ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ಈ ಮಾರ್ಗದಲ್ಲಿ ಬೇಡಿಗೆಯ ಮೇಲೆ ವಿಶೇಷ ರೈಲು ಸಂಚಾರಕ್ಕೆ ನೈರುತ್ಯ ರೈಲ್ವೆ ವ್ಯವಸ್ಥೆ ಮಾಡಿದೆ. ಇದಲ್ಲದೇ ರೈಲು ಸಂಖ್ಯೆ.16595/16596 KSR ಬೆಂಗಳೂರು – ಕಾರವಾರ – KSR ಬೆಂಗಳೂರು ಎಕ್ಸ್ಪ್ರೆಸ್ಅದೇ ರೈಲು ಸಂಖ್ಯೆಗಳೊಂದಿಗೆ ಎಕ್ಸ್ಪ್ರೆಸ್ ರೈಲು ಆಗಿ ಮುಂದುವರಿಯುತ್ತದೆ ಎಂದು ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಯಶವಂತಪುರ ಮತ್ತು ಹೈದರಾಬಾದ್ ನಡುವೆ ಬೇಡಿಕೆಯ ಮೇಲೆ ಒಂದು ಟ್ರಿಪ್ ಎಕ್ಸ್ಪ್ರೆಸ್ ವಿಶೇಷ (TOD) ರೈಲನ್ನು ಕೆಳಗೆ ವಿವರಿಸಿದಂತೆ ನಡೆಸಲಾಗುವುದು ಎಂದಿದೆ.
‘ವಂಡರ್ಲಾ’ ವತಿಯಿಂದ ನೂತನ ‘ಸ್ಕೈ ಟಿಲ್ಟ್’ ರೈಡ್ ಪರಿಚಯ: ‘ನಟಿ ಮೇಘನಾ ರಾಜ್’ ಉದ್ಘಾಟನೆ | Wonderla Bangalore
ರೈಲು ಸಂಖ್ಯೆ.07153 ಹೈದರಾಬಾದ್ – ಯಶವಂತಪುರ ವಿಶೇಷ ಎಕ್ಸ್ಪ್ರೆಸ್ 23.12.2022 ರಂದು 21.00 ಗಂಟೆಗೆ ಹೈದರಾಬಾದ್ನಿಂದ ಹೊರಟು ಮರುದಿನ 10.30 ಗಂಟೆಗೆ ಯಶವಂತಪುರವನ್ನು ತಲುಪುತ್ತದೆ.
ಹಿಂತಿರುಗುವ ದಿಕ್ಕಿನಲ್ಲಿ, ರೈಲು ನಂ.07154 ಯಶವಂತಪುರ – ಹೈದರಾಬಾದ್ ಎಕ್ಸ್ಪ್ರೆಸ್ ವಿಶೇಷವು ಯಶವಂತಪುರದಿಂದ 24.12.2022 ರಂದು 17.20 ಗಂಟೆಗೆ ಹೊರಟು ಮರುದಿನ 07.40 ಗಂಟೆಗೆ ಹೈದರಾಬಾದ್ಗೆ ತಲುಪುತ್ತದೆ.
ರೈಲು ಮಾರ್ಗದಲ್ಲಿ ಬೇಗಂಪೇಟ್, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರು, ಸೇಡಂ, ಸೂಳೇಹಳ್ಳಿ, ಯಾದಗಿರಿ, ರಾಯಚೂರು, ಮಂತ್ರಾಲಯ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಮತ್ತು ಯಲಹಂಕದಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆ ಇರುತ್ತದೆ.
BREAKING NEWS: ಡಿ.23 ರಂದು ವಿಧಾನಪರಿಷತ್ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ಘೋಷಣೆ
ರೈಲು 2-ಎಸಿ ಟೂ ಟೈರ್ ಕೋಚ್ಗಳು, 10-ಎಸಿ ತ್ರೀ ಟೈರ್ ಕೋಚ್ಗಳು, 5-ತ್ರೀ ಟೈರ್ ಸ್ಲೀಪರ್ ಕೋಚ್ಗಳು, 3-ಜನರಲ್ ಸಿಟ್ಟಿಂಗ್ ಕೋಚ್ಗಳು, 1-ಸಿಟ್ಟಿಂಗ್ ವಿಕಲಚೇತನರ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಮತ್ತು 1-ಜನರೇಟರ್ ಕಾರ್ ಸಂಯೋಜನೆಯನ್ನು ಹೊಂದಿರುತ್ತದೆ ಎಂದು ಹೇಳಿದೆ.
ಇನ್ನೂ ರೈಲು ಸಂಖ್ಯೆ.16595/16596 KSR ಬೆಂಗಳೂರು – ಕಾರವಾರ – KSR ಬೆಂಗಳೂರು ಎಕ್ಸ್ಪ್ರೆಸ್ಅದೇ ರೈಲು ಸಂಖ್ಯೆಗಳೊಂದಿಗೆ ಎಕ್ಸ್ಪ್ರೆಸ್ ರೈಲು ಆಗಿ ಮುಂದುವರಿಯುತ್ತದೆ ಎಂದಿದೆ.
ಈ ರೈಲು 26.03.2023 ರಿಂದ ಬೆಂಗಳೂರಿನಿಂದ ಮತ್ತು 27.03.203 ರಿಂದ ಕಾರವಾರದಿಂದ ಪರಿಷ್ಕೃತ ರೈಲು ಸಂಖ್ಯೆ 20661/20662 ನೊಂದಿಗೆ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಆಗಿ ಚಲಿಸುತ್ತದೆ ಎಂದು ಈ ಮೊದಲು ತಿಳಿಸಲಾಗಿತ್ತು.
ರೈಲುಗಳ ಮಾರ್ಗ ಪರಿವರ್ತನೆ ಮತ್ತು ಹೊರಡುವ ಸಮಯದಲ್ಲಿ ಬದಲಾವಣೆ
ಸಿಕಂದರಾಬಾದ್ ವಿಭಾಗದ ಬಿಸುಗಿರ್ಶರೀಫ್-ಪೋತ್ಕಪಲ್ಲಿ ರೈಲ್ವೆ ನಿಲ್ದಾಣಗಳ ನಡುವಿನ ಮೂರನೇ ಮಾರ್ಗದ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ: –
23.12.2022 ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ.12649 ಯಶವಂತಪುರ – ಎಚ್. ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ಮೌಲಾ ಅಲಿ ಜಿ ಕ್ಯಾಬಿನ್ – ಕಾಜಿಪೇಟ್ ಬದಲಿಗೆ ನಿಜಾಮಾಬಾದ್ – ಪೆದ್ದಪಲ್ಲಿ ಮೂಲಕ ಸಂಚರಿಸುತ್ತದೆ.
26.12.2022 ರಂದು 23.40 ಗಂಟೆಗೆ ಯಶವಂತಪುರದಿಂದ ಪ್ರಾರಂಭವಾಗುವ ರೈಲು ನಂ.22683 ಯಶವಂತಪುರ – ಲಕ್ನೋ ಎಕ್ಸ್ಪ್ರೆಸ್ 27.12.2022 ರಂದು 01.40 ಗಂಟೆಗೆ (120 ನಿಮಿಷಗಳು ತಡವಾಗಿ) ಹೊರಡಲಿದೆ ಎಂದು ಹೇಳಿದೆ.