Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇದೀಗ ಪ್ರಕರಣದ ಎ 1 ಆರೋಪಿಯಾಗಿರುವ ಪವಿತ್ರ ಗೌಡ ಕೂಡ ದರ್ಶನ್ ವಿರುದ್ಧ ಹೇಳಿಕೆ ನೀಡಿದ್ದು ನನ್ನ ಕಣ್ಣೆದುರಲ್ಲಿಯೇ ದರ್ಶನ್ ಅವರು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರೆದರು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹೌದು ಪ್ರಕಾರಣಕ್ಕೆ ಸಂಬಂಧಸಿದಂತೆ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಆತನ 2ನೇ ಪತ್ನಿ ಸೇರಿದಂತೆ 17 ಜನರ ಗ್ಯಾಂಗ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಈ ವೇಳೆ ನಟಿ ಪವಿತ್ರಾಗೌಡನನ್ನು ವಿಚಾರಣೆ ಮಾಡಿದಾಗ ರೇಣುಕಾಸ್ವಾಮಿಗೆ ನಾನು ಚಪ್ಪಲಿಯಿಂದ ಒಂದು ಏಟು ಹೊಡೆದೆ. ಆದರೆ, ದರ್ಶನ್ ನನ್ನ ಮುಂದೆಯೇ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಾರೆ ಎಂದು ಎ1 ಆರೋಪಿ ಪವಿತ್ರಾಗೌಡ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಪೊಲೀಸರ ಮುಂದೆ ಪವಿತ್ರಗೌಡ ಹೇಳಿದ್ದೇನು? ನಾನು ಶೆಡ್ ಗೆ ಹೋಗುವುದಕ್ಕು ಮುಂಚಿನಿಂದಲೂ ದರ್ಶನ್ ಶೆಡ್‌ನಲ್ಲಿದ್ದನು.ನಾನು ಚಪ್ಪಲಿಯಲ್ಲಿ ಒಂದು ಏಟು…
ಬೆಂಗಳೂರು : ಐಸಿಸಿ ಟಿ 20 ವಿಶ್ವಕಪ್ ಫೈನಲ್ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸಿತು. ಮತ್ತು 2011 ರ ನಂತರ ಭಾರತದ ಮೊದಲ ವಿಶ್ವಕಪ್ ಗೆಲುವಾಗಿದೆ. ಹೌದು 2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 76 ರನ್ ಗಳಿಸುವ ಮೂಲಕ ಭಾರತ 176 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತು. ಇನ್ನು ಪಂದ್ಯದ ಆರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಟೀಂ ಇಂಡಿಯಾಗೆ ಶುಭಕೊರಿದ್ದು, ಸಾಮಾಜಿಕ ಜಾಲತಾಣ X ನಲ್ಲಿ ಈ ಕುರಿತು ಹಂಚಿಕೊಂಡಿದ್ದು, ದೆಹಲಿ ಪ್ರವಾಸದಿಂದ ನಾಡಿಗೆ ವಾಪಾಸಾಗುವ ವೇಳೆ ವಿಮಾನ ಏರುವ ಮೊದಲು ಸಿಕ್ಕ ಅಲ್ಪ ಸಮಯದಲ್ಲೇ ಭಾರತ – ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಪೈನಲ್ ಪಂದ್ಯ ವೀಕ್ಷಿಸಿದೆ.ಸಂಘಟಿತ ಹೋರಾಟದ ಮೂಲಕ ಭಾರತ ವಿಶ್ವಕಪ್ ಗೆದ್ದುಬರಲಿ ಎಂದು ಮನದುಂಬಿ ಹಾರೈಸುತ್ತೇನೆ. ಎಂದು ಬರೆದುಕೊಂಡಿದ್ದರು.…
ನವದೆಹಲಿ : ಕಳೆದ ಮೂರು ದಿನಗಳಿಂದ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯದ ಪೊಲೀಸ್ ಪಡೆಯ ಫಲವರ್ಧನೆಗೆ ಪ್ರಸ್ತಾವನೆಗಳನ್ನು ಮಂಜೂರಾತಿ ಕುರಿತಂತೆ ಚರ್ಚಿಸಿದರು. ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡ ಅವರು, ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಅಗತ್ಯವಿರುವ ನೆರವಿನ ಕುರಿತ ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದೆ. ರಾಜ್ಯದ ಪರವಾಗಿ ಮಂಡಿಸಲಾದ ಪ್ರಮುಖ ಪ್ರಸ್ತಾವನೆಗಳು ಹೀಗಿವೆ: ಭಾರತ ಸರ್ಕಾರವು 80 ಕೋಟಿ ರೂ. ವೆಚ್ಚದಲ್ಲಿ India Reserve Battalion ಸ್ಥಾಪನೆಗೆ ಅನುಮೋದನೆ ನೀಡಿದ್ದು, ಹೆಚ್ಚುವರಿಯಾಗಿ ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಎರಡು ಬೆಟಾಲಿಯನ್ ಸ್ಥಾಪನೆಗೆ ಅನುಮೋದನೆ ನೀಡುವುದು. ನಿರ್ಭಯಾ ನಿಧಿಯಡಿಯಲ್ಲಿ ಬೆಂಗಳೂರು ನಗರದಂತೆಯೇ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ…
ಬೆಂಗಳೂರು : ಇದೀಗ ರಾಜ್ಯದಲ್ಲಿ ಸಿಎಂ ಬದಲಾವಣೆಯ ಕೂಗು ಬಾರಿ ಚರ್ಚೆಗೆ ಗ್ರಾಸವಾಗಿದ್ದು, ಈ ಕುರಿತಂತೆ ಸಚಿವ ಕೆ ಎನ್ ರಾಜಣ್ಣ ಮಾತನಾಡಿದ್ದು, ನಾನು ಸಿಎಂ ಪರ ಅಂತಲ್ಲ ನಾನು ಪ್ರಜಾಪ್ರಭುತ್ವದ ಪರ. ನಾನು ಹಗರಣ ಮಾಡಿದರೆ ತನಿಖೆ ಮಾಡಲಿ. ಬಡವರ ಪರ ಸಿಎಂ ಸಿದ್ದರಾಮಯ್ಯ ಕೆಲಸ ಮಾಡುತ್ತಾರೆ ಅದಕ್ಕೆ ಸಿದ್ದರಾಮಯ್ಯರ ಜೊತೆ ನಾವಿದ್ದೇವೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿಸಿ ವಿಚಾರವಾಗಿ ಡಿಕೆ ಶಿವಕುಮಾರ್ ಅವರು ಮಾತನಾಡಿದಕ್ಕೆ ಪ್ರತಿಕ್ರಿಯಿಸಿದ ಅವರು ವಾರ್ನಿಂಗ್ ಗೆ ಎಲ್ಲ ನಾ ಹೆದರಕೋತಿನ? ಬಾಯಿಗೆ ಎಲ್ಲರೂ ಬೀಗ ಹಾಕಿಕೊಳ್ಳಬೇಕು. ಅವರು ಹೇಳಿದ್ದಕ್ಕೆ ಬಾಯಿ ಮುಚ್ಚಿಕೊಂಡು ಇರಲು ಆಗುವುದಿಲ್ಲ. ಸ್ವಾಮೀಜಿಗಳು ಹೇಳಿದಂತೆ ಸಿಎಂ ಮಾಡುವುದಕ್ಕೆ ಆಗುತ್ತಾ ಎಂದು ವಿಧಾನಸೌಧದಲ್ಲಿ ಸಹಕಾರ ಸಚಿವ ಕೇಂದ್ರ ಜನ ಹೇಳಿಕೆ ನೀಡಿದರು. ಎಲ್ಲರೂ ಸುಮ್ಮನೆ ಇದ್ದರೆ ನಾನು ಸುಮ್ಮನೆ ಇರುತ್ತೇನೆ. ಸಿದ್ದರಾಮಯ್ಯ ರಾಜೀನಾಮೆ ಕೇಳಿದರೆ ಸುಮ್ಮನೆ ಇರಬೇಕಾ? ಅದನ್ನು ಕೇಳಿಕೊಂಡು ನಾನು ಸುಮ್ಮನಿರಬೇಕಾ? ಸ್ವಾಮೀಜಿಗಳು ಹೇಳುವುದನ್ನು ಕೇಳೋಕೆ ಆಗುತ್ತಾ?…
ಬೆಳಗಾವಿ : ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಹಾಗೂ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ವಿಚಾರವಾಗಿ ಕಾಂಗ್ರೆಸ್ ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ 2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆ ಸಂದರ್ಭದಲ್ಲಿ, ಸಮಯ, ಸನ್ನಿವೇಶ ನೋಡಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಕ್ಲೇಮ್ ಮಾಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬದಲಾವಣೆಯಂಥ ವಿಚಾರಗಳೆಲ್ಲವೂ ಹೈಕಮಾಂಡ್ ಹಾಗೂ ಪಕ್ಷದ ಪ್ರಮುಖರು ತೀರ್ಮಾನ ಮಾಡುವ ವಿಷಯ. ಈ ಬಗ್ಗೆ ಯಾರೂ ಹಾದಿ ಬೀದಿಯಲ್ಲಿ ಚರ್ಚೆ ಮಾಡಲು ಆಗಲ್ಲ. ಅಷ್ಟೇ ಅಲ್ಲದೆ, ಸಭೆ ಸಮಾರಂಭಗಳಲ್ಲಿ, ವೈಯಕ್ತಿಕವಾಗಿ ಹೇಳಿದರೆ ಅದಕ್ಕೆಲ್ಲಾ ಮಹತ್ವ ಇಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದು ಹೋದ ಚರ್ಚೆ. ದೆಹಲಿ ಬೆಂಗಳೂರಿನಲ್ಲಿ ಸಾಕಷ್ಟು ವಿಚಾರಗಳನ್ನ ಹೇಳಿದ್ದಾರೆ. ಆ ಚರ್ಚೆಯನ್ನು ಮುಂದುವರೆಸುವ ಅವಶ್ಯಕತೆ ಇಲ್ಲ. ಯಾರು ಏನೇ ಹೇಳಿದರೂ ಅದೆಲ್ಲಾ ಮುಗಿದುಹೋದ ಅಧ್ಯಾಯ ಎಂದರು. ಒಂದು ಕಡೆ ಸ್ವಾಮೀಜಿಗಳು ಡಿಸಿಎಂ…
ಬೆಂಗಳೂರು : ಮಿನಿ ಬಸ್ ಡಿಕ್ಕಿಯಾಗಿ ಕಾರಿನ ಚಾಲಕ ಸ್ಥಳದಲ್ಲಿ ಸಾವನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗೆಜ್ಜೆಗದಹಳ್ಳಿ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಾಳುಗಳಿಗೆ ನೆಲಮಂಗಲದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾರ್ಮೆಂಟ್ಸ್ ಫ್ಯಾಕ್ಟರಿಯ ಮಹಿಳೆಯರನ್ನು ಮಿನಿ ಬಸ್ ಕರೆದುಕೊಂಡು ಹೋಗುತ್ತಿತ್ತು. ಈ ವೇಳೆ ವೇಗವಾಗಿ ಬಂದಂತಹ ಮಿನಿ ಬಸ್ ಕಾರ್ಯಾಡಿಕೆ ಹೊಡೆದಿದೆ ಪರಿಣಾಮ ಚಾಲಕ ನವೀನ್ ಎನ್ನುವ ವ್ಯಕ್ತಿ ಸ್ಥಳದಲ್ಲಿ ಸಾವನಪ್ಪಿದ್ದು ಬಸ್ ನಲ್ಲಿದ್ದ ಹಲವರಿಗೆ ಗಾಯಗಳಾಗಿವೆ ತಕ್ಷಣ ಅವರನ್ನು ನೆಲಮಂಗಲದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು : ಬೆಂಗಳೂರಲ್ಲಿ ಭೀಕರ ಕೊಲೆಯಾಗಿದ್ದು ಅಪರಿಚಿತನ ವ್ಯಕ್ತಿಯ ತಲೆಯ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹೌದು ಬೆಂಗಳೂರಿನ ಜೀವನ ಹಳ್ಳಿ ಬಳಿ ರೈಲ್ವೆ ಹಳಿ ಸಮೀಪ ಅಪರಿಚಿತನ ಬರ್ಬರ ಹತ್ಯೆಯಾಗಿರುವ ಘಟನೆ ನಡೆದಿದ್ದು,ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಂಟೋನ್ಮೆಂಟ್ ರೈಲ್ವೇ ಠಾಣೆಯ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿದೆ.ಅಪರಿಚಿತನ ಪತ್ತೆಗಾಗಿ ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬೆಂಗಳೂರು : ರಾಜ್ಯದ ಕರಾವಳಿ ಮತ್ತು ಒಳನಾಡಿನಲ್ಲಿ ಮುಂಗಾರು ತನ್ನ ಪ್ರಭಾವ ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ 3 ದಿನಗಳಿಗೆ ಅನ್ವಯವಾಗುವಂತೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಜಾರಿಗೊಳಿಸಿದೆ. ಮೀನುಗಾರರಿಗೆ ಸಹ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಜುಲೈ 1 ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದೂ ಸೇರಿದಂತೆ ಮೂರು ದಿನ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಪ್ರತಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಅಲ್ಲೆಲ್ಲಿ ಸಾಧಾರಣ ಮಳೆ ಬೀಳಲಿದೆ. ನೈಋತ್ಯ ಮಾನ್ಸೂನ್ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣವಾಗಿದೆ. ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ. ಇಂದು ಕರಾವಳಿಯ ಬಹುತೇಕ ಕಡೆಗಳಲ್ಲಿ,…
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಈಗಾಗಲೇ ಜೈಲುವಾಸ ಅನುಭವಿಸುತ್ತಿದ್ದಾರೆ. ವಾರದಲ್ಲಿ ಮೂರು ದಿನ ಮಾತ್ರ ಭೇಟಿಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ಈಗಾಗಲೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಗ ಇತ್ತೀಚಿಗೆ ಭೇಟಿ ನೀಡಿದ್ದರು. ಅದಾದ ಬಳಿಕ ವಿನೋದ್ ಪ್ರಭಾಕರ್ ಕೂಡ ಭೇಟಿ ನೀಡಿದ್ದರು. ಇಂದು ನಿರ್ದೇಶಕ ನಟ ಪ್ರೇಮ್ ಹಾಗೂ ಪತ್ನಿ ರಕ್ಷಿತಾ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನವರನ್ನು ಭೇಟಿಯಾದರು. ದರ್ಶನ್‌ರನ್ನ ಭೇಟಿಯಾದ ಬಳಿಕ ಹೊರಬಂದ ರಕ್ಷಿತಾ ಭಾವುಕರಾಗಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 20 ದಿನಗಳಿಂದ ಆಗುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಇದು ದುರಾದೃಷ್ಟಕರ ಘಟನೆ. ಈ ಪ್ರಕರಣ ಆಗಿರುವುದರ ಬಗ್ಗೆ ಬೇಸರ ಖಂಡಿತಾ ಇದೆ. ನಾನು ಹೇಳೋದು ಇಷ್ಟೇ, ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಎಲ್ಲರಿಗೂ ನ್ಯಾಯ ಸಿಗಲಿ ಎಂದು ಹೇಳಿದರು. ನಂತರ ಪ್ರೇಮ್ ಅವರು ಮಾತನಾಡಿ, ನಟ ದರ್ಶನ್ ನನಗೆ ಹಾಗೂ ರಕ್ಷಿತಾಗೆ ಬಹಳ ಆತ್ಮೀಯ ಸ್ನೇಹಿತರು.…
ಕೋಲಾರ : ರಾಹುಲ್ ಗಾಂಧಿ ಇರುವ ಕಾರಣ ಕಾಂಗ್ರೆಸ್ಗೆ ರಾಹುಕಾಲ ಬಂದಿದೆ. ಬೆಲೆ ಏರಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೆ ಎರಡು ನಾಲಿಗೆಗಳು ಇವೆ. ಮಾಡಲ್ಲ ಅಂತ ಹೇಳಿದ್ದನ್ನು ಈಗ ಮಾಡುತ್ತಿದ್ದಾರೆ ಮಾದಿತ್ತಿದರೆ ಸಿಎಂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಾರೆ.ಕೇಂದ್ರ ಸರ್ಕಾರ ಏನೋ ನಿಮ್ಮ ಅತ್ತೆ ಮನೆಯ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಕೋಲಾರದಲ್ಲಿ ಜಿಲ್ಲಾಡಳಿತ ಕಚೇರಿಯ ಬಳಿ ಜಿಲ್ಲಾ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿಮಾತನಾಡಿದ ಅವರು, ವಿದ್ಯುತ್ ಬೆಲೆ, ಡಿಸೇಲ್- ಪೆಟ್ರೋಲ್ ಬೆಲೆ, ಹಾಲಿನ ಬೆಲೆ, ಮದ್ಯದ ಬೆಲೆ, ಮುದ್ರಾಂಕ ನೋಂದಣಿ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಜೀವನವು ಆರ್ಥಿಕ ಸಂಕಷ್ಟದಲ್ಲಿರುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ಐದು ಗ್ಯಾರಂಟಿಗಳ ಮೂಲಕ ಭಾಗ್ಯಗಳನ್ನು ಒಂದು ಕೈಯಲ್ಲಿ ಕೊಟ್ಟು, ಪೆಟ್ರೋಲ್ – ಡೀಸೆಲ್, ಅಗತ್ಯ ವಸ್ತುಗಳ ಬೆಲೆಯೇರಿಸುವ ಮೂಲಕ ಮತ್ತೊಂದು…














