ದಾವಣಗೆರೆ: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ವಿವಿಧ ಕಲಾ ಪ್ರಕಾರಗಳ ಕಲಾವಿದರಿಗೆ ಕಲಾವಿದರ ಗುರುತಿನ ಚೀಟಿಗೆ ಜೂ. 28 ರವರೆಗೆ ಕಾಲಾವಕಾಶ ನೀಡಿ ಅರ್ಜಿ ಆಹ್ವಾನಿಸಲಾಗಿದೆ. ಕಲಾವಿದರು ತಾವು ಕಲಾಪ್ರದರ್ಶನ ನೀಡಿದ ದಾಖಲೆಗಳೊಂದಿಗೆ ನಿಗಧಿತ ಅರ್ಜಿ ನಮೂನೆಯೊಂದಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ನಿರ್ದೇಶಕರು ತಿಳಿಸಿದ್ದಾರೆ.








