ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) 5 ಮತ್ತು 8ನೇ ಸೆಮಿಸ್ಟರ್ ಬಿ.ಇ ಮತ್ತು ಬಿ.ಟೆಕ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಅರ್ಜಿಗಳನ್ನು ಭರ್ತಿ ಮಾಡಲು ನಿಗದಿ ಪಡಿಸಿದ್ದ ದಿನಾಂಕವನ್ನು ವಿಸ್ತರಿಸಿದೆ.
ಕಾಲೇಜುಗಳು ಪರೀಕ್ಷಾ ಅರ್ಜಿಗಳನ್ನು ಭರ್ತಿ ಮಾಡಲು ಡಿಸೆಂಬರ್ 6 ಮತ್ತು ದಂಡ ಶುಲ್ಕ 500 ರೂ.ಗಳೊಂದಿಗೆ ಭರ್ತಿ ಮಾಡಲು ಡಿಸೆಂಬರ್ 8 ಕೊನೆಯ ದಿನವಾಗಿದೆ.
ಪ್ರವೇಶ ಪತ್ರಗಳು ಡಿಸೆಂಬರ್ 10 ರಂದು ಬಿಡುಗಡೆ ಮಾಡಲಿದೆ. ಹೆಚ್ಚಿನ ಮಾಹಿತಿಗೆ https://prexam.vtu.ac.in/ ಸಂಪರ್ಕಿಸಬಹುದಾಗಿದೆ ಎಂದು ವಿಟಿಯು ಕುಲಸಚಿವ(ಮೌಲ್ಯಮಾಪನ) ಡಾ.ಯು.ಜೆ.ಉಜ್ವಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಿದೆ ಪರಿಷ್ಕೃತ ವೇಳಾಪಟ್ಟಿ
ಬಿ.ಇ. ಮತ್ತು ಬಿ.ಟೆಕ್ ಕೋರ್ಸ್ ಗಳ ಅಂತಿಮ ಪರೀಕ್ಷೆಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಡಿಸೆಂಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪರೀಕ್ಷೆಗಳನ್ನು 2026 ಜನವರಿಯಲ್ಲಿ ನಡೆಸಲು ನಿರ್ಧರಿಸಿದೆ. ವಿಷಯವಾರು ವೇಳಾಪಟ್ಟಿಯನ್ನು ವಿಟಿಯು ವೆಬ್‌ಸೈಟ್ https://vtu.ac.in/ ಮೂಲಕ ನೋಡಬಹುದಾಗಿದೆ ಎಂದು ವಿಟಿಯು ತಿಳಿಸಿದೆ.
BREAKING : ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಿಗದಿ
ಧರ್ಮಸ್ಥಳ ಕೇಸ್: ಜಾಮೀನು ಸಿಕ್ಕರೂ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗಿಲ್ಲ ಬಿಡುಗಡೆ ಭಾಗ್ಯ








