ಬೆಂಗಳೂರು: ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ನವೆಂಬರ್.18ರ ನಾಳೆ, ನವೆಂಬರ್.19ರ ನಾಡಿದ್ದು ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಸ್ಕಾಂ ತಿಳಿಸಿದೆ.
ನಾಳೆ ಬೆಂಗಳೂರಿನ ಈ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬೆಂಗಳೂರು: ಆಡುಗೋಡಿ ನಿರ್ವಹಣಾ ಕಾಮಗಾರಿ ನಿಮಿತ್ತ ನವೆಂಬರ್ 18 ರಂದು (ಮಂಗಳವಾರ) ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಆಡುಗೋಡಿ, ಸಲಾಪುರಿಯಾ ಟವರ್, ಬಿಗ್ ಬಜಾರ್, ಆಕ್ಸೆಂಚರ್, ಕೆ.ಎಮ್.ಎಪ್, ಗೋಡೌನ್, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮೀ ಲೇಔಟ್, ಮಹಲಿಂಗೇಶ್ವರ ಬಡಾವಾಣೆ, ಬೆಂಗಳೂರು ಡ್ಯೆರಿ, ಫೋರಾಮ್, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ ಗಾಡ್ðನ್, ಚಿನ್ನಯ್ಯನ್ನ ಪಾಳ್ಯ, ಚಂದ್ರಪ್ಪ ನಗರ, ನಿಮ್ಯಾನ್ಸ್ ಅಡ್ಮಿನಿಸ್ರೆಟಿವ್ ಬ್ಲಾಕ್, ಬಂಡೆ ಸ್ಲಮ್, ಸುಣ್ಣದಕಲ್ಲು, ಬೃಂದವನ ಸ್ಲಮ್, ಲಾಲ್ ಜಿ ನಗರ, ಶಾಮಣ್ಣ ಗಾರ್ಡನ್ , ಎನ್ ಡಿ ರ್ ಐ, ಪೋಲಿಸ್ ವಸತಿ ಗೃಹಗಳು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ನಾಡಿದ್ದು ಬೆಂಗಳೂರಿನ ಈ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬೆಂಗಳೂರು: ಕೆಪಿಟಿಸಿಎಲ್ 220/66/11 ಕೆ.ವಿ. ಎನ್.ಆರ್.ಎಸ್, 66/11 ಕೆ.ವಿ ಪಲಾಡಿಯಂ | ಮತ್ತು 66/11 ಕೆ.ವಿ ಟೆಲಿಕಾಂ ಲೇಔಟ್ ನ ವಿದ್ಯುತ್ ವಿತರಣಾ ಕೇಂದ್ರಗಳ ತ್ರೈಮಾಸಿಕ ನಿರ್ವಹಣಾ ಕಾರ್ಯದ ನಿಮಿತ್ತ ಈ ಕೆಳಗಿನ ಪ್ರದೇಶಗಳಲ್ಲಿ ದಿನಾಂಕ 19.11.2025 (ಬುಧವಾರ) ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
220/66/11 ಕೆ.ವಿ. ಎನ್.ಆರ್.ಎಸ್: ರಾಜಾಜಿನಗರ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್ & 6ನೇ ಬ್ಲಾಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, | ಗುಬ್ಬಣ್ಣ ಇಂಡಸ್ಟ್ರಿಯಲ್ ಏರಿಯಾ, ಡಾ| ಮೋದಿ ಹಾಸ್ಪಿಟಲ್ | ರೋಡ್, ಮಂಜುನಾಥನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರೋಡ್ 1ನೇ ಕ್ರಾಸ್, 2ನೇ ಕ್ರಾಸ್, 3ನೇ ಕ್ರಾಸ್, 4ನೇ ಕ್ರಾಸ್, 5ನೇ ಕ್ರಾಸ್, ಮಹಾಗಣಪತಿನಗರ, ಕೆ.ಹೆಚ್.ಬಿ.ಕಾಲೋನಿ 2ನೇ ಹಂತ, ದೇವಯ್ಯ ಪಾರ್ಕ್, ನಾಗಪ್ಪ ಬ್ಲಾಕ್, ಲಿಂಕ್ ರೋಡ್, ಶನಿಮಹಾತ್ಮ ಟೆಂಪಲ್, ಪ್ರಕಾಶನಗರ, ಗಾಯತ್ರಿನಗರ, ಸುಬ್ರಮಣ್ಯನಗರ, ಎಲ್.ಎನ್.ಪುರ, ರಾಜ್ ಕುಮಾರ್ ರೋಡ್, ದಯಾನಂದನಗರ, ಸಾಯಿಮಂದಿರ, ಹರಿಶ್ಚಂದ್ರ ಘಾಟ್, ಮಾರುತಿ ಎಕ್ಸ್ಟನ್, ರಾಜಾಜಿನಗರ, ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ಸ್. ಪ್ಯಾಲೇಸ್ ಗುಟ್ಟಹಳ್ಳಿ, ಮುನೇಶ್ವರ ಬ್ಲಾಕ್, ಮಲ್ಲೇಶ್ವರಂ ಸ್ವಿಮ್ಮಿಂಗ್ ಪೂಲ್, ಪೈಪ್‌ಲೈನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
66/11 ಕೆ.ವಿ ಪಲಾಡಿಯಂ: ಆರ್.ಬ್ಲಾಕ್, ನಿರ್ಮಾಣ್ ಭವನ್, ಕೆ.ಆರ್.ಡಿ.ಸಿ.ಎಲ್, ಜೆಟ್ ಲಾಗ್, | ನಾರಾಯಣ ನೇತ್ರಾಲಯ, ಇಸ್ಕಾನ್ ಟೆಂಪಲ್, ಪಲಾಡಿಯಂ ವಸತಿ | ಸಮುಚ್ಚಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
66/11 ಕೆ.ವಿ ಟೆಲಿಕಾಂ ಲೇಔಟ್: ವೆಸ್ಟ್ ಆಫ್ ಕಾರ್ಡ್ ರೋಡ್, ಎಂ.ಸಿ.ಲೇಔಟ್, ವಿಜಯನಗರ ವಾಟರ್ ಟ್ಯಾಂಕ್, ಹೊಸಹಳ್ಳಿ ಮೈನ್ ರೋಡ್, ಹಂಪಿನಗರ, ಮಾಗಡಿ ಮುಖ್ಯ ರಸ್ತೆ, ಬಿನ್ನಿಪೇಟೆ, ಜಗಜೀವನ ರಾಂನಗರ, ಗೋಪಾಲಪುರ, ಹೊಸಹಳ್ಳಿ, ಹಳೇಗುಡ್ಡದಹಳ್ಳಿ, ಭುವನೇಶ್ವರಿನಗರ, ಗೋರಿಪಾಳ್ಯ, ವಿ.ಎಸ್.ಗಾರ್ಡನ್, ಗೂಡ್ಸ್ ಶೆಡ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
GOOD NEWS: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್: ನ.19ರಿಂದ ‘ಅಕ್ಕ ಪಡೆ’ ಕಾರ್ಯಾರಂಭ








