ಬೆಂಗಳೂರು : ಬೆಂಗಳೂರಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ, ನಗರದ ಮಾರತಹಳ್ಳಿ ಬೆಳ್ಳಂದೂರು ಸುತ್ತಮುತ್ತ ಸಂಚಾರದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾಡುಬಿಸನಹಳ್ಳಿ ತೆರಳುವವರಿಗೆ ರಿಂಗ್ ರಸ್ತೆ ನಿರ್ಬಂಧ ವಿಧಿಸಲಾಗಿದೆ. ಪೊಲೀಸರಿಂದ ಮಾರ್ಗ ಬದಲಾವಣೆ ಮಾಡಲಾಗಿದ್ದು ಕಾಡುಬಿಸನಹಳ್ಳಿ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಆದರೆ ಬೆಳ್ಳಂದೂರು ಕಡೆಗೆ ಸಂಚರಿಸುವವರಿಗೆ ಸರ್ವಿಸ್ ರಸ್ತೆ ನಿರ್ಬಂಧಿಸಲಾಗಿದೆ. ಕಡ್ಡಾಯವಾಗಿ ರಿಂಗ್ ರಸ್ತೆ ಮೂಲಕವೇ ಸಂಚರಿಸಲು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ. ಈ ಕುರಿತು ಪೂರ್ವಭಾವಿ ಭಾಗ ಸಂಚಾರ ಡಿಸಿಪಿ ಸಾಹಿಲ್ ಬಾಗ್ಲ ಹೇಳಿಕೆ ನೀಡಿದ್ದು ಒಂದು ವಾರ ಪ್ರಾಯೋಗಿಕವಾಗಿ ಸಂಚಾರ ಬದಲಾವಣೆ ಮಾಡಿದ್ದೇವೆ. ಇದನ್ನ ನೋಡಿಕೊಂಡು ಮುಂದೆ ಹೇಗಿರಬೇಕು ಅನ್ನೋದನ್ನ ನಿರ್ಧರಿಸಲಾಗುತ್ತದೆ.
#ಸಂಚಾರಸಲಹೆ#TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpwfieldtrf @acpeasttraffic @mahadevapuratrf @halairporttrfps @KRPURATRAFFIC @wftrps @bwaditrafficps @ftowntrfps @jbnagartrfps @halasoortrfps @kghallitrfps… https://t.co/76SQwyrMqT pic.twitter.com/LzlG4WvKmB
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) September 17, 2025