ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಬಿಗ್ ಬಾಸ್-16 ಸೀಸನ್ ಭಾಗವಹಿಸಿದ್ದು, ಹಲವು ವಿವಾದಗಳನ್ನು ಮೈಗೆ ಸುತ್ತಿಕೊಂಡಿದ್ದಾರೆ.
ದೆಹಲಿ ಮಹಿಳಾ ಸಮಿತಿಯ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದು, #MeToo ಆಂದೋಲನದ ಸಮಯದಲ್ಲಿ ಹಲವಾರು ಮಹಿಳೆಯರು ತಮ್ಮ ವಿರುದ್ಧ ಮಾಡಿದ ಲೈಂಗಿಕ ಕಿರುಕುಳದ ಆರೋಪದ ಮೇಲೆ ಅವರನ್ನು ರಿಯಾಲಿಟಿ ಶೋನಿಂದ ಹೊರಹಾಕುವಂತೆ ಒತ್ತಾಯಿಸಿದ್ದಾರೆ,
ಸ್ವಾತಿ ಮಲಿವಾಲ್ ಅವರು ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಆರೋಪಿಸಿದ್ದು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಜಿದ್ ಅತ್ಯಾಚಾರ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ ಎಂದು ಹೇಳಿದ್ದಾರೆ. ಬುಧವಾರ, ಅವರು ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಹಿಂದಿಯಲ್ಲಿ ಬರೆದುಕೊಂಡಿರುವ ಅವರು, “ಬಿಗ್ ಬಾಸ್ ನಿಂದ #SajidKhan ಹೊರಹೋಗುವಂತೆ ನಾನು ವಾರ್ತಾ ಮತ್ತು ಪ್ರಸಾರ ಸಚಿವರಿಗೆ ಪತ್ರ ಬರೆದಾಗಿನಿಂದ, ಇನ್ಸ್ಟಾಗ್ರಾಮ್ನಲ್ಲಿ ನನಗೆ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ. ನಿಸ್ಸಂಶಯವಾಗಿ ಅವರು ನಮ್ಮ ಕೆಲಸವನ್ನು ನಿಲ್ಲಿಸಲು ಬಯಸುತ್ತಾರೆ. ನಾನು ದೆಹಲಿ ಪೊಲೀಸರಿಗೆ ದೂರು ನೀಡುತ್ತಿದ್ದೇನೆ. ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ. ಅವರ ಹಿಂದೆ ಇರುವವರನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ. ಇಂತಹ ವ್ಯಕ್ತಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸುವ ಮೂಲಕ ಯಾವ ಸಂದೇಶವನ್ನು ಸಾರುತ್ತಿದ್ದೀರಿ ಎಂದು ಚಾನೆಲ್ ನವರಿಗೂ ಪ್ರಶ್ನೆ ಮಾಡಿದ್ದಾರೆ.
ಪುರುಷರೇ ಹುಷಾರ್..! ಸೈಕಲ್ ತುಳಿಯೋದ್ರಿಂದ ವೀರ್ಯದ ಕೊರತೆ ಎದುರಾಗಬಹುದು: ತಜ್ಞರ ಮಾಹಿತಿ ಬಹಿರಂಗ
BIGG NEWS : ಬೆಳಗಾವಿಯಲ್ಲಿ ಮಳೆಯ ಅರ್ಭಟಕ್ಕೆ ಗ್ರಾಮಗಳು ಜಲಾವೃತ : ಹಳ್ಳದಾಟಿ ಪಲ್ಲಕ್ಕಿ ಹೊತ್ತೊಯ್ದ ಭಕ್ತರು