Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ, ಕರ್ನಾಟಕವನ್ನ 10 ಬಾರಿ ಮಾರಾಟ ಮಾಡ್ತಾರೆ : ಶಾಸಕ ಯತ್ನಾಳ್ ಹೇಳಿಕೆ

ತಲೆ ಇಲ್ಲದಿದ್ದರೂ 18 ತಿಂಗಳು ಬದುಕಿದ್ದ ‘ಕೋಳಿ’! ಮಾಲೀಕನಿಗೆ ಲಕ್ಷ ಲಕ್ಷ ಸಂಪಾದಿಸಿಕೊಟ್ಟ ಅಸಲಿ ರಹಸ್ಯವೇನು?

ಮನೆ ಖರೀದಿಸುವ ಮುನ್ನ ಎಚ್ಚರ! ಈ ತಪ್ಪು ಮಾಡಿದರೆ ಸಾಲದ ಸುಳಿಗೆ ಸಿಲುಕುವುದು ಗ್ಯಾರಂಟಿ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `SSLC-PUC’ ವಿದ್ಯಾರ್ಥಿಗಳೇ ಗಮನಿಸಿ : ನಿಮಗೆ `ಪರೀಕ್ಷೆ’ ಬಗ್ಗೆ ಗೊಂದಲ, ಸಮಸ್ಯೆಗಳಿದ್ದಲ್ಲಿ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ !
KARNATAKA

ರಾಜ್ಯದ `SSLC-PUC’ ವಿದ್ಯಾರ್ಥಿಗಳೇ ಗಮನಿಸಿ : ನಿಮಗೆ `ಪರೀಕ್ಷೆ’ ಬಗ್ಗೆ ಗೊಂದಲ, ಸಮಸ್ಯೆಗಳಿದ್ದಲ್ಲಿ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ !

By kannadanewsnow57

ಬೆಂಗಳೂರು: ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ಕ್ಕೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಇದೇ ಹೊತ್ತಿನಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಗೊಂದಲ ನಿವಾರಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಸಂಬಂಧ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಶಿಕ್ಷಣ ಇಲಾಖೆಯಿಂದ 080 23310076, 080 23310075 ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಕರೆ ಮಾಡಿ, ಪರೀಕ್ಷೆ ಬಗೆಗಿನ ಗೊಂದಲ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂಬುದಾಗಿ ತಿಳಿಸಿದೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಸಂಬಂಧ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಶಿಕ್ಷಣ ಇಲಾಖೆಯಿಂದ 080 23310076, 080 23310075 ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಕರೆ ಮಾಡಿ, ಪರೀಕ್ಷೆ ಬಗೆಗಿನ ಗೊಂದಲ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. pic.twitter.com/wugALmwclf

— DIPR Karnataka (@KarnatakaVarthe) February 18, 2026

ಕರ್ನಾಟಕ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಏ.7ಕ್ಕೆ, SSLC ಪರೀಕ್ಷೆ-1ರದ್ದು ಏ.24ಕ್ಕೆ ಪ್ರಕಟ

ದ್ವಿತೀಯ ಪಿಯುಸಿ ಪರೀಕ್ಷೆ-1 ದಿನಾಂಕ 28-02-2026ರಿಂದ ಆರಂಭಗೊಂಡು, 17-03-2026ರವರೆಗೆ ನಡೆಯಲಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ-1ರದ್ದು ದಿನಾಂಕ 18-03-2026ರಿಂದ ಆರಂಭಗೊಂಡು, 02-04-2026ಕ್ಕೆ ಮುಕ್ತಾಯಗೊಳ್ಳಲಿದೆ. ಈ ಪರೀಕ್ಷೆಗಳ ಫಲಿತಾಂಶ ಏಪ್ರಿಲ್ ನಲ್ಲಿ ಪ್ರಕಟಗೊಳ್ಳಲಿದೆ ಎಂಬುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆ-1ಕ್ಕೆ 9,02,889 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ-1 1,217 ಪರೀಕ್ಷಾ ಕೇಂದ್ರಗಳಲ್ಲಿ ನಡೆದರೇ, ಎಸ್ ಎಸ್ ಎಲ್ ಸಿ ಪರೀಕ್ಷೆ-1 2,871 ಕೇಂದ್ರಗಳಲ್ಲಿ ನಡೆಯಲಿದೆ. ಇಂತಹ ಪರೀಕ್ಷೆಯ ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸುವ ಸಂಭಾವ್ಯ ದಿನಾಂಕವು 07-04-2026 ಆಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶವನ್ನು ದಿನಾಂಕ 24-04-2026ರಂದು ಪ್ರಕಟವಾಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿಸಿದ್ದಾರೆ.

ಇನ್ನೂ ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ 25-04-2026ರಿಂದ 09-05-2026ರವರೆಗೆ ನಡೆಯಲಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ-2 ದಿನಾಂಕ 18-05-2026ರಿಂದ 25-05-2026ರವರೆಗೆ ನಡೆಯಲಿದೆ. ಇದರ ಸಂಭಾವ್ಯ ಫಲಿತಾಂಶವನ್ನು ದ್ವಿತೀಯ ಪಿಯುಸಿ ಪರೀಕ್ಷೆ-2ರದ್ದು ದಿನಾಂಕ 22-05-2026, ಎಸ್ ಎಸ್ ಎಲ್ ಸಿ ಪರೀಕ್ಷೆ-2ರದ್ದು ದಿನಾಂಕ 01-06-2026ರಂದು ಪ್ರಕಟವಾಗುವ ಸಾಧ್ಯತೆ ಇದೆ ಅಂತ ಹೇಳಿದ್ದಾರೆ.

Attention `SSLC-PUC' students of the state: If you have any confusion or problems regarding the `exam' just call this number!
Share. Facebook Twitter LinkedIn WhatsApp Email

Related Posts

ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ, ಕರ್ನಾಟಕವನ್ನ 10 ಬಾರಿ ಮಾರಾಟ ಮಾಡ್ತಾರೆ : ಶಾಸಕ ಯತ್ನಾಳ್ ಹೇಳಿಕೆ

1 Min Read

BREAKING : ದಾವಣಗೆರೆಯಲ್ಲಿ ಆಕ್ಸೆಲ್ ತುಂಡಾಗಿ ಸಾರಿಗೆ ಬಸ್ ಪಲ್ಟಿ : ಓರ್ವ ವಿದ್ಯಾರ್ಥಿ ಸಾವು, 50 ಪ್ರಯಾಣಿಕರಿಗೆ ಗಂಭೀರ ಗಾಯ!

1 Min Read

ಈ ಒಂದು ಮಂತ್ರದಿಂದ ನಿಮ್ಮ ಸಾಲ ತೀರುತ್ತೆ, ಮನಿ ಲೋನ್ ಋಣ ತೀರಿಸಲು ಈ ಗುಪ್ತ ರಹಸ್ಯ ತಂತ್ರ ಪ್ರಯೋಗ ಮಾಡಿದ್ರೆ ಸಾಕು…!

5 Mins Read
Recent News

ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ, ಕರ್ನಾಟಕವನ್ನ 10 ಬಾರಿ ಮಾರಾಟ ಮಾಡ್ತಾರೆ : ಶಾಸಕ ಯತ್ನಾಳ್ ಹೇಳಿಕೆ

ತಲೆ ಇಲ್ಲದಿದ್ದರೂ 18 ತಿಂಗಳು ಬದುಕಿದ್ದ ‘ಕೋಳಿ’! ಮಾಲೀಕನಿಗೆ ಲಕ್ಷ ಲಕ್ಷ ಸಂಪಾದಿಸಿಕೊಟ್ಟ ಅಸಲಿ ರಹಸ್ಯವೇನು?

ಮನೆ ಖರೀದಿಸುವ ಮುನ್ನ ಎಚ್ಚರ! ಈ ತಪ್ಪು ಮಾಡಿದರೆ ಸಾಲದ ಸುಳಿಗೆ ಸಿಲುಕುವುದು ಗ್ಯಾರಂಟಿ.!

BREAKING : ದಾವಣಗೆರೆಯಲ್ಲಿ ಆಕ್ಸೆಲ್ ತುಂಡಾಗಿ ಸಾರಿಗೆ ಬಸ್ ಪಲ್ಟಿ : ಓರ್ವ ವಿದ್ಯಾರ್ಥಿ ಸಾವು, 50 ಪ್ರಯಾಣಿಕರಿಗೆ ಗಂಭೀರ ಗಾಯ!

State News
KARNATAKA

ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ, ಕರ್ನಾಟಕವನ್ನ 10 ಬಾರಿ ಮಾರಾಟ ಮಾಡ್ತಾರೆ : ಶಾಸಕ ಯತ್ನಾಳ್ ಹೇಳಿಕೆ

By kannadanewsnow05 KARNATAKA 1 Min Read

ಕೊಪ್ಪಳ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಈಗಾಗಲೇ ಬಹುದೊಡ್ಡ ಸರ್ಕಸ್ ನಡೆದಿದ್ದು, ಇದರ ಮಧ್ಯ ಬಿಜೆಪಿ ಉಚ್ಚಾಟಿತ ಶಾಸಕ…

BREAKING : ದಾವಣಗೆರೆಯಲ್ಲಿ ಆಕ್ಸೆಲ್ ತುಂಡಾಗಿ ಸಾರಿಗೆ ಬಸ್ ಪಲ್ಟಿ : ಓರ್ವ ವಿದ್ಯಾರ್ಥಿ ಸಾವು, 50 ಪ್ರಯಾಣಿಕರಿಗೆ ಗಂಭೀರ ಗಾಯ!

ಈ ಒಂದು ಮಂತ್ರದಿಂದ ನಿಮ್ಮ ಸಾಲ ತೀರುತ್ತೆ, ಮನಿ ಲೋನ್ ಋಣ ತೀರಿಸಲು ಈ ಗುಪ್ತ ರಹಸ್ಯ ತಂತ್ರ ಪ್ರಯೋಗ ಮಾಡಿದ್ರೆ ಸಾಕು…!

ತಂಗಿಯನ್ನೇ ಮದುವೆಯಾದ ಅಣ್ಣ, ದೇವನಹಳ್ಳಿಯಲ್ಲೊಂದು ವಿಚಿತ್ರ ಘಟನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.