ಬೆಂಗಳೂರು : ಕುಣಿಯಲಾರದವನು ನೆಲ ಡೊಂಕು ಎಂಬಂತೆ ಇದು ಕೈಲಾಗದ ಸರ್ಕಾರ ಎಂದು ಸಚಿವ ಅಶ್ವಥ್ ನಾರಾಯಣ್ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.
ಹಳೇ ಗುಂಡಿ ಮುಚ್ತಿದ್ರೆ ಹೊಸ ಗುಂಡಿ ಬೀಳ್ತಿರುತ್ತೆ, ಬೆಂಗಳೂರು ರಸ್ತೆಗಳು ಹೈವೇಗಳಲ್ಲ, ಮಳೆಯ ನಡುವೆ ಗುಂಡಿಗಳನ್ನು ಮುಚ್ಚುವುದೇ ಸವಾಲಿನ ಕೆಲಸವಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದ್ದರು. ಸಚಿವರ ಮಾತಿಗೆ ಕಾಂಗ್ರೆಸ್ ಕಿಡಿಕಾರಿದೆ.
ಕುಣಿಯಲಾರದವನು ನೆಲ ಡೊಂಕು ಎಂಬಂತೆ ಇದು ಕೈಲಾಗದ ಸರ್ಕಾರ ಎಂದು ಸಚಿವ ಅಶ್ವಥ್ ನಾರಾಯಣ್ ಒಪ್ಪಿಕೊಂಡಿದ್ದಾರೆ , ಕೆಲಸ ಮಾಡದೆ ಸಮರ್ಥನೆಗಾಗಿ ಅಸಂಬದ್ಧಗಳನ್ನು ಸಚಿವರು ಮಾತಾಡುತ್ತಿದ್ದಾರೆ , ಯಾವಾಗ ಹಳೆ ಗುಂಡಿ ಮುಚ್ಚಿದ್ದೀರಿ? ಎಷ್ಟು ಮುಚ್ಚಿದ್ದೀರಿ? ಎಲ್ಲಿ ಮುಚ್ಚಿದ್ದೀರಿ? ಸುಳ್ಳಿಗೆ ಮಿತಿ ಬೇಡವೇ? ಎಂದು ಕಾಂಗ್ರೆಸ್ ಕಿಡಿಕಾರಿದೆ.
ಕುಣಿಯಲಾರದವನು ನೆಲ ಡೊಂಕು ಎಂದಂತೆ ಇದು ಕೈಲಾಗದ ಸರ್ಕಾರ ಎಂದು ಒಪ್ಪಿಕೊಂಡಿದ್ದಾರೆ ಸಚಿವ ಅಶ್ವಥ್ ನಾರಾಯಣ್.
ಕೆಲಸ ಮಾಡದ #40PercentSarkara ದ ಸಮರ್ಥನೆಗಾಗಿ ಅಸಂಬದ್ಧಗಳನ್ನು ಮಾತಾಡುತ್ತಿದ್ದಾರೆ @drashwathcn.
ಯಾವಾಗ ಹಳೆ ಗುಂಡಿ ಮುಚ್ಚಿದ್ದೀರಿ? ಎಷ್ಟು ಮುಚ್ಚಿದ್ದೀರಿ? ಎಲ್ಲಿ ಮುಚ್ಚಿದ್ದೀರಿ?
ಸುಳ್ಳಿಗೆ ಮಿತಿ ಬೇಡವೇ? pic.twitter.com/amBHcpTTfi— Karnataka Congress (@INCKarnataka) November 4, 2022