ಮುಂಬೈ: ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಇವರಿಬ್ಬರು ಪ್ರೀತಿ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಇದೀಗ ಅವರಿಬ್ಬ ಕಡೆಯಿಂದ ಹೊಸ ಅಪ್‌ ಡೇಟ್‌ ಸಿಕ್ಕಿದೆ. ಸದ್ಯ ಅವರಿಬ್ಬ ಮದುವೆ ಡೇಟ್‌ ಫಿಕ್ಸ್‌ ಆಗಿದೆ.

BIGG NEWS: ವರದಕ್ಷಿಣೆ ಕಿರುಕುಳದ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ: ಹೈಕೋರ್ಟ್

 

ಈ ಹಿಂದೆ ಮುಂದಿನ ಮೂರು ತಿಂಗಳಲ್ಲಿ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಈ ಸುದ್ದಿಯನ್ನು ಅವರು ತಳ್ಳಿ ಹಾಕಿದ್ದರು. ಇದೀಗ ಇಬ್ಬರೂ ಮುಂದಿನ ವರ್ಷ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಮಗಳು ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರ ಸಂಬಂಧದ ಬಗ್ಗೆ ಸಾಕಷ್ಟು ಸಮಯದಿಂದ ಚರ್ಚೆ ಆಗುತ್ತದೆ. ಇಬ್ಬರೂ ಆಗಾಗ್ಗೆ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

BIGG NEWS: ವರದಕ್ಷಿಣೆ ಕಿರುಕುಳದ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ: ಹೈಕೋರ್ಟ್

ಅಥಿಯಾ-ರಾಹುಲ್ ದೀರ್ಘಕಾಲದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇಟೈಮ್ಸ್ ವರದಿಯ ಪ್ರಕಾರ, ಅಥಿಯಾ ಅಥವಾ ರಾಹುಲ್ ಅವರ ಕುಟುಂಬವು ತಮ್ಮ ಯೋಜನೆಯನ್ನು ಬದಲಾಯಿಸದಿದ್ದರೆ, ಅಥಿಯಾ ಮತ್ತು ರಾಹುಲ್ ಅವರ ವಿವಾಹವು 2023 ರ ಆರಂಭದಲ್ಲಿ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯಲಿದೆ ಎಂದು ದೃಢಪಟ್ಟಿದೆ.

 

Share.
Exit mobile version