ಚಾಮರಾಜನಗರ : ಸಚಿವ ವಿ. ಸೋಮಣ್ಣ ಪುತ್ರ ಅರುಣ್ ಮತ್ತು ನಟ ಸೃಜನ್ ಲೋಕೇಶ್ ಟೀಂ ಗಲಾಟೆ ನಡೆದಿದೆ. ಬೆಂಗಳೂರಿನ ಕ್ಲಬ್ ವೊಂದರಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿರುವ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಕುರಿತು ಚಾಮರಾಜನಗರದಲ್ಲಿ ಸಚಿವ V. ಸೋಮಣ್ಣ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು, ಸುಮ್ಮನೆ ಏನೇನೋ ಹೇಳುವುದಕ್ಕೆ ಹೋಗಬೇಡು ಬಿಟ್ಟು ಬಿಡಿ, ಯಾರೇ ತಪ್ಪು ಮಾಡಿದರೂ ತಪ್ಪೆ ಗಲಾಟೆ ಬಗ್ಗೆ ನನಗೆ ಮಾಹಿತಿ ಇಲ್ಲ, ನನ್ನ ಪುತ್ರ ಅರುಣ್ ಸುಮಾರು 10-12 ವರ್ಷದಿಂದ ಬೇರೆ ಮನೆಯಲ್ಲಿ ವಾಸವಿದ್ದಾರೆ, ಅವನು ನನ್ನ ಜೊತೆ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಘಟನೆ ಹಿನ್ನೆಲೆ
ನಗರದ ಮುದ್ದಿನಪಾಳ್ಯ ಕಿಂಗ್ಸ್ ಕ್ಲಬ್ ನಲ್ಲಿ ಗಲಾಟೆ ನಡೆದಿದೆ. ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ಪು ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪ್ರಾಕ್ಟೀಸ್ ಮಾಡುತ್ತಿದ್ದರು. ಪ್ರತಿನಿತ್ಯ ಸೃಜನ್ ಲೋಕೇಶ್ ಟೀಮ್ ಪ್ರಾಕ್ಟೀಸ್ ಮಾಡುತ್ತಿದ್ದರು. ಪಾರ್ಟಿ ವೇಳೆ ಸೃಜನ್ ಟೀಮ್ ಕಿರುಚಾಡುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಸಚಿವ ವಿ ಸೋಮಣ್ಣ ಪುತ್ರ ಅರುಣ್ ಸೃಜನ್ ಟೀಂಗೆ ಯಾಕೆ ಗಲಾಟೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಿಷ್ಟಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ಆಗಿದ್ದು ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿತ್ತು. ಆದರೆ ಈ ಗಲಾಟೆ ವೇಳೆ ನಟ ಸೃಜನ್ ಲೋಕೇಶ್ ಕಿಂಗ್ಸ್ ಕ್ಲಬ್ ನಲ್ಲಿ ಇರಲಿಲ್ಲ. ಈ ಘಟನೆ ಬಗ್ಗೆ ಗುಂಪುಗಳು ಮತ್ತು ಕ್ಲಬ್ ಆಡಳಿತ ಮಂಡಳಿ ದೂರು ನೀಡಿಲ್ಲ. ಈ ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿದೆ : ಸಿಎಂ ಬೊಮ್ಮಾಯಿ |Basavaraj Bommai
BIG BREAKING NEWS: ‘ರಾಜ್ಯ ಸರ್ಕಾರ’ದಿಂದ ‘ಆಡಳಿತ ಯಂತ್ರ’ಕ್ಕೆ ಚುರುಕು: ‘9 ಐಎಎಸ್ ಅಧಿಕಾರಿ’ಗಳಿಗೆ ಹುದ್ದೆ ಹಂಚಿಕೆ