ಚಾಮರಾಜನಗರ:ಕರ್ನಾಟಕದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಪ್ರದರ್ಶನಕ್ಕೆ ಪಕ್ಷದ ಹಿರಿಯ ನಾಯಕರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಚಾಮರಾಜನಗರದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ವಿಜಯೇಂದ್ರ, ‘ವಿಧಾನಸಭಾ ಚುನಾವಣೆಯ ಅಧಃಪತನಕ್ಕೆ ಪಕ್ಷದ ಕಾರ್ಯಕರ್ತರಲ್ಲ, ಹಿರಿಯ ನಾಯಕರೇ ಕಾರಣ, 2018ರ ವಿಧಾನಸಭೆ ಚುನಾವಣೆ ಗೆಲುವಿಗೂ ಮುನ್ನ ನಮ್ಮ ಪಕ್ಷದ ಕಾರ್ಯಕರ್ತರು’ ಅಂತಾ ಹೇಳುತ್ತಿದ್ದರು. ಆದರೆ ಅವರು ಗೆದ್ದ ನಂತರ ಅದು ‘ನಾನು’ ಮತ್ತು ‘ನನ್ನಿಂದ ಎಂದು ಬದಲಾಯಿತು. ಆಗ ಪಕ್ಷವು ಹಿಂದುಳಿಯಲು ಪ್ರಾರಂಭಿಸಿತು.”ಎಂದರು.
“ನಮ್ಮದೇ ತಪ್ಪುಗಳು ಮತ್ತು ಭಿನ್ನಾಭಿಪ್ರಾಯಗಳಿಂದ ನಾವು ವಿರೋಧ ಪಕ್ಷವಾಗಬೇಕಾಯಿತು. ನಾನು ಒಬ್ಬಿಬ್ಬರು ನಾಯಕರ ಬಗ್ಗೆ ಮಾತನಾಡುತ್ತಿಲ್ಲ. ನಾನು ಇದನ್ನು ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿಲ್ಲ, ಆದರೆ ಪಕ್ಷದ ಕಾರ್ಯಕರ್ತನಾಗಿ ಹೇಳುತ್ತಿದ್ದೇನೆ. ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗ ಪಕ್ಷದ ಕಾರ್ಯಕರ್ತರು ನಾಯಕರ ನಡುವೆ ಉತ್ತಮ ಸಂಬಂಧವಿತ್ತು. ಆದರೆ, ಪಕ್ಷವು ಅಧಿಕಾರಕ್ಕೆ ಬಂದ ನಂತರ ಅದು ಹದಗೆಡಲು ಪ್ರಾರಂಭಿಸಿತು,” ಎಂದು ಅವರು ಹೇಳಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ನಾನು ಒಬ್ಬ ನಿರ್ದಿಷ್ಟ ನಾಯಕನ ಬಗ್ಗೆ ಮಾತನಾಡಿಲ್ಲ, ಆದರೆ ನಾನು ಸೇರಿದಂತೆ ಪ್ರತಿಯೊಬ್ಬರ ಬಗ್ಗೆ ಮಾತನಾಡಿದ್ದೇನೆ, ವಿಧಾನಸಭೆ ಚುನಾವಣೆಯಲ್ಲಿ ನನ್ನ ಪ್ರಯತ್ನ ಸಾಕಾಗಲಿಲ್ಲ ಎಂದು ನನಗೂ ಅನಿಸುತ್ತದೆ.
” ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ವಿಜಯೇಂದ್ರ ಮಾತನಾಡಿ, ‘ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಏನೇ ನಡೆದರೂ ಚರ್ಚೆ ಮಾಡುವುದಿಲ್ಲ, ಭವಿಷ್ಯದಲ್ಲಿ ನನಗೆ ವಿಶ್ವಾಸವಿದೆ, ಕಳೆದ ಏಳು ತಿಂಗಳಿಂದ ಪಕ್ಷದ ಪರಿಸ್ಥಿತಿ ಬದಲಾಗಿದೆ, ಐದು ರಾಜ್ಯಗಳ ಚುನಾವಣೆ ರಾಜ್ಯದಲ್ಲಿಯೂ ಬಿಜೆಪಿ ಪರ ಅಲೆ ಇದೆ, ನಾನು ರಾಜ್ಯಾಧ್ಯಕ್ಷನಾದ ನಂತರ ಕರ್ನಾಟಕದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಮತ್ತು ಈಗ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹವಿದೆ, ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 28 ಸ್ಥಾನಗಳನ್ನು ಗೆಲ್ಲಲು ನಮ್ಮ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು” ಎಂದರು.