ಶಿವಮೊಗ್ಗ : ಶಂಕಿತ ಉಗ್ರ ಸಂಪರ್ಕ ಹೊಂದಿದ್ದ ಮತ್ತೊಬ್ಬ ವ್ಯಕ್ತಿ ಖಾಕಿ ವಶಕ್ಕೆ ಪಡೆದು ಅರೆಸ್ಟ್ ಮಾಡಲಾಗಿದೆ . ಈತ ಕೊಪ್ಪಳ ಜಿಲ್ಲೆಯ ಗಂಗಾವತಿ ಹಣ್ಣಿನ ವ್ಯಾಪಾರಿ ಶಬ್ಬೀರ್ ಎಂದು ಗುರುತಿಸಲಾಗಿದೆ.
BIGG NEWS : ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ : ಎಚ್ಚರಿಕೆ ವಹಿಸಲು ಪಶುಪಾಲನಾ ಇಲಾಖೆ ಸಲಹೆ
ಇವರು ಶಿವಮೊಗ್ಗದಲ್ಲಿ ಬಂಧನಕ್ಕೊಳಗಾದ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗ್ತಿದೆ. ಹೆಚ್ಚಿನ ವಿಚಾರಣೆಗಾಗಿ ಮಧ್ಯರಾತ್ರಿ ಯುವಕನ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು, ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಶಂಕಿತ ಉಗ್ರರ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯವಾಗಲಿದೆ. ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು
BIGG NEWS : ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ : ಎಚ್ಚರಿಕೆ ವಹಿಸಲು ಪಶುಪಾಲನಾ ಇಲಾಖೆ ಸಲಹೆ
ಏನಿದು ಪ್ರಕರಣ: ನಿಷೇಧಿತ ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿರುವ ಕಾರಣ ಮೂವರು ಶಂಕಿತರಾದ ಶಿವಮೊಗ್ಗದ ಸಿದ್ದೇಶ್ವರ ನಗರದ ನಿವಾಸಿ ಸಯ್ಯದ್ ಯಾಸೀನ್ (21) ಹಾಗೂ ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ (22) ಮತ್ತು ತೀರ್ಥಹಳ್ಳಿ ಸೂಪ್ಪುಗುಡ್ಡೆಯ ನಿವಾಸಿ ಶಾರೀಕ್ ಎಂಬುರನ್ನು ಪೊಲೀಸರು ಬಂಧಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ.
ಉಗ್ರ ಸಂಘಟನೆಯಲ್ಲಿ ತೊಡಗಿಕೊಂಡಿರುವ ಆರೋಪ ಮಾತ್ರವಲ್ಲದೇ, ತುಂಗಾ ನದಿ ದಂಡೆಯ ಮೇಲೆ ಬಾಂಬ್ ತಯಾರಿಸಿ ಅದನ್ನು ನದಿಗೆ ಎಸೆಯುತ್ತಿದ್ದರು ಎಂದು ಸಹ ತಿಳಿದುಬಂದಿದೆ. ಯಾಸಿನ್ ಹಾಗೂ ಮಾಝ್ಗೆ ಬಾಂಬ್ ತಯಾರಿಸುವ ಕುರಿತು ಶಾರೀಕ್ ವಿಡಿಯೋ ಕಳುಹಿಸಿತ್ತಿದ್ದನು.
BIGG NEWS : ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ : ಎಚ್ಚರಿಕೆ ವಹಿಸಲು ಪಶುಪಾಲನಾ ಇಲಾಖೆ ಸಲಹೆ
ಇದನ್ನು ನೋಡಿ ಬಾಂಬ್ ತಯಾರು ಮಾಡುವುದುವನ್ನು ಕಲಿತಿದ್ದರು. ಬಾಂಬ್ ತಯಾರಿಕೆಗೆ ಬೇಕಾದ ಟೈಮರ್, ರೀಲೆ ಸರ್ಕ್ಯೂಟ್ಗಳನ್ನು ಅಮೆಜಾನ್ನಿಂದ ಖರೀದಿಸಿದ್ದರು. ಶಿವಮೊಗ್ಗದಲ್ಲಿ 9 ವೋಲ್ಟ್ನ ಎರಡು ಬಲ್ಬ್, ಎರಡು ಬ್ಯಾಟರಿ, ಸ್ವಿಚ್ ವೈಯರ್, ಮ್ಯಾಚ್ ಬಾಕ್ಸ್ಗಳು ಹಾಗೂ ಇತರ ಸ್ಫೋಟಕ ವಸ್ತುಗಳನ್ನು ಖರೀದಿಸಿ ಬಾಂಬ್ ತಯಾರಿಸಿದ್ದರು ಎಂದು ತನಿಖೆಯಿಂದ ಬಯಲಾಗಿದೆ.