ಹುಬ್ಬಳ್ಳಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಫ್ಲಾಪ್ ಶೋ ಆಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೊ ಯಾತ್ರೆಯಿಂದ ಈ ದೇಶಕ್ಕೆ, ಜನರಿಗೆ ಏನೂ ಲಾಭವಿಲ್ಲ. ಭಾರತ್ ಜೋಡೋ ಯಾತ್ರೆ ಫ್ಲಾಪ್ ಶೋ ಎಂದಿದ್ದಾರೆ. ಇದು ರಾಹುಲ್ ಗಾಂಧಿ ನಡೆಸುತ್ತಿರುವ ಮುಂಜಾನೆ ಮತ್ತು ಸಂಜೆಯ ವಾಕಿಂಗ್ ಆಗಿದೆ ಎಂದು ವ್ಯಂಗ್ಯವಾಡಿದರು.
ಪರಸ್ಪರ ದೂರವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಒಂದುಗೂಡಿಸುವ ಯಾತ್ರೆ ಇದಾಗಿದೆ. ಅವರಿಬ್ಬರನ್ನು ಒಂದುಗೂಡಿಸುವಲ್ಲಿ ರಾಹುಲ್ ಗಾಂಧಿ ಸುಸ್ತು ಹೊಡೆದಿದ್ದಾರೆ. . ಸ್ವತಃ ಕಾಂಗ್ರೆಸ್ ಪಕ್ಷದವರಿಗೂ ಈ ಯಾತ್ರೆ ಬೇಡವಾಗಿದೆ. ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟ ಎಂದು ಅರುಣ್ ಸಿಂಗ್ ಹೇಳಿದರು.
‘ರಾಷ್ಟ್ರೀಯ ಹೆದ್ದಾರಿಯಲ್ಲೇ ಮೀನೂ ಹಿಡಿದ್ರು, ಬಟ್ಟೆನೂ ಒಗೆದ್ರು’ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್