ನವದೆಹಲಿ: ಅಪರೂಪದ ಧೂಮಕೇತು ಅಟ್ಲಾಸ್ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಗೋಚರಿಸಲಿದೆ. 2023ರ ಜನವರಿಯಲ್ಲಿ ದೂರದರ್ಶಕದಲ್ಲಿ ಸುಮಾರು 100 ಕೋಟಿ ಕಿಮೀ ದೂರದಲ್ಲಿ ಕಂಡು, ಇದನ್ನು ಶತಮಾನದ ಧೂಮಕೇತು ಎಂದೇ ಬಣ್ಣಿಸಲಾಗಿತ್ತು. ಈಗ ಇದನ್ನು ವರ್ಷದ ಧೂಮಕೇತು ಎಂದು ಅಂದಾಜಿಸಲಾಗಿದ್ದು, ಭೂಮಿಗೆ ಸಮೀಪಕ್ಕೆ ಬರುವಂತ ಅಟ್ಲಾಸ್ ಧೂಮಕೇತುವನ್ನು ಈ ಬಾರಿ ಬರಿಗಣ್ಣಿನಿಂದ ನೋಡಬಹುದಾಗಿದೆ.
ಸುಚಿನ್ಸನ್-ಅಟ್ಲಾಸ್ ಹೆಸರಿನ ಧೂಮಕೇತು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸೂರ್ಯೋದಯಕ್ಕೆ ಮುನ್ನ ಬರಿಗಣ್ಣಿಗೆ ಕಾಣಿಸಲಿದೆ. ಸೌರವ್ಯೂಹದ ಹೊರವಲಯ ಊರ್ಸ್ ಕ್ಲೌಡ್ ನಿಂದ ಅಂದರೆ ಸುಮಾರು 3 ಜ್ಯೋತಿರ್ವರ್ಷ ಅಂದರೆ 30 ಟ್ರಿಲಿಯನ್ ಕಿಮೀ ದೂರದಿಂದ ಹೊರಟ ಈ ಧಊಮಕೇತು ಸೆಕೆಂಡ್ ಗೆ ಸುಮಾರು 30 ಕಿಲೋ ಮೀಟರ್ ವೇಗದಲ್ಲಿ ಕ್ರಮಿಸುತ್ತಾ ಸೆ.27ರಂದು ಸೂರ್ಯನನ್ನು ಸಮೀಪಿಸಲಿದೆ.
ಸುಮಾರು 80 ಸಾವಿರ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಈ ಧೂಮಕೇತು ಸೂರ್ಯನಿಂದ ಹಿಂತಿರುಗುವಾಗ ಅಕ್ಟೋಬರ್.12ರಂದು ಭೂಮಿಗೆ ಸಮೀಪದಲ್ಲಿ ಸಂಜೆ ವೇಳೆ ಪಶ್ಚಿಮ ಆಕಾಶದಲ್ಲಿ ಬರಿಗಣ್ಣಿಗೆ ಕಾಣಿಸಲಿದೆ.
Crime News: ಟೊಮೆಟೋ ಬೆಳೆನಷ್ಟದ ಸಾಲ ತೀರಿಸಲು ಕಳ್ಳತನಕ್ಕಿಳಿದ ಆರೋಪಿ ಅರೆಸ್ಟ್
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಮತ್ತೊಂದು ದಾಖಲೆ: ಒಂದೇ ದಿನ 503 ಅರ್ಜಿ ವಿಚಾರಣೆ