ನವದೆಹಲಿ: ಮಥುರಾದ ಕೃಷ್ಣ ಜನ್ಮಭೂಮಿ ದೇವಾಲಯ ಸಂಕೀರ್ಣದ ಬಗ್ಗೆ 1920ರ ಗೆಜೆಟ್ನ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಭಾರತೀಯ ಪುರಾತತ್ವ ಸಮೀಕ್ಷೆ (ASI) ಆರ್ಟಿಐ ಪ್ರಶ್ನೆಗೆ ಉತ್ತರಿಸಿದೆ. ನವೆಂಬರ್ 1920ರ ಗೆಜೆಟ್ನಿಂದ ಆಯ್ದ ಭಾಗವನ್ನು ಲಗತ್ತಿಸಿ, ಎಎಸ್ಐ ತನ್ನ ಪ್ರತಿಕ್ರಿಯೆಯಲ್ಲಿ ಹೀಗೆ ಹೇಳಿದೆ. “ಕತ್ರಾ ದಿಬ್ಬದ ಭಾಗಗಳು ನಜುಲ್ ಬಾಡಿಗೆದಾರರ ವಶದಲ್ಲಿಲ್ಲ, ಹಿಂದೆ ಕೇಶವದೇವ ದೇವಾಲಯವಿತ್ತು, ಅದನ್ನ ನೆಲಸಮಗೊಳಿಸಿಲಾಯ್ತು ಮತ್ತು ಆ ಸ್ಥಳವನ್ನ ಔರಂಗಜೇಬ ಮಸೀದಿಗೆ ಬಳಸಲಾಯಿತು” ಎಂದಿದೆ.
ಉತ್ತರ ಪ್ರದೇಶದ ಮೈನ್ಪುರಿ ನಿವಾಸಿ ಅಜಯ್ ಪ್ರತಾಪ್ ಸಿಂಗ್ ಅವರು ಆರ್ಟಿಐ ಅರ್ಜಿ ಸಲ್ಲಿಸಿದ್ದು, ಆಗ್ರಾ ವೃತ್ತದ ಎಎಸ್ಐ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞರ ಕಚೇರಿಯಿಂದ ಉತ್ತರ ಬಂದಿದೆ. ಕೃಷ್ಣ ಜನ್ಮಭೂಮಿ ದೇವಾಲಯದ ಸಂಕೀರ್ಣದ ಭಾಗವೆಂದು ಹೇಳಲಾದ ಕೇಶವದೇವ್ ದೇವಾಲಯವನ್ನ “ಕೆಡವುವ” ಬಗ್ಗೆ ಸಿಂಗ್ ನಿರ್ದಿಷ್ಟ ಮಾಹಿತಿಯನ್ನ ಕೋರಿದ್ದರು. ಆರ್ಟಿಐ ಉತ್ತರವು “ಕೃಷ್ಣ ಜನ್ಮಭೂಮಿ” ಎಂಬ ಪದಗಳನ್ನ ನಿರ್ದಿಷ್ಟವಾಗಿ ಉಲ್ಲೇಖಿಸದಿದ್ದರೂ, ಮೊಘಲ್ ಚಕ್ರವರ್ತಿಯು ವಿವಾದಿತ ಸ್ಥಳದಲ್ಲಿ ಕೇಶವದೇವ್ ದೇವಾಲಯವನ್ನ ನೆಲಸಮಗೊಳಿಸಿರುವುದನ್ನ ದೃಢಪಡಿಸಿದೆ.
ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಸಿಂಗ್, “ಅವರು ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮುಂದೆ ಪ್ರಮುಖ ಸಾಕ್ಷ್ಯವನ್ನ ಇಡುತ್ತಾರೆ” ಎಂದು ಹೇಳಿದರು.
“ಐತಿಹಾಸಿಕ ಪುರಾವೆಗಳ ಆಧಾರದ ಮೇಲೆ, ಔರಂಗಜೇಬ್ ಸಾ.ಶ 1670 ರಲ್ಲಿ ದೇವಾಲಯವನ್ನು ನೆಲಸಮಗೊಳಿಸಲು ಆದೇಶ ಹೊರಡಿಸಿದ್ದಾನೆ ಎಂದು ನಾವು ನಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದೇವೆ. ಅದರ ನಂತರ, ಅಲ್ಲಿ ಶಾಹಿ ಈದ್ಗಾ ಮಸೀದಿಯನ್ನ ನಿರ್ಮಿಸಲಾಯಿತು. ಈಗ ಆರ್ಟಿಐ ಪ್ರಶ್ನೆಗೆ ಉತ್ತರವಾಗಿ ಎಎಸ್ಐ ಮಾಹಿತಿಯನ್ನ ದೃಢೀಕರಿಸಿದೆ. ಫೆಬ್ರವರಿ 22ರ ವಿಚಾರಣೆಯ ಸಮಯದಲ್ಲಿ ನಾವು ಎಎಸ್ಐ ಉತ್ತರವನ್ನ ಹೈಕೋರ್ಟ್ನಲ್ಲಿ ಮಂಡಿಸುತ್ತೇವೆ” ಎಂದು ಅವರು ಹೇಳಿದರು.
BREAKING : ಯುಪಿಎ ಸರ್ಕಾರದ ಆರ್ಥಿಕ ದುರಾಡಳಿತದ ಕುರಿತು ಕೇಂದ್ರದಿಂದ ಸಂಸತ್ತಿನಲ್ಲಿ ‘ಶ್ವೇತಪತ್ರ’ ಮಂಡನೆ
BREAKING: ಆರ್ಥಿಕತೆಯ ಬಗ್ಗೆ ‘ಶ್ವೇತಪತ್ರ’ದ ಗದ್ದಲದ ನಡುವೆ ‘ಕೇಂದ್ರ ಬಜೆಟ್ ಅಧಿವೇಶನ’ವನ್ನು ಒಂದು ದಿನ ವಿಸ್ತರಣೆ