ಅಸ್ಸಾಂ : ನಿಯಮಿತವಾಗಿ ವ್ಯಾಯಾಮ ಮಾಡುವ ಮತ್ತು ಜಂಕ್ ಫುಡ್ ಸೇವನೆಯನ್ನು ನಿರ್ಬಂಧಿಸುವ ಭರವಸೆಯನ್ನು ಒಳಗೊಂಡಿರುವ ತಮ್ಮ ವಿಶಿಷ್ಟವಾದ ವಿವಾಹ ಒಪ್ಪಂದಕ್ಕಾಗಿ ಭಾರತೀಯ ದಂಪತಿಗಳು ಸಾಕ್ಷಿಯಾಗಿದ್ದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದಾರೆ.
ಅಸ್ಸಾಂನ ಮಿಂಟು ರೈ ಮತ್ತು ಶಾಂತಿ ಪ್ರಸಾದ್ ದಂಪತಿಗಳು ಕಳೆದ ತಿಂಗಳು ತಮ್ಮ ಮದುವೆಯಲ್ಲಿ ತಮ್ಮ ಸ್ನೇಹಿತರು ರಚಿಸಿದ ಫಲಕಕ್ಕೆ ಸಹಿ ಹಾಕಿದ್ದಾರೆ. ಇದು ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಒಳಗೊಂಡಿದೆ. ಪಟ್ಟಿಯಲ್ಲಿ ಮೊದಲನೆಯದು “ತಿಂಗಳಿಗೆ ಒಂದೇ ಪಿಜ್ಜಾ ತಿನ್ನಬೇಕು” ಎಂದು ಉಲ್ಲೇಖಿಸಲಾಗಿತ್ತು.
ದಂಪತಿಗಳ ಸ್ನೇಹಿತರು ಈ ಒಪ್ಪಂದವನ್ನು ಮದುವೆಯ ಉಡುಗೊರೆಯಾಗಿ ತಂದರು. ಅವರು ಈ ಅನನ್ಯ ಉಡುಗೊರೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, ಅದು ಏನೆಂದು ನಮಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಆದರೂ, ಅದಕ್ಕೆ ನಾವಿಬ್ಬರೂ ಸಹಿ ಹಾಕಿದ್ದೆವು ಎಂದಿದ್ದಾರೆ ವರ ಮಿಂಟು.
View this post on Instagram
ದಂಪತಿಗಳ ನಡುವೆ ಉಂಟಾಗುವ ವೈಮನಸ್ಸನ್ನು ಕಡಿಮೆ ಮಾಡಲು ಈ ಒಪ್ಪಂದವನ್ನು ಸ್ಪಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಪ್ರಣಯದ ದಿನಗಳಲ್ಲಿ ಕಡೆಗಣಿಸಲಾಗುತ್ತದೆ. ಅದರಲ್ಲಿರುವ ವಿಲಕ್ಷಣವಾದ ಪ್ರಮುಖ ಅಂಶಗಳು ತಿಂಗಳಿಗೆ ಅನ್ವಯವಾಗಲಿವೆ. ಅವುಗಳಲ್ಲಿ, ವರನಿಗೆ ತಿಂಗಳಿಗೆ ಒಂದು ಪಿಜ್ಜಾ ತಿನ್ನಬೇಕು ಮತ್ತು ವಧು ಪ್ರತಿದಿನ ಸೀರೆ ಧರಿಸಬೇಕು, ಇಬ್ಬರೂ ಪ್ರತಿದಿನ ಜಿಮ್ಗೆ ಹೋಗುವುದು, ಮಿಂಟು ಪ್ರತಿ ಭಾನುವಾರ ಅಡುಗೆ ಮಾಡುವುದು, ಇಬ್ಬರೂ ಪ್ರತಿ 15 ದಿನಗಳಿಗೊಮ್ಮೆ ಮಾತ್ರ ಶಾಪಿಂಗ್ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ.
“ನನಗೆ ಪಿಜ್ಜಾ ಎಂದರೆ ತುಂಬಾ ಇಷ್ಟ. ನಾನು ಯಾವಾಗಲೂ ಪಿಜ್ಜಾ ತಿನ್ನೋಣ ಎಂದು ಹೇಳುತ್ತೇನೆ” ಎಂದು ಪ್ರಸಾದ್ ತಿಳಿಸಿದ್ದಾರೆ. ವೀಡಿಯೊ ವೈರಲ್ ಆದ ನಾಲ್ಕು ದಿನಗಳ ನಂತರ ನಮಗೆ ಈ ನಮ್ಮ ಮದುವೆಯ ಕಥೆ ಇಷ್ಟು ವೈರಲ್ ಆಗಿದೆ ಎಂದು ತಿಳಿಯಿತು. ಇದು ನಿಜಕ್ಕೂ ತುಂಬಾ ಆಶ್ಚರ್ಯಕರ. ವೀಡಿಯೋ ಬಗ್ಗೆ ಜನರು ನನ್ನನ್ನು ಕೇಳಿದರೆ ನನಗೆ ಸಂತೋಷವಾಗುತ್ತದೆ ಎಂದು ಮಿಂಟು ತಿಳಿಸಿದ್ದಾರೆ.