ಬೆಂಗಳೂರು: ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಯುತ್ತಿದೆ. ಮನೆ ಮನೆಗೆ ತೆರಳಿ ಗಣತಿದಾರರು ಜಾತಿಗಣತಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಾರ್ವಜನಿಕರಾದಂತ ನೀವು ಗಣತಿದಾರರು ಬರುವವರೆಗೂ ಕಾಯುವ ಅಗತ್ಯವಿಲ್ಲ. ಆನ್ ಲೈನ್ ನಲ್ಲಿಯೇ ಅರ್ಜಿ ತುಂಬಿ, ನಿಮ್ಮ ಮಾಹಿತಿಯನ್ನು ದಾಖಲಿಸಬಹುದಾಗಿದೆ.
ಹೌದು ನೀವು ಗಣತಿದಾರರನ್ನು ಕಾಯಬೇಕಾಗಿಲ್ಲ. ಆನ್ ಲೈನ್ ನ ಸಿಂಪಲ್ ಪ್ರೊಸಿಜರ್ ಮೂಲಕ ಸ್ವತಹ ನೀವೇ ಅಪ್ಲಿಕೇಷನ್ ಫಿಲ್ ಮಾಡಿ, ಸಬ್ ಮಿಟ್ ಮಾಡಬಹುದಾಗಿದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.. ಈ ಕಳಗಿನ ಹಂತ ಅನುಸರಿಸಿ, ಆನ್ ಲೈನ್ ನಲ್ಲೇ ಜಾತಿಗಣತಿ ಸಮೀಕ್ಷೆಯ ಎಲ್ಲಾ ಮಾಹಿತಿ ದಾಖಲಿಸಿ.
ಆನ್ ಲೈನ್ ನಲ್ಲಿ ಜಾತಿ ಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ, ನಿಮ್ಮ ಮಾಹಿತಿಯನ್ನು ಹೀಗೆ ದಾಖಲಿಸಿ
ಮೊದಲನೆಯದಾಗಿ ನೀವು https://kscbcelfdeclaration.karnataka.gov.in ಜಾಲತಾಣಕ್ಕೆ ಭೇಟಿ ನೀಡಬೇಕು.
ಅಲ್ಲದೇ ನಿಮ್ಮ ಬಾಗಿಲ ಮೇಲೆ ವಿದ್ಯುತ್ ಬಿಲ್ ಕಲೆಕ್ಟರ್ ಅಂಟಿಸಿರುವಂತ ಸ್ಟಿಕ್ಕರ್ ನಲ್ಲಿ ಇರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಸೆಲ್ಫ್ ಡಿಕ್ಲರೇಶನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.
ಬಳಕೆದಾರರು ಸ್ವಯಂ ಘೋಷಣೆಯೊಂದಿಗೆ ಮುಂದುವರಿಯಲು ನಾಗರಿಕ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಬಳೆಕಾದರರು ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಪಡೆಯಬೇಕು.
ಬಳಕೆದಾರರು ಲಾಗಿನ್ ಆಗಲು OTP ನಮೂದಿಸಬೇಕು.
ಪ್ರಾರಂಭಿಸಲು ಹೊಸ ಸಮೀಕ್ಷೆಯನ್ನು ಪ್ರಾರಂಭಿಸಿ ಮೇಲೆ ಕ್ಲಿಕ್ ಮಾಡಿ.
ಬಳಕೆದಾರರು ತಮ್ಮ UHID ಅನ್ನು ನಮೂದಿಸಿ ಮತ್ತು Verify UHID ಮೇಲೆ ಕ್ಲಿಕ್ ಮಾಡಬೇಕು.
ಬಳಕೆದಾರರು UHID ಹೊಂದಿಲ್ಲದಿದ್ದರೇ I don’t have a UHID ಮೇಲೆ ಕ್ಲಿಕ್ ಮಾಡಿ ಮತ್ತು ESCOM ಖಾತೆ ID ನಮೂದಿಸಿ.
ಸಮೀಕ್ಷೆಯಲ್ಲಿ ಭಾಗವಹಿಸುವವರ ಪೋಟೋ ಕ್ಲಿಕ್ ಮಾಡಿ, ಅಪ್ ಲೋಡ್ ಮಾಡಿ.
ಬಳಕೆದಾರರು ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕು.
ಪಡಿತರ ಚೀಟಿ ಆಗಿದ್ದರೇ ಬಳಕೆದಾರರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ Submit RC Info ಮೇಲೆ ಕ್ಲಿಕ್ ಮಾಡಿ. ನಂತ್ರ ಮುಂದುವರಿಸಲು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
ಆಧಾರ್ ಆಗಿದ್ದರೇ ಬಳಕೆದಾರರು ಮನೆಯ ಮುಖ್ಯಸ್ಥರ ಆಧಾರ್ ಕಾರ್ಡ್ ನಲ್ಲಿ ಇರುವಂತೆ ಹೆಸರನ್ನು ನಮೂದಿಸಬೇಕು. ಆಧಾರ್ ಓಟಿಪಿ ಅನ್ನು ದೃಢೀಕರಿಸಿ ಎನ್ನುವಲ್ಲಿ ಕ್ಲಿಕ್ ಮಾಡಬೇಕು.
ಬಳಕೆದಾರರು ಓಟಿಪಿ ಅಥವಾ ಫೇಸ್ ಕ್ಯಾಪ್ಚರ್ ಆಯ್ಕೆ ಮಾಡಬಹುದು. ಓಟಿಪಿ ಆಗಿದ್ದರೇ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಓಟಿಪಿಯನ್ನು ನಮೂದಿಸಿ.
ಫೇಸ್ ಕ್ಯಾಪ್ಚರ್ ಆಗಿದ್ದರೇ ಬಳಕೆದಾರರು CeG Face KYC ಮೊಬೈಲ್ ಅಪ್ಲಿಕೇಷನ್ ನೊಂದಿಗೆ ಕ್ಯೂ ಆರ್ ಕೋಟ್ ಅನ್ನು ಸ್ಕ್ಯಾನ್ ಮಾಡಬೇಕು.
ಬಳಕೆದಾರರು ಅಪ್ಲಿಕೇಷನ್ ಇರುವ ಪೋನ್ ನ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಸ್ಕ್ಯಾನ್ ಕ್ಯೂ ಆರ್ ಮೇಲೆ ಕ್ಲಿಕ್ ಮಾಡಬೇಕು. ಸ್ಕ್ಯಾನ್ ಮಾಡಿದ ನಂತ್ರ ಬಳಕೆದಾರರು ಅಪ್ಲಿಕೇಷನ್ ನಲ್ಲಿ ಫೇಸ್ ಕ್ಯಾಪ್ಚರ್ ಅನ್ನು ಪೂರ್ಣಗೊಳಿಸಬೇಕು.
ಇ-ಕೈವೈಸಿಯ ನಂತ್ರ ಬಳಕೆದಾರರು ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿ ಮುಂದುವರಿಸಬೇಕು. ಮನೆಯ ಮುಖ್ಯಸ್ಥರ ಇಕೈವೈಸಿ ನಂತ್ರ ಬಳಕೆದಾರರು ಕುಟುಂಬದ ಸದಸ್ಯರವನ್ನು ಸೇರಿಸಬೇಕು.
ಸದಸ್ಯರನ್ನು ಸೇರಿಸಲು ಸದಸ್ಯರನ್ನು ಸೇರಿಸಿ ಮೇಲೆ ಕ್ಲಿಕ್ ಮಾಡಿ ಮತ್ತು ಸದಸ್ಯರ ಇಕೈವೈಸಿಯನ್ನು ಪೂರ್ಣಗೊಳಿಸಿ.
ಸದಸ್ಯರ ಮಾಹಿತಿ ಪಡಿತರ ಚೀಟಿಯಿಂದ ಪಡೆಯಲಾಗಿದ್ದರೇ ಮತ್ತು ಯಾವುದೇ ಸದಸ್ಯರು ಜೀವಂತವಾಗಿಲ್ಲದಿದ್ದರೇ, ಸದಸ್ಯರನ್ನು ಮೃತ ಎಂದು ಗುರುತಿಸಬೇಕು. ಮೃತ ಮೇಲೆ ಕ್ಲಿಕ್ ಮಾಡಿ ಮತ್ತು ಖಚಿತ ಪಡಿಸಬೇಕು.
ಎಲ್ಲಾ ಕುಟುಂಬದ ಸದಸ್ಯರನ್ನು ಸೇರಿಸಿದ ನಂತ್ರ ಮನೆಯ ಮುಖ್ಯಸ್ಥರನ್ನು ಆಯ್ಕೆ ಮಾಡಿ, ಮೊಬೈಲ್ ಸಂಖ್ಯೆ ಮತ್ತು ಓಟಿಪಿ ನಮೂದಿಸಿ ಮತ್ತು ಸಮೀಕ್ಷೆಯನ್ನು ಪ್ರಾರಂಭಿಸಿ.
ಬಳಕೆದಾರರು ಎಲ್ಲಾ ಸದಸ್ಯರಿಗೆ ವೈಯಕ್ತಿಕ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಮತ್ತು ನಂತ್ರ ಕುಟುಂಬದ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು.
ಪ್ರಶ್ನಾವಳಿಯನ್ನು ಪೂರ್ಣಗೊಳಿಸಿದ ನಂತ್ರ ಸಲ್ಲಿಸಿ ಕ್ಲಿಕ್ ಮಾಡಿ.
ಬಳಕೆದಾರರು ಸಮೀಕ್ಷೆಯನ್ನು ಸಲ್ಲಿಸುವ ಮೊದಲು ಅದರ ಪೂರ್ವ ವೀಕ್ಷಣೆಯನ್ನು ನೋಡಬಹುದಾಗಿದೆ.
ಬಳಕೆದಾರರು ಸ್ವಯಂ ಘೋಷಣೆ ದಾಖಲೆಯ ಪೋಟೋವನ್ನು ಕ್ಲಿಕ್ ಮಾಡಿ ಅಪ್ ಲೋಡ್ ಮಾಡಬೇಕು.
ಸಲ್ಲಿಸಿದ ನಂತ್ರ ಬಳಕೆದಾರರಿಗೆ ಅಪ್ಲಿಕೇಷನ್ ಸಂಖ್ಯೆ ಸಿಗುತ್ತದೆ.







