ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ. ಕೊಡಗು ಜಿಲ್ಲೆಯ ಅತಿವೃಷ್ಟಿಯಿಂದ ತತ್ತರಿಸಿ ಹೋಗಿದೆ. ಮಳೆ ಹಾನಿಯಿಂದಾಗಿ ಪ್ರವಾಸೋಧ್ಯಮಕ್ಕೆ ಭಾರಿ ಹಾನಿ ಉಂಟು ಮಾಡಿದೆ. ಹೀಗಾಗಿ ಮಳೆ ಹಾನಿ ವೀಕ್ಷಣೆಗೆ ನಾನು ಹೋಗಿದ್ದೆ.
ಈ ವೇಳೆ ದಾಳಿ ನಡೆಸಿದ್ದರು ಅಂತ ಮೊಟ್ಟೆ ದಾಳಿ ಬಗ್ಗೆ ಸಿದ್ದರಾಮಯ್ಯ ಮತ್ತೆ ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ರು . ಆ ಸಂಧರ್ಭದಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆ ವೇಳೆ ಪೊಲೀಸರು ಯಾಕೆ ಸುಮ್ಮನೆ ಇದ್ದರು, ತಡೆಯಬಹುದಾಗಿತ್ತು. ನಮ್ಮ ಕಾರ್ಯಕರ್ತರು ಶಾಂತಿಯಿಂದ ಪ್ರತಿಭಟನೆ ಮಾಡಿದ್ರು. ಆದರೆ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.