Author: kannadanewsnow05

ಚಿಕ್ಕಮಗಳೂರು : ಇತ್ತೀಚಿಗೆ ಈ ಹೃದಯಘಾತ ಎನ್ನುವುದು ಜ್ವರ, ಕೆಮ್ಮು, ನೆಗಡಿ ಎಂಬಂತೆ ಸಾಮಾನ್ಯ ಕಾಯಿಲೆಯಾಗಿಬಿಟ್ಟಿದೆ. ವಯಸ್ಸಿನ ಅಂತರವಿಲ್ಲದೆ ಚಿಕ್ಕವರಿಂದ ಹಿಡಿದು ವೃದ್ಧರವರೆಗೂ ಹೃದಯಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಚಿಕ್ಕಮಂಗಳೂರಿಗೆ ಪ್ರವಾಸಿಗರನ್ನು ಕರೆ ತಂದಿದ್ದ ಟಿಟಿ ವಾಹನದ ಚಾಲಕ ಹೃದಯಾಘಾತದಿಂದ ಸಾವನಪ್ಪಿದ್ದಾನೆ. ಹೌದು ಚಿಕ್ಕಮಗಳೂರಿಗೆ ಪ್ರವಾಸಿಗರನ್ನು ಕರೆ ತಂದಿದ ಟಿಟಿ ವಾಹನದ ಚಾಲಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಸೋಮನಹಳ್ಳಿಯ ನಿವಾಸಿ ಅವಿನಾಶ್ (25) ಮೃತ ಚಾಲಕ ಎಂದು ಹೇಳಲಾಗುತ್ತಿದೆ. ತಾನಾರಿಯ ಹೋಂ ಸ್ಟೇನಲ್ಲಿದ್ದಾಗ ಚಾಲಕ ಅವಿನಾಶಗೆ ಹೃದಯಾಘಾತವಾಗಿತ್ತು. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ತಾನಾರಿಯ ಹೋಂ ಸ್ಟೇನಲ್ಲಿ ಹೃದಯಘಾತವಾಗಿತ್ತು. ಕೂಡಲೇ ಅವಿನಾಶ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿ ಆಗದೆ ಚಾಲಕ ಅವಿನಾಶ್, ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೀದರ್ : ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ರೈತನ ಜಮೀನಿನ ಮೇಲೆ ಪೊಲೀಸರು ದಾಳಿ ಮಾಡಿ ಸುಮಾರು ಮೂರು ಕೋಟಿಗೂ ಅಧಿಕ ಗಾಂಜಾ ಬೆಳೆಯನ್ನು ನಾಶಪಡಿಸಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದಿದೆ. ಹೌದು ಗಾಂಜಾ ಬೆಳೆದಿದ್ದ ರೈತನ ಜಮೀನಿನ ಮೇಲೆ ಪೊಲೀಸರ ದಾಳಿ ನಡೆಸಿದ್ದು, ಆರು ಅಡಿ ಉದ್ದದ ಸಾವಿರಕ್ಕೂ ಹೆಚ್ಚು ಗಾಂಜಾ ಹಸಿಗಳನ್ನು ರೈತ ಬೆಳೆದಿದ್ದ. ಬಸವಕಲ್ಯಾಣ ತಾಲೂಕಿನ ಉಜಾಳಂಬ ಗ್ರಾಮದ ಬಳಿ ಪೊಲೀಸರು ದಾಳಿ ಮಾಡಿದ್ದಾರೆ.ಬೀದರ್ ಎಸ್ ಪಿ ಪ್ರದೀಪ್ ಗುಂಟೆ ನೇತೃತ್ವದಲ್ಲಿ ಈ ಒಂದು ರೆಡ್ ನಡೆದಿದೆ. ಅಂದಾಜು ಮೂರು ಕೋಟಿಗೂ ಹೆಚ್ಚು ಮೌಲ್ಯದ ಗಾಂಜಾ ಗಿಡಗಳನ್ನು ನಾಶ ಮಾಡಿದ್ದಾರೆ. ಮಹಾರಾಷ್ಟ್ರದ ಮೂಲದ ಬಸವರಾಜ್ ಎಂಬುವರು ಗಾಂಜಾ ಬೆಳೆದಿದ್ದರು. ಬಸವಕಲ್ಯಾಣ ತಾಲೂಕಿನ ಮಂಟಾಳ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Read More

ದಾವಣಗೆರೆ : ಸಿಎಂ ಸ್ಥಾನದ ಕುರಿತಾಗಿ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಇತ್ತೀಚಿಗೆ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲ ಕೆರಳಿಸಿತ್ತು. ಬಳಿಕ ಇಂದು ಸಚಿವ ಜಮೀರ್ ಅಹ್ಮದ್ ಖಾನ್ ದಲಿತರಿಗೆ ಮುಸ್ಲಿಮರಿಗೆ ಒಕ್ಕಲಿಗರಿಗೆ ಲಿಂಗಾಯತರಿಗೆ ಎಲ್ಲರಿಗೂ ಸಿಎಂ ಆಗುವ ಆಸೆ ಇದೆ ಎಂದು ಹೇಳಿದರು. ದಾವಣಗೆರೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ದಲಿತರು, ಮುಸ್ಲಿಂ, ಒಕ್ಕಲಿಗರು ಸೇರಿ ಎಲ್ಲರಿಗೂ ಸಿಎಂ ಆಗುವ ಆಸೆ ಇದೆ. ಆದರೆ ಮುಂದಿನ 5 ವರ್ಷದ ಅವಧಿಯಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಹುದ್ದೆಯಿಂದ ಟಗರನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹೇಳಿಕೆ ನೀಡಿದರು. ಸಿಎಂ ಕುರ್ಚಿಯಲ್ಲಿ ಟಗರು ಗಟ್ಟಿಯಾಗಿ ಕುಳಿತದೆ. ಸಿಎಂ ಕುರ್ಚಿಯಲ್ಲಿರುವ ಟಗರನ್ನು ಯಾರಿಂದಲೂ ಸಾಧ್ಯವಿಲ್ಲ ಎಂದು ದಾವಣಗೆರೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದರು. ದೇಶದಲ್ಲಿ ಸಿದ್ದರಾಮಯ್ಯ ಅವರಷ್ಟು ಜನಪ್ರಿಯ…

Read More

ರಾಯಚೂರು : ಕಳೆದ ಕೆಲವು ತಿಂಗಳ ಹಿಂದೆ ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಘಟನೆ ನಡೆದಿತ್ತು. ಇದೀಗ ರಾಯಚೂರು ಜಿಲ್ಲೆಯಲ್ಲಿ ಅಂತದೇ ಘಟನೆ ನಡೆದಿದ್ದು ಮರಕ್ಕೆ ಕಟ್ಟಿಹಾಕಿ ಮಹಿಳೆಯನ್ನು ಸ್ಥಳೀಯರು ಥಳಿಸಿರುವ ಘಟನೆ ರಾಯಚೂರಿನ ಮಕ್ತಲಪೇಟೆಯಲ್ಲಿ ನಡೆದಿದೆ. ಹೌದು ರಾಯಚೂರಿನ ಮಕ್ತಲಪೇಟೆಯಲ್ಲಿ ಮರಕ್ಕೆ ಮಹಿಳೆಯನ್ನು ಕಟ್ಟಿ ಹಿಂಸೆ ನೀಡಲಾಗಿದೆ. ಮಕ್ಕಳನ್ನು ಮುಟ್ಟಿದ್ದಕ್ಕೆ ಆತಂಕದಿಂದ ಸ್ಥಳೀಯರು ಮಹಿಳೆಯನ್ನು ಕಟ್ಟಿಹಾಕಿದ್ದರು. ಮಹಿಳೆಗೆ ಹಿಂಸೆ ನೀಡಿ ಬಳಿಕ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿ ನೇತಾಜಿ ನಗರ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.ವಿಚಾರಣೆಯ ವೇಳೆ ಮಹಿಳೆ ಮಾನಸಿಕ ಅಸ್ವಸ್ಥಳು ಎಂಬ ಮಾಹಿತಿ ಸಿಕ್ಕಿದೆ. ಮಹಿಳೆಯನ್ನು ಹಗ್ಗದಿಂದ ಮರಕೆ ಕಟ್ಟಿ ಹಾಕಿದ್ದ ವಿಡಿಯೋ ಸದ್ಯ ವೈರಲ್ ಆಗಿದೆ.ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಹಾಕಲಾಗಿದೆ.

Read More

ರಾಮನಗರ : ವೃಷಣ ಶಸ್ತ್ರಚಿಕಿತ್ಸೆಯ ನಂತರ 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷದಿಂದ ಬಾಲಕ ಆರ್ಯ ಮೃತಪಟ್ಟಿರುವುದಾಗಿ ಪೋಷಕರು ಆರೋಪಿಸುತ್ತಿದ್ದಾರೆ. ಒಂದೇ ವೃಷಣವನ್ನು ಹೊಂದಿದ್ದ ಆರ್ಯ ಮಿಷನ್ ಆಸ್ಪತ್ರೆಗೆ ದಾಖಲಾಗಿದ್ದ. ಹಲವು ಆಸ್ಪತ್ರೆಗಳ ವೈದ್ಯರಿಗೆ ಈಗಾಗಲೇ ಪೋಷಕರು ಆರ್ಯನನ್ನು ಚಿಕಿತ್ಸೆಗೆ ಎಂದು ತೋರಿಸಿದ್ದರು. ಒಂದೇ ವೃಷಣವಿದ್ದರೂ ವೈದ್ಯರು ಬದುಕಬಹುದು ಎಂದು ಸಲಹೆ ನೀಡಿದ್ದರು. ಆದರೆ ಶ್ರೀದೇವಿ ಆಸ್ಪತ್ರೆಯ ವೈದ್ಯರು ಆಪರೇಷನ್ ಮಾಡಿಸಬೇಕೆಂದಿದ್ದರು. ನಿನ್ನೆ ಶ್ರೀದೇವಿ ಆಸ್ಪತ್ರೆಗೆ 6 ವರ್ಷದ ಬಾಲಕ ಆರ್ಯ ದಾಖಲಾಗಿದ್ದ ಆರೋಗ್ಯವಾಗಿದ್ದ ಆರ್ಯನಿಗೆ ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಆಪರೇಷನ್ ಥಿಯೇಟರ್ ಗೆ ವೈದ್ಯರು ಕರೆದೊಯ್ದಿದ್ದಾರೆ. ಆಪರೇಷನ್ ಆದ ಕೆಲವೇ ಹೊತ್ತಿನಲ್ಲಿ 6 ವರ್ಷದ ಬಾಲಕ ಆರ್ಯ ಸಾವನ್ನಪ್ಪಿದ್ದಾನೆ ಈ ಒಂದು ಬಾಲಕನ ಸಾವಿಗೆ ಶ್ರೀದೇವಿ ಆಸ್ಪತ್ರೆಯ ವೈದ್ಯರೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ. ಶ್ರೀದೇವಿ ಮಿಷನ್ ಆಸ್ಪತ್ರೆಯ ಮುಂಭಾಗ ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶ್ರೀದೇವಿ ಆಸ್ಪತ್ರೆಗೆ…

Read More

ಕಲಬುರ್ಗಿ : ಮಹಾರಾಷ್ಟ್ರದಿಂದ ಆಂಧ್ರಪ್ರದೇಶದ ಕಡೆಗೆ ತೆರಳುತ್ತಿದ್ದ ಡೀಸೆಲ್ ಟ್ಯಾಂಕರ್ ರೈಲೋಂದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್ ಬಳಿ 3 ಭೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಭೋಗಿಯಲ್ಲಿ  ಡೀಸೆಲ್ ಇಲ್ಲದ ಕಾರಣ ಭಾರಿ ಅನಾಹುತ ಒಂದು ತಪ್ಪಿದೆ. ಹೌದು ವಾಡಿ ಜಂಕ್ಷನ್ ನಲ್ಲಿ ಡೀಸೆಲ್ ಟ್ಯಾಂಕರ್ ರೈಲೋಂದು ಹಳಿ ತಪ್ಪಿದೆ. ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್ ಬಳಿ ಈ ಒಂದು ಘಟನೆ ನಡೆದಿದೆ. ಮಹಾರಾಷ್ಟ್ರದ ಪೆನವಲನಿಂದ ಈ ಒಂದು ಡೀಸೆಲ್ ಟ್ಯಾಂಕರ್ ರೈಲು ಹೊರಟಿತ್ತು. ಆಂಧ್ರಪ್ರದೇಶದ ಗುಂತಕಲ್ ಗೆ ತೆರಳುತ್ತಿದ್ದ ವೇಳೆ ಡೀಸೆಲ್ ಟ್ಯಾಂಕರ್ ರೈಲು ವಾಡಿ ರೈಲ್ವೆ ಜಂಕ್ಷನ್ ನಲ್ಲಿ ನಿಲ್ಲಿಸುವಾಗ ಹಳಿ ತಪ್ಪಿದೆ. ಅದೃಷ್ಟವಶಾತ್ ಹಳಿ ತಪ್ಪಿದ ಟ್ಯಾಂಕರ್ ನಲ್ಲಿ ಡೀಸೆಲ್ ಇರಲಿಲ್ಲ. ಹಳಿ ತಪ್ಪಿದ ಮೂರು ಭೋಗಿಗಳನ್ನು ಇದೀಗ ರೈಲ್ವೆ ಅಧಿಕಾರಿಗಳು ಸರಿಪಡಿಸಿದ್ದಾರೆ. ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಘಟನೆ ಕುರಿತಂತೆ ವಾಡಿ ರೈಲ್ವೆ…

Read More

ರಾಮನಗರ : ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಪಟ್ಟಂತೆ ಇದೀಗ ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಇನ್ನೂ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ಈ ನಡುವೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಯಾವುದೇ ಸಂದರ್ಭದಲ್ಲಿ ಚನ್ನಪಟ್ಟಣದ ಉಪಚುನಾವಣೆ ದಿನಾಂಕ ಘೋಷಣೆ ಆಗಬಹುದು ಎಂದು ತಿಳಿಸಿದರು. ನಾನು ಯಾರಿಗೂ ಹೆದರುವ ವ್ಯಕ್ತಿಯಲ್ಲ ನಾನು ದೇವರಿಗೆ ಮಾತ್ರ ಹೆದರುತ್ತೇನೆ. ಶಿವನ ಆಶೀರ್ವಾದ ನಮಗೆ ಇರುವವರೆಗೂ ಯಾರೂ ಮುಗಿಸಲು ಆಗಲ್ಲ. ನನಗೆ 3 ಬಾರಿ ಆಪರೇಷನ್ ಆಗಿದೆ. ಒಳ್ಳೆಯ ಕೆಲಸ ಮಾಡಬೇಕು ಬಡವರಿಗೆ ಒಳ್ಳೆಯ ಕೆಲಸ ಮಾಡಲು ದೇವರು 3ನೆ ಜನ್ಮ ನೀಡಿದ್ದಾನೆ. ನಾನು ಯಾವನಿಗೂ ದಮ್ಮಯ್ಯ ಅಂತ ಹೇಳುವುದಿಲ್ಲ. ಯಾವುದೇ ಸಂದರ್ಭದಲ್ಲಿ ಉಪಚುನಾವಣೆ ಘೋಷಣೆಯಾಗಬಹುದು ಎಂದರು. ಚನ್ನಪಟ್ಟಣಕ್ಕೆ ಯಾರನ್ನೇ ಅಭ್ಯರ್ಥಿ ಮಾಡಿದರು ಗೆಲ್ಲಿಸಬೇಕು. ನಾನು ಯಾರನ್ನೇ ಅಭ್ಯರ್ಥಿ ಮಾಡಿದರು ಗೆಲ್ಲಿಸುವ ಹೊಣೆ ನಿಮ್ಮ ಮೇಲಿದೆ. ಮೋದಿ ಸಂಪುಟದಲ್ಲಿ ಸೀನಿಯರ್ ಮಂತ್ರಿಯಾಗಿ 9ನೇ ಸ್ಥಾನದಲ್ಲಿ ಇದ್ದೇನೆ. ದೇಶವನ್ನು ದರೋಡೆ ಮಾಡುವವರ ನಡುವೆ…

Read More

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಮೂಲದ ಇಬ್ಬರು ಕಾರ್ಮಿಕರು ಕನ್ನಡಿಗನ ಮೇಲೆ ಹಲ್ಲೆ ನಡೆಸಿದ್ದರು. ಅದಾದ ಬಳಿಕ ಇಂದು ಕನ್ನಡ ಮಾತಾಡಿ ಅಂದಿದ್ದಕ್ಕೆ ವ್ಯಕ್ತಿ ಓರ್ವನ ಮೇಲೆ ಹಿಂದಿ ಭಾಷಿಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ. ಹೌದು ದಾಬಸ್ ಪೇಟೆ ನಿವಾಸಿ ಸೈಯದ್ ರಫೀಕ್ (52) ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ. ಇಂದು ಅವರು, ಚಿಕ್ಕಪೇಟೆಯ ಮಮತಾ ಆರ್ಟ್ಸ್ ಸ್ಟೋರ್ ಗೆ ಭೇಟಿ ನೀಡಿದ್ದರು.ಈ ವೇಳೆ ಅಂಗಡಿಯ ಕೆಲಸದವನ ಬಳಿ ಮನೆಗೆ ಕಂಚಿನ ದೀಪದ ಕಂಬಬೇಕಾಗಿದೆ ಎಂದು ಕನ್ನಡದಲ್ಲಿ ಹೇಳಿದ್ದಾರೆ.ಆದರೆ ಕೆಲಸದಾತನಿಗೆ ಕನ್ನಡ ಅರ್ಥವಾಗಿಲ್ಲ. ಈ ವೇಳೆ ಅಂಗಡಿಯ ಮಾಲೀಕ ಮದ್ಯ ಪ್ರವೇಶಿಸಿ, ವ್ಯವಹರಿಸಿದ್ದಾರೆ. ಆದರೆ ಕೆಲಸದವನು ರಫೀಕ್ ಅವರ ಪತ್ನಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಹೇಳಲಾಗುತ್ತಿದೆ.ಕೆಲಸಗಾರ ಸಿಬ್ಬಂದಿ ನೀನು ಬೇಕಾದರೆ ಶಾಲೆಗೆ ಹೋಗಿ ಕನ್ನಡ ಕಲಿ, ನಮ್ಮೊಂದಿಗೆ ಮಾತನಾಡಬೇಕಾದರೆ ನಮ್ಮ ಭಾಷೆಯಲ್ಲಿ ಮಾತನಾಡು ಎಂದು ಹೇಳಿದ್ದಾರೆ ಇದರಿಂದ ಸಿಟ್ಟಾದ ರಫೀಕ್…

Read More

ಉತ್ತರಕನ್ನಡ : ಪ್ರವಾಸಕ್ಕೆ ಎಂದು ತೆರಳಿದ್ದ ವಿದ್ಯಾರ್ಥಿ ಒಬ್ಬ ಸಮುದ್ರದಲ್ಲಿ ಈಜುವಾಗ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ಕಡಲ ತೀರದಲ್ಲಿ ನಡೆದಿದೆ. ಹೌದು ಬೆಂಗಳೂರಿನ ವಿದ್ಯಾಸೌಧ ಕಾಲೇಜಿನಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವಾಸಕ್ಕೆ ಎಂದು ತೆರಳಿದ್ದರು. ಇಂದು ಮುರುಡೇಶ್ವರದಲ್ಲಿ ಸಮುದ್ರದಲ್ಲಿ ಈಜುತ್ತಿದ್ದಾಗ, ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜು ವಿದ್ಯಾರ್ಥಿ ಗೌತಮ್ (17) ಮೃತ ರ್ದುದೈವಿಯಾಗಿದ್ದು, ಇನ್ನು ಬೆಂಗಳೂರಿನ ಧನುಶ್.ಡಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಂದು ಮುರುಡೇಶ್ವರ ಕಡಲ ತೀರದಲ್ಲಿ ಧನುಷ್ ಮತ್ತು ಗೌತಮ್ ಇಬ್ಬರು ಸಮುದ್ರಕ್ಕೆ ಈಜಲು ಇಳಿದಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಧನುಷ್ ಗೌತಮ್ ಇಬ್ಬರು ಮುಳುಗುತ್ತಿದ್ದರು. ಕೂಡಲೇ ಲೈಫ್ ಗಾರ್ಡ್ಸ್ ಧನುಷ್ನನ್ನು ರಕ್ಷಣೆ ಮಾಡಿದರು. ಆದರೆ ಧನುಷ್ ಗೌತಮ್ ಕೂಡ ಜೊತೆಯಲ್ಲಿ ನೀರಿಗೆ ಇಳಿದಿದ್ದನ್ನು ಅವರಿಗೆ ಹೇಳಲಿಲ್ಲ. ಹಾಗಾಗಿ ಧನುಷ್ ಮೃತಪಟ್ಟಿದ್ದಾನೆ.ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಪಶ್ಚಿಮಬಂಗಾಳ : ಇತ್ತೀಚಿಗೆ ಪಶ್ಚಿಮ ಬಂಗಾಳದಲ್ಲಿ ಟ್ರೈನಿ ವೈದ್ಯೇ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣ ದೇಶದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಇಂದು ಪಶ್ಚಿಮಬಂಗಾಳದ ದಕ್ಷಿಣ 24-ಪರಗಣ ಜಿಲ್ಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ 10 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ತಿಳಿಬಂದಿದೆ. ಹೌದು ಟ್ಯೂಶನ್‌ನಿಂದ ಮರಳುತ್ತಿದ್ದ ಬಾಲಕಿಯನ್ನು ದುಷ್ಕರ್ಮಿಗಳು ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.ಶುಕ್ರವಾರ ಸಂಜೆಯಿಂದ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು. ಬಳಿಕ ಶನಿವಾರ ಮುಂಜಾನೆ ಜಯನಗರ ಪ್ರದೇಶದ ಜವುಗು ಭೂಮಿಯಿಂದ ಬಾಲಕಿಯ ಶವ ಪತ್ತೆಗಾಗಿದೆ.ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಪೊಲೀಸ್ ಔಟ್‌ಪೋಸ್ಟ್‌ಗೆ ಬೆಂಕಿ ಹಚ್ಚಿದ್ದಾರೆ. ಬಾಲಕಿ ಶವ ಪತ್ತೆ ಬಳಿಕ ಗುಂಪೊಂದು ಮಹಿಸ್ಮರಿ ಪೊಲೀಸ್ ಔಟ್‌ಪೋಸ್ಟ್‌ಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಹೊರಠಾಣೆ…

Read More