Subscribe to Updates
Get the latest creative news from FooBar about art, design and business.
Author: kannadanewsnow05
ನವದೆಹಲಿ : ಲೋಕಸಭಾ ಚುನಾವಣೆಯ ನಿಖರ ಫಲಿತಾಂಶ ಇದೆ ನಾಲ್ಕರಂದು ಹೊರ ಬೀಳಲಿದೆ. ಆದರೆ ಅದಕ್ಕೂ ಮುನ್ನ ನಿನ್ನೆ ಬಿಜೆಪಿ ಬಹುಮತ ಪಡಿದಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ಬಹಿರಂಗಗೊಳಿಸಿತು. ಇನ್ನು ಈ ಒಂದು ಎಕ್ಸಿಟ್ ಪೋಲ್ ಸಮೀಕ್ಷೆ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಈ ಮತದಾನೋ ತರ ಎಕ್ಸಿಟ್ ಪೋಲ್ ಸರಿಯಲ್ಲ ಕರ್ನಾಟಕದಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ಸ್ಥಾನಗಳನ್ನು ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ನಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಾನು 40 ವರ್ಷದಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ನಾವು ಕೂಡ ಚುನಾವಣಾ ಸಮೀಕ್ಷೆ ಮಾಡಿಸಿದ್ದೇವೆ ಎಂದು ಅವರು ತಿಳಿಸಿದರು. ಹಳ್ಳಿಗಳಿಗೆ ಹೋಗಿ ಎಲ್ಲಾ ವರ್ಗದ ಜನರನ್ನು ಮಾತನಾಡಿಸಿದ್ದೇವೆ. ಆದರೆ ಎಕ್ಸಿಟ್ ಪೋಲ್ ನಲ್ಲಿ ತೋರುತ್ತಿರುವ ಮಾಹಿತಿ ಸರಿಯಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ಸ್ಥಾನಗಳನ್ನು ಗೆಲ್ಲುತ್ತದೆ. ಕಾರ್ಯಕರ್ತರು…
ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 6 ದಿನಗಳ ಕಾಲ ಎಸ್ ಐ ಟಿ ಕಸ್ಟಡಿಯಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಎಸ್ಐಟಿ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದು, ನಾನು ಹಿಂಗೆಲ್ಲ ಬದುಕಿಲ್ಲ ನನಗೆ ಸರಿಯಾದ ಟಾಯ್ಲೆಟ್ ಹಾಗೂ ಮಲಗಲು ರೂಮ್ ಕೊಡಿ ಎಂದು ಕಿರಿಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಸಂಸದ ಪ್ರಜ್ವಲ್ ರೇವಣ್ಣರನ್ನ ನ್ಯಾಯಾಲಯ ಆರು ದಿನಗಳ ಎಸ್‌ಐಟಿ ಕಸ್ಟಡಿಗೆ ನೀಡಿದೆ. ಆದರೆ ಎಸ್‌ಐಟಿ ಕಚೇರಿಯಲ್ಲಿ ಶೌಚಾಲಯ, ಕೊಠಡಿ ಶುಚಿಯಾಗಿಲ್ಲ, ಕೆಟ್ಟ ವಾಸನೆ ಬರುತ್ತಿದೆ. ಎಸ್‌ಐಟಿ ಕಚೇರಿಯಲ್ಲಿ ಉಸಿರಾಡಲು ಕಷ್ಟವಾಗಿದೆ ಎಂದು ನ್ಯಾಯದೀಶರ ಮುಂದೆ ಗೋಳು ತೋಡಿಕೊಂಡಿದ್ದ ಪ್ರಜ್ವಲ್. ಇದೀಗ ಮತ್ತೆ ಎಸ್‌ಐಟಿ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ವಾದ ನಡೆದ ವೇಳೆ ವಕೀಲ, ಆರೋಪಿಗೆ ಯಾವುದೇ ಐಷಾರಾಮಿ ವ್ಯವಸ್ಥೆ ಬೇಡ, ಸಾಮಾನ್ಯ ಕೈದಿ ಇರುವಂತೆ ಸಾಮಾನ್ಯ ಕೊಠಡಿಯಲ್ಲಿರಲಿ ಎಂದಿದ್ದರು. ಅದರಂತೆ ಎಸ್ಐಟಿ ಅಧಿಕಾರಿಗಳು ಸಾಮಾನ್ಯ ಆರೋಪಿಗಳಂತೆ ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಸರಿಯಾದ…
ಬಳ್ಳಾರಿ : ಚಾಕಲೇಟ್ ಮಿಶ್ರಿತ ಗಾಂಜಾ ವನ್ನು ಮಾರಾಟ ಮಾಡುತ್ತಿದ್ದ ಪುಟ್ಟ ಗೂಡಂಗಡಿಯ ಮೇಲೆ ಅಬಕಾರಿ ಸಿಬ್ಬಂದಿಗಳು ದಾಳಿ ನಡೆಸಿದ್ದು, ಈ ವೇಳೆ 2600 ರೂಪಾಯಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿಯನ್ನು ಬಂಧಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿಂಧನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಹೌದು ಬಿಹಾರ್ ಮೂಲದ ಆರೋಪಿ ಕಪಾಲ್ ಪಾಸ್ವಾನಿ (38) ಎನ್ನುವ ಆರೋಪಿಯನ್ನು ಬಂಧಿಸಲಾಗಿದೆ. ಗೂಡಂಗಡಿಯಲ್ಲಿ ಆರೋಪಿ ಕಪಾಲ್ ಗಾಂಜಾ ಮಿಶ್ರಿತ ಚಾಕೋಲೇಟನ್ನು ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿಯನ್ನು ಪಡೆದ ಅಬಕಾರಿ ಸಿಬ್ಬಂದಿಗಳು ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 2600 ಮೌಲ್ಯದ ಗಾಂಜಾ ಮಿಶ್ರಿತ ಚಾಕಲೇಟನ್ನು ಅಬಕಾರಿ ಸಿಬ್ಬಂದಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ಸಿರುಗುಪ್ಪ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಳ್ಳಾರಿ : ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮುದಾಯದ ಹಣ ಕೊಳ್ಳೆ ಹೊಡೆಯುವ ಕೆಲಸ ಆಗಿದೆ ಹಾಗಾಗಿ ಈ ಪ್ರಕರಣ CBI ಗೆ ವಹಿಸಿ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು. ಬಳ್ಳಾರಿಯಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಪಕ ಭ್ರಷ್ಟಾಚಾರಕ್ಕೆ ಅಮಾಯಕ ಚಂದ್ರಶೇಖರನ್ ಬಲಿಯಾಗಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಅಮಾಯಕನ ಬಲಿ ಅಂತ ಹೇಳಬಹುದು. ಎಸ್ಐಟಿ ಪ್ರಕರಣದ ತನಿಖೆ ಮಾಡುತ್ತಿದ್ದರು ಸಚಿವರು ರಾಜೀನಾಮೆ ಕೊಟ್ಟಿಲ್ಲ ಎಂದರು. ಶೀಘ್ರದಲ್ಲಿ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು. ರಾಜಿನಾಮೆ ಪಡಿಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಾನು ಒತ್ತಾಯ ಮಾಡುತ್ತೇನೆ. ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸಚಿವರು ರಾಜೀನಾಮೆ ಕೊಡುವವರೆಗೂ ಬಿಜೆಪಿ ಹೋರಾಟ ಮಾಡುತ್ತದೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಬೆಂಗಳೂರು : ಲೋಕಸಭೆ ಚುನಾವಣೆ ನಿಖರ ಫಲಿತಾಂಶ ಜೂನ್ 4ರಂದು ಹೊರ ಬೀಳಲಿದೆ. ಅದಕ್ಕೂ ಮುಂಚೆ ಎಕ್ಸಿಟ್ ಪೋಲ್ ಸಮೀಕ್ಷೆಯ ಪ್ರಕಾರ ಈ ಬಾರಿ ಮತ್ತೆ ಎನ್ ಡಿ ಎ ಬಹುಮತ ಪಡೆದು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಲಿದ್ದಾರೆ ಎಂಬ ಸಮೀಕ್ಷೆಯನ್ನು ಬಹಿರಂಗ ಮಾಡಿದೆ. ಇನ್ನೂ ಈ ಕುರಿತು ಬಿಜೆಪಿಯ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್ ರವಿಕುಮಾರ್ ಪ್ರತಿಕ್ರಿಯ ನೀಡಿದ್ದು ಕಾಂಗ್ರೆಸ್ ಎಕ್ಸಿಟ್ ಪೋಲ್ ನಂಬುತ್ತಿಲ್ಲ ಅವರು ನಮಗೆ ಬಹುಮತ ಬರುತ್ತೆ ಅನ್ನೋ ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್ ಡಿ ಎ ಗೆ ಜನರು ಬಹುಮತ ನೀಡಲಿದ್ದಾರೆ. 360 ರಿಂದ 400 ಸೀಟ್ ಬರುತ್ತೆ ಅಂತ ಎಕ್ಸಿಟ್ ಪೋಲ್ ಹೇಳಿದೆ. ಕರ್ನಾಟಕ ಸೇರಿ ಬೇರೆ ರಾಜ್ಯದಲ್ಲೂ ಕೂಡ ಹೆಚ್ಚು ಸೀಟು ಬರುತ್ತವೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಯಾವುದೇ ಅಡೆತಡೆ ಇಲ್ಲದ ಫಲಿತಾಂಶವನ್ನು ಜನರು ನೀಡಿದ್ದಾರೆ ಎಂದರು.…
ಶಿವಮೊಗ್ಗ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ತಡ, ಮಹಿಳೆಯರಿಗೆ ಅನುಕೂಲವಾಗಲೆಂದು ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೊಳಿಸಿತು. ಯೋಜನೆ ಜಾರಿಗೆ ಬಂದಿದ್ದೆ ತಡ ಬಸ್ ನಲ್ಲಿ ಆಸನಕ್ಕಾಗಿ ಹೊಡೆದಾಟ ಬಡಿದಾಟ ಜಗಳ ಗಲಾಟೆ ನಡೆದಂತ ಪ್ರಸಂಗಗಳು ನಡೆದಿವೆ. ಇದೀಗ ಶಿವಮೊಗ್ಗದಲ್ಲಿ ಬಸ್ ಸೀಟ್ಗಾಗಿ ಮಹಿಳೆಯರಿಬ್ಬರೂ ಹೊಡೆದಾಡಿಕೊಂಡಿದ್ದು ಇವರ ಇಬ್ಬರ ಜಗಳ ಬಿಡಿಸಲಾಗದೆ ಬಸ್ಸಿನ ನಿರ್ವಾಹಕ ನೇರವಾಗಿ ಬಸ್ಸನ್ನು ಠಾಣೆ ಮುಂದೆ ನಿಲ್ಲಿಸಿ ಪೊಲೀಸರನ್ನು ಕರೆದು ನಿರ್ವಾಹಕ ಘಟನೆ ವಿವರಿಸಿದ್ದಾರೆ. ಸಾಗರ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಸೀಟಿಗಾಗಿ ನಾರಿಯರಿಬ್ಬರ ನಡುವೆ ಜಗಳ ನಡೆದಿದೆ. ಜಗಳ ಬಿಡಿಸಲಾಗದೇ ನಿರ್ವಾಹಕ ಬಸ್ಸನ್ನು ನೇರವಾಗಿ ಸಾಗರಪೇಟೆ ಪೊಲೀಸ್ ಠಾಣೆಗೆ ಕೊಂಡೊಯ್ದ ಘಟನೆ ನಡೆದಿದೆ. ಬಸ್ಸನ್ನು ಠಾಣೆ ಮುಂದೆ ನಿಲ್ಲಿಸಿ ಪೊಲೀಸರನ್ನು ಕರೆದು ನಿರ್ವಾಹಕ ಘಟನೆ ವಿವರಿಸಿದ್ದಾರೆ. ನಾರಿಯರ ಜಗಳ ಬಗೆಹರಿಸಲಾಗದೆ ಹೈರಾಣಾದ ಪೊಲೀಸರು ಕೊನೆಗೆ ಬೇಸತ್ತು ಅವರಿಬ್ಬರನ್ನೂ ಕೆಳಗಿಳಿಸಿ ಬಸ್ ಕಳುಹಿಸಿದ್ದಾರೆ.
ಮೈಸೂರು : ಕಿಡ್ನ್ಯಾಪ್ ಪ್ರಕರಣದಲ್ಲಿ ಜಾಮೀನು ಸಿಗದೆ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಎಸ್ಐಟಿ ಅಧಿಕಾರಿಗಳು ವಿಚಾರಣೆಗೆಂದು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ತೆರಳಿದ ವೇಳೆ ಭವಾನಿ ರೇವಣ್ಣ ಅಲ್ಲಿರಲಿಲ್ಲ. 15 ದಿನಗಳ ಹಿಂದೆಯೇ ಅವರು ನಿಗೂಢ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಇದೀಗ SIT ಅಧಿಕಾರಿಗಳು ಮೈಸೂರಿನ 5 ಸ್ಥಳಗಳಲ್ಲಿ ಭವಾನಿ ರೇವಣ್ಣ ಅವರಿಗೆ ಹುಡುಕಾಟ ನಡೆಸಿದ್ದಾರೆ. ಹಾಸನದ ಮೈಸೂರು ಜಿಲ್ಲೆಯಲ್ಲಿ 5 ಕಡೆ ಹುಡುಕಾಟ ನಡೆಸಿದ್ದಾರೆ. ಸಹೋದರಿ ಮಗನ ಮನೆ ಫಾರ್ಮ್ ಹೌಸ್ ಪರಿಚಯ ಗುತ್ತಿಗೆದಾರ ಹಾಗೂ ಫಾರ್ಮ್ ಹೌಸ್ ಸೇರಿದಂತೆ ಅವರ ಪರಿಚಯಸ್ಥರ ಮನೆಯಲ್ಲಿ SIT ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಭವಾನಿ ರೇವಣ್ಣಗೆ ಎಸ್ಐಟಿ ಎರಡೆರಡು ನೋಟಿಸ್ ಕೊಟ್ಟಿತ್ತು. ಮನೆಯಲ್ಲೇ ವಿಚಾರಣೆಗೆ ಹಾಜರಾಗುವುದಾಗಿ ಭವಾನಿ ಪತ್ರ ಬರೆದಿದ್ದರು. ಹಾಗಾಗಿ ಇಂದು ಬೆಳಿಗ್ಗೆಯಿಂದ ಪತ್ರದಂತೆ ಎಸ್ಐಟಿ ಅಧಿಕಾರಿಗಳು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ಬಂದಿದ್ದಾರೆ. ಆದರೆ, ಮನೆಯೊಳಗೆ ಹೋದ ಎಸ್ಐಟಿ ಅಧಿಕಾರಿಗಳಿಗೆ ಶಾಕ್ ಕಾದಿದೆ. ಭವಾನಿ ರೇವಣ್ಣ…
ಬೆಂಗಳೂರು : ಲೋಕಸಭಾ ಚುನಾವಣೆ 2024 ರ ಬಹುನಿರೀಕ್ಷಿತ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಹೊರಬಂದಿವೆ. ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಲಿದೆ. ಆದ್ರೇ ಕರ್ನಾಟಕದಲ್ಲಿ ಇಂಡಿಯಾ ಬಣಕ್ಕೆ ಹಿನ್ನಡೆಯಾದ್ರೇ, ಕೇರಳದಲ್ಲಿ ಬಿಜೆಪಿ 2-3 ಸ್ಥಾನ ಗೆಲ್ಲುವುದಾಗಿ ಚುನಾವಣೋತ್ತರ ಸಮೀಕ್ಷೆ ಹೇಳಿದೆ. ಇನ್ನು ಈ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡು ಅಂಕಿ ದಾಟುತ್ತದೆ. ಈ ಚುನಾವಣೆ ಸಮೀಕ್ಷೆ ಬಗ್ಗೆ ನನಗೆ ವಿಶ್ವಾಸವಿಲ್ಲ. ಕೆಲವರ ಅಭಿಪ್ರಾಯ ಮಾತ್ರ ಈ ಒಂದು ಸಮೀಕ್ಷೆಯಲ್ಲಿ ಸಂಗ್ರಹಿಸೀರುತ್ತಾರೆ ಅಷ್ಟೇ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಅಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಡಿಕೆ ಶಿವಕುಮಾರ್ ಅವರು ಇದೇ ರೀತಿ ಒಂದು ಹೇಳಿಕೆಯನ್ನು ನೀಡಿದ್ದರು. ಯಾವುದೇ ಸಮೀಕ್ಷೆಯ ಮೇಲೆ ನನಗೆ ನಂಬಿಕೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 130 ರಿಂದ 135 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿಕೆ ನೀಡಿದ್ದರು.…
ಹುಬ್ಬಳ್ಳಿ : ಇತ್ತೀಚಿಗೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ್ ಹಾಗೂ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ್ ಯುವತಿ ಕೊಲೆ ಮಾಡಲಾಗಿತ್ತು. ಅದೇ ರೀತಿ ಇದೀಗ ಹುಬ್ಬಳ್ಳಿಯ ಶಾಲೆಯ ಮುಖ್ಯ ಶಿಕ್ಷಕಿಗೆ ಬೆದರಿಕೆ ಪತ್ರ ಬಂದಿದ್ದು ನೆಹ ಹಾಗೂ ಅಂಜಲಿಯ ಹಾಗೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಕಿಡಿಗೇಡಿಗಳು ಬೆದರಿಕೆ ಪತ್ರ ಕಳಿಸಿದ್ದಾರೆ. ಹೌದು ಬೆಂಗೇರಿಯಲ್ಲಿರುವ ರೋಟರಿ ಪ್ರಾಥಮಿಕ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿಗೆ ಅನಾಮಧೇಯ ವ್ಯಕ್ತಿಯೊಬ್ಬ ಬೆದರಿಕೆ ಪತ್ರ ಬರೆದಿದ್ದಾನೆ. ಮುಖ್ಯ ಶಿಕ್ಷಕಿ ದೀಪಾ ಅಡವಿಮಠ ಎನ್ನುವವರಿಗೆ ಕಳೆದ ಐದು ದಿನಗಳ ಹಿಂದೆ ಪೋಸ್ಟ್ ಮೂಲಕ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಈ ಹಿನ್ನಲೆ ಹತ್ಯೆ ಬೆದರಿಕೆ ಪತ್ರದ ಕುರಿತು ಕೇಶ್ವಾಪೂರ ಪೊಲೀಸರ ಗಮನಕ್ಕೆ ಮುಖ್ಯ ಶಿಕ್ಷಕಿ ತಂದಿದ್ದು, ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಮುಖ್ಯ ಶಿಕ್ಷಕಿ ಮನೆಗೆ ಪೊಲೀಸರು ಭೇಟಿ ನೀಡಿದ್ದಾರೆ. ಈ ಕುರಿತಂತೆ ಮುಖ್ಯ ಶಿಕ್ಷಕಿ ದೀಪಾ ಅವರು ಮಾತನಾಡಿದ್ದು, ಮೇ. 28 ರಂದು ನನಗೆ ಅನಾಮಧೇಯ ಪತ್ರ ಬಂದಿದೆ.…
ಚಾಮರಾಜನಗರ : ಬಿಳಿಗಿರಿರಂಗನ ಬೆಟ್ಟದ ರಂಗನಾಥಸ್ವಾಮಿ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದ್ದು, 26 ಜನರು ಗಾಯಗೊಂಡಿರುವ ಘಟನೆ ಬಿಳಿಗಿರಿರಂಗನ ಬೆಟ್ಟದ ರಸ್ತೆಯಲ್ಲಿ ಗವಿ ಬೋರೆ ಬಳಿ ನಡೆದಿದೆ. ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಅಗಿನವಾಳು ಹಾಗೂ ಸುತ್ತಮುತ್ತಲ ಗ್ರಾಮಗಳ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಬಂದಿದ್ದರು. ದೇವರ ದರ್ಶನ ಮುಗಿಸಿಕೊಂಡು ವಾಪಸ್ ಆಗುತ್ತಿದ್ದಾಗ ಗವಿಬೋರೆ ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ನಂಜನಗೂಡು ತಾಲ್ಲೂಕಿನ ಬಾಗೂರು, ಮಡನಳ್ಳಿ, ಹೂರಲ್ವಾಡಿ, ತಗಡೂರು ಕೆಬ್ಬೆಪುರ ಸುತ್ತಮುತ್ತಲ 60ಕ್ಕೂ ಹೆಚ್ಚು ಜನರು ಬಸ್‌ನಲ್ಲಿದ್ದರು. ಬಸ್ ಉರುಳಿ ಬಿದ್ದ ರಭಸಕ್ಕೆ ಬಹುತೇಕರಿಗೆ ಎದೆ, ಕೈಕಾಲು ಒತ್ತಿಕೊಂಡಂತೆ ಆಗಿದ್ದು, ಆಘಾತದಿಂದ ಅಸ್ವಸ್ಥಗೊಂಡರು. ಬಸ್ ಗವಿ ಬೋರೆ ಬಳಿ ಬಸ್ ಇಳಿಯುತ್ತಿದ್ದಾಗ ಮುಂಭಾಗದಿಂದ ಕಾರು ಬರುವುದನ್ನು ಕಂಡು ಚಾಲಕ ಗಲಿಬಿಲಿಕೊಂಡಿದ್ದ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ…












