ಬಾಗಲಕೋಟೆ : ಬಾಗಲಕೋಟೆಯಲ್ಲಿ ಬುದ್ಧಿಮಾಂದ್ಯ ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಶಿಕ್ಷಕ ದಂಪತಿ ಗಳು ಸೇರಿ ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂದನ ವಿಧಿಸಲಾಗಿದೆ. ಬಾಗಲಕೋಟೆ ಜೆಎಂಎಫ್‌ಸಿ ನ್ಯಾಯಾಲಯದ ಜಡ್ಜ್ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆಯ ನವನಗರದ 54ನೆ ಸೆಕ್ಟರ್ ನಲ್ಲಿರುವ ಇರುವಂತಹ ದಿವ್ಯಜ್ಯೋತಿ ವಿಶೇಷ ಚೇತನ ಹಾಗೂ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ನವನಗರ್ ಠಾಣೆ ಪೊಲೀಸರು ಶಿಕ್ಷಕ ದಂಪತಿಗಳು ಸೇರಿದಂತೆ ಸಹಾಯ ಶಿಕ್ಷಕರನ್ನು ಕೋಶಕ್ಕೆ ಪಡೆದು ಕಾಯ್ದೆ ಅಡಿ ಪ್ರಕರಣ ದಾಖಲಿಸಿದರು. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಶಿಕ್ಷಕ ಅಕ್ಷಯ್ ಹಿಂದುಲ್ಕರ್ ಹಾಗೂ ಆತನ ಪತ್ನಿ ಶಿಕ್ಷಕಿ ಆನಂದಿ ಹಿಂದುಲ್ಕರ್, ಸಹ ಶಿಕ್ಷಕರಾದ ರವಿಕಾಂತ್, ಕುಶಾಲ್ ಪಾಟೀಲ್ ನನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದ್ದಾರೆ. ವಸತಿ ಶಾಲೆಯ 28 ಮಕ್ಕಳು ಪೋಷಕರಿಗೆ ಹಸ್ತಾಂತರಿಸಲಾಗಿದೆ.








