ದೆಹಲಿ: ಗುರುವಾರ ಭಾರೀ ಮಳೆ ಸುರಿದ ಪರಿಣಾಮ ದೆಹಲಿ ಗಡಿಯಲ್ಲಿರುವ ಹರಿಯಾಣದ ಗುರುಗ್ರಾಮ್‌ನಲ್ಲಿನ ಕೆಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಹೀಗಾಗಿ, ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ (ವರ್ಕ್​ ಫ್ರಂ ಹೋಮ್) ಮಾಡುವಂತೆ ನಗರ ಆಡಳಿತ ಸಲಹೆ ನೀಡಿದೆ.

ಗುರುಗ್ರಾಮ್‌ನಲ್ಲಿ ಇಂದೂ ಸಹ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.

ಸೆಪ್ಟೆಂಬರ್ 23, 2022 ರಂದು ಗುರುಗ್ರಾಮ್ ಜಿಲ್ಲೆಯಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಜಿಲ್ಲೆಯ ಎಲ್ಲಾ ಕಾರ್ಪೊರೇಟ್ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸೆಪ್ಟೆಂಬರ್ 23 ರಂದು ಮನೆಯಿಂದಲೇ ಕೆಲಸ ಮಾಡಲು ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ. ಇನ್ನೂ, ಎಲ್ಲ ಶಾಲಾ, ಕಾಲೇಜುಗಳಿಗೂ ಕೂಡ ರಜೆ ಘೋಷಿಸಲಾಗಿದೆ.

ಗುರುಗ್ರಾಮದಲ್ಲಿ ನಿರಂತರ ಭಾರೀ ಮಳೆಯಾಗುತ್ತಿರುವುದರಿಂದ ಕೆಲವೆಡೆ ಜಲಾವೃತವಾಗಿದ್ದು, ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಅಗತ್ಯ ಬಿದ್ದಾಗ ಮಾತ್ರ ಮನೆಯಿಂದ ಹೊರಗೆ ಬರುವಂತೆ ನಿಮ್ಮೆಲ್ಲರಲ್ಲಿ ವಿನಂತಿಸುತ್ತೇವೆ,” ಎಂದು ಸಂಚಾರ ಪೊಲೀಸರು ಸಲಹೆಯನ್ನು ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಬಿಡುಗಡೆ ಮಾಡಿದೆ.

“ನಸುಕಿಗೆ ಇಳಿಯುವ ಮುಂಚೂಣಿ ಸೇವಾ ಯೋಧರೆಂಬ ಹೆಗ್ಗಳಿಕೆಗೆ ತಕ್ಕ ಸನ್ಮಾನ ಸಿಕ್ಕಿದೆ : ಸಿಎಂ ಜೊತೆ ಸಂತಸ ಹಂಚಿಕೊಂಡ ಪೌರ ಕಾರ್ಮಿಕರು

ತೂಕಇಳಿಸಲು ʻಹಸಿರು ಮೆಣಸಿನಕಾಯಿʼ ಪ್ರಯೋಜನಕಾರಿಯೇ, ಬಳಕೆಯ ಈ ವಿಧಾನ ಅನುಸರಿಸಿ | Green Chili Benefits

BIGG NEWS : ಮಲೆನಾಡ ಹೆಬ್ಬಾಗಿಲಲ್ಲಿ ‘ಶಂಕಿತ ಉಗ್ರರ ಜಾಲ’ : ಬಂಧಿತ ಯಾಸಿನ್ ಗೆ ಪಾಕ್ ನಂಟು : ಸ್ಪೋಟಕ ಮಾಹಿತಿ ರಿವೀಲ್

 

Share.
Exit mobile version