ಪಣಜಿ : ದಕ್ಷಿಣ ಗೋವಾದ ಬಂದರು ಪಟ್ಟಣ ವಾಸ್ಕೋದ ಬೈನಾದಲ್ಲಿರುವ ಬ್ಯಾಂಕ್ ಒಂದರ ಎಟಿಎಂ, ಸೋಮವಾರ ರಾತ್ರಿ ಎರಡರಿಂದ ಮೂರು ಪಟ್ಟು ಹೆಚ್ಚುವರಿ ನೋಟುಗಳನ್ನ ನೀಡಿದೆ ಎಂದು ವರದಿಯಾಗಿದೆ. ಆದಾಗ್ಯೂ, ಬ್ಯಾಂಕ್ ಅಧಿಕಾರಿಗಳು ನಂತ್ರ ಯಂತ್ರವನ್ನು ಸ್ವಿಚ್ ಆಫ್ ಮಾಡಿದರು.
ಎಟಿಎಂ ತಮ್ಮ ಖಾತೆಗಳಿಂದ ಹಣ ಕಡಿತಗೊಳಿಸದೇ ಎರಡರಿಂದ ಮೂರು ಪಟ್ಟು ಹೆಚ್ಚುವರಿ ಹಣವನ್ನ ತಲುಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಸುದ್ದಿ ಸುತ್ತಮುತ್ತ ಹರಡುತ್ತಿದ್ದಂತೆ, ಅನೇಕರು ಎಟಿಎಂನಲ್ಲಿ ಜಮಾಯಿಸಿ ತಮ್ಮ ಹಣವನ್ನು ಹಿಂಪಡೆದರು. ನಂತ್ರ ಒಬ್ಬ ವ್ಯಕ್ತಿಯು ಪೊಲೀಸರನ್ನ ಸಂಪರ್ಕಿಸಿದ್ದು, ಅವರ ಮಧ್ಯಪ್ರವೇಶದ ನಂತ್ರ ಎಟಿಎಂ ಕ್ಲೋಸ್ ಮಾಡಲಾಗಿದೆ.
“ಹೆಚ್ಚುವರಿ ಹಣವನ್ನ ನೀಡ್ತಿದ್ದ ಈ ಎಟಿಎಂನಿಂದ ಹಣ ತೆಗೆದುಕೊಳ್ಳಲು ಅನೇಕ ಜನರು ಜಮಾಯಿಸಿದ್ದಾರೆ ಎಂದು ನನ್ನ ಸ್ನೇಹಿತನಿಂದ ನನಗೆ ತಿಳಿಯಿತು. ನಂತರ ನಾನು ಪೊಲೀಸರನ್ನು ಸಂಪರ್ಕಿಸಿದೆ ಮತ್ತು ಅವರು ಸ್ಥಳಕ್ಕೆ ಆಗಮಿಸಿ, ಬ್ಯಾಂಕ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು. ನಂತರ ಅವರು ಎಟಿಎಂ ಕ್ಲೋಸ್ ಮಾಡಿದರು ” ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ಹಣವನ್ನ ಹಿಂತೆಗೆದುಕೊಂಡ ಕೆಲವು ಜನರು, ಬ್ಯಾಂಕ್ ಪೊಲೀಸರ ಸಹಾಯದಿಂದ ಅದನ್ನ (ಹಣವನ್ನು) ವಸೂಲಿ ಮಾಡಲು ಮಾಡ್ಬೋದು ಎಂದು ಭಯಪಟ್ಟರು ಎಂದು ಹೇಳಿದರು. ದೋಷವು ಹೇಗೆ ಸಂಭವಿಸಿತು ಅನ್ನೋದು ಸ್ಪಷ್ಟವಾಗಿಲ್ಲ.
‘ಪ್ರಾಮಾಣಿಕ ಅಭ್ಯರ್ಥಿಗಳ ನೋವು ಆಲಿಸದೇ ಪೊಲೀಸರನ್ನು ಬಿಟ್ಟು ಹೊಡೆಸುತ್ತೀರಾ ಗೃಹ ಸಚಿವರೇ : ಕಾಂಗ್ರೆಸ್ ಕಿಡಿ
BIGG NEWS : ‘ಅಪ್ಪು’ ಕಾರ್ಯಕ್ರಮ ಮುಗಿಸಿ ಚೆನ್ನೈನತ್ತ ‘ಸೂಪರ್ ಸ್ಟಾರ್’ ರಜನೀಕಾಂತ್ ಪ್ರಯಾಣ
BIG BREAKING NEWS: ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ