Author: kannadanewsnow05

ಮೈಸೂರು : ಮೈಸೂರಿನ ಹೊಸರಾಮನಹಳ್ಳಿ ಬಳಿ ಲಕ್ಷ್ಮಣತೀರ್ಥ ನದಿಯಲ್ಲಿ ವಕೀಲ ಕೆ. ರಾಜು ಎನ್ನುವ ಶವ ಪತ್ತೆಯಾಗಿದೆ. ವಕೀಲ ಕೆ.ರಾಜು, ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಾಪತ್ತೆಯಾಗಿದ್ದರು. ವಕೀಲ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಹೊಸ ರಾಮನಹಳ್ಳಿ ಬಳಿ ಲಕ್ಷ್ಮಣ ತೀರ್ಥ ನದಿಯಲ್ಲಿ ಕೆ. ರಾಜು ಶವವಾಗಿ ಪತ್ತೆಯಾಗಿದ್ದಾರೆ. ಹುಣಸೂರಿನ ಗೋಕುಲ ಬಡಾವಣೆ ನಿವಾಸಿಯಾಗಿದ್ದ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದಾರೆ. ಮನೆಗೆ ಬಾರದ ಹಿನ್ನೆಲೆಯಲ್ಲಿ ವಕೀಲನ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಕೆ.ರಾಜು ಲಕ್ಷ್ಮಣ ತೀರ್ಥ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನದಿಗೆ ಹಾರಿ ವಕೀಲ ಕೆ.ರಾಜು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಮಹದೇವಪುರದಲ್ಲಿ ಬಹುಮಡಿ ಕಟ್ಟಡ ದುರಸ್ತಿ ವೇಳೆ ಅವಘಡ ಸಂಭವಿಸಿದೆ. ಬಿಲ್ಡಿಂಗ್ ಅವಳವಡಿಸಿದ್ದ ಕಟ್ಟಿಗೆ ಮೇಲಿಂದ ಬಿದ್ದು ಓರ್ವ ಕೂಲಿ ಕಾರ್ಮಿಕ ಸಾವನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಮಹದೇವಪುರ ಮುಖ್ಯ ರಸ್ತೆಯಲ್ಲಿರುವ ಪೈ ಲೇಔಟ್ ನಲ್ಲಿ ಈ ಒಂದು ಅವಘಡ ಸಂಭವಿಸಿದೆ. ಹಾವೇರಿ ಮೂಲದ ಯೂಸುಫ್ (35) ಎನ್ನುವ ಕೂಲಿಕಾರ್ಮಿಕ ಮೃತಪಟ್ಟಿದ್ದಾನೆ. ಇನ್ನು ಮೂವರು ಕೂಲಿ ಕಾರ್ಮಿಕರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದ ಮಾಲೀಕ ಮತ್ತು ಗುತ್ತಿಗೆದಾರನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಒಟ್ಟು 51,000 ಶಿಕ್ಷಕರ ಕೊರತೆ ಇದ್ದು, 32 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಈಗಾಗಲೇ 13,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 32 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡುತ್ತಿದ್ದೇವೆ. ಈಗಾಗಲೇ 13,000 ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಒಟ್ಟು ರಾಜ್ಯದಲ್ಲಿ 51,000 ಶಿಕ್ಷಕರ ಕೊರತೆ ಇದೆ. ಅಲ್ಲದೆ ಕಾಯಂ ಶಿಕ್ಷಕರನ್ನು ಸಹ ನೇಮಕ ಮಾಡುತ್ತಿದ್ದೇವೆ. ಒಂದನೇ ತರಗತಿ ಮಕ್ಕಳಿಗೆ ಗಣಕಯಂತ್ರದ ತರಬೇತಿ ನೀಡುತ್ತೇವೆ. ಗ್ರಾಮೀಣ ಭಾಗದ ಮಕ್ಕಳಿಗೆ ವಿಶೇಷ ಅವಕಾಶ ನೀಡಬೇಕಿದೆ. ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಇಂದ ಅನುಕೂಲ ಆಗಿದೆ. ಸರ್ಕಾರಿ ಶಾಲೆಗಳಲ್ಲಿ ಸಂಜೆ ವಿಶೇಷ ತರಗತಿ ಮಾಡಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

Read More

ಮೈಸೂರು : ಇತ್ತೀಚಿಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡ ಹೆಂಡತಿಯನ್ನು ಕೊಲ್ಲೋದು ಅಥವಾ ಹೆಂಡತಿ ಗಂಡನನ್ನು ಕೊಲ್ಲುವುದು ಆತಂಕಕ್ಕೆ ಕಾರಣವಾಗಿದೆ ಇವರಿಬ್ಬರ ಮಧ್ಯ ಮಕ್ಕಳು ಅನಾಥರಾಗುತ್ತಿದ್ದಾರೆ ಇದೀಗ ಮೈಸೂರಿನಲ್ಲಿ ಅಂತಹ ಘಟನೆ ನಡೆದಿದ್ದು ಗಂಡನ ಕಥೆ ಮುಗಿಸಿ ಆತನಿಗೆ ಚಟ್ಟ ಕಟ್ಟಲು ಪ್ಲಾನ್ ಮಾಡಿದ್ದ ಪತ್ನಿಯೊಬ್ಬಳು ಸಿಕ್ಕಿ ಬಿದ್ದಿದ್ದು ಹಾಗೆ ಜೊತೆಗೆ ಪೊಲೀಸರು ಒಟ್ಟು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಹೌದು ಜಿಲ್ಲೆಯ ನಂಜನಗೂಡು ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕಿಲಾಡಿ ಪತ್ನಿ ಅಂದರ್ ಆಗಿದ್ದಾರೆ. ಪತಿಯನ್ನ ಮುಗಿಸಲು ಸಹೋದರನ ನೆರವನ್ನು ಪಡೆದು, ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಿದ ಪತ್ನಿ ಪೊಲೀಸರು ಹೆಣೆದ ಬಲೆಗೆ ಸಿಲುಕಿದ್ದಾರೆ. ಸಹೋದರ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಘಟನೆ ಹಿನ್ನೆಲೆ? ರಾಜೇಂದ್ರ ಹಾಗೂ ಪತ್ನಿ ಸಂಗೀತಾ ನಡುವೆ ಭಿನ್ನಾಭಿಪ್ರಾಯವಿತ್ತು, ಕೌಟುಂಬಿಕ ಕಲಹದ ಹಿನ್ನೆಲೆ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಅಕ್ಟೋಬರ್ 25 ರಂದು ರಾಜೇಂದ್ರ ಅವರು ಪತ್ನಿ ಸಂಗೀತಾಳನ್ನ ತಮ್ಮ…

Read More

ಬೆಂಗಳೂರು : ಬಹುಭಾಷಾ ನಟ ಪ್ರಕಾಶ್ ರಾಜ್ಗೆ 2025 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಚಲನಚಿತ್ರ ಮತ್ತು ಕಿರುತೆರೆ ವಿಭಾಗದಲ್ಲಿ ಇಬ್ಬರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಪ್ರಕಾಶ್ ರಾಜ್ ಮತ್ತು ವಿಜಯಲಕ್ಷ್ಮಿ ಸಿಂಗಗೆ ರಾಜೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ. ಬಹುಭಾಷ ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮಿ ಸಿಂಗ್, IAS ಅಧಿಕಾರಿ ಸಿದ್ದಯ್ಯನವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ರಾಜೇಂದ್ರ ಚೆನ್ನಿ, ತುಂಬಾಡಿ ರಾಮಯ್ಯ, ಪೌರಕಾರ್ಮಿಕರಾದ ಫಕೀರವ್ವಗೆ ರಾಜ್ಯ ಸರ್ಕಾರ 2025 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ. ಇನ್ನು ಸಾಹಿತ್ಯ ಕ್ಷೇತ್ರದಲ್ಲಿ ಆರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ ರಾಜೇಂದ್ರ ಚೆನ್ನಿ, ತುಂಬಾಡಿ ರಾಮಯ್ಯ, ಆರ್ ಸುನಂದಮ್ಮ, ಡಾ. ಎಚ್ ಎಲ್ ಪುಷ್ಪ, ರಹಮದ್ ತರೀಕೆರೆ ಹಾಗೂ ಹ.ಮ ಪೂಜಾರ್ ಅವರಿಗೆ ರಾಜೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.

Read More

ಬೆಂಗಳೂರು : ಪುತ್ರಿ ಸಾವಿನ ದುಃಖದ ಮಧ್ಯ ಅಧಿಕಾರಿಗಳು ಲಂಚ ಕೇಳಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ, ಪಿಎಸ್ಐ ಸಂತೋಷ್ ಪಿಸಿ ಗೋರಕನಾಥ್ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಬೆಳ್ಳಂದೂರು ಠಾಣೆ ಪಿಎಸ್ಐ ಸಂತೋಷ್ ಹಾಗೂ ಪಿಸಿ ಗೋರಕನಾಥ್ ಸಸ್ಪೆಂಡ್ ಆಗಿದ್ದಾರೆ. ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಪರಶುರಾಮ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣ ಏನು? ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು ಯಾವುದೇ ಸರಕಾರಿ ಕೆಲಸ ಆಗಬೇಕೆಂದರೆ ಪಿಯೂನ್ ಹಿಡಿದುಕೊಂಡು, ದೊಡ್ಡ ದೊಡ್ಡ ಸರ್ಕಾರಿ ಅಧಿಕಾರಿಗಳವರೆಗೂ ಲಂಚ ನೀಡದೆ ಯಾವುದೇ ಕೆಲಸ ಆಗುವುದಿಲ್ಲ. ಇದಕ್ಕೆ ನಿರ್ದರ್ಶನ ಎಂಬಂತೆ ಬೆಂಗಳೂರಿನಲ್ಲಿ ಪುತ್ರಿ ಸಾವನ್ನಪ್ಪಿದ್ದು ಆಕೆಯ ಶವ ಸಾಗಾಟದಿಂದ ಹಿಡಿದು ಮರಣೋತ್ತರ ಪರೀಕ್ಷೆವರೆಗೂ ಅಧಿಕಾರಿಗಳು ಲಂಚ ತೆಗೆದುಕೊಂಡಿರುವ ಕುರಿತು ಮೃತ ಯುವತಿಯ ತಂದೆ ಪೋಸ್ಟ್ ಹಂಚಿಕೊಂಡಿದ್ದಾರೆ. ಪುತ್ರಿ ಸಾವಿನ ಸಂಕಟದ ಮಧ್ಯ ತಂದೆಗೆ ಲಂಚದ ಕಾಟ ತಪ್ಪಿಲ್ಲ. ಬೆಂಗಳೂರಿನ ಶಿವಕುಮಾರ್ ಗೆ ಲಂಚದ ಕರಾಳ ಅನುಭವ ಆಗಿದೆ. ಪುತ್ರಿಯ ಶವ ಸಾಗಾಟ ಅಂತ್ಯಕ್ರಿಯೆ ಮರಣೋತ್ತರ ಪರೀಕ್ಷೆಯಲ್ಲಿ ಲಂಚ…

Read More

ಉತ್ತರಕನ್ನಡ : ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಇದೀಗ ಐದು ಸರ್ಕಾರಿ ಕಚೇರಿಗಳ ಪವರ್ ಕಟ್ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಐದು ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಹಶೀಲ್ದಾರ್ ಕಚೇರಿ, ಉಪನೊಂದಣಾಧಿಕಾರಿ ಕಚೇರಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಕಚೇರಿ, ಎಸಿ ಕಚೇರಿ ಹಾಗೂ ಕಾರವಾರದ ಎಂಎಲ್ಎ ಕಟ್ಟಡಕ್ಕೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಇದೀಗ ಈ ಒಂದು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಕಚೇರಿಗಳ ಪವರ್ ಕಟ್ ಮಾಡಿ ಹೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ನೈರುತ್ಯ ಮುಂಗಾರು ಮಳೆಯಿಂದ ತೀವ್ರ ಹಾನಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಇದೀಗ ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಈ ವಿಚಾರವಾಗಿ ಮನವಿ ಸಲ್ಲಿಸಲು ಸಂಪುಟ ಸಭೆ ನಿರ್ಧರಿಸಿದೆ. ಭಾರಿ ಮಳೆ ಹಾಗೂ ನದಿ ಪ್ರವಾಹದಿಂದ ಹಾನಿಗೊಳಗಾದಂತಹ ಪ್ರದೇಶಗಳು, ಮಳೆ ಹಾಗೂ ಪ್ರವಾಹದಿಂದ ಮೂಲಸೌಕರ್ಯಗಳ ಹಾನಿ, ರಸ್ತೆ, ಸೇತುವೆಗಳು ಸೇರಿ 5000 ಕೋಟಿ ರೂಪಾಯಿಗೂ ಮೌಲ್ಯದ ಸಾರ್ವಜನಿಕ ಆಸ್ತಿ ನಷ್ಟವನ್ನ ಸರ್ಕಾರ ಅಂದಾಜು ಮಾಡಿದೆ. ಮೂಲಸೌಕರ್ಯ ಪುನರ್ ನಿರ್ಮಾಣಕ್ಕೆ ಕೇಂದ್ರದ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಒಟ್ಟು 1,545.23 ಕೋಟಿ ಆರ್ಥಿಕ ಸಹಾಯ ಕೋರಲು ನಿರ್ಧರಿಸಿದೆ. ಈ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಚೇತರಿಕೆ ಪುನರ್ ನಿರ್ಮಾಣಕ್ಕೆ ಮನವಿ ಸಲ್ಲಿಸಲು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ತೀರ್ಮಾನಿಸಲಾಯಿತು. ಕ್ಯಾಬಿನೆಟ್ ಅನುಮೋದನೆ ಹಿನ್ನೆಲೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಲಿದೆ.

Read More

ಕೋಲಾರ : ಕೋಲಾರದಲ್ಲಿ ಘೋರ ಘಟನೆ ನಡೆದಿದ್ದು, ಶಾಲೆ ಆವರಣದಲ್ಲಿದ್ದ ಸಂಪ್ ನಲ್ಲಿ ವಿದ್ಯಾರ್ಥಿ ಬಿದ್ದು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಡದನಹಳ್ಳಿಯಲ್ಲಿ ಈ ಒಂದು ಘಟನೆ ಸಂಭವಿಸಿದೆ. ಸಂಪನಲ್ಲಿ 3ನೇ ತರಗತಿ ವಿದ್ಯಾರ್ಥಿ ನರೇಂದ್ರ (9) ವಿದ್ಯಾರ್ಥಿಯ ಮೃತ ದೇಹ ಪತ್ತೆ ಆಗಿದೆ. ನರೇಂದ್ರ ಕಡದನಹಳ್ಳಿಯ ಸರ್ಕಾರಿ ಪ್ರಾರ್ಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿಯಾಗಿದ್ದು, ಬೆಳಿಗ್ಗೆ ವಿದ್ಯಾರ್ಥಿ ನರೇಂದ್ರ ಶಾಲೆಗೆ ಬಂದಿದ್ದ ಅದಾದ ಬಳಿಕ ಆತ ನಾಪತ್ತೆಯಾಗಿದ್ದ ವಿದ್ಯಾರ್ಥಿ ನರೇಂದ್ರಗಾಗಿ ಪೋಷಕರು ಗ್ರಾಮದ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಬಳಿಕ ಶಾಲೆಯ ಆವರಣದಲ್ಲಿದ್ದ ಸಂಪ್ನಲ್ಲಿ ವಿದ್ಯಾರ್ಥಿ ಮೃತ ದೇಹ ಪತ್ತೆಯಾಗಿದೆ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಸಚಿವ ಎಚ್ ಸಿ ಮಹದೇವಪ್ಪ ಹಾಗೂ ಕೆಜೆ ಜಾರ್ ನಡುವೆ ವಾಕ್ಸಮರ ನಡೆದಿದೆ. ಸಚಿವ ಸಂಪುಟ ಸಭೆಯಲ್ಲಿ ಸಚಿವರ ನಡುವೆ ಮಾತಿನ ಗದ್ದಲ ಏರ್ಪಟ್ಟಿದೆ. ಏಕಾಏಕಿ ಸಚಿವ ಮಹದೇವಪ್ಪ ಸಿಡಿದಿದ್ದಾರೆ. ಮಹದೇವಪ್ಪ ಅಕ್ರೋಶ ಕಂಡು ಸಂಪುಟ ಸಹೋದ್ಯೋಗಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಕಾರಣ ಏನೆಂದರೆ ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ಸಚಿವರ ನಡುವೆ ಜಟಾಪಟಿಯಾಗಿದೆ. ನಾನು ಎದ್ದು ಹೊರಟೆ ಬಿಡುತ್ತೇನೆ ಎಂದು ಸಚಿವ ಮಹಾದೇವಪ್ಪ ಕೂಗಾಡಿದ್ದಾರೆ. ಸಂಪುಟ ಸಭೆಯಲ್ಲಿ ಎಚ್ ಸಿ ಮಹದೇವಪ್ಪ ರೋಷಾವೇಷ ತಾಳಿದ್ದು SCSP & TSP ಹಣ ನೀಡದ ವಿಚಾರವಾಗಿ ಮಹದೇವಪ್ಪ ಕೂಗಾಡಿದ್ದಾರೆ. SCSP & TSP ಅನುದಾನ ಹಂಚಿಕೆ ಮಾಡಿದ್ದು ಯಾಕೆ? ಏನು ಅಂದುಕೊಂಡಿದ್ದೀರಿ? SCSP & TSP ಹಣ ಬೇರೆ ಕಡೆ ಬಳಸುತ್ತಿದ್ದೀರಾ? ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಏರು ಧ್ವನಿಯಲ್ಲಿ ಮಹದೇವಪ್ಪ ಆಕ್ರೋಶ ಹೊರಹಾಕಿದ್ದಾರೆ. ನೇರವಾಗಿ ಸಿಎಂ ಸಿದ್ದರಾಮಯ್ಯಗೆ ಹೇಳದೆ ಸಂಪುಟ ಸಹೋದ್ಯೋಗಿಗಳ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ SCSP…

Read More