ಬೆಂಗಳೂರು: ವಂದಾಲ ಹಾಗೂ ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (ಎಲ್‌ಸಿ ಸಂಖ್ಯೆ 62) ಕಾಮಗಾರಿಗಳ ಹಿನ್ನೆಲೆ ಭಾಗಶಃ ರದ್ದುಗೊಂಡಿದ್ದ ಕೆಳಕಂಡ ರೈಲುಗಳನ್ನು ಇದೀಗ ತಮ್ಮ ನಿಯಮಿತ ಮಾರ್ಗದಲ್ಲಿ ಎಂದಿನಂತೆ ಸಂಚರಿಸಲು ಪುನಃಸ್ಥಾಪಿಸಲಾಗಿದೆ.
ರೈಲು ಸಂಖ್ಯೆ 07329 ಎಸ್‌ಎಸ್‌ಎಸ್ ಹುಬ್ಬಳ್ಳಿ–ವಿಜಯಪುರ ವಿಶೇಷ ರೈಲು, ಮಾರ್ಚ್ 24ರಂದು, ಬಾಗಲಕೋಟೆ–ವಿಜಯಪುರ ನಡುವಿನ ಭಾಗಶಃ ರದ್ದತಿ ಹಾಗೂ ಬಾಗಲಕೋಟೆಯಲ್ಲಿ ಅಂತ್ಯಗೊಳ್ಳುವಂತೆ ತಿಳಿಸಲಾಗಿತ್ತು. ಇದೀಗ ಈ ರೈಲು ತನ್ನ ಪೂರ್ಣ ನಿಯಮಿತ ಮಾರ್ಗವಾದ ಎಸ್‌ಎಸ್‌ಎಸ್ ಹುಬ್ಬಳ್ಳಿ–ವಿಜಯಪುರದವರೆಗೆ ಸಂಚರಿಸಲಿದೆ.
ಅದೇ ರೀತಿ, ರೈಲು ಸಂಖ್ಯೆ 07330 ವಿಜಯಪುರ–ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ರೈಲು, ಮಾರ್ಚ್ 25ರಂದು ವಿಜಯಪುರ–ಬಾಗಲಕೋಟೆ ನಡುವೆ ಭಾಗಶಃ ರದ್ದತಿ ಹಾಗೂ ವಿಜಯಪುರ ಬದಲು ಬಾಗಲಕೋಟೆಯಿಂದ ಪ್ರಾರಂಭವಾಗುವಂತೆ ತಿಳಿಸಲಾಗಿತ್ತು. ಇದೀಗ ಈ ರೈಲೂ ತನ್ನ ಪೂರ್ಣ ನಿಯಮಿತ ಮಾರ್ಗವಾದ ವಿಜಯಪುರ–ಎಸ್‌ಎಸ್‌ಎಸ್ ಹುಬ್ಬಳ್ಳಿವರೆಗೆ ಸಂಚರಿಸಲಿದ್ದು, ಪ್ರಯಾಣಿಕರಿಗೆ ಸಂಪೂರ್ಣ ಸೇವೆ ನೀಡಲಿದೆ.
BREAKING: ಬಿಲಿಯನೇರ್-ಓನ್ಲಿ ಫ್ಯಾನ್ಸ್ ಮಾಲೀಕ ಲಿಯೊನಿಡ್ ರಾಡ್ವಿನ್ಸ್ಕಿ ವಿಧಿವಶ | Leonid Radvinsky
EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!








