ವಾಷಿಂಗ್ಟನ್: ಮಾನವನನ್ನು ಮತ್ತೆ ಚಂದ್ರನ ಹತ್ತಿರಕ್ಕೆ ಕರೆದೊಯ್ಯುವ ನಾಸಾದ (NASA) ಮಹತ್ವಾಕಾಂಕ್ಷಿ ‘ಆರ್ಟೆಮಿಸ್-2’ (Artemis II) ಮಿಷನ್ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಒರಿಯನ್ ನೌಕೆಯು ಚಂದ್ರನ ಸುತ್ತ ಪ್ರದಕ್ಷಿಣೆ ಮುಗಿಸಿ ಇಂದು ಪೆಸಿಫಿಕ್ ಮಹಾಸಾಗರದಲ್ಲಿ ಯಶಸ್ವಿಯಾಗಿ ಇಳಿಯುವ (Splashdown) ಮೂಲಕ ಹೊಸ ಇತಿಹಾಸ ಬರೆದಿದೆ.
50 ವರ್ಷಗಳ ಬಳಿಕ ಮಾನವನು ಮತ್ತೆ ಚಂದ್ರನ ಅಂಗಳಕ್ಕೆ ಕಾಲಿಡಲು ಇದು ಅಡಿಪಾಯ ಹಾಕಿದೆ.
1972ರ ಅಪೊಲೊ ಮಿಷನ್ ನಂತರ ಮೊದಲ ಬಾರಿಗೆ ನಾಲ್ವರು ಗಗನಯಾತ್ರಿಗಳು ಚಂದ್ರನ ಹತ್ತಿರಕ್ಕೆ ಹೋಗಿ ಬಂದಿದ್ದಾರೆ. ಈ ತಂಡದಲ್ಲಿ ಮೊದಲ ಬಾರಿಗೆ ಮಹಿಳಾ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಮತ್ತು ಕಪ್ಪು ವರ್ಣೀಯ ಗಗನಯಾತ್ರಿ ವಿಕ್ಟರ್ ಗ್ಲೋವರ್ ಸ್ಥಾನ ಪಡೆದಿದ್ದರು.
ಸುಮಾರು 10 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಪ್ರಯಾಣಿಸಿದ ಇವರು, ಒರಿಯನ್ ನೌಕೆಯ ಕ್ಷಮತೆ ಮತ್ತು ಲೈಫ್ ಸಪೋರ್ಟ್ ಸಿಸ್ಟಮ್ಗಳನ್ನು ಪರೀಕ್ಷಿಸಿದ್ದಾರೆ.ಭೂಮಿಯ ವಾತಾವರಣಕ್ಕೆ ಮರಳಿ ಬರುವಾಗ ನೌಕೆಯು ಗಂಟೆಗೆ ಸುಮಾರು 40,000 ಕಿಲೋಮೀಟರ್ ವೇಗದಲ್ಲಿತ್ತು. ಈ ವೇಳೆ ನೌಕೆಯ ಹೊರಭಾಗವು 2,700 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಿನ ಶಾಖವನ್ನು ತಡೆದುಕೊಂಡಿದೆ.
Welcome home Reid, Victor, Christina, and Jeremy! 🫶
The Artemis II astronauts have splashed down at 8:07pm ET (0007 UTC April 11), bringing their historic 10-day mission around the Moon to an end. pic.twitter.com/1yjAgHEOYl
— NASA (@NASA) April 11, 2026








