ದೆಹಲಿ: ಮುಂಬರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ʻನಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಶೀಘ್ರದಲ್ಲೇ ನಾಮನಿರ್ದೇಶನವನ್ನು ಸಲ್ಲಿಸಲು ದಿನಾಂಕ ನಿಗದಿಪಡಿಸುತ್ತೇನೆ. ಇತರ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಇದೆಲ್ಲವೂ ಭವಿಷ್ಯದ ಮೇಲೆ ಅವಲಂಬಿತವಾಗಿದೆ ʼ ಎಂದಿದ್ದಾರೆ.

ರಾಹುಲ್ ಗಾಂಧಿಯವರೊಂದಿಗೆ ಮಾತನಾಡಿ ಅವರನ್ನೂ ಸ್ಪರ್ಧಿಸುವಂತೆ ಮಾಡಲು ಪ್ರಯತ್ನ ನಡೆಸಿದ್ದೆ ಆದರೆ ಅವರು ನಿರಾಕರಿಸಿದರು. “ಕಾಂಗ್ರೆಸ್ ಅಧ್ಯಕ್ಷರಾಗುವ ಪ್ರತಿಯೊಬ್ಬರ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ನಾನು ಅವರಿಗೆ (ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ) ಹಲವು ಬಾರಿ ಮನವಿ ಮಾಡಿದ್ದೇನೆ. ಗಾಂಧಿ ಕುಟುಂಬದಿಂದ ಯಾರೂ ಮುಂದಿನ ಮುಖ್ಯಸ್ಥರಾಗಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ” ಎಂದು ಅವರು ಹೇಳಿದರು.

“ನೀವು ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ನೀವೇ ಅಧ್ಯಕ್ಷರಾಗುವಂತೆ ಹಲವಾರು ಬಾರಿ ನಾನು ರಾಹುಲ್‌ ಗಾಂಧಿಯವರಿಗೆ ವಿನಂತಿಸಿದೆ. ಆದ್ರೆ, ಅವರು ಗಾಂಧಿ ಕುಟುಂಬದ ಯಾರೂ ಕಾಂಗ್ರೆಸ್ ಪಕ್ಷದ ಮುಂದಿನ ಮುಖ್ಯಸ್ಥರಾಗಬಾರದು ಎಂದು ಅವರು ನಿರ್ಧರಿಸಿದ್ದಾರೆ ಎಂದು ಅವರು ನನಗೆ ಹೇಳಿದರು. ಹೀಗಾಗಿ, ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

BIGG NEWS : ಮಲೆನಾಡ ಹೆಬ್ಬಾಗಿಲಲ್ಲಿ ‘ಶಂಕಿತ ಉಗ್ರರ ಜಾಲ’ : ಬಂಧಿತ ಯಾಸಿನ್ ಗೆ ಪಾಕ್ ನಂಟು : ಸ್ಪೋಟಕ ಮಾಹಿತಿ ರಿವೀಲ್

BIG NEWS: ಗುರುಗ್ರಾಮ್‌ನಲ್ಲಿ ಭಾರೀ ಮಳೆ, ರಸ್ತೆಗಳು ಜಲಾವೃತ: ʻವರ್ಕ್​ ಫ್ರಂ ಹೋಮ್ʼ ಮಾಡುವಂತೆ ಅಧಿಕಾರಿಗಳಿಂದ ಸಲಹೆ

ಅಮ್ಮ ಯಾವ ʻಆಹಾರʼ ತಿಂದ್ರೆ ಗರ್ಭದಲ್ಲಿರುವ ಭ್ರೂಣಕ್ಕೆ ʻಇಷ್ಟ-ಕಷ್ಟʼ… ಇಲ್ಲಿದೆ ಅವುಗಳ ರಿಯಾಕ್ಷನ್‌ ನೋಡಿ!

Share.
Exit mobile version