ಬೆಂಗಳೂರು: ರಾಹುಲ್ ಗಾಂಧಿ(Rahul Gandhi) ಹಾಗೂ ಕಾಂಗ್ರೆಸ್ ಮುಖಂಡರು ಚಿತ್ರದುರ್ಗದ ಶ್ರೀ ಮುರುಘಾ ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಹಾವೇರಿ ಹೊಸಮುತ್ತು ಸ್ವಾಮಿಗಳು ರಾಹುಲ್ಗೆ ʻನೀವು ಪ್ರಧಾನಿಯಾಗುತ್ತೀರಿʼ ಎಂದು ಆಶೀರ್ವದಿಸಿದ್ದಾರೆ.
ಹಾವೇರಿ ಹೊಸಮುತ್ತು ಸ್ವಾಮಿಗಳು ತಮ್ಮ ಭಾಷಣದ ವೇಳೆ ʻರಾಹುಲ್ ಗಾಂಧಿ ಅವರೇ ನೀವು ಪ್ರಧಾನಿಯಾಗುತ್ತೀರಿʼ ಎಂದಿದ್ದಾರೆ. ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಮೂರ್ತಿ ಮುರುಘಾ ಶರಣರು ಅಡ್ಡಿಪಡಿಸಿ, ‘ನಮ್ಮ ಮಠಕ್ಕೆ ಯಾರೇ ಭೇಟಿ ನೀಡುತ್ತಾರೋ ಅವರು ಧನ್ಯರು’ ಎಂದು ಹೇಳಿದರು.