ಕೇರಳ: ‘ಸೀತಾ ರಾಮಂ’ ಕಲಾ ನಿರ್ದೇಶಕ ಸುನಿಲ್ ಬಾಬು ( ‘Sita Ramam’ art director Sunil Babu ) ಅವರು ಕೇರಳದಲ್ಲಿ ಗುರುವಾರ ಅಂದರೆ ಜನವರಿ 6 ರಂದು ನಿಧನರಾದರು. 50 ವರ್ಷದ ಕಲಾ ನಿರ್ದೇಶಕ ಗುರುವಾರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಸುನಿಲ್ ಬಾಬು ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿ, ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದರು. ಅವರು ಕಲಾ ನಿರ್ದೇಶಕ ಸಾಬು ಸಿರಿಲ್ ಅವರ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
‘ತುಪಕ್ಕಿ’, ‘ಭೀಷ್ಮ ಪರ್ವಂ’, ‘ಮಹರ್ಷಿ’, ‘ಊಪಿರಿ’, ‘ಘಜಿನಿ’, ‘ಪ್ರೇಮಂ’, ‘ಛೋಟಾ ಮುಂಬೈ’ ಮುಂತಾದ ಚಿತ್ರಗಳಿಗೆ ಅವರು ಕೆಲಸ ಮಾಡಿದ್ದಾರೆ. ‘ಸಿಂಗ್ ಈಸ್ ಕಿಂಗ್’, ‘ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ’, ‘ಪಾ’, ‘ಸ್ಪೆಷಲ್ 26’ ಮುಂತಾದ ಬಾಲಿವುಡ್ ಚಿತ್ರಗಳಲ್ಲೂ ಅವರು ಕೆಲಸ ಮಾಡಿದ್ದಾರೆ.
ಈ ಕುರಿತು ಇನ್ಟ್ಸಾ ಗ್ರಾಂನಲ್ಲಿ ಇದನ್ನು ನಂಬಲು ಕೂಡ ಸಾಧ್ಯವಾಗುತ್ತಿಲ್ಲ ಎಂಬುದಾಗಿ ನಟ ದುಲ್ಕರ್ ಸಲ್ಮಾನ್ ಮಾಹಿತಿ ಹಂಚಿಕೊಂಡಿದ್ದಾರೆ. ಸುನಿಲ್ ಮತ್ತು ದುಲ್ಕರ್ ‘ಬೆಂಗಳೂರು ಡೇಸ್’ ಮತ್ತು ‘ಸೀತಾ ರಾಮಂ’ ನಂತಹ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು.
BIGG NEWS: ಯುಎನ್ ಮಿಷನ್ ಗೆ ‘ಭಾರತೀಯ ಮಹಿಳಾ ಶಾಂತಿಪಾಲಕರ’ ದೊಡ್ಡ ತುಕಡಿ ಸೇರ್ಪಡೆ | India Women Peacekeepers
ಹಾವೇರಿ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷರ ಭಾಷಣದಲ್ಲೇ ‘ಡಬಲ್ ಎಂಜಿನ್ ಸರ್ಕಾರ’ ಟೀಕಿಸಿದ ‘ಸಾಹಿತಿ ದೊಡ್ಡರಂಗೇಗೌಡ’