ಮಂಡ್ಯ: ಕರ್ನಾಟಕದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಮುಂದಾಳತ್ವ ನೀಡಿ ವಿಜಯೇಂದ್ರ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕೆಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಅಶ್ವಮೇಧ ಕುದುರೆ ಪೂಜೆ ಮಾಡಿದ್ದಾರೆ.
ಮಧ್ಯಪ್ರದೇಶ: ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಟ್ಯಾಂಕರ್, ಇಂಧನ ಸಂಗ್ರಹ ವೇಳೆ ಸ್ಪೋಟ: ಇಬ್ಬರು ಸಾವು, ಅನೇಕರಿಗೆ ಗಾಯ
ಮಂಡ್ಯದ ಕಾಳಿಕಾಂಭ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ಕುದುರೆಯನ್ನು ತಂದು ಆ ಕುದುರೆಗೆ ಅಶ್ವಮೇಧ ಪೂಜೆ ಮಾಡಿಸಿದ್ದಾರೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಅಶ್ವಮೇಧ ಯಾಗದ ಸಾರಥ್ಯ ವಹಿಸಿದ್ದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಲ್ಲಿ ವಿಜಯೇಂದ್ರಗೆ ಸಾರಥ್ಯ ನೀಡಬೇಕು. ವಿಜಯೇಂದ್ರಗೆ ಸಾರಥ್ಯ ನೀಡಿದ್ರೆ ಈ ಅಶ್ವಮೇಧ ಯಾಗವನ್ನು ಯಾರು ತಡೆಲು ಆಗಲ್ಲ
ಮಧ್ಯಪ್ರದೇಶ: ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಟ್ಯಾಂಕರ್, ಇಂಧನ ಸಂಗ್ರಹ ವೇಳೆ ಸ್ಪೋಟ: ಇಬ್ಬರು ಸಾವು, ಅನೇಕರಿಗೆ ಗಾಯ
ಚುನಾವಣೆಯೆಂಬ ಅಶ್ವಮೇಧ ಯಾಗದಲ್ಲಿ ವಿಜಯೇಂದ್ರ ಅವರು ಜಯಗಳಿಸುವುದು ನಿಶ್ಚಿತ. ಹೀಗಾಗಿ ವಿಜಯೇಂದ್ರ ಅವರನ್ನು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕೆಂದು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ರಾಜ್ಯ ಬಿಜೆಪಿ ನಾಯಕರಿಗೆ ಹಾಗೂ ಹೈಕಮಾಂಡ್ಗೆ ಸಹ ಮನವಿ ಮಾಡುವುದಾಗಿಯೂ ಹೇಳಿದರು.
ಮಧ್ಯಪ್ರದೇಶ: ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಟ್ಯಾಂಕರ್, ಇಂಧನ ಸಂಗ್ರಹ ವೇಳೆ ಸ್ಪೋಟ: ಇಬ್ಬರು ಸಾವು, ಅನೇಕರಿಗೆ ಗಾಯ