ಬೆಂಗಳೂರು : ಬೆಂಗಳೂರಿನಲ್ಲಿ ಗುರುತು ಪರಿಚಯ ಇಲ್ಲದವರು ಬಂದು ಬಾಡಿಗೆ ಮನೆ ಇದೆ ಅಂತ ಕೇಳುತ್ತಾರೆ. ಇದೀಗ ಗೃಹ ಸಚಿವರು ನಗರದಲ್ಲಿ ಬಾಡಿಗೆ ಕೊಡುವವರ ಮೇಲೆ ಹದ್ದಿನ ಕಣ್ಣು ಇಡುತ್ತೇವೆ, ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಮೊನ್ನೆ ಬೆಂಗಳೂರಿನಲ್ಲಿ ಕೆಲ ಬಾಂಗ್ಲಾ ವಲಸಿಗರನ್ನ ಹಿಡಿದಿದ್ದೇವೆ, ಅವರನ್ನು ಕಳುಹಿಸುವ ಪ್ರಕ್ರಿಯೆ ಮಾಡ್ತಿದೀವಿ. ಕೊತ್ತನೂರು, ಲಿಂಗರಾಜಪುರದಲ್ಲಿ ಆಫ್ರಿಕಾದವರು ಜಾಸ್ತಿ ಇದ್ದಾರೆ. ಅಲ್ಲಿ ಬಾಡಿಗೆ ಕೊಡೋರು ಎಚ್ಚರಿಕೆ ವಹಿಸಬೇಕು. ದಾಖಲಾತಿ, ವೀಸಾ ಪರಿಶೀಲಿಸಬೇಕು ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಬಾಂಗ್ಲಾ ವಲಸಿಗರು ಬೆಂಗಳೂರಲ್ಲಿ ಬೀಡುಬಿಟ್ಟ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಾರ್ಡರ್ ನೋಡೋರು ಯಾರು? ಕೇಂದ್ರ ಸರ್ಕಾರ. ಅಲ್ಲಿ ರಕ್ಷಣಾ ಇಲಾಖೆ, ಕೇಂದ್ರ ಸರ್ಕಾರ ಇರುತ್ತದೆ. ಅಲ್ಲಿ ಬಿಗಿಯಾದ ಬಂದೋಬಸ್ತ್ ಮಾಡಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.








