ಗ್ಯಾರಂಟಿ ಯೋಜನೆಗಳಲ್ಲಿ ಒಂದು ಎಂಬುದು ನಿಮಗೆ ತಿಳಿದಿಲ್ಲವೇ? ಮತಗಟ್ಟೆಯಲ್ಲಿ ಈ ರೀತಿ ಬಹಳ ದೊಡ್ಡದಾಗಿ ಬರೆದಿರುವುದು ನನಗೆ ಅಸಮಾಧಾನ ತಂದಿದೆ ಎಂದು…
ಬೆಂಗಳೂರು : ಇತ್ತೀಚಿಗೆ ಯುವ ಸಮೂಹವು ಎಷ್ಟು ಸೂಕ್ಷ್ಮವಾಗಿದೆ ಎಂದರೆ ಒಂದು ಮಾತು ಹೆಚ್ಚು ಬೈದರು ಏನಾದರು ಒಂದು ಅನಾಹುತ ಮಾಡಿಕೊಳ್ಳುವಷ್ಟು ಬದಲಾಗಿ ಬಿಟ್ಟಿದ್ದಾರೆ.ಇದಕ್ಕೆಲ್ಲ ಮೂಲ ಕಾರಣ ಮೊಬೈಲ್. ಇದೀಗ ಇಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಪೋಷಕರು ಜಾಸ್ತಿ ಮೊಬೈಲ್ ಬಳಸದಂತೆ ಮಗಳಿಗೆ ಬುದ್ಧಿವಾದ ಹೇಳಿದ್ದಕ್ಕೆ ಇದರಿಂದ ಮನನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಒಂದು ಘಟನೆ ನಡೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಲಿಖಿತಾ(18) ನೇಣಿಗೆ ಶರಣಾದ ವಿದ್ಯಾರ್ಥಿ ಎಂದು ತಿಳಿದುಬಂದಿದೆ.ಸುಧಾ ಮತ್ತು ನಾರಾಯಣ ದಂಪತಿಯ ಪುತ್ರಿಯಾದ ಮೃತ ಲಿಖಿತಾ, ಪ್ಯಾರಾಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಓದಿನಲ್ಲಿಯೂ ಮುಂದೆ ಇದ್ದ ಲಿಖಿತಾ, ಇತ್ತೀಚಿಗೆ ಫೋನಿನ ಗೀಳು ಹತ್ತಿಸಿಕೊಂಡಿದ್ದಳಂತೆ. ಯಾವಾಗಲೂ ಫೋನಿನಲ್ಲಿ ಮಾತನಾಡಿತ್ತಿದ್ದ ಆಕೆ, ಚಾಟಿಂಗ್, ಸ್ನ್ಯಾಪ್, ಇನ್ಸ್ಟಾ, ಫೇಸ್‌ಬುಕ್ ಎಂದು ಫೋನ್‌ನಲ್ಲಿ ಬ್ಯುಸಿ ಇರುತ್ತಿದ್ದಳು. ಇದನ್ನ ಗಮನಿಸಿದ್ದ ಲಿಖಿತಾ ತಂದೆ ನಾರಯಣ್ ಬೆಳಿಗ್ಗೆ ಬೈದು ಬುದ್ದಿ ಹೇಳಿದ್ದಾರೆ.ಈ ಹಿನ್ನಲೆ ಯುವತಿ ರೂಂ ಸೇರಿದ್ದರು.…
ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ಹಾಗೂ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, , ಈ ಸಂಬಂಧ ನೀಡಿದ್ದು 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿರುವುದಾಗಿ ಇಂಟರ್ ಪೋಲ್ ಎಸ್ಐಟಿಗೆ ಮಾಹಿತಿ ನೀಡಿದೆ. ಸಂಸದ ಪ್ರಜ್ವಲ್ ರೇವಣ್ಣ ಕಾರ್ನರ್ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗ್ಲೇ 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಲಾಗಿದೆ.ಪ್ರಜ್ವಲ್ ರೇವಣ್ಣ ಬಗ್ಗೆ ಮಾಹಿತಿ ಸಿಕ್ಕರೆ ಹಂಚಿಕೊಳ್ಳುತ್ತೇವೆ ಎಂದು ಇಂಟರ್ ಪೋಲ್ ಮಾಹಿತಿ ರವಾನೆ ಬಗ್ಗೆ SIT ಗೆ ಮಾಹಿತಿ ನೀಡಿದೆ. ಪ್ರಜ್ವಲ್ ರೇವಣ್ಣ ಯಾವುದೇ ಏರ್ಪೋರ್ಟ್, ಬಂದರೂ, ಗಡಿಯಲ್ಲಿ ಕಾಣಿಸಿದರೆ ಮಾಹಿತಿ ನೀಡಲಾಗುತ್ತದೆ ಎಂದು ಇಂಟರ್ ಪೋಲ್ ಎಸ್ಐಟಿಗೆ ಮಾಹಿತಿ ನೀಡಿದೆ.ನೆನ್ನೆ ಸಂಜೆ ಎಸ್ಐಟಿಗೆ ಸಿಕ್ಕಿದೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಬ್ಲೂ ಕಾರ್ನರ್ ಎ ನೋಟೀಸ್ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದಾರೆ ಅವರ ಚಲನ ವಲನಗಳು ಏನು ಅವರು ಏನು ಮಾಡುತ್ತಿದ್ದಾರೆ.…
ಧಾರವಾಡ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಧಾರವಾಡದಲ್ಲಿ ಮತದಾರರನ್ನು ಕ್ಯೂ ನಿಲ್ಲಿಸಿ ಚುನಾವಣಾ ಸಿಬ್ಬಂದಿಗಳು ಊಟಕ್ಕೆ ತೆರಳಿರುವ ಘಟನೆ ನಡೆದಿದೆ.ಇದರಿಂದ ಸರತಿ ಸಾರಿನಲ್ಲಿ ನಿಂತಿದ್ದ ಮತದಾರರು ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೌದು ಈ ಒಂದು ಉಘಡನೆ ಧಾರವಾಡ ನಗರದ ಕುಮಾರಸ್ವಾಮಿ ಮೂಕಾಂಬಿಕೆ ನಗರದ ಮತಗಟ್ಟೆ ಸಂಖ್ಯೆ 180 ರಲ್ಲಿ ಈ ಒಂದು ಘಟನೆ ನಡೆದಿದ್ದು ಚುನಾವಣಾ ಸಿಬ್ಬಂದಿಗಳು ಮತದಾರರನ್ನು ಹೊರಗಡೆ ಕಿವಿನಲ್ಲಿ ನಿಲ್ಲಿಸಿ ಒಳಗಡೆ ಊಟ ಮಾಡುತ್ತಿರುವ ಘಟನೆ ನಡೆದಿದೆ. ಧಾರವಾಡದ ಕುಮಾರಸ್ವಾಮಿ ಅವರ ಮೂಕಾಂಬಿಕೆ ನಗರದಲ್ಲಿ ಕೃಷಿ ಇಲಾಖೆ ನಿರ್ದೇಶಕರ ಕಚೇರಿಯ ಮತಗಟ್ಟೆಯಲ್ಲಿ ಮತದಾರರನ್ನು ಕ್ಯು ನಿಲ್ಲಿಸಿ ಸಿಬ್ಬಂದಿಗಳು ಊಟಕ್ಕೆ ತೆರಳಿದ್ದಾರೆ. ಮತಗಟ್ಟೆ 180 ರಲ್ಲಿ ಬಾಗಿಲು ಹಾಕಿ ಸಿಬ್ಬಂದಿ ಊಟಕ್ಕೆ ತೆರಳಿರುವ ಘಟನೆ ನಡೆದಿದೆ. ಇದರಿಂದ ಕ್ಯೂನಲ್ಲಿ ನಿಂತಿದ್ದ ಮತದಾರರು ಚುನಾವಣಾ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು.











