ಲಖನೌ : ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ರಸ್ತೆ ಅವ್ಯವಸ್ಥೆ ಕುರಿತು ವ್ಯಕ್ತಿಯೊಬ್ಬರು ಮಾಧ್ಯಮ ಸಂದರ್ಶನ ನೇರಪ್ರಸಾರದಲ್ಲಿ ಕ್ಯಾಮರಾ ಮುಂದೆ ಮಾತನಾಡುತ್ತಿರುವಾಗ ಅವರ ಹಿಂಬದಿಯಲ್ಲಿನ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ಪಲ್ಟಿಯಾದ ಘಟನೆ ನಡೆದಿದೆ.
ಇಂದು ಬಿಬಿಎಂಪಿ ವ್ಯಾಪ್ತಿಯ 4 ವಲಯಗಳ ವಿವಿಧ ಸ್ಥಳಗಳಲ್ಲಿ 29 ಒತ್ತುವರಿಗಳ ತೆರವು
ಈ ವೇಳೆ ಜನರನ್ನು ಹೊತ್ತೊಯ್ಯುತ್ತಿದ್ದ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಕೂಡಲೇ ಸ್ಥಳೀಯರು ಆಟೋವನ್ನು ಮೇಲಕ್ಕೆತ್ತಿ, ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ರಸ್ತೆ ಅವ್ಯವಸ್ಥೆ ಕುರಿತು ಇದಕ್ಕಿಂತ ಬೇರೇನು ಸಾಕ್ಷಿ ಬೇಕು ಎಂದು ನೆಟ್ಟಿಗರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
In UP's Ballia, a reporter was talking to a commuter over poor quality of roads ridden with potholes. The commuter was explaining how accidents and E-rickshaws overturning is very frequent phenomenon. What happened at the end is something you should watch for yourself. pic.twitter.com/PapyCIdb0v
— Piyush Rai (@Benarasiyaa) September 14, 2022
ಸ್ಥಳೀಯ ನಿವಾಸಿಯೊಬ್ಬರು ರಸ್ತೆ ಅವ್ಯವಸ್ಥೆಗಳ ಬಗ್ಗೆ ವಿವರಣೆ ನೀಡುವಾಗಲೇ ಈ ಘಟನೆ ನಡೆದಿದ್ದು, ಅಲ್ಲಿನ ಕರಾಳ ಪರಿಸ್ಥಿತಿಗೆ ಈ ಘಟನೆ ಕೈಗನ್ನಡಿ ಹಿಡಿದಂತಿದೆ. ರಸ್ತೆಗಳು ಸಂಪೂರ್ಣ ಹಾಳಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಪ್ರತಿದಿನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಈ ರಸ್ತೆಯಲ್ಲಿ ಸಂಚಾರ ಮಾಡಬೇಕಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬಿಬಿಎಂಪಿ ವ್ಯಾಪ್ತಿಯ 4 ವಲಯಗಳ ವಿವಿಧ ಸ್ಥಳಗಳಲ್ಲಿ 29 ಒತ್ತುವರಿಗಳ ತೆರವು