Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿನ ಬಾಣಸವಾಡಿ ರೈಲ್ವೆ ಅಂಡರ್‌ಪಾಸ್ ಬಳಿ ಮತ್ತೊಂದು ಅಂಡರ್ ಪಾಸ್‌ಗೆ ಸ್ಥಳ ಪರಿಶೀಲಿಸಿದ ಸಚಿವ ಕೆ.ಜೆ.ಜಾರ್ಜ್

21/02/2026 8:38 PM

ನೀವು ತಿಳಿದುಕೊಳ್ಳಲೇಬೇಕಾದ 10 ತೆರಿಗೆ ಮುಕ್ತ ಆದಾಯ ಮೂಲಗಳಿವು.! ಹಣ ಗಳಿಸಲು ಉತ್ತಮ ಮಾರ್ಗ!

21/02/2026 7:58 PM

ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಗೆಳತಿ ಸೋಫಿ ಶೈನ್ ವಿವಾಹ: ಪೋಟೋ ವೈರಲ್ | Shikhar Dhawan

21/02/2026 7:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರೇ ಗಮನಿಸಿ : ಈ ರೀತಿ ಮೊಬೈಲ್ ನಲ್ಲೇ ನಿಮ್ಮೂರಿನ `ಕಂದಾಯ ನಕ್ಷೆ’ ನೋಡಬಹುದು.!
KARNATAKA

ಸಾರ್ವಜನಿಕರೇ ಗಮನಿಸಿ : ಈ ರೀತಿ ಮೊಬೈಲ್ ನಲ್ಲೇ ನಿಮ್ಮೂರಿನ `ಕಂದಾಯ ನಕ್ಷೆ’ ನೋಡಬಹುದು.!

By kannadanewsnow5706/11/2025 6:45 AM

ಬೆಂಗಳೂರು: ಕಂದಾಯ ಇಲಾಖೆಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಆಯಾ ಊರಿನ ವ್ಯಾಪ್ತಿಯ ನಕ್ಷೆಯನ್ನು ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಲು ಅವಕಾಶ ನೀಡಲಾಗುತ್ತಿದೆ. ನೀವು ನಿಮ್ಮೂರಿನ ಕಂದಾಯ ನಕ್ಷೆಯನ್ನು ಕುಳಿತಲ್ಲೇ ಡೌನ್ ಲೋಡ್ ಮಾಡಿಕೊಳ್ಳಲು ಮುಂದಿನ ಹಂತಗಳನ್ನು ಅನುಸರಿಸಿ.

ಅತಿ ಪುರಾತನ ಕಾಲದಿಂದಲೂ ಯಾವುದೇ ರೀತಿಯ ಸರ್ಕಾರದಲ್ಲಾಗಲೀ, ಅಂದರೆ, ಚಕ್ರಾದಿsಪತ್ಯ, ರಾಜಪ್ರಭುತ್ವ, ನಿರಂಕುಶಪ್ರಭುತ್ವ ಅಥವಾ ಪ್ರಜಾಪ್ರಭುತ್ವ ಕಾಲದಿಂದಲೂ ಭೂನಿರ್ವಹಣೆ, ಭೂಕಂದಾಯ ಸಂಗ್ರಹಣೆ, ಭೂಮಾಲಿಕತ್ವ ನಿರ್ಬಂಧನೆ ಮತ್ತು ಭೂ ಉಪಯೋಗ ಮತ್ತು ಭೂಸ್ವಾಧೀನ ಹಕ್ಕುಗಳು ಮುಂತಾದವುಗಳೆಲ್ಲವೂ ರಾಜ್ಯ ಸರ್ಕಾರದ ಪ್ರಮುಖ ಜವಾಬ್ದಾರಿಗಳಾಗಿದ್ದವು. ಪ್ರಾಚೀನ ಭಾರತದಲ್ಲಿ ವಾಸ್ತವವಾಗಿ ಸರ್ಕಾರದಲ್ಲಿ ಎರಡು ಇಲಾಖೆಗಳು ಮಾತ್ರ ಅಸ್ತಿತ್ವದಲ್ಲಿರುತ್ತಿದ್ದವು.

ಮೊದಲನೆಯದೆಂದರೆ ಭೂನಿರ್ವಹಣೆ ಮತ್ತು ಭೂಕಂದಾಯ ಇಲಾಖೆ ಮತ್ತು ಎರಡನೆಯದೆಂದರೆ ರಾಜ್ಯವನ್ನು ಬಾಹ್ಯ ದಾಳಿಯ ವಿರುದ್ಧ ಹೋರಾಡಲು ಅಗಾಧವಾದ ಭೂಸೇನೆಯ ರಕ್ಷಣಾ ಇಲಾಖೆ. ಮೊದಲನೇ ಇಲಾಖೆಯು ರಾಜಸ್ವ ಸಂಗ್ರಹಣೆ ಹಾಗೂ ಒಳಾಡಳಿತ ನಿರ್ವಹಣೆಯನ್ನು ಹಾಗೂ ಎರಡನೇ ಇಲಾಖೆಯು ಪ್ರಾಂತ್ಯಗಳ ರಕ್ಷಣೆ ಮತ್ತು ಸಮಗ್ರತೆಯನ್ನು ಬಾಹ್ಯದಾಳಿಗೀಡಾಗುವುದರಿಂದ ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದವು. ಸಮಾಜವು ಹೆಚ್ಚು ವೃದ್ದಿಯಾದಂತೆ ವೃತ್ತಿಗಳಲ್ಲಿನ ತಾರತಮ್ಯ, ರಾಜ್ಯದ ಕ್ಲಿಷ್ಠಕರವಾದ ಆಡಳಿತ ನಿರ್ವಹಣೆಗೆ ವಿಶಿಷ್ಠ ಇಲಾಖೆಗಳು ಹೊರಹೊಮ್ಮಿದವು.

ಕಾಲ ಬದಲಾವಣೆಯಾದಂತೆ ಹಲವಾರು ಇಲಾಖೆಗಳು ರೂಪಿತಗೊಂಡು ಅಸ್ತಿತ್ವಕ್ಕೆ ಬಂದವು. ವಾಸ್ತವದ ಸಂಗತಿಯೆಂದರೆ ಪ್ರಾರಂಭದಲ್ಲಿ ಎಲ್ಲಾ ಇಲಾಖೆಗಳು ಕಂದಾಯ ಇಲಾಖೆಯಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು, ನಂತರ ಒಂದೊಂದಾಗಿ ಪ್ರತ್ಯೇಕಗೊಂಡವು. ಏನೇ ಆದರೂ ಇಂದಿಗೂ ಸಹ ರಾಜ್ಯದ ಹಾಗೂ ಸಮಾಜದ ಪ್ರಮುಖವಾದ ದೈನಂದಿನ ಕೆಲಸ ಕಾರ್ಯಗಳನ್ನು ಕಂದಾಯ ಇಲಾಖೆಯೇ ನಿರ್ವಹಿಸುತ್ತಿದೆ. ಈ ಕಾರಣಗಳಿಂದಾಗಿಯೇ ಸರ್ಕಾರದಲ್ಲಿ ಕಂದಾಯ ಇಲಾಖೆಯು “ಮಾತೃ ಇಲಾಖೆ”ಯೆಂದು ಕರೆಯಲ್ಪಡುತ್ತದೆ.

ಇಂತ ಕಂದಾಯ ಇಲಾಖೆಯು ಕರ್ನಾಟಕದ ಜನರಿಗೆ ಪ್ರತಿ ಹಳ್ಳಿಯ ಕಂದಾಯ ನಕ್ಷೆಯನ್ನು ಆನ್ ಲೈನ್ ಮೂಲಕವೇ ಡೌನ್ ಲೋಡ್ ಮಾಡಿಕೊಳ್ಳೋದಕ್ಕೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ನೀವು https://landrecords.karnataka.gov.in/service3/ ಗೆ ಭೇಟಿ ನೀಡಿ.

ರಾಜ್ಯ ಸರಕಾರದ ಕಂದಾಯ ಇಲಾಖೆಯ ಈ ಅಧಿಕೃತ ಜಾಲತಾಣ ಭೇಟಿ ಮಾಡಿ ನಿಮ್ಮ ಜಮೀನಿನ ಕಂದಾಯ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಬವುದು. ಈ ನಕ್ಷೆಯಲ್ಲಿ ನಿಮ್ಮ ಗ್ರಾಮದಲ್ಲಿ ಒಟ್ಟು ಎಷ್ಟು ಸರ್ವೆ ನಂಬರ್ ಇವೆ ಅದರ ಗಡಿ, ಕಾಲುದಾರಿ, ಬಂಡಿದಾರಿ ಎಲ್ಲಿ ಎಲ್ಲಿ ಬರುತ್ತದೆ, ಕಾಲುವೆ, ,ತೆರೆದ ಬಾವಿ, ಗುಡ್ಡ, ಮನೆ, ಇತ್ಯಾದಿ ಸಂಪೂರ್ಣ ಮಾಹಿತಿ ನೋಡಬವುದು.

ಈ ಹಂತ ಅನುಸರಿಸಿ, ಕುಳಿತಲ್ಲೇ ಕಂದಾಯ ನಕ್ಷೆ ಡೌನ್ ಲೋಡ್ ಮಾಡಿ

https://landrecords.karnataka.gov.in/service3/ ಈ ಲಿಂಕ್ ಕ್ಲಿಕ್ ಮಾಡಿ, ಕಂದಾಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
ಈ ಮೇಲ್ಕಂಡ ಲಿಂಕ್ ಕ್ಲಿಕ್ ಮಾಡಿದ ನಂತ್ರ ನಿಮಗೆ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮದ ಆಯ್ಕೆಯನ್ನು ತೋರಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ.
ಇದಾದ ಬಳಿಕ ನಿಮ್ಮ ಹೋಬಳಿಯ ಸಂಪೂರ್ಣ ಹಳ್ಳಿಗಳ ಕಂದಾಯ ನಕ್ಷೆಯನ್ನು ಪಿಡಿಎಫ್ ಪಾರ್ಮೆಟ್ ನಲ್ಲಿ ತೋರಿಸಲಿದೆ.
ನೀವು ನಿಮಗೆ ಬೇಕಾದ ಹಳ್ಳಿಯ ಕಂದಾಯ ನಕ್ಷೆಯನ್ನು ಪಕ್ಕದಲ್ಲಿ ಕಾಣುವಂತ ಪಿಡಿಎಫ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

Attention public: This is how you can see your village's 'revenue map' on your mobile!
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಬಾಣಸವಾಡಿ ರೈಲ್ವೆ ಅಂಡರ್‌ಪಾಸ್ ಬಳಿ ಮತ್ತೊಂದು ಅಂಡರ್ ಪಾಸ್‌ಗೆ ಸ್ಥಳ ಪರಿಶೀಲಿಸಿದ ಸಚಿವ ಕೆ.ಜೆ.ಜಾರ್ಜ್

21/02/2026 8:38 PM2 Mins Read

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಬಿವೈ ವಿಜಯೇಂದ್ರ

21/02/2026 7:43 PM2 Mins Read

ಬದ್ಧತೆ, ಪಾರದರ್ಶಕತೆಯಿಂದ ನಾವು ಕೆಲಸ ಮಾಡುತ್ತಿದ್ದೇವೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

21/02/2026 7:37 PM2 Mins Read
Recent News

ಬೆಂಗಳೂರಿನ ಬಾಣಸವಾಡಿ ರೈಲ್ವೆ ಅಂಡರ್‌ಪಾಸ್ ಬಳಿ ಮತ್ತೊಂದು ಅಂಡರ್ ಪಾಸ್‌ಗೆ ಸ್ಥಳ ಪರಿಶೀಲಿಸಿದ ಸಚಿವ ಕೆ.ಜೆ.ಜಾರ್ಜ್

21/02/2026 8:38 PM

ನೀವು ತಿಳಿದುಕೊಳ್ಳಲೇಬೇಕಾದ 10 ತೆರಿಗೆ ಮುಕ್ತ ಆದಾಯ ಮೂಲಗಳಿವು.! ಹಣ ಗಳಿಸಲು ಉತ್ತಮ ಮಾರ್ಗ!

21/02/2026 7:58 PM

ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಗೆಳತಿ ಸೋಫಿ ಶೈನ್ ವಿವಾಹ: ಪೋಟೋ ವೈರಲ್ | Shikhar Dhawan

21/02/2026 7:51 PM

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಬಿವೈ ವಿಜಯೇಂದ್ರ

21/02/2026 7:43 PM
State News
KARNATAKA

ಬೆಂಗಳೂರಿನ ಬಾಣಸವಾಡಿ ರೈಲ್ವೆ ಅಂಡರ್‌ಪಾಸ್ ಬಳಿ ಮತ್ತೊಂದು ಅಂಡರ್ ಪಾಸ್‌ಗೆ ಸ್ಥಳ ಪರಿಶೀಲಿಸಿದ ಸಚಿವ ಕೆ.ಜೆ.ಜಾರ್ಜ್

By kannadanewsnow0921/02/2026 8:38 PM KARNATAKA 2 Mins Read

ಬೆಂಗಳೂರು : ಬಾಣಸವಾಡಿ ರೈಲ್ವೇ ನಿಲ್ದಾಣದ ಬಳಿಯ ಅಂಡರ್ ಪಾಸ್‌ನಲ್ಲಿ ಹೆಚ್ಚಿರುವ ಸಂಚಾರ ದಟ್ಟಣೆಗೆ ಪರಿಹಾರವಾಗಿ ಸಮೀಪದಲ್ಲೇ ನಿರ್ಮಿಸಲು ಉದ್ದೇಶಿಸಿರುವ…

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಬಿವೈ ವಿಜಯೇಂದ್ರ

21/02/2026 7:43 PM

ಬದ್ಧತೆ, ಪಾರದರ್ಶಕತೆಯಿಂದ ನಾವು ಕೆಲಸ ಮಾಡುತ್ತಿದ್ದೇವೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

21/02/2026 7:37 PM

ಶಿವಮೊಗ್ಗ: ಶ್ರೀ ಮಾರಿಕಾಂಬ ದೇವಿ ಜಾತ್ರೆ ಪ್ರಯುಕ್ತ ಈ ವಾಹನ ಸಂಚಾರ ಮಾರ್ಗ/ನಿಲುಗಡೆ ಬದಲಾವಣೆ

21/02/2026 7:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.