Author: kannadanewsnow05

ಕೊಪ್ಪಳ : ಕಳೆದ ಎರಡು ದಿನಗಳ ಹಿಂದೆ ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಂಚರಿಸುತ್ತಿದ್ದ ರಸ್ತೆ ಮಾರ್ಗದಲ್ಲಿ ವಿರುದ್ಧವಾಗಿ ಶಾಸಕ ಜನಾರ್ಧನ್ ರೆಡ್ಡಿ ಅವರು ಕಾರು ಎದುರಾಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜನಾರ್ಧನ್ ರೆಡ್ಡಿ ಕಾರು ಚಾಲಕನ ಮೇಲೆ FIR ದಾಖಲಾಗಿತ್ತು. ಇಂದು ಶಾಸಕ ಜನಾರ್ಧನ್ ರೆಡ್ಡಿ ಅವರ ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಹೌದು ಶಾಸಕ ಜನಾರ್ದನ ರೆಡ್ಡಿಗೆ ಸೇರಿದ ರೇಂಜ್ ರೋವರ್ ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ಸಂಚಾರಿ ಠಾಣೆ ಪೊಲೀಸರಿಂದ ಜನಾರ್ಧನ್ ರೆಡ್ಡಿ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಕಾರು ಜಪ್ತಿ ಮಾಡಿ ಗಂಗಾವತಿಗೆ ಪೊಲೀಸರು ತಂದಿದ್ದಾರೆ. ಅಕ್ಟೋಬರ್ 5ರಂದು ಸಿಎಂ ತೆರಳುತ್ತಿದ್ದ ವೇಳೆ ನಿಯಮ ಉಲ್ಲಂಘಹಿಸಲಾಗಿತ್ತು. ರಾಯಚೂರಿನಿಂದ ಜಿಂದಾಲ್ ಏರ್ ಪೋರ್ಟ್ ಗೆ ಸಿಎಂ ಸಿದ್ದರಾಮಯ್ಯ ಅವರು ತೆರಳುತ್ತಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಕಾನ್ವೆಗೆ ಎದುರಾಗಿ ಜನಾರ್ಧನ್ ರೆಡ್ಡಿ ಕಾರು ಚಲಾಯಿಸಿದ್ದರು.ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 3 ಕಾರುಗಳ ಮೇಲೆ FIR ದಾಖಲಾಗಿದೆ. ಗಂಗಾವತಿ…

Read More

ಬಳ್ಳಾರಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ ಅವರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಟ ದರ್ಶನ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಸದ್ಯ ನಟ ದರ್ಶನ್ ಅವರು ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಅವರಿಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನಲ್ಲಿ ವಿಮ್ಸ್ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಹಾಗೂ ಸ್ಕ್ಯಾನಿಂಗ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು ಸಹ ದರ್ಶನ್ ಅವರು ಬೇಡ ಅಂತ ಹಠ ಹಿಡಿದಿದ್ದಾರೆ. ದರ್ಶನ್ ಗೆ ಬೆನ್ನು ಮೂಳೆಯ ಸ್ಕ್ಯಾನಿಂಗ್ ಮಾಡಿಸುವಂತೆ ವಿಮ್ಸ್ ಆಸ್ಪತ್ರೆಯ ಮೂಳೆ ತಜ್ಞರು ಹೇಳಿದ್ದರು.ಆದರೆ ದರ್ಶನ್ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಬೇಡ ಅಂತ ದರ್ಶನ್ ಹಠ ಹಿಡಿದಿದ್ದಾರೆ. ನೋವು ನಿವಾರಕ, ನರಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ವೈದ್ಯರು ಈಗಾಗಲೇ ನೀಡಿದ್ದಾರೆ. L1, L5 ಭಾಗದಲ್ಲಿ…

Read More

ಬೆಂಗಳೂರು : ಇತ್ತೀಚಿಗೆ ಬಿಬಿಎಂಪಿ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿ ಮುಜಲು 15 ದಿನಗಳು ನೀಡಿದರು ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದರು. ಅದಾದ ನಂತರ ತೇಪೆ ಹಚ್ಚಿದ ಗುಂಡಿಗಳು ಮಳೆಯ ರಭಸಕ್ಕೆ ಕೊಚ್ಚಿ ಹೋಗಿವೆ. ಈ ಕುರಿತಾಗಿ ಜೆಡಿಎಸ್ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದ್ದು, ಕಲೆಕ್ಷನ್‌ ಅಧ್ಯಕ್ಷನ “ಪರ್ಸಂಟೇಜ್‌ ಪುರಾಣ, ಪರ್ಸೆಂಟೇಜ್‌ ಗಿರಾಕಿ” ಎಂದು ಸ್ವತಃ ಕಾಂಗ್ರೆಸ್‌ ವಕ್ತಾರರೇ, ಹಾಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನ “ರೋಲ್‌ ಕಾಲ್‌ ಪುರಾಣ” ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಲ್ಲಿ 15 ದಿನಗಳ ಕಾಲ ತೇಪೆ ಹಚ್ಚಿದ ರಸ್ತೆ ಗುಂಡಿಗಳು ಒಂದೇ ರಾತ್ರಿ ಸುರಿದ ಮಳೆಗೆ ಕೊಚ್ಚಿಹೋಗಿದೆ.ಬ್ರ್ಯಾಂಡ್‌ ಬೆಂಗಳೂರು ಹೆಸರಲ್ಲಿ ಮೇಯುತ್ತಿರುವ “ಕಲೆಕ್ಷನ್‌ ಗಿರಾಕಿ”ಯ ಪರ್ಸಂಟೇಜ್‌ ಅವ್ಯವಹಾರಕ್ಕೆ ಮತ್ತು ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿ !ಅಂದ್ಹಾಗೆ.., ಕಿತ್ತುಹೋಗಿರುವ ರಸ್ತೆ ಗುಂಡಿಗಳನ್ನು…

Read More

ಬೆಂಗಳೂರು : ಜಮ್ಮು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಹರಿಯಾಣದಲ್ಲಿ ಚುನಾವಣೋತ್ತರ ಸಮೀಕ್ಷೆ ಉಲ್ಟಾ ಆಗಿದ್ದು, ಬಿಜೆಪಿ ಅಭೂತಪೂರ್ವ ಗೆಲುವು ಗಳಿಸಿದೆ. ಇನ್ನು ಜಮ್ಮು-ಕಾಶ್ಮೀರದಲ್ಲಿ ಎನ್. ಸಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಜಮ್ಮು ಕಾಶ್ಮೀರ ಚುನಾವಣಾ ಫಲಿತಾಂಶದ ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಈ ಒಂದು ಫಲಿತಾಂಶದಿಂದ ಬಿಜೆಪಿಗೆ ಕಪಾಳ ಮೋಕ್ಷ ಆಗಿದೆ ಎಂದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಮ್ಮು ಕಾಶ್ಮೀರ ರಿಸಲ್ಟ್ನಿಂದ ಬಿಜೆಪಿಗೆ ಕಪಾಳ ಮೋಕ್ಷ ಆಗಿದೆ. 370 ವಿಧಿ ಬಗ್ಗೆ ಮಾತನಾಡಿದರು. ಕಾಶ್ಮೀರ ಫೈಲ್ಸ್ ಫಿಲ್ಮ್ ಮಾಡಿದ್ರು. ಅದು ನಿರ್ಮಾಪಕ ಮತ್ತು ನಿರ್ದೇಶಕರಿಗೆ ಮಾತ್ರ ಲಾಭ ಆಗಿದ್ದು ಹೊರತು, ಇದರಿಂದ ಜಮ್ಮು ಕಾಶ್ಮೀರ ಜನರಿಗೆ ಏನು ಲಾಭ ಆಗಲಿಲ್ಲ. ಈಗ ಅಲ್ಲಿನ ಜನ ಒಂದು ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಬಿಜೆಪಿಯ ವಿಭಜನೆ ನೀತಿ ವರ್ಕ್ ಆಗ್ತಿಲ್ಲ ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ…

Read More

ಬೆಂಗಳೂರು : ಮುಡಾ ಹಗರಣದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಎಂ ಎಲ್ ಸಿ ಛಲವಾದಿ ನಾರಾಯಣ ಸ್ವಾಮಿ ಸಿಎಂ ಸಿದ್ದರಾಮಯ್ಯ ಅವರಿಗೆ ದೆಹಲಿ ಮಾಜಿ ಸಿಎಂ ಅರವಿಂದ್ ಕ್ರೇಜಿವಾಲ್ ಅವರೇ ಮಾದರಿಯಾಗಿದ್ದಾರೆ. ಏಕೆಂದರೆ ಅವರು ಜೈಲಿನಲ್ಲಿ ಇದ್ದುಕೊಂಡೆ ಆಡಳಿತ ನಡೆಸಿದರು ಎಂದು ತಿಳಿಸಿದರು. ಇಂದು ಅವರು ಬೆಂಗಳೂರಿನ ದೇವನಹಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ರಾಜೀನಾಮೆ ಕೊಡಬೇಕಿತ್ತು. ಸಿದ್ದರಾಮಯ್ಯ ದೆಹಲಿಯ ಅರವಿಂದ್ ಕೇಜ್ರಿವಾಲರನ್ನು ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಏಕೆಂದರೆ ಅವರು ರಾಜೀನಾಮೆ ನೀಡದೆ ಜೈಲಿನಿಂದಲೇ ಆಡಳಿತ ನಡೆಸಿದ್ದಾರೆ. ಅದೇ ಇವರಿಗೆ ಪ್ರೇರಣೆಯಾಗಿದೆ ಎಂದರು. ಕಾಂಗ್ರೆಸ್‌ ಸರ್ಕಾರದಲ್ಲಿ ಸಾಲು ಸಾಲಾಗಿ ಭ್ರಷ್ಟಾಚಾರ ಪ್ರಕರಣಗಳಿವೆ. ಬಹುತೇಕರು ಬೇಲ್‌ ಮೇಲೆ ಓಡಾಡುತ್ತಿದ್ದಾರೆ. ಬೇಲ್‌ ಅಂದರೂ ಒಂದೇ, ಜೈಲಂದರೂ ಒಂದೆ. ನಮ್ಮ ರಾಜ್ಯ ಕೇಂದ್ರಾಡಳಿತ ಪ್ರದೇಶವಲ್ಲ, ಆದ್ದರಿಂದ ತನಿಖೆ ಮಾಡುವ ಸಂಸ್ಥೆಗಳು ಮುಖ್ಯಮಂತ್ರಿಗಳ ಅಧೀನದಲ್ಲಿರುತ್ತವೆ. ಸರಿಯಾದ ತನಿಖೆ…

Read More

ಬೆಂಗಳೂರು : ಬೆಂಗಳೂರಿನ ಪ್ರಸಿದ್ಧ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲದಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿದ್ದ ದಾದಿಯರನ್ನು ಖಾಯಂಗೊಳಿಸುವಂತೆ ಹೈಕೋರ್ಟ್​ ಆದೇಶಿಸಿದೆ. ಬಿ.ಜೆ.ರಾಣಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ಎಸ್‌.ಸಂಜಯಗೌಡ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ರಾಜ್ಯದ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದೆನಿಸಿರುವ ಸಂಸ್ಥೆ ಮಾದರಿಯಾಗಬೇಕು. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಅಧ್ಯಕ್ಷರಾಗಿರುವ ಗೌರ್ನರಿಂಗ್‌ ಕೌನ್ಸಿಲ್‌ ಆಡಳಿತ ನಿರ್ವಹಣೆ ನೋಡಿಕೊಳ್ಳುವ ಸಂಸ್ಥೆ ತನ್ನ ನರ್ಸ್‌ಗಳ ವಿಚಾರದಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳಬೇಕು ಎಂದು ಪೀಠ ಹೇಳಿದೆ. ಹಾಗಾಗಿ ಅರ್ಜಿದಾರರು 20 ವರ್ಷಕ್ಕೂ ಅಧಿಕ ಸಮಯದಿಂದ ಗುತ್ತಿಗೆ ಆಧಾರದ ಮೇಲೆ ಸ್ಟಾರ್ಫ್‌ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ 10 ವರ್ಷ ಸೇವೆ ಪೂರೈಸಿದ ದಿನದಿಂದ ಅನ್ವಯವಾಗುವಂತೆ ಅವರ ಸೇವೆಯನ್ನು ಖಾಯಂಗೊಳಿಸಬೇಕು. 10 ವರ್ಷವನ್ನು ಪರಿಗಣಿಸುವಾಗ ಮಧ್ಯದಲ್ಲಿ ಒಂದೆರಡು ದಿನ ಬ್ರೇಕ್‌ ಅವಧಿಯನ್ನು ಪರಿಗಣಿಸಬಾರದು ಎಂದು ಪೀಠ ಸೂಚನೆ ನೀಡಿದೆ.

Read More

ದಾವಣಗೆರೆ : ಮದ್ಯದಂಗಡಿ ನಡೆಸಲು ಕಟ್ಟಡವನ್ನು ಬಾಡಿಗೆ ಕೊಡದಂತಹ ಕಟ್ಟಡದ ಮಾಲೀಕ ಹಾಗೂ ಆತನ ಕುಟುಂಬಸ್ಥರ ಮೇಲೆ ಪುರಸಭೆ ಕಾಂಗ್ರೆಸ್ ಸದಸ್ಯ ಹಾಗೂ ಆತನ 50 ಜನ ಸಹಚರರಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಕಟ್ಟಡ ಮಾಲೀಕ ರುದ್ರೋಜಿರಾವ್, ಆತನ ಕುಟುಂಬ ಸದಸ್ಯರಾದ ಶ್ವೇತಾ, ರಾಹುಲ್, ಶಿವಾಜಿ ಎಂಬುವವರ ಮೇಲೆ ಪೊಲೀಸರ ಮುಂದೆಯೇ ಪುರಸಭೆ ಕಾಂಗ್ರೆಸ್ ಸದಸ್ಯ ಶ್ರೀಕಾಂತ್ ಚೌಹಾಣ್​ ಮತ್ತು ಆತನ 50 ಸಹಚರರಿಂದ ಹಲ್ಲೆ ನಡೆದಿದೆ. ಚನ್ನಗಿರಿ ಪಟ್ಟಣದ ಬಸ್ ಸ್ಟ್ಯಾಂಡ್ ಸಮೀಪ 3 ಅಂತಸ್ತಿನ ಸ್ವಂತ ಕಟ್ಟಡದ ಮಾಲೀಕತ್ವ ಹೊಂದಿರುವ ರುದ್ರೋಜಿರಾವ್, ಪುರಸಭೆ ಕಾಂಗ್ರೆಸ್ ಸದಸ್ಯನಿಗೆ 3 ಅಂತಸ್ತು ಕಟ್ಟಡದಲ್ಲಿ 2 ಅಂತಸ್ತಗಳನ್ನು ಬಾಡಿಗೆ ನೀಡಿದ್ದರು. ಕಳೆದ 12 ವರ್ಷಗಳಿಂದ ಶ್ರೀಕಾಂತ್ ಚೌಹಾಣ್ ಇದೇ ಕಟ್ಟಡದಲ್ಲಿ ಮದ್ಯದಂಗಡಿ ನಡೆಸುತ್ತಿದ್ದ. ಮದ್ಯದಂಗಡಿ ಲೈಸೆನ್ಸ್ ನಕಲಿ ಸಹಿ ಮಾಡಿ ರಿನೇವಲ್ ಮಾಡುತ್ತಿದ್ದ.ಇದನ್ನು ಪ್ರಶ್ನಿಸಿದ ರುದ್ರೋಜಿರಾವ್, ಶ್ರೀಕಾಂತ್ ಚೌಹ್ವಾಣ್ ಮೇಲೆ ಜಿಲ್ಲಾಧಿಕಾರಿ ಸೇರಿದಂತೆ ಅಬಕಾರಿ ಆಯುಕ್ತರಿಗೆ…

Read More

ಬೆಂಗಳೂರು : ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ಅಕ್ರಮವಾಗಿ ಮಧ್ಯ ಮಾರಾಟ ಮಾಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಎರಡು ದಾಭಾಗಗಳ ಕ್ಯಾಶಿಯರ್ ವಿರುದ್ಧ FIR ದಾಖಲಾಗಿದೆ. ನೆಲಮಂಗಲ ನಗರದ ಮನೋಜ್ ಡಾಬಾ ಕ್ಯಾಶಿಯರ್ ನವೀನ್ ಹಾಗೂ ಮಿರಾಕಲ್ ಢಾಬಾ ಕ್ಯಾಶಿಯರ್ ಸಂಜಯ್ ಗೌಡ ವಿರುದ್ಧ ಕೆಎಸ್ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿರುವ ಡಾಬಾಗಳು. ಗಾಂಧಿ ಜಯಂತಿಯಂದು ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರುತಿದ್ದರು. ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಟೌನ್ ಪೋಲೀಸರು ಡಾಬಾ ಗಳ ಮೇಲೆ ದಾಳಿ ಮಾಡಿದ್ದರು. ನೆಲಮಂಗಲದ ಟೌನ್ ಪಿಎಸ್ಐ ಜಯಂತಿ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿತ್ತು. ಅಕ್ಟೋಬರ್ 2ರಂದು ಎಂಸಿಆರ್ ದಾಖಲಿಸಿದ್ದರು. ನ್ಯಾಯಾಲಯದ ಅನುಮತಿ ಪಡೆದು ನವೀನ್ ಸಂಜಯ್ ವಿರುದ್ಧ FIR ದಾಖಲಾಗಿದೆ. ಪ್ರಕರಣ ಕುರಿತಂತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿಜಯನಗರ : ಪ್ರತಿದಿನ ಕುಡಿದು ಬಂದು ಪತ್ನಿಯ ಜೊತೆಗೆ ಪತಿ ಜಗಳವಾಡುತ್ತಿದ್ದ, ಇದರಿಂದ ಬೇಸತ್ತು ಪತ್ನಿ ಹಾಗೂ ಪತಿ ಇಬ್ಬರೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ನಡೆದಿದೆ. ನಗರದ ರಾಮರಹಿಂ ನಿವಾಸಿಗಳಾದ ಮಂಜುನಾಥ (28 )ಗೀತಾ (25) ಕೌಟುಂಬಿಕ ಕಲಹದಿಂದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.ಪತಿ ಮಂಜುನಾಥ್ ದಿನವು ಕುಡಿದು ಬಂದು ಹೆಂಡತಿಗೆ ಕಿರುಕುಳ ನೀಡಿ ಗಲಾಟೆ ಮಾಡುತ್ತಿದ್ದ. ನಿನ್ನೆ ರಾತ್ರಿ ಕೂಡ ಇದೇ ರೀತಿ ಪುನರಾವರ್ತನೆಯಾದಾಗ ಮಂಜುನಾಥ್ ಮತ್ತು ಗೀತಾ ಇಬ್ಬರೂ ನೇಣು ಬಿಗಿದುಕೊಂಡು ಆ ಮಾತೆಗೆ ಶರಣಾಗಿದ್ದಾರೆ. ಘಟನೆ ಕುರಿತಂತೆ ಹಗರಿಬೊಮ್ಮನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ದಾವಣಗೆರೆ : ಪತಿಯೊಬ್ಬ ತನಗೆ ಕುಡಿಯುವುದಕ್ಕೆ ಹಾಗೂ ವಿಸ್ಪೀಟ್ ಆಡುವುದಕ್ಕೆ ಪತ್ನಿಯ ಬಳಿ ಹಣ ಕೇಳಿದ್ದಾನೆ. ಈ ವೇಳೆ ಪತ್ನಿ ನನ್ನ ಹತ್ತಿರ ಹಣ ಇಲ್ಲ ಎಂದಾಗ ಪತಿ ಹೊಲಕ್ಕೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಅಣಿಮೇಗಳ ತಾಂಡಾದಲ್ಲಿ ನಡೆದಿದೆ. ಮಹಾಂತೇಶ್ ನಾಯ್ಕ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದುಬಂದಿದೆ. ಮದ್ಯಪಾನ ಮತ್ತು ಇಸ್ಟೀಟ್ ಜೂಜಾಟದ ಚಟ ಹೊಂದಿದ್ದ ಮಹಾಂತೇಶ್, ಪತ್ನಿಗೆ ಕರೆ ಮಾಡಿ ನನಗೆ 5 ಸಾವಿರ ರೂಪಾಯಿ ಬೇಕಾಗಿದೆ ಕೊಡು ಎಂದು ಪೀಡಿಸಿದ್ದಾನೆ. ಪತ್ನಿ ಮೋತಿಬಾಯಿ ಹಣವಿಲ್ಲ ಎಂದು ಹೇಳಿದ್ದಕ್ಕಾಗಿ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ಸ್ಥಳೀಯರು ಕೂಡಲೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Read More