ಬೆಂಗಳೂರು : ಬಿಜೆಪಿಯ ರೌಡಿ ಮೋರ್ಚಾ ತಯಾರಾಗುತ್ತಿದ್ದಂತೆಯೇ ಕ್ರಿಮಿನಲ್ ಗಳಿಗೆ ರೌಡಿಗಳಿಗೆ ಧೈರ್ಯ ಬಂದಂತಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ರೌಡಿಗಳು ರಾಜಾರೋಷವಾಗಿ ಮಚ್ಚು, ಲಾಂಗುಗಳನ್ನು ಹಿಡಿದು ಓಡಾಡುತ್ತಿರುವುದು, ಹಲ್ಲೆ ನಡೆಸುತ್ತಿರುವ ಪ್ರಕರಣಗಳು ನಿತ್ಯ ವರದಿಯಾಗುತ್ತಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ನಾಶವಾಗಿರುವುದಕ್ಕೆ ಪೊಲೀಸರ ಸುಲಿಗೆ ಪ್ರಕರಣವೇ ಸಾಕ್ಷಿ ಎಂದು ಕಾಂಗ್ರೆಸ್ ಕಿಡಿಕಾರಿದೆ.
ರಸಗೊಬ್ಬರ ಬೆಲೆ ಏರಿಕೆ, ಯಂತ್ರೋಪಕರಣದ ಬಾಡಿಗೆ ಏರಿಕೆ, ಬೆಳೆ ನಷ್ಟ, ಏರಿಕೆಯಾಗಿದ ಬೆಂಬಲ ಬೆಲೆ, ಬಿಜೆಪಿ ಆಡಳಿತದಲ್ಲಿ ರೈತರ ಬದುಕು ಮೂರಾಬಟ್ಟೆಯಾಗಿದೆ, ಕೇಳಲು ಹೋದರೆ ಬಿಜೆಪಿ ಸರ್ಕಾರದಿಂದ ಲಾಠಿ ಏಟು, ಗುಂಡೇಟು ಬೀಳುತ್ತವೆ ರೈತ ಸ್ನೇಹಿಯಾಗಿ ಒಂದೇ ಒಂದು ಯೋಜನೆ ಈ ಸರ್ಕಾರ ಕೈಗೊಂಡಿಲ್ಲ. ಬಿ ಸಿ ಪಾಟೀಲ್ ಅವರ ಶೂಟಿಂಗ್ ಮುಗಿಯುತ್ತಿಲ್ಲ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬಿಜೆಪಿಯ ರೌಡಿ ಮೋರ್ಚಾ ತಯಾರಾಗುತ್ತಿದ್ದಂತೆಯೇ ಕ್ರಿಮಿನಲ್ಗಳಿಗೆ, ರೌಡಿಗಳಿಗೆ ಧೈರ್ಯ ಬಂದಂತಾಗಿದೆ.
ರೌಡಿಗಳು ರಾಜಾರೋಷವಾಗಿ ಮಚ್ಚು, ಲಾಂಗುಗಳನ್ನು ಹಿಡಿದು ಓಡಾಡುತ್ತಿರುವುದು, ಹಲ್ಲೆ ನಡೆಸುತ್ತಿರುವ ಪ್ರಕರಣಗಳು ನಿತ್ಯ ವರದಿಯಾಗುತ್ತಿದೆ.
ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ನಾಶವಾಗಿರುವುದಕ್ಕೆ ಪೊಲೀಸರ ಸುಲಿಗೆ ಪ್ರಕರಣವೇ ಸಾಕ್ಷಿ pic.twitter.com/Q6catJHQq2
— Karnataka Congress (@INCKarnataka) December 14, 2022
BIGG NEWS : ಡಿಕೆಶಿಗೆ ಸಿದ್ದು ಡಿಚ್ಚಿ : ಬಹಿರಂಗವಾಗಿ ವಿಜಯಾನಂದ ಕಾಶಪ್ಪನವರ್ ಗೆ ಟಿಕೆಟ್ ಘೋಷಣೆ
BIGG NEWS : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಜನವರಿ 15ಕ್ಕೆ ಅಂತಿಮ : ಸಿದ್ದರಾಮಯ್ಯ ಸ್ಪಷ್ಟನೆ | Siddaramaiah