Author: kannadanewsnow05

ಚಿಕ್ಕಬಳ್ಳಾಪುರ : ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಸಾಮಗ್ರಿ ಮೈ ಮೇಲೆ ಬಿದ್ದು ಮಹಿಳಾ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸೇಟ್ ದಿನ್ನೆ ಗ್ರಾಮದ ಬಳಿ ಈ ಒಂದು ಅವಘಡ ಸಂಭವಿಸಿದೆ. ಖಾಸಗಿ ಕಂಪನಿಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದರು. ಸಾಮಗ್ರಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸುವಾಗ ಈ ಅವಘಡ ಸಂಭವಿಸಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕೆಲಸ ಮಾಡುತ್ತಿದ್ದ ಹಿನ್ನಲೆಯಲ್ಲಿ ಈ ಒಂದು ದುರಂತ ಸಂಭವಿಸಿದೆ. ಚಿಕ್ಕಬಳ್ಳಾಪುರ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮೈಸೂರು : ಮುಡಾ ಸೈಟ್ ವಾಪಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ  ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾ ಆಯುಕ್ತರಿಗೆ 14 ನಿವೇಶನಗಳನ್ನು ವಾಪಸ್ ಮಾಡುತ್ತಿದ್ದೇನೆ ಎಂದು ಪತ್ರ ಬರೆದಿದ್ದರು. ಹಾಗಾಗಿ ಇದೀಗ 14 ನಿವೇಶನಗಳನ್ನು ಇದೀಗ ರದ್ದು ಮಾಡಲಾಗಿದೆ. ಹೌದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರೇ ಸಬ್ ರಿಜಿಸ್ಟರ್ ಕಚೇರಿಗೆ ಬಂದು 14 ನಿವೇಶನಗಳ ಖಾತೆಯನ್ನು ರದ್ದು ಪಡಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ನಿನ್ನೆ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ 14 ನಿವೇಶನಗಳನ್ನು ಹಿಂತಿರುಗಿಸುತ್ತಿದ್ದೇನೆ ಎಂದು ಮುಡಾ ಆಯುಕ್ತರಿಗೆ ಪತ್ರದ ಮೂಲಕ ತಿಳಿಸಿದ್ದರು. ಇದೀಗ ಇಂದು ಖುದ್ದು ಅವರೇ ಸಬ್ ರಿಜಿಸ್ಟರ್ ಕಚೇರಿಗೆ ಹಾಜರಾಗಿ 14 ನಿಮಿಷಗಳ ಖಾತೆ ರದ್ದುಗೊಳಿಸಿದ್ದಾರೆ.

Read More

ಕೋಲಾರ : ಕೋಲಾರದಲ್ಲಿ ಒಂದೇ ಕುಟುಂಬದ 6 ಜನರ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಈ ವೇಳೆ ಘಟನೆಲ್ಲಿ ಓರ್ವ ವ್ಯಕ್ತಿ ಸಾವನಪ್ಪಿದ್ದು, ಉಳಿದವರಿಗೆ ಗಂಭೀರವಾದಂತಹ ಗಾಯಗಳಾಗಿದ್ದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೌದು ಹೆಜ್ಜೇನು ದಾಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ಜಂಗಾಲಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.ಹೆಜ್ಜೇನು ದಾಳಿಯಿಂದಾಗಿ ವೆಂಕಟಸ್ವಾಮಿ (60) ಸಾವನ್ನಪ್ಪಿದ್ದಾರೆ.ಒಂದೇ ಕುಟುಂಬದ 6 ಜನರ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಶಾಮಣ್ಣ, ಸುಂದರ್ ರಾಜ್, ಕಾರ್ತಿಕ್, ಶ್ರೀನಿವಾಸ್ ಹಾಗೂ ವೆಂಕಟ ಗಿರಿಯಪ್ಪ ಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ದಾವಣಗೆರೆ : ಕೃಷಿ ಹೊಂಡದ ಬಳಿ ಆಟ ಆಡುತ್ತಿದ್ದ ವೇಳೆ, ಕೃಷಿ ಹೊಂಡದಲ್ಲಿ ಜಾರಿ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ. ಗಂಗೋತ್ರಿ (10) ತನುಶ್ರೀ (11) ಮೃತ ಬಾಲಕಿಯರು ಎಂದು ತಿಳಿದುಬಂದಿದೆ. ಶಾಲೆ ಬಿಟ್ಟ ಬಳಿಕ ನಾಲ್ವರು ವಿದ್ಯಾರ್ಥಿಗಳು ಎಂದಿನಂತೆ ಮನೆಗೆ ತೆರಳುತ್ತಿದ್ದರು. ರಸ್ತೆ ಮಾರ್ಗದಲ್ಲಿ ಕೃಷಿ ಹೊಂಡ ನೋಡಿದ್ದಾರೆ. ಈ ಹೊಂಡದ ಮೇಲೆ ಆಟವಾಡುತ್ತಾ ಬರುತ್ತಿದ್ದಾಗ ಈ ವೇಳೆ ಓರ್ವ ಬಾಲಕಿ ಕಾಲು ಜಾರಿ ಬಿದ್ದಿದ್ದಾಳೆ. ತಕ್ಷಣ ಮತ್ತೋರ್ವ ಬಾಲಕಿ ಕಾಪಾಡಲು ಹೋಗಿದ್ದು, ಇಬ್ಬರೂ ಮೃತಪಟ್ಟಿದ್ದಾರೆ. ಮೃತ ಬಾಲಕಿಯರ ಜೊತೆ ಖುಷಿ ಎಂಬ ಬಾಲಕಿಯೂ ಹೊಂಡದಲ್ಲಿ ಬಿದ್ದಿದ್ದು, ಆಕೆಯನ್ನು ಜಮೀನಿನ ಮಾಲೀಕನ ಮಗ ಕಾಪಾಡಿದ್ದಾನೆ. ಇವರೊಂದಿಗಿದ್ದ ಶೈಲಜಾ ಎಂಬ ಬಾಲಕಿ ಗಾಬರಿಯಿಂದ ಮನೆಗೆ ತೆರಳಿದ್ದಾಳೆ. ಮೃತಪಟ್ಟ ಬಾಲಕಿಯರ ಪೋಷಕರು ಕೂಲಿ ಕೆಲಸಕ್ಕೆ ಮಲೆನಾಡಿಗೆ ಹೋಗಿದ್ದಾರೆ. ಮೃತ ಬಾಲಕಿಯರು ಅಜ್ಜಿಯ ಮನೆಯಲ್ಲಿ ಇದ್ದಾರೆ. ಘಟನೆ ಕುರಿತಂತೆ ಬಿಳಿಚೋಡು…

Read More

ಬೆಳಗಾವಿ : ಕೌಟುಂಬಿಕ ಕಲಹದಿಂದ ಮನನೊಂದು ತಾಯಿಯೊಬ್ಬಳು ತನ್ನ 17 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಗನೂರಿನಲ್ಲಿ ನಡೆದಿದೆ. ಹೌದು 17 ತಿಂಗಳ ಮಗುವಿನೊಂದಿಗೆ ಬಾವಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಗನೂರಿನಲ್ಲಿ ಘಟನೆ ನಡೆದಿದ್ದು, ತನ್ನ 17 ತಿಂಗಳ ಹಸೂಗೂಸಾದ ಕುಶಾಲ್ ನೊಂದಿಗೆ ಗಾಯತ್ರಿ ವಾಗಮೊರೆ (26) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ತಿಳಿದುಬಂದಿದೆ.ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕದಲ್ಲಿ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ, ತಾಯಿ ಮತ್ತು ಮಗುವಿನ ಶಿವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.

Read More

ಉಡುಪಿ : ಲಾರಿ ಹರಿದು ಪ್ರಥಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿ ಸ್ಥಳದಲ್ಲಿ ಸಾವನ್ನಪ್ಪಿರುವ ಘೋರ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಹಾಲಾಡಿ ರಸ್ತೆಯ ಕಾಗೇರಿ ಪ್ರದೇಶದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಗೇರಿ ಪ್ರದೇಶ ಕೋಟೇಶ್ವರದ ವರದರಾಜ ಶೆಟ್ಟಿ ಸರ್ಕಾರಿ ಕಾಲೇಜು ವಿದ್ಯಾರ್ಥಿ ಧನುಷ್ (19) ಎಂದು ತಿಳಿದುಬಂದಿದೆ. ಕಾಲೇಜು ಮುಗಿಸಿ ಸ್ನೇಹಿತರ ಜೊತೆಗೆ ಧನುಶ್ ತೆರಳುತ್ತಿದ್ದ, ಫುಟ್ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಈ ವೇಳೆ ಎದುರುನಿಂದ ಬರುತ್ತಿದ್ದ ಕಾರು ತಪ್ಪಿಸಲು ಹೋಗಿ ಲಾರಿ ಚಾಲಕರ ಧನುಷ್ಗೆ ಡಿಕ್ಕಿ ಹೊಡೆದಿದ್ದಾನೆ.ಈ ವೇಳೆ ಲಾರಿ ಹರಿದು ವಿದ್ಯಾರ್ಥಿ ಧನುಷ್ ಸ್ಥಳದಲ್ಲಿ ಸವಣಪ್ಪಿದ್ದಾನೆ ಘಟನೆ ಕೊಡಿತಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಜಪ್ತಿ ಮಾಡಿದ್ದ ವಸ್ತುಗಳನ್ನು ಹಿಂತಿರುಗಿಸಿಲ್ಲ ಎಂದು ಆರೋಪಿಸಿ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧವೇ ಇದೀಗ ಎಫ್ಐಆರ್ ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಬೆಂಗಳೂರಿನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧವೇ fir ದಾಖಲಾಗಿದೆ. ಜೆಪಿ ನಗರ ಠಾಣೆಯಲ್ಲಿ ಇನ್ಸ್ಪೆಕ್ಟರ್ ಹಿತೇಂದ್ರ ಎಂ.ಎಸ್ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಈ ಹಿಂದೆ ಎಂ ಎಸ್ ಹಿತೇಂದ್ರ ಜೆಪಿ ನಗರ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮಾಲನ್ನು ವಾಪಸ್ಸು ನೀಡಿರಲಿಲ್ಲ.ಅಲ್ಲದೆ ಹಿಂದಿನ ಇನ್ಸ್ಪೆಕ್ಟರ್ ಹಸ್ತಾಂತರಿಸಿದ ಮಾಲೂ ಸಹ ಹಾಜರುಪಡಿಸಿರಲಿಲ್ಲ. ಜಪ್ತಿ ಮಾಡಿದ್ದ ವಸ್ತುಗಳನ್ನು ವಾಪಸ್ ನೀಡುವಂತೆ ಹಲವು ಬಾರಿ ಸೂಚನೆ ನೀಡಲಾಗಿತ್ತು. ಈ ಕುರಿತು ದಕ್ಷಿಣ ವಿಭಾಗದ ಡಿಸಿಪಿ ಜ್ಞಾಪನ ಪತ್ರ ನೀಡಿದರು ಸಹ ಉತ್ತರ ನೀಡಿರಲಿಲ್ಲ. ಜಪ್ತಿ ಮಾಡಿದ್ದ ಮಾಲು ಹಿಂದಿರುಗಿಸದೆ ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಜೆಪಿ ನಗರ ಠಾಣೆಯ ಹಿಂದಿನ ಇನ್ಸ್ಪೆಕ್ಟರ್ ಜಿತೇಂದ್ರ ಎಂಎಸ್ ವಿರುದ್ಧ ಇದೀಗ ಹಾಲಿ ಇನ್ಸ್ಪೆಕ್ಟರ್ ಆಗಿರುವಂತಹ ರಾಧಾಕೃಷ್ಣ ಎಫ್ ಐ ಆರ್…

Read More

ಕೊಪ್ಪಳ : ತಮ್ಮ ಪಾಡಿಗೆ ತಾವು ಮಕ್ಕಳು ಎಂದಿನಂತೆ ಶಾಲೆಗೆ ಹೋಗುತ್ತಿದ್ದಾಗ, ಏಕಾಏಕಿ ಬೀದಿ ನಾಯಿಗಳು ಮೂರು ಮಕ್ಕಳ ಮೇಲೆ ದಾಳಿ ಮಾಡಿವೆ. ದೇಹದ ಹಲವೆಡೆ ಕಚ್ಚಿ ಗಾಯಗೊಳಿಸಿವೆ. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬೀದಿ ನಾಯಿಗಳ ದಾಳಿ ಮಾಡಿವೆ. ಕೊಪ್ಪಳದ ದಿನ್ಯಾರ್ ಬಡಾವಣೆ ಹಾಗೂ ಕನಕನಗಿರಿ ಬಡಾವಣೆಯಲ್ಲಿ ಘಟನೆ ನಡೆದಿದ್ದು ಮೂರು ಮಕ್ಕಳನ್ನು ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಅಬ್ರಾರ್, ಫರ್ಹಾನ್ ಹಾಗೂ ಮಂಜುಗೆ ಬೀದಿ ನಾಯಿಗಳು ಕಚ್ಚಿ ಘಾಸಿಗೊಳಿಸಿವೆ. ಕೂಡಲೇ ಗಾಯಗೊಂಡ ವಿದ್ಯಾರ್ಥಿಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ವೇಳೆ ಸ್ಥಳೀಯರು ಕೊಪ್ಪಳ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಪಡಿಸಿದ್ದಾರೆ.

Read More

ಬೆಂಗಳೂರು : ಹೆಸರು ಬದಲಾಯಿಸಿಕೊಂಡು ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದ, ಪಾಕಿಸ್ತಾನ ಪ್ರಜೆಗಳನ್ನು ಇದೀಗ ಎನ್ಐಎ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಅಧಿಕಾರಿಗಳು ಬೆಚ್ಚಿ ಬೀಳಿಸುವಂತಹ ಹಲವು ಮಾಹಿತಿಗಳು ಬಹಿರಂಗವಾಗಿವೆ. ಹೌದು ಪ್ರಮುಖ ಆರೋಪಿಯಾಗಿರುವ ಪಾಕಿಸ್ತಾನ ಪ್ರಜೆ ರಶೀದ್ ಅಲಿ ಸಿದ್ಧಕಿ ಮತ್ತು ಈತನ ಕುಟುಂಬಸ್ಥರ ಬಳಿ ಭಾರತದ ಪಾಸ್​ಪೋರ್ಟ್​ ಪತ್ತೆಯಾಗಿದೆ. ಆತನ ಕುಟುಂಬ ಭಾರತಕ್ಕೆ ಅಕ್ರಮವಾಗಿ ನುಸುಳಲು, ಭಾರತೀಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್​ ಮತ್ತು ಡಿಎಲ್ ಎಲ್ಲವನ್ನು ಹೊಂದಲು ಮೆಹದಿ ಫೌಂಡೇಷನ್​ನ ಪ್ರಮುಖ ವ್ಯಕ್ತಿ ಪರ್ವೇಜ್ ಸಹಾಯ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಜಿಗಣಿ ಪೊಲೀಸರು ಪರ್ವೇಜ್​ ಮತ್ತು ಇತನ ಸಂಪರ್ಕದಲ್ಲಿದ್ದವವರಿಗಾಗಿ ಹುಡುಕಾಟ ನಡೆಸಿದ್ದಾರೆ. ಪಾಕಿಸ್ತಾನ ಪ್ರಜೆ ರಶೀದ್ ಅಲಿ ಸಿದ್ಧಕಿಗೆ ಮುಂಬೈ ಮತ್ತು ದೆಹಲಿಯಲ್ಲಿ ಹಲವರು ಪರಿಚಯಸ್ಥರಿದ್ದಾರೆ. ಹೀಗಾಗಿ, ಎರಡು ಪೊಲೀಸ್​​ ತಂಡ ಮುಂಬೈ ಮತ್ತು ದೆಹಲಿಗೆ ತೆರಳಿದೆ. ರಶೀದ್ ಕುಟುಂಬದವರ ಸಂಪರ್ಕದಲ್ಲಿರುವವರಿಗಾಗಿ ಶೋಧ ನಡೆಸುತ್ತಿವೆ. ನಿನ್ನೆ ಬೆಂಗಳೂರು ಗ್ರಾಮಾಂತರ…

Read More

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಮುಡಾಗೆ 14 ನಿವೇಶನಗಳನ್ನ ಹಿಂತಿರುಗಿಸಿದ್ದು, ಈ ಒಂದು ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬಾಲ್ಯ ಸ್ನೇಹಿತ ಕರಿಯಪ್ಪ ಮಾತನಾಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು ಎಂದು ಸಿದ್ದರಾಮಯ್ಯ ಬಾಲ್ಯ ಸ್ನೇಹಿತ ಕರಿಯಪ್ಪ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಎಲ್ಲಾ ಭಾಗ್ಯಗಳನ್ನು ಕೊಟ್ಟವರು. 40 ವರ್ಷದಿಂದ ಯಾವುದೇ ಕಳಂಕ ಇರಲಿಲ್ಲ. ಸೈಟ್ ವಿಚಾರ ನಮಗೆ ಸಾಕಷ್ಟು ಬೇಸರವಾಗಿತ್ತು. ಜೊತೆಯಲ್ಲಿ ಉಂಡು ತಿಂದವರೇ ಸಿಎಂ ಸಿದ್ದರಾಮಯ್ಯ ಇಂದಿನ ಪರಿಸ್ಥಿತಿಗೆ ಕಾರಣರಾಗಿದ್ದಾರೆ. ಅಲ್ಲದೆ ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು. ಯಾವುದೇ ಕಾರಣಕ್ಕೂ ಸಿಎಂ ಪತ್ನಿ ನಿವೇಶನಗಳನ್ನು ಹಿಂತಿರುಗಿಸಬಾರದಾಗಿತ್ತು ಎಂದು ಅವರು ತಿಳಿಸಿದರು. ಮರಿಗೌಡ ನಮ್ಮ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಆತನಿಂದಲೇ ಇಷ್ಟೆಲ್ಲಾ ಆಗಿರುವುದು ವಿಶ್ವನಾಥ ಮಾತನ್ನು ಸಿಎಂ ಕೇಳಿದ್ದರೆ ಈ ಆರೋಪ ಬರುತ್ತಿರಲಿಲ್ಲ ಆದರೆ…

Read More