Author: kannadanewsnow05

ಬೆಳಗಾವಿ : ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಸ್ಥಾನದ ಬೆನ್ನಲ್ಲೇ ಇದೀಗ ಸಿಎಂ ಬಲಾವಣೆ ಕುರಿತು ಕೂಗು ಕೇಳಿ ಬರುತ್ತಿದ್ದು, ನಿನ್ನೆ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಚಂದ್ರಶೇಖರ ಸ್ವಾಮೀಜಿಯವರು ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕೆಂದು ಸಿದ್ದರಾಮಯ್ಯ ಅವರಿಗೆ ವೇದಿಕೆ ಮೇಲೆ ಮನವಿ ಮಾಡಿದರು. ಇದೀಗ ಶ್ರೀಶೈಲ ಜಗದ್ಗುರುಗಳು ಕೂಡ ಸಿಎಂ ಬದ್ಲಾವಣೆ ಆದರೆ ವೀರಶೈವ ಲಿಂಗಾಯತ ಸಮುದಾಯದವರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾದರೆ ವೀರಶೈವ ಲಿಂಗಾಯತರಿಗೆ ನೀಡಬೇಕು ಎಂದು ಶ್ರೀಶೈಲ ಜಗದ್ಗುರು ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಅನೇಕರಿಗೆ ಆದ್ಯತೆ ಕೊಡಬೇಕು ಎಂದು ಸ್ವಾಮೀಜಿ ಈ ಕುರಿತು ಆಗ್ರಹಿಸಿದ್ದಾರೆ. ಸಿಎಂ ಬದಲಾವಣೆ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಿದರೆ ವೀರಶೈವ ಲಿಂಗಾಯತ ಸಮುದಾಯದ ಸಚಿವರಿಗೆ ಆದ್ಯತೆ ನೀಡಬೇಕು.ಕಾಂಗ್ರೆಸ್ ಗೆ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಕೊಟ್ಟಿದ್ದಾರೆ. ಸಚಿವರಾದ ಎಂಬಿ ಪಾಟೀಲ್, ಈಶ್ವರ್ ಖಂಡ್ರೆ,…

Read More

ಹಾವೇರಿ : ಇಂದು ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಹಾವೇರಿಯಲ್ಲಿ ದುರಂತ ಸಂಭವಿಸಿದ್ದು ದೇವರ ದರ್ಶನ ಪಡೆದುಕೊಂಡು ವಾಪಸ್ ಆಗುತ್ತಿದ್ದ ವೇಳೆ ನಿಂತಿದ್ದ ಲಾರಿಗೆ ಟಿಟಿ ಹೊಡೆದ ಪರಿಣಾಮ 13 ಜನ ಸಾವನ್ನಪ್ಪಿದ್ದಾರೆ. ಮೃತಪಟ್ಟ 13 ಜನ ಕುಟುಂಬಸ್ಥರಿಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ವೈಯಕ್ತಿಕವಾಗಿ 50 ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ. ಹೌದು ಇಂದು ನಸುಕಿನ ಜಾವ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಭೀಕರವಾಗಿ ಬಂದು ಅಪ್ಪಳಿಸಿದ ಪರಿಣಾಮ ವಾಹನದಲ್ಲಿದ್ದ 17 ಜನರ ಪೈಕಿ ಹದಿಮೂರು ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ್ ಪರವಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಿಂದ ಪರಿಹಾರ ವಿತರಣೆ ಮಾಡಲಾಯಿತು. ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಅವರು ಪರಿಹಾರದ ಹಣ ವಿತರಿಸಿದ್ದಾರೆ. ಅಲ್ಲದೆ ಇತ್ತ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿದ್ದು ಸರ್ಕಾರ ಪ್ರತಿಯೊಬ್ಬರಿಗೆ 10 ಲಕ್ಷ ರೂಪಾಯಿ ಪರಿಹಾರದ ಹಣ ನೀಡುವವರೆಗೂ…

Read More

ನವದೆಹಲಿ : ರಾಜ್ಯಕ್ಕೆ ಸಿಗಬೇಕಾದ ಅನುದಾನದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ 3 ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದಾರೆ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಬರಬೇಕಿರುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ರಾಜ್ಯದಿಂದ ಆಯ್ಕೆಯಾದ ಸಂಸದರ ಜೊತೆ ಚರ್ಚಿಸಿದ್ದೇವೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ನಾವು ಚರ್ಚೆ ಮಾಡಿದ್ದೇವೆ. ಪಕ್ಷಭೆದ ಮರೆತು ಕರ್ನಾಟಕದ ಒಳಿತಿಗಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದೇವೆ.ರಾಜ್ಯದ ಯೋಜನೆಗಳನ್ನು ಸಂಸತ್ ಸದಸ್ಯರ ಗಮನಕ್ಕೆ ತರಲಾಗಿದೆ ಎಂದರು. ಕೇಂದ್ರದ ಮೇಲೆ ಒತ್ತಡ ಹಾಕಿ ಮಂಜೂರು ಮಾಡಿಸಲು ಹೇಳಿದ್ದೇವೆ. ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪಕ್ಷಭೇದ ಮರೆತು ಪ್ರಯತ್ನ ಮಾಡುತ್ತಿದ್ದೇವೆ. ಕೇಂದ್ರ ಮಂತ್ರಿಗಳು ಉತ್ತರದ ರೂಪದಲ್ಲಿ ಪತ್ರ ಕೊಟ್ಟಿದ್ದಾರೆ. ಬಿಜೆಪಿ ತನ್ನ ನಿಲುವುಗಳನ್ನ ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಅನೇಕ ಸುಳ್ಳುಗಳಿವೆ ಎಂದರು. ಉದಾಹರಣೆಗೆ…

Read More

ಮಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು ಮಂಗಳೂರು, ಮೈಸೂರು ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಿತು. ಇತ್ತ ಮಂಗಳೂರಿನಲ್ಲಿ ಬಿಜೆಪಿ ಘಟನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲು ಯತ್ನ ನಡೆಸಿದ ಘಟನೆ ನಡೆಯಿತು. ಮೆರವಣಿಗೆ ಮೂಲಕ ತೆರಳಿ ಡಿಸಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಮಧ್ಯದಲ್ಲೇ ತಡೆದಿದ್ದಾರೆ.ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರ ಮಧ್ಯೆ ನೂಕಾಟ ತಳ್ಳಾಟ ಆಗಿದೆ. ಪ್ರತಿಭಟನೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಶಾಸಕರಾದ ವೇದವ್ಯಾಸ ಕಾಮತ್, ಭಗಿರತಿ, ಸೇರಿದಂತೆ ಬಿಜೆಪಿ ಅನೇಕ ಕಾರ್ಯಕರ್ತರು ಭಾಗಿಯಾಗಿದ್ದರು. ಅಲ್ಲದೆ ಮೈಸೂರು ಜಿಲ್ಲೆಯಲ್ಲಿ ಕೂಡ ಬಿಜೆಪಿಯಿಂದ ಪ್ರತಿಭಟನೆ ನಡೆಯುತ್ತಿದ್ದು ಬಿಜೆಪಿಯ ಎಸ್ ಟಿ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ವಾಲ್ಮೀಕಿ ನಿಗಮದಲ್ಲಿ ಹಗರಣ…

Read More

ಜಾರ್ಖಂಡ್ : ಭೂ ಹಗರಣ ಪ್ರಕರಣದಲ್ಲಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ಗೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಭೂ ಹಗರಣ ಪ್ರಕರಣದಲ್ಲಿ ಹೇಮಂತ್ ಸೋರೆನ್ ಅವರ ಜಾಮೀನು ಅರ್ಜಿಯ ವಿಚಾರಣೆ ಜೂನ್ 13 ರಂದು ಪೂರ್ಣಗೊಂಡಿತ್ತು . ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ರಂಗನ್ ಮುಖೋಪಾಧ್ಯಾಯ ಅವರ ನ್ಯಾಯಾಲಯದಲ್ಲಿ ಕಳೆದ ವಿಚಾರಣೆಯ ಸಂದರ್ಭದಲ್ಲಿ, ಹೇಮಂತ್ ಸೊರೆನ್ ಅವರ ವಕೀಲರು ತಮ್ಮ ಕಕ್ಷಿದಾರನಿಗೆ ಜಾಮೀನು ನೀಡುವಂತೆ ಒತ್ತಾಯಿಸಿದ್ದರು. ಆದರೆ, ಜಾರಿ ನಿರ್ದೇಶನಾಲಯದ (ಇಡಿ) ವಕೀಲರು ಇದನ್ನು ಬಲವಾಗಿ ವಿರೋಧಿಸಿದರು. ಎರಡೂ ಕಡೆಯ ವಾದವನ್ನು ಆಲಿಸಿದ ಜಾರ್ಖಂಡ್ ಹೈಕೋರ್ಟ್‌ನ ನ್ಯಾಯಮೂರ್ತಿ ರಂಗನ್ ಮುಖೋಪಾಧ್ಯಾಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. https://twitter.com/ANI/status/1806571735879225805?t=W5hxSNeiMENFDarEmY9XqA&s=19

Read More

ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯರಿಗೆ ಕರೆ ಮಾಡಲು ಪ್ರಜ್ವಲ್ ರೇವಣ್ಣ ಬಳಿ ಇದ್ದ ಸಿಮ್ ಕಾರ್ಡ್ ಗಳು ಬರೋಬ್ಬರಿ 15 ಎಂದು ಇದೀಗ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹೌದು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆತನ ಬಳಿ ಒಂದಲ್ಲ, ಎರಡಲ್ಲ 15 ಸಿಮ್‌ಗಳಿದ್ದವು ಎಂದು ತಿಳಿದುಬಂದಿದೆ. ಬರೋಬ್ಬರಿ 15 ಸಿಮ್ ಕಾರ್ಡ್ ಹೊಂದಿದ್ದು, ಇವುಗಳ ಮೂಲಕ ಮಹಿಳೆಯರಿಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಹಿಳೆಯರು ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್‌ನಿಂದ ಕಾಲ್ ಮಾಡಿ, ನಗ್ನ, ಅರೆನಗ್ನ ಸ್ಕ್ರೀನ್ ಶಾಟ್ ಕಳಿಸಿ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ. ಸಹಕರಿಸದಿದ್ದರೆ ಫೋಟೋ, ವಿಡಿಯೋ ವೈರಲ್ ಮಾಡೋ ಬೆದರಿಕೆ ಹಾಕುತ್ತಿದ್ದನಂತೆ. ಪ್ರಜ್ವಲ್‌ಗೆ ಬೆದರಿ ಸಂತ್ರಸ್ತೆಯರು ಬೆತ್ತಲಾಗಿದ್ದರಂತೆ. ಕೆಲಸ ಕೇಳಿಕೊಂಡು ಬಂದವರು, ಮಕ್ಕಳಿಗೆ ಸೀಟ್‌ಗಾಗಿ ಬಂದವರು, ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್ ರೇವಣ್ಣ ಟಾರ್ಗೆಟ್…

Read More

ಬೆಂಗಳೂರು : ನಟಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಜೈಲಿನಲ್ಲಿದ್ದಾರೆ. ಇದಾದ ಬಳಿಕವೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಲವು ನಟಿಯರಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ಕಿರುಕುಳ ನೀಡುತ್ತಿದ್ದು ಈ ಕುರಿತಾಗಿ ಬಿಗ್ ಬಾಸ್ ಖ್ಯಾತಿಯ ಸೋನು ಗೌಡ ಕೂಡ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ವಿಡಿಯೋ ಒಂದರಲ್ಲಿ, ರೇಣುಕಾ ಸ್ವಾಮಿಯದ್ದು ಎನ್ನಲಾಗುತ್ತಿರುವ ಖಾತೆಯಿಂದ ನನಗೂ ಕೆಟ್ಟ ಸಂದೇಶ ಬಂದಿದೆ ಎಂದು ಸೋನು ಗೌಡ ಹೇಳಿದ್ದರು. ಇದೀಗ ಹೊಸ ವಿಡಿಯೋ ಒಂದನ್ನು ಹರಿಬಿಟ್ಟಿರುವ ನಟಿ, ತಮಗೆ ದರ್ಶನ್ ಅಭಿಮಾನಿಗಳಿಂದ ಕೆಟ್ಟ ಸಂದೇಶಗಳು, ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ಸಂದೇಶಗಳು ಬಂದಿವೆ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಸೋನು ಗೌಡ ಯೂಟ್ಯೂಬ್ ಆಗಲಿ ಫೇಸ್ಬುಕ್ ಆಗಲಿ ಇನ್ಸ್ಟಾಗ್ರಾಮ್ ನಲ್ಲಿ ಆಗಲಿ ನನಗೆ ತುಂಬಾ ಕೆಟ್ಟದಾಗಿ ಬ್ಯಾಡ್ ಕಮೆಂಟ್ಸ್ ಬರುತ್ತಿವೆ. ದರ್ಶನ್ ಅವರ…

Read More

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಈಗ ಕೇಸ್ಗೆ ಮತ್ತೊಂದು ಸಿಕ್ಕಿದ್ದು, ಕೊಲೆಯ ದಿನ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ, ಪಟ್ಟಣಗೆರೆ ಶೆಡ್ಗೆ ದರ್ಶನ್ ವಿನಯ್ ಜೊತೆಗೆ ಬಂದಿದ್ದರು. ಸಂಜೆ 4:30ಕ್ಕೆ ಬಂದು 5:20ಕ್ಕೆ ಶೆಡ್ ನಿಂದ ತೆರಳಿದ್ದಾರೆ.ಈ ಮಧ್ಯ ರೇಣುಕಾ ಸ್ವಾಮಿ ಮೇಲೆ 30 ನಿಮಿಷ ವರೆಗೂ ಹಲ್ಲೆ ಮಾಡಿದ್ದಾರೆ ಎಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹೌದು ದರ್ಶನ್ ಸಿನಿಮಾ ಮಾದರಿಯಲ್ಲಿ ರೇಣುಕಾ ಸ್ವಾಮಿ ಮೇಲೆ ಕ್ರೌರ್ಯ ಮೆರೆದಿದ್ದಾರೆ. ವಾಹನಗಳ ಮೇಲೆ ರೇಣುಕಾ ಸ್ವಾಮಿಯನ್ನು ಬಿಸಾಡಿದ್ದ ದರ್ಶನ. ಬೂಟ್ ಕಾಲಿನಲ್ಲಿ ಒದ್ದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಪವಿತ್ರಾಗೆ ಕಳುಹಿಸಿದ್ದ ಮೆಸೇಜನ್ನು ದರ್ಶನ್ ಸಹಚರರು ಓಪನ್ ಮಾಡಿದ್ದರು.ರೇಣುಕಾ ಸ್ವಾಮಿ ಕಳಿಸಿದ್ದ ಮೆಸೇಜ್ ಓದಲು ದರ್ಶನ್ ಪವನ್ ಗೆ ಹೇಳಿದ್ದಾರೆ. ಜೋರು ಧ್ವನಿಯಲ್ಲಿ ಪವನ್ ಮೆಸೇಜ್ ಓದುತ್ತಿದ್ದ. ಈ ವೇಳೆ ಮೆಸೇಜ್ ಓದುತ್ತಿದ್ದ ಟೋನಲ್ಲೇ ದರ್ಶನ್ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುತ್ತಿದ್ದರು. ಮೊದಲು ಎರಡೇಟು…

Read More

ಹಾವೇರಿ : ಹಾವೇರಿ ದುರಂತ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ 17 ಮಂದಿ ಪೈಕಿ 13 ಮಂದಿ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸ ವಾಹನ ಖರೀದಿಸಿ ಪೂಜೆ ಮಾಡಿ ಮರಳುವಾಗ ಈ ಘಟನೆ ನಡೆದಿದೆ. ವಾಹನ ಟಿಟಿ ಖರೀದಿಸಿ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿ ಮರಳುವಾಗ ಈ ಅಪಘಾತ ಸಂಭವಿಸಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನವರಾಗಿದ್ದಾರೆ. ಮೃತರ ಪೈಕಿ ಆದರ್ಶ್ ಎಂಬವರು ಒಂದೂವರೆ ತಿಂಗಳ ಹಿಂದೆ ಹೊಸ ಟಿಟಿ ವಾಹನ ಖರೀದಿಸಿದ್ದರು. ಅದರಲ್ಲಿ ಕುಟುಂಬದವರನ್ನು, ಸ್ನೇಹಿತರನ್ನು ಕರೆದುಕೊಂಡು ಮನೆ ದೇವರಿಗೆ ಪೂಜೆ ಸಲ್ಲಿಸಲೆಂದು ಪ್ರವಾಸ ಹೊರಟಿದ್ದರು. ಆ ಬಗ್ಗೆ ಆದರ್ಶ್ ಸ್ನೇಹಿತ ಮಾತನಾಡಿದ್ದಾರೆ. ಆದರ್ಶ್ ಅವರ ಗೆಳೆಯ ಸಾಗರ್ ಎನ್ನುವವರು ಮಾತನಾಡಿದ್ದು, ಚಾಲಕ ಆದರ್ಶ್ ಹೊಸ ಟಿಟಿ ವಾಹನ ಖರೀದಿಸಿ ಕುಟುಂಬ ಸಮೇತ ದೇವರ ದರ್ಶನ ಹಾಗೂ ವಾಹನ ಪೂಜೆ ಮಾಡಿಸಲು ತೆರಳಿದ್ದರು. ನಿನ್ನೆ ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ಟೆಂಪಲ್ ನಲ್ಲಿ ವಾಹನ…

Read More

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 52 ಲಕ್ಷ ಮೌಲ್ಯದ 731 ಗ್ರಾಮ ಚಿನ್ನವನ್ನು ಜಪ್ತಿ ಮಾಡಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬ್ಯಾಂಕಾಕ್, ದಮ್ಮಮ್ ಹಾಗೂ ದುಬೈನಿಂದ ಮೂವರು ಚಿನ್ನ ತಂದಿದ್ದರು. ಬಿಸ್ಕೆಟ್ ಮತ್ತು ಆಭರಣಗಳ ಮಾದರಿಯಲ್ಲಿ ತಂದಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಚಿನ್ನದ ಸಮೇತ ಮೂವರನ್ನು ವಶಕ್ಕೆ ಪಡೆದು ಅಧಿಕಾರಿಗಳು ಇದೀಗ ವಿಚಾರಣೆ ನಡೆಸುತ್ತಿದ್ದಾರೆ. ಕೆಎಬಿ ಕಸ್ಟಮ್ಸ್ ಅಧಿಕಾರಿಗಳಿಂದ ಮೂರು ಪ್ರಯಾಣಿಕರ ವಿಚಾರಣೆ ನಡೆಯುತ್ತಿದೆ.

Read More