ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಬಳ್ಳಾರಿ ಇದರ ಕಾರ್ಯವ್ಯಾಪ್ತಿಯ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿಯ ಒಕ್ಕೂಟದ ಆಡಳಿತ ಕಚೇರಿಯ 02 ಕಿ.ಮೀ ವ್ಯಾಪ್ತಿಯಲ್ಲಿ ಜುಲೈ 09 ರಂದು ಸಂಜೆ 06 ಗಂಟೆಯಿAದ ಜುಲೈ 11 ರ ಬೆಳಿಗ್ಗೆ 06 ಗಂಟೆಯವರೆಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21 ರನ್ವಯ ಮದ್ಯ ಮಾರಾಟ, ಸಾಗಣಿಕೆ ಮಾಡದಂತೆ ಹಾಗೂ ಮದ್ಯ ಅಂಗಡಿ, ಬಾರ್-ರೆಸ್ಟೋರೆಂಟ್‌ಗಳನ್ನು ತೆರೆಯದಂತೆ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ಈ ಆದೇಶವು ಡಿಸ್ಟಲರೀಸ್ ರಾಜ್ಯದ ವಿವಿಧ ಕೆ.ಎಸ್.ಪಿ.ಬಿ.ಸಿ.ಎಲ್ ಡಿಪೊಗಳಿಗೆ ದಾಸ್ತಾನು ವಿಲೇವಾರಿ ಮಾಡಲು ಅನ್ವಯಿಸುವುದಿಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
CRIME NEWS: ಪ್ರಿಯಕರನ ಜೊತೆ ಸೇರಿ ಪತಿ ಕೊಂದಿದ್ದ ಪತ್ನಿ ಸೇರಿ ಮೂವರು ಅರೆಸ್ಟ್
ಈಗ ಆಧಾರ್ ಕಾರ್ಡ್ ನವೀಕರಣಕ್ಕೆ ಈ ದಾಖಲೆಗಳು ಕಡ್ಡಾಯ: ಹೀಗಿವೆ UIDAI ಹೊಸ ನಿಯಮಗಳು | Aadhaar Update