ಬೆಂಗಳೂರು :ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ 10ನೇ ಮುಖ್ಯರಸ್ತೆ, ರಾಮಮಂದಿರ ರಸ್ತೆಯಲ್ಲಿರುವ ಶ್ರೀರಾಮಮಂದಿರ ದೇವಸ್ಥಾನದ ಬಳಿ ಶ್ರೀರಾಮಾಂಜನೇಯ ಪ್ರತಿಮೆಯ ಚರ ಪ್ರತಿಷ್ಠಾಪನಾ ಮಹೋತ್ಸವ ಇರುವುದರಿಂದ ಇಂದಿನಿಂದ3 ದಿನ ಹಲವು ಸಂಚಾರ ಮಾರ್ಗಗಳಲ್ಲಿ ಬಂದ್ ಮಾಡಲಾಗಿದೆ.
ದಿನಾಂಕ: 21.10.2024 ರಿಂದ 23-10-2024 ರವರೆಗೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ 10ನೇ ಮುಖ್ಯರಸ್ತೆ, ರಾಮಮಂದಿರ ರಸ್ತೆಯಲ್ಲಿರುವ ಶ್ರೀರಾಮಮಂದಿರ ದೇವಸ್ಥಾನದ ಬಳಿ ಶ್ರೀರಾಮಾಂಜನೇಯ ಪ್ರತಿಮೆಯ ಚರ ಪ್ರತಿಷ್ಠಾಪನಾ ಮಹೋತ್ಸವ ಇರುವುದರಿಂದ ಸುಮಾರು 20.000 ಭಕ್ತಾದಿಗಳು ಸೇರುವುದರಿಂದ ರಾಜಾಜಿನಗರದ ಹಳೇ ಪೊಲೀಸ್ ಠಾಣಾ ಸರ್ಕಲ್ ಕಡೆಯಿಂದ ರಾಮಮಂದಿರದ ಕಡೆಗೆ (10ನೇ ಮುಖ್ಯ ರಸ್ತೆ, 3ನೇ ಬ್ಲಾಕ್ ರಾಜಾಜಿನಗರ) ಹೋಗುವ ಹಾಗೂ ರಾಜಾಜಿನಗರ ಎಂಟ್ರೆನ್ಸ್ ಕಡೆಯಿಂದ ರಾಮಮಂದಿರದ ಕಡೆಗೆ ಬರುವ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಭಂದಿಸಲಾಗಿದ್ದು, ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.
> ಇ.ಎಸ್.ಐ ಸಿಗ್ನಲ್ ಕಡೆಯಿಂದ ಬರುವ ಬಸ್‌ಗಳು/ವಾಹನಗಳು ಹಳೇ ಪೊಲೀಸ್ ಠಾಣಾ ಸರ್ಕಲ್ ಬಳಿ ಬಲ ತಿರುವು ಪಡೆದುಕೊಳ್ಳದೇ ಮುಂದೆ ಚಲಿಸಿ ಡಾ||ರಾಜ್ ಕುಮಾರ್ ರಸ್ತೆಗೆ ಸೇರುವುದು.
> ರಾಜಾಜಿನಗರ ಎಂಟ್ರೆನ್ಸ್ ಕಡೆಯಿಂದ ಬರುವ ಬಸ್ ಗಳು/ವಾಹನಗಳು ವಾಟಾಳ್ ನಾಗರಾಜ್ ರಸ್ತೆಯಲ್ಲಿ ಬಂದು ರಾಮಮಂದಿರದ ಬಳಿ (10ನೇ ಮುಖ್ಯ ರಸ್ತೆಯಲ್ಲಿ) ಬಲ ತಿರುವು ಪಡೆದುಕೊಳ್ಳದೆ ವಾಟಾಳ್ ನಾಗರಾಜ್ ರಸ್ತೆಯಲ್ಲಿ ಚಲಿಸಿ ಭಾಷ್ಯಂ ಸರ್ಕಲ್ ಕಡೆಗೆ ಚಲಿಸುವುದು.