ನವದೆಹಲಿ: ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ನಡೆದ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಖಂಡಿಸಿದ್ದಾರೆ.
ಬುಧವಾರ ನಡೆದ ಹತ್ಯೆ ಯತ್ನದಲ್ಲಿ ಸ್ಲೋವಾಕಿಯಾ ಪ್ರಧಾನಿ ಗಂಭೀರವಾಗಿ ಗಾಯಗೊಂಡಿದ್ದರು.
ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ನಡೆದ ಗುಂಡಿನ ದಾಳಿಯ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಈ ಹೇಡಿತನದ ಮತ್ತು ಪೈಶಾಚಿಕ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ ಮತ್ತು ಪ್ರಧಾನಿ ಫಿಕೊ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಭಾರತವು ಸ್ಲೋವಾಕ್ ಗಣರಾಜ್ಯದ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ.” ಎಂದು ಬರೆದಿದ್ದಾರೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಶಸ್ತ್ರಚಿಕಿತ್ಸೆಯ ನಂತರ ಸ್ಲೋವಾಕ್ ಪ್ರಧಾನಿ ಆರೋಗ್ಯ ಸುಧಾರಿಸಿದೆ.
ಈ ದಾಳಿಯನ್ನು ರಾಜಕೀಯ ಪ್ರೇರಿತ ಹತ್ಯೆ ಪ್ರಯತ್ನ ಎಂದು ಸ್ಲೋವಾಕ್ ಆಂತರಿಕ ಸಚಿವ ಮಾಟುಸ್ ಸುತಾಜ್ ಎಸ್ಟೋಕ್ ಹೇಳಿದ್ದಾರೆ.
ಹತ್ಯೆ ಪ್ರಯತ್ನವು “ರಾಜಕೀಯ ಪ್ರೇರಿತವಾಗಿದೆ ಮತ್ತು ಅಧ್ಯಕ್ಷೀಯ ಚುನಾವಣೆಯ ನಂತರ ಈ ನಿರ್ಧಾರ ಹುಟ್ಟಿಕೊಂಡಿದೆ” ಎಂದು ಎಸ್ಟೋಕ್ ಹೇಳಿದರು. ಈ ದಾಳಿಗೆ “ಸಾಮಾಜಿಕ ಮಾಧ್ಯಮ ದ್ವೇಷ” ಕಾರಣ ಎಂದು ಅವರು ಆರೋಪಿಸಿದರು.
ರಾಜಧಾನಿಯಿಂದ ಈಶಾನ್ಯಕ್ಕೆ 150 ಕಿ.ಮೀ ದೂರದಲ್ಲಿರುವ ಹಂಡ್ಲೋವಾ ಪಟ್ಟಣದಲ್ಲಿ ನಡೆದ ಸರ್ಕಾರಿ ಸಭೆಯಲ್ಲಿ ಭಾಗವಹಿಸಿದ ನಂತರ ಫಿಕೊ ಬುಧವಾರ ಮಧ್ಯಾಹ್ನ ಗಾಯಗೊಂಡಿದ್ದಾರೆ. ಅವರ ಮೇಲೆ ಗುಂಡು ಹಾರಿಸಲಾಯಿತು