ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ, ನೌಕರರ ಸೇವಾ ವಿವರಗಳನ್ನು ಹೆಚ್ ಆರ್ ಎಂ ಎಸ್ ತಂತ್ರಾಂಶದ Electronic Service Register (ESR) ನಲ್ಲಿಯೇ ಅನುಷ್ಠಾನಗೊಳಿಸಿ ಸರ್ಕಾರ ಮಹತ್ವದ ಆದೇಶ ಮಾಡಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಿದ್ದು, ಸರ್ಕಾರಿ ಆದೇಶಗಳು, ಸುತ್ತೋಲೆಗಳು ಹಾಗೂ ನಿರ್ದೇಶನಗಳನ್ವಯ, ರಾಜ್ಯ ಸರ್ಕಾರದ ಸೇವೆಗೆ ದಿನಾಂಕ: 01.04.2021 ರ ಮೊದಲು ಹಾಗೂ ನಂತರ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರ ಸೇವಾ ವಹಿಯನ್ನು HRMS-2.0 ತಂತ್ರಾಂಶದ ಅಂಗವಾಗಿರುವ ವಿದ್ಯುನ್ಮಾನ ಸೇವಾ ವಹಿ (Electronic Service Register-ESR) ಯಲ್ಲಿಯೇ ಕಡ್ಡಾಯವಾಗಿ ದಾಖಲಿಸಿ ಹಾಗೂ ನಿರ್ವಹಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರಧಾನ ಮಹಾಲೇಖಪಾಲರ (CAG) ಮಾರ್ಗಸೂಚಿಗಳಂತೆ, ಪಿಂಚಣಿ ಪ್ರಕ್ರಿಯೆಯನ್ನು ಸಂಪೂರ್ಣ ಕಾಗದರಹಿತ (Paperless) ಹಾಗೂ ಅಂತ್ಯದಿಂದ ಅಂತ್ಯಕ್ಕೆ (End-to-End) ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಪಿಂಚಣಿ ಪ್ರಕರಣಗಳನ್ನು ಸಂಪೂರ್ಣವಾಗಿ ಆನ್-ಲೈನ್ ಮೂಲಕ ಪ್ರಕ್ರಿಯೆಗೊಳಿಸುವ ವ್ಯವಸ್ಥೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಖಜಾನೆ-2 ತಂತ್ರಾಂಶದ ಮುಖಾಂತರ ರಾಜ್ಯದ ಎಲ್ಲಾ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು (DDO) ತಮ್ಮ ಅಧೀನದಲ್ಲಿರುವ ವಯೋನಿವೃತ್ತಿ ಹಾಗೂ ಸ್ವಇಚ್ಛಾ ನಿವೃತ್ತಿ ಹೊಂದುವ ಸರ್ಕಾರಿ ನೌಕರರ ಪಿಂಚಣಿಗೆ ಸಂಬಂಧಿಸಿದ ಅರ್ಜಿಗಳನ್ನು ಆನ್-ಲೈನ್ ಮೂಲಕ ದಾಖಲಿಸಿ, ಮಂಜೂರು ಮಾಡಿ, ನಿಯಮಾನುಸಾರ ನಮೂನೆ-7 (Form-7)ಅನ್ನು ಮಹಾಲೇಖಪಾಲರಿಗೆ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ರೀತಿ ಸಂಗ್ರಹಿಸಲಾದ ಡಿಜಿಟಲ್ ಮಾಹಿತಿಯನ್ನು ಮಹಾಲೇಖಪಾಲರ ಕಚೇರಿಯ ತಂತ್ರಾಂಶದಲ್ಲಿ ಅಳವಡಿಸಿ, ಎಲೆಕ್ಟ್ರಾನಿಕ್ ಪಿಂಚಣಿ ಪಾವತಿ ಆದೇಶ (EPPO) ಅನ್ನು ಸೃಜಿಸಿ, ತದನಂತರ ಅದನ್ನು ಖಜಾನೆ-2 ಹಾಗೂ ಬ್ಯಾಂಕುಗಳ ಕೇಂದ್ರೀಕೃತ ಪಿಂಚಣಿ ಸಂಸ್ಕರಣಾ ಕೇಂದ್ರ [Centralized Pension Processing Centre (CPPC)]n
ಮಾಧ್ಯಮದ ಮೂಲಕ ರವಾನಿಸಲಾಗುತ್ತಿದೆ.
3. “Enforcement of online submission of Pension Papers for Superannuation Cases” ಸಂಬಂಧಿತ ಸರ್ಕಾರದ ಆದೇಶದಂತೆ ದಿನಾಂಕ: 01.04.2026 ರಿಂದ ಮಹಾಲೇಖಪಾಲರ ಕಚೇರಿಯು ನಿವೃತ್ತಿ ಅಥವಾ ಸ್ವಇಚ್ಛಾ ನಿವೃತ್ತಿಗೆ ಸಂಬಂಧಿಸಿದ ಯಾವುದೇ ಪಿಂಚಣಿ ಪ್ರಕರಣಗಳನ್ನು ನೇರವಾಗಿ ಸ್ವೀಕರಿಸುವುದಿಲ್ಲವೆಂದು ಸ್ಪಷ್ಟಪಡಿಸಿರುವುದರಿಂದ, ಆಯಾ ಇಲಾಖೆಯ DDOಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಪಿಂಚಣಿ ಅರ್ಜಿ ನಮೂನೆ-7 ಹಾಗೂ ಇತರೆ ಪಿಂಚಣಿ ಸಂಬಂಧಿತ ಎಲ್ಲಾ ದಾಖಲೆಗಳನ್ನು HRMS-2 ತಂತ್ರಾಂಶದ ಮೂಲಕವೇ ಸ್ವಯಂಚಾಲಿತವಾಗಿ ಸೃಜಿಸಬೇಕಾಗಿದೆ. ಆದ್ದರಿಂದ, ನೌಕರರ ಸೇವಾ ವಿವರಗಳನ್ನು ESR ನಲ್ಲಿ ಸಂಪೂರ್ಣವಾಗಿ, ನಿಖರವಾಗಿ ಹಾಗೂ ಕಾಲಮಿತಿಯೊಳಗೆ ಸೆರೆಹಿಡಿಯುವುದು ಅನಿವಾರ್ಯವಾಗಿದೆ.
ಈ ಮಧ್ಯೆ ನೌಕರರ ESR ದತ್ತಾಂಶವು HRMS-2 ತಂತ್ರಾಂಶದಲ್ಲಿ ಪೂರ್ಣವಾಗಿ ಲಭ್ಯವಿರದಿದ್ದಲ್ಲಿ, ಸಂಬಂಧಿತ ನೌಕರರು/ಅಧಿಕಾರಿಗಳ ವರ್ಗಾವಣೆ, ಮುಂಬಡ್ತಿ, ಹಿಂಬಡ್ತಿ, ನಿಯೋಜನೆ ಹಾಗೂ ಇತರ ಸೇವಾ ಸಂಬಂಧಿತ ಪ್ರಕ್ರಿಯೆಗಳ ಆದೇಶಗಳನ್ನು HRMS-2 ನಲ್ಲಿ ಸೃಜಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, HRMS-1 ತಂತ್ರಾಂಶದಲ್ಲಿರುವ ಸೇವಾ ಮಾಹಿತಿಯನ್ನು HRMS-2ನ ESR (Legacy) ಗೆ ವರ್ಗಾಯಿಸಲಾಗುತ್ತಿದ್ದು, ವರ್ಗಾವಣೆಯ ನಂತರ ಯಾವುದೇ ತಿದ್ದುಪಡಿಗೆ ಅವಕಾಶ ಇರುವುದಿಲ್ಲ ಹಾಗೂ HRMS-1.0 ನಲ್ಲಿ Basic Employee Details ನ್ನು ಸಂಪೂರ್ಣವಾಗಿ ಸ್ಥಗಿತಗೊಳ್ಳಲಾಗುವುದು ಎಂಬ ಕಾರಣದಿಂದ, ವರ್ಗಾವಣೆಗೆ ಮುನ್ನ ಸೇವಾ ಮಾಹಿತಿಯ ಪರಿಶೀಲನೆ ಮತ್ತು ತಿದ್ದುಪಡಿ ಅತ್ಯಗತ್ಯವಾಗಿದೆ. ಈ ಬಗ್ಗೆ ನಿರ್ದೇಶನಾಲಯದಿಂದ ಹಲವು ಸುತ್ತೋಲೆಗಳನ್ನು ಹೊರಡಿಸಲಾಗಿದೆ.
ಇದಲ್ಲದೆ, ಎಪ್ರಿಲ್-2021 ನಂತರ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡ ನೌಕರರ ಸೇವಾ ವಹಿಯನ್ನು ESR ಮೂಲಕವೇ ನಿರ್ವಹಿಸುವಂತೆ ಹಾಗೂ ಮುಂದಿನ ಒಂದು ವರ್ಷದೊಳಗೆ ನಿವೃತ್ತಿಯಾಗಲಿರುವ ಎಲ್ಲಾ ನೌಕರರ ESR ಮಾಹಿತಿಯನ್ನು ತಕ್ಷಣವೇ ತಯಾರಿಸಿ ಪ್ರಕಟಿಸಬೇಕೆಂದು ಸೂಚಿಸಲಾಗಿದ್ದು, ಸೂಚಿಸಿದಂತೆ ESH ಮಾಹಿತಿ ಪೂರ್ಣಗೊಳ್ಳದಿದ್ದಲ್ಲಿ ಸಂಬಂಧಿತ ನೌಕರರ Form-7 ಹಾಗೂ EPPO ತಯಾರಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಆದ್ದರಿಂದ ಈ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲು ಈ ಕೆಳಕಂಡಂತೆ ಆದೇಶಿಸಿದೆ.
ಏಪ್ರಿಲ್-2021 ನಂತರ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡ ನೌಕರರ ಸೇವಾ ವಹಿಯನ್ನು ESR ಮೂಲಕವೇ ನಿರ್ವಹಿಸಬೇಕಾಗಿರುವುದರಿಂದ ಹಾಗೂ ESR ಮಾಹಿತಿ ಪೂರ್ಣಗೊಳ್ಳದಿದ್ದಲ್ಲಿ ಸಂಬಂಧಿತ ನೌಕರರ Form-7 ಹಾಗೂ EPPO ತಯಾರಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ಮುಂದಿನ ಒಂದು ವರ್ಷದೊಳಗೆ ನಿವೃತ್ತಿಯಾಗಲಿರುವ ಎಲ್ಲಾ ನೌಕರರ ESR ಮಾಹಿತಿಯನ್ನು ತಕ್ಷಣವೇ ತಯಾರಿಸಿ, ಪ್ರಕಟಿಸಲು ಈ ಕೆಳಕಂಡಂತೆ ಕ್ರಮವಹಿಸುವಂತೆ ಎಲ್ಲಾ ಇಲಾಖೆಗಳಿಗೆ ಆದೇಶಿಸಿದೆ.
1. ನಿವೃತ್ತಿಗೆ ಸಮೀಪದಲ್ಲಿರುವ ನೌಕರರು:
ಎಲ್ಲಾ ಇಲಾಖೆಗಳು ಮುಂದಿನ ಒಂದು ವರ್ಷದೊಳಗೆ ಹಾಗೂ ಪ್ರಸ್ತುತ ಆರ್ಥಿಕ ವರ್ಷದೊಳಗೆ ನಿವೃತ್ತಿಯಾಗಲಿರುವ ಎಲ್ಲಾ ಸರ್ಕಾರಿ ನೌಕರರ ESR (Electronic Service Register) ವಿವರಗಳನ್ನು ಕಡ್ಡಾಯವಾಗಿ ತಯಾರಿಸಿ, ಪರಿಶೀಲಿಸಿ ಹಾಗೂ ಸಂಪೂರ್ಣವಾಗಿ ನವೀಕರಿಸಬೇಕು.
2. HRMS-2 ರಲ್ಲಿನ ಡೇಟಾ ಅವಶ್ಯಕತೆ:
ಎಲ್ಲಾ ಇಲಾಖೆಗಳು ಈಗಾಗಲೇ HRMS-2 ತಂತ್ರಾಂಶಕ್ಕೆ ಸೇರ್ಪಡೆಗೊಂಡಿರುತ್ತವೆ. ಭವಿಷ್ಯದಲ್ಲಿ HRMS-1 ತಂತ್ರಾಂಶ ಕಾರ್ಯನಿರ್ವಹಣೆ ನಿಲ್ಲಿಸಿದ ಸಂದರ್ಭದಲ್ಲಿ, HRMS-1 ನಿಂದ ಸೇವಾ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನೌಕರರ ಸೇವಾ ವಿವರಗಳನ್ನು ESR ನಲ್ಲಿ ತುರ್ತಾಗಿ ಹಾಗೂ
ಸಂಪೂರ್ಣವಾಗಿ ನವೀಕರಿಸಲು ಸೂಚಿಸಿದೆ.
3. ESR (Legacy)ಗೆ ವರ್ಗಾವಣೆ:
HRMS-1 ತಂತ್ರಾಂಶದ ಸೇವಾವಹಿ ಭಾಗದಲ್ಲಿ ಲಭ್ಯವಿರುವ ಅಧಿಕಾರಿ/ನೌಕರರ ಸೇವಾ ವಿವರಗಳನ್ನು HRMS-2 ಯೋಜನೆಯ ಭಾಗವಾಗಿರುವ ESR (Legacy) ಗೆ ವರ್ಗಾಯಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ವರ್ಗಾವಣೆ ನಂತರ ಯಾವುದೇ ತಿದ್ದುಪಡಿ ಮಾಡುವ ಅವಕಾಶ ಇರುವುದಿಲ್ಲ, ಹೀಗಾಗಿ, HRMS-1 ನಲ್ಲಿ ಲಭ್ಯವಿರುವ ತಮ್ಮ ಇಲಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರ ಸೇವಾ ವಹಿಯ ಮಾಹಿತಿಯನ್ನು ಕೂಡಲೇ ಪರಿಶೀಲಿಸಿ, ಅವಶ್ಯಕ ತಿದ್ದುಪಡಿ/ಸೇರಿಕೆಗಳನ್ನು ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆಯನ್ನು ESR Publish ಆಗುವ ಮೊದಲು ಪೂರ್ಣಗೊಳಿಸಬೇಕು.
4. DDO/HOD ಮಟ್ಟದ ದತ್ತಾಂಶ ಪರಿಷ್ಕರಣಾ ವಿನಂತಿಗಳ ನಿರ್ವಹಣೆ:
ಅನೇಕ ಇಲಾಖೆಗಳಲ್ಲಿಂದ HOD ಮಟ್ಟದಲ್ಲಿ DDO ಗಳಿಂದ ಸಲ್ಲಿಸಲಾದ ತಿದ್ದುಪಡಿ ಹಾಗೂ ನವೀಕರಣ ವಿನಂತಿಗಳನ್ನು ವಿಳಂಬವಾಗಿ ನಿರ್ವಹಿಸಲಾಗುತ್ತಿರುವುದು ವರದಿಯಾಗಿದೆ. ಆದ್ದರಿಂದ, HRMS-1 ಡೇಟಾದ ತಿದ್ದುಪಡಿ ಹಾಗೂ ನವೀಕರಣಕ್ಕೆ ಸಂಬಂಧಿಸಿದ ಎಲ್ಲಾ ವಿನಂತಿಗಳನ್ನು ಮೊದಲ ಆದ್ಯತೆಯ ಮೇಲೆ ತ್ವರಿತವಾಗಿ
ನಿರ್ವಹಿಸಬೇಕು.
5. ಪಿಂಚಣಿ ಪ್ರಸ್ತಾವನೆಗಳ ಅನ್‌ಲೈನ್ ಪ್ರಕ್ರಿಯೆ:
ಪ್ರಧಾನ ಮಹಾಲೇಖಪಾಲರ ದಿ: 09.01.2026 ರ ಪತ್ರದಂತೆ, ದಿನಾಂಕ: 01.04.2026 ರಿಂದ ಎಲ್ಲಾ ಪಿಂಚಣಿ ಪ್ರಸ್ತಾವನೆಗಳು (Form-7) ಸಂಬಂಧಿತ ಸೇವಾ ದಾಖಲೆಗಳೊಂದಿಗೆ ಕೇವಲ ಆನ್‌ಲೈನ್ ಮಾಧ್ಯಮದ ಮೂಲಕ ಸಂಪೂರ್ಣವಾಗಿ ಸಿದ್ಧಪಡಿಸಲಾದ ESR ಒಳಗೊಂಡಂತೆ ಲಗತ್ತಿಸಿ ರವಾನಿಸತಕ್ಕದ್ದು. ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಆಇ-ಪಿಇಎನ್ /39/2025, ದಿನಾಂಕ: 14.03.2025ರಂತೆ Form-7, ಖಜಾನೆ- 2 ತಂತ್ರಾಂಶದ ಮುಖಾಂತರ ಪಿಂಚಣಿಗಳ ಅರ್ಜಿ, HRMS-2.0 ನಲ್ಲಿ ಪ್ರಕ್ರಿಯೆಗೊಳ್ಳುವವರೆಗೂ ಮುಂದುವರೆಯುವುದು.
6. ಅನುಷ್ಠಾನಕ್ಕೆ ಸಂಬಂಧಿಸಿದ ಸೂಚನೆ:
ಈ ಕುರಿತು ಸಂಬಂಧಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ವಿಶೇಷ ಗಮನಹರಿಸಿ, ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ನೌಕರರ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿಯಲ್ಲಿಯೇ ಅನುಷ್ಠಾನಗೊಳಿಸಬೇಕು. ಸಿಬ್ಬಂದಿಗಳ ESR ನಿರ್ವಹಣೆಯಲ್ಲಿ ಯಾವುದೇ ಅಡಚಣೆ ಎದುರಾದಲ್ಲಿ ತಕ್ಷಣವೇ HRMS ತಂಡವನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. (HRMS ತಂತ್ರಾಂಶದಲ್ಲಿ ವರದಿ ಮಾಡುವುದು) ಈ ಕಾರ್ಯವನ್ನು ಮಾರ್ಚ್-2026 ರೊಳಗೆ ಸಂಪೂರ್ಣವಾಗಿ ಪೂರ್ಣಗೊಳಿಸಬೇಕು ಎಂಬುದಾಗಿ ಆದೇಶದಲ್ಲಿ ತಿಳಿಸಿದೆ.

ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ‘115 ಹೊಸ KSRTC ಬಸ್ಸು’ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
BREAKING: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಒಂದೇ ದಿನದಲ್ಲಿ ಹೂಡಿಕೆದಾರರ ₹5.87 ಲಕ್ಷ ಕೋಟಿ ಭಸ್ಮ | Share Market








